Ice Baths : ಉರಿ ಉರಿ ಸೆಕೆಯ ನಡುವೆ ಐಸ್ ಬಾತ್ ಮಾಡಿ, ಇದರ ಪ್ರಯೋಜನ ಒಂದೆರಡರಲ್ಲ

ಬಿಸಿಲಿನ ಬೇಗೆಯ ನಡುವೆ ತಣ್ಣೀರಿನ ಸ್ನಾನವು ದೇಹ ಹಾಗೂ ಮನಸ್ಸನ್ನು ನಿರಾಳವಾಗಿಸುತ್ತದೆ. ಆದರೆ ಈ ಐಸ್​ನಷ್ಟು ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವ ಬಗ್ಗೆ ಕೇಳಿದ್ದೀರಬಹುದು. ಸೆಲೆಬ್ರಿಟಿಗಳು ಹೆಚ್ಚಾಗಿ ಈ ಐಸ್ ವಾಟರ್ ಬಾತ್ ನತ್ತ ಒಲವು ತೋರಿಸುತ್ತಿದ್ದಾರೆ. ಈ ಅಭ್ಯಾಸದಿಂದ ಆರೋಗ್ಯ ಪ್ರಯೋಜನಗಳು ಅಧಿಕ ಎನ್ನಲಾಗಿದೆ.

Ice Baths : ಉರಿ ಉರಿ ಸೆಕೆಯ ನಡುವೆ ಐಸ್ ಬಾತ್ ಮಾಡಿ, ಇದರ ಪ್ರಯೋಜನ ಒಂದೆರಡರಲ್ಲ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 04, 2024 | 3:19 PM

ಇತ್ತೀಚೆಗಿನ ದಿನಗಳಲ್ಲಿ ಐಸ್ ವಾಟರ್ ಬಾತ್ ಎನ್ನುವುದು ಟ್ರೆಂಡ್ ಆಗುತ್ತಿದೆ. ಸೆಲೆಬ್ರಿಟಿಗಳು, ಕ್ರಿಕೆಟ್​ ಪಟುಗಳು ಐಸ್ ವಾಟರ್ ಸ್ನಾನ ಮಾಡುತ್ತಿದ್ದಾರೆ. ಅದಲ್ಲದೇ, ಐಸ್ ವಾಟರ್ ಸ್ನಾನವನ್ನು ಹಲವರು ಚಾಲೆಂಜ್ ಆಗಿಯೂ ಸ್ವೀಕರಿಸುತ್ತಿದ್ದಾರೆ. ಐಸ್ ವಾಟರ್​ನಲ್ಲಿ 10ರಿಂದ 15 ನಿಮಿಷ ಕುಳಿತುಕೊಳ್ಳುವ ಮೂಲಕ ಇದೊಂದು ಥೆರಪಿಯಾಗಿದೆ. ಐಸ್​ ನೀರಿರುವ ಟಬ್​ನಲ್ಲಿ ತಲೆಯನ್ನು ಮಾತ್ರ ಮೇಲೆತ್ತಿಕೊಂಡು ಸಂಪೂರ್ಣವಾಗಿ ದೇಹವನ್ನು ಮುಳುಗಿಸಿ ಕುಳಿತುಕೊಳ್ಳುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು ಅಧಿಕವಾಗಿದೆ.

ಐಸ್ ವಾಟರ್ ಬಾತ್ ನಿಂದ ಆಗುವ ಆರೋಗ್ಯ ಪ್ರಯೋಜನಗಳು

* ಸ್ನಾಯುಗಳ ನೋವನ್ನು ನಿವಾರಿಸುತ್ತದೆ: ದೀರ್ಘಕಾಲದ ವ್ಯಾಯಾಮದ ನಂತರದಲ್ಲಿ ಐಸ್ ವಾಟರ್ ಸ್ನಾನವು ಬಹಳಷ್ಟು ಪ್ರಯೋಜನಕಾರಿಯಾಗಿದೆ. ವ್ಯಾಯಾಮದ ನಂತರ ವ್ಯಕ್ತಿಯು ಸ್ನಾಯುಗಳಲ್ಲಿ ಅನುಭವಿಸುವ ಕೆಲವು ಊತ ಮತ್ತು ನೋವನ್ನು ಶಮನ ಮಾಡುತ್ತದೆ.

* ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ : ದೈಹಿಕವಾಗಿ ಶ್ರಮ ವಹಿಸಿ ಕೆಲಸ ಮಾಡುವುದರಿಂದ ದೇಹದ ಉಷ್ಣತೆಯೂ ಸಹಜವಾಗಿ ಹೆಚ್ಚಾಗುತ್ತದೆ. ಹೀಗಾದಾಗ ಐಸ್ ನೀರಿನಲ್ಲಿ ಸ್ನಾನವನ್ನು ಮಾಡುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಏಕಾಗ್ರತೆಯನ್ನು ಹೆಚ್ಚಿಸುತ್ತದೆ : ವೆಬ್‌ಮ್‌ಡಿ ವರದಿಯ ಪ್ರಕಾರ, ಮಾನಸಿಕ ಆರೋಗ್ಯಕ್ಕೆ ಐಸ್ ಬಾತ್ ತುಂಬಾ ಪ್ರಯೋಜನಕಾರಿಯಾಗಿದೆ. ಅದಲ್ಲದೇ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಭೂ ಗರ್ಭದ ಸ್ಫೋಟ, ಜನರ ಜೀವಕ್ಕೆ ಆಪತ್ತು ಖಚಿತ!

* ಉರಿಯೂತವನ್ನು ಕಡಿಮೆ ಮಾಡುತ್ತದೆ : ತಣ್ಣೀರು ದೇಹದಲ್ಲಿನ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ, ಇದು ದೇಹದಲ್ಲಿನ ಊತ ಹಾಗೂ ಉರಿಯೂತವನ್ನು ನಿವಾರಿಸುತ್ತದೆ.

* ಉತ್ತಮ ನಿದ್ರೆಗೆ ಸಹಕಾರಿ : ಕೆಲವು ಸಂಶೋಧನೆಗಳ ಪ್ರಕಾರ, ಐಸ್ ವಾಟರ್ ಬಾತ್ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಈ ರೀತಿಯ ಸ್ನಾನದಿಂದ ಆಯಾಸವನ್ನು ಅನುಭವಿಸುವ ಪ್ರಮಾಣವು ಕಡಿಮೆಯಾಗುತ್ತದೆ.

* ರೋಗನಿರೋಧಕ ಶಕ್ತಿಯು ಹೆಚ್ಚಳ : ತಣ್ಣನೆಯ ನೀರಿನಲ್ಲಿ ಮುಳುಗಿ ಸ್ನಾನ ಮಾಡುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!