Ice Cream Day 2022: ನೀವು ಕೂಡ ಐಸ್​ಕ್ರೀಂ ಪ್ರಿಯರೇ? ಹಾಗಿದ್ರೆ ಈ ಸುದ್ದಿ ಓದಲೇಬೇಕು

| Updated By: ನಯನಾ ರಾಜೀವ್

Updated on: Jul 17, 2022 | 11:00 AM

ಐಸ್​ಕ್ರೀಂ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಮಳೆಗಾಲ, ಚಳಿಗಾಲ, ಬೇಸಿಗೆಕಾಲವೆಂಬ ಬೇಧವಿಲ್ಲದೆ ಹಗಲು ರಾತ್ರಿ ಎನ್ನದೆ ಮಕ್ಕಳು, ದೊಡ್ಡವರೆನ್ನದೆ ಇಷ್ಟಪಟ್ಟುವ ತಿನ್ನುವ ಆಹಾರವಿದು

Ice Cream Day 2022: ನೀವು ಕೂಡ ಐಸ್​ಕ್ರೀಂ ಪ್ರಿಯರೇ? ಹಾಗಿದ್ರೆ ಈ ಸುದ್ದಿ ಓದಲೇಬೇಕು
Ice Cream
Follow us on

ಐಸ್​ಕ್ರೀಂ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಮಳೆಗಾಲ, ಚಳಿಗಾಲ, ಬೇಸಿಗೆಕಾಲವೆಂಬ ಬೇಧವಿಲ್ಲದೆ ಹಗಲು ರಾತ್ರಿ ಎನ್ನದೆ ಮಕ್ಕಳು, ದೊಡ್ಡವರೆನ್ನದೆ ಇಷ್ಟಪಟ್ಟುವ ತಿನ್ನುವ ಆಹಾರವಿದು. ಐಸ್​ಕ್ರೀಂ ಸೇವನೆಯಿಯಿಂದ ಆರೋಗ್ಯಕ್ಕೆ ಹಲವು ಬಗೆಯ ದುಷ್ಪರಿಣಾಮವಿದೆ ಎಂಬುದನ್ನು ನೀವು ಕೇಳಿರುತ್ತೀರಿ ಹಾಗೆಯೇ ಐಸ್​ಕ್ರೀಂನಿಂದ ಪ್ರಯೋಜನಗಳು ಕೂಡ ಇವೆ.

ವಿವಿಧ ಸ್ವಾದಗಳಲ್ಲಿ ಬರುವ ಐಸ್ ಕ್ರೀಂ ನಿಮ್ಮ ಆರೋಗ್ಯಕ್ಕೆ ಅನೇಕ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.  ಐಸ್ ಕ್ರೀಂ ಒಂದು ಡೈರಿ ಉತ್ಪನ್ನವಾದ್ದರಿಂದ ಇದರಲ್ಲಿ ಅನೇಕ ಪೋಷಕಾಂಶಗಳಿರುತ್ತವೆ. ಐಸ್ ಕ್ರೀಂ ಸೇವಿಸುವ ಮೂಲಕ ನಿಮ್ಮ ದೇಹವು ಆರೋಗ್ಯಕರವಾಗುತ್ತದೆ.

ಸಾಕಷ್ಟು ವಿಟಮಿನ್ಗಳು ಮತ್ತು ಪ್ರೋಟೀನ್ಗಳು ಸಹ ಇವೆ. ಐಸ್ ಕ್ರೀಂ ಸೇವನೆಯಿಂದಾಗುವ ಲಾಭಗಳ ಬಗ್ಗೆ ತಿಳಿಯಿರಿ

ತ್ವರಿತ ಶಕ್ತಿ ವರ್ಧಕದಂತೆ ಕೆಲಸ ಮಾಡುತ್ತದೆ
ಐಸ್​ಕ್ರೀಂ ತ್ವರಿತ ಶಕ್ತಿವರ್ಧಕದಂತೆ ಕೆಲಸ ಮಾಡುತ್ತದೆ, ನೀವು ಆಯಾಸಗೊಂಡಿದ್ದಾಗ ಐಸ್​ಕ್ರೀಂ ತಿಂದರೆ ನಿಮ್ಮಲ್ಲಿ ಚೈತನ್ಯ ಮೂಡುತ್ತದೆ. ಮಕ್ಕಳಿಗೂ ಕೂಡ ಇದನ್ನು ನೀಡಬಹುದು.

ಮೂಳೆಗಳು ಬಲಗೊಳ್ಳುತ್ತವೆ
ಡೈರಿ ಉತ್ಪನ್ನಗಳಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಕಂಡುಬರುತ್ತದೆ. ಕ್ಯಾಲ್ಸಿಯಂ ಸೇವನೆಯಿಂದ ಮೂಳೆಗಳು ಬಲವಾಗಿರುತ್ತವೆ. ದೇಹವನ್ನು ಬಳಲಿಕೆಯಿಂದ ರಕ್ಷಿಸಲು ಕ್ಯಾಲ್ಸಿಯಂ ಅಗತ್ಯವಿದೆ. ದೇಹದಲ್ಲಿ ಶೇ. 99 ರಷ್ಟು ಕ್ಯಾಲ್ಸಿಯಂ ಮಾತ್ರ ಮೂಳೆಗಳಲ್ಲಿ ಕಂಡುಬರುತ್ತವೆ. ಹಾಗಾಗಿ ಹಾಲಿನ ಉತ್ಪನ್ನಗಳ ಸೇವನೆಯು ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಅನ್ನು ಸಮೃದ್ಧವಾಗಿರಿಸುತ್ತದೆ.

ಹೆಚ್ಚು ಪ್ರೋಟಿನ್ ಇರಲಿದೆ
ಡೈರಿ ಉತ್ಪನ್ನವು ಪ್ರೋಟಿನ್​ನ ಅತ್ಯುತ್ತಮ ಮೂಲವಾಗಿದೆ , ಸಂಪೂರ್ಣ ಹಾಲು ಹಾಗೂ ಕೆನೆ ಹೇರಳವಾಗಿರುವುದರಿಂದ ಅತಿ ಹೆಚ್ಚು ಪ್ರೋಟಿನ್​ ಅನ್ನು ದೇಹಕ್ಕೆ ಒದಗಿಸುತ್ತದೆ.

ಚರ್ಮಕ್ಕೂ ಪ್ರಯೋಜನಕಾರಿ
ಮೂಳೆಗಳು, ನರಗಳು, ರಕ್ತ ಮತ್ತು ಚರ್ಮದಂತಹ ದೇಹದ ವಿವಿಧ ಭಾಗಗಳಿಗೆ ಪ್ರೋಟೀನ್ ಪ್ರಯೋಜನಕಾರಿಯಾಗಿದೆ. ಪ್ರೋಟೀನ್ ಸೇವನೆ ಮೂಲಕ, ಅಂಗಾಂಶ ಮತ್ತು ಸ್ನಾಯುಗಳು ಬಲವಾಗುವುವು. ಉಗುರುಗಳು ಮತ್ತು ಕೂದಲಿನಂತಹ ದೇಹದ ಕೆಲವು ಭಾಗಗಳಿಗೂ ಸಹ ಪ್ರೋಟೀನ್ ಅಗತ್ಯವಿದೆ.

ಮಾನಸಿಕ ಆರೋಗ್ಯ ಸುಧಾರಿಸುತ್ತದೆ
ನೀವು ಯಾವುದೇ ಬೇಸರದಲ್ಲಿದ್ದರೆ, ಅಥವಾ ಯಾರದ್ದೋ ಮೇಲೆ ಹೆಚ್ಚು ಕೋಪವಿದ್ದರೆ ಐಸ್​ಕ್ರೀಂ ತಿನ್ನುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯಲಿದೆ.

ಐಸ್​ಕ್ರೀಂನಿಂದಾಗು ತೊಂದರೆಗಳೇನು
ಐಸ್ ಕ್ರೀಂ ನಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ಆ ಸಂದರ್ಭದಲ್ಲಿ, ನೀವು ಅದನ್ನು ಹೆಚ್ಚು ಸೇವಿಸಿದರೆ, ಸ್ಥೂಲಕಾಯತೆಯ ಅಪಾಯ ಉಂಟಾಗುತ್ತದೆ.

ಇದಲ್ಲದೆ, ಬೆಣ್ಣೆ ಮತ್ತು ಚಾಕೋಲೇಟ್ನಿಂದ ಮಾಡಿದ ಐಸ್ ಕ್ರೀಂ ನಲ್ಲಿ ಸಹ ಕ್ಯಾಲೋರಿ ಹೆಚ್ಚಾಗಿದೆ, ಇದು ದೇಹಕ್ಕೆ ಹಾನಿಕಾರಕವಾಗಿದೆ. ಹೆಚ್ಚು ಐಸ್ ಕ್ರೀಂ ಸೇವನೆ ತಲೆನೋವು, ಆಹಾರ ವಿಷಕಾರಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.