Relationship Tips : ನಿಮ್ಮ ಹುಡುಗನು ಈ ರೀತಿ ನಡೆದುಕೊಂಡ್ರೆ ನಿಮಗೆ ಕೈ ಕೊಡೋದು ಪಕ್ಕಾ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 17, 2024 | 6:06 PM

ಈಗಿನ ಕಾಲದಲ್ಲಿ ಪರಿಶುದ್ಧವಾದ ಪ್ರೀತಿ ಸಿಗೋದು ಕಷ್ಟ. ಅದರಲ್ಲಿಯು ಹುಡುಗ ಹುಡುಗಿಯರ ನಡುವಿನ ಪ್ರೀತಿಗೆ ಗ್ಯಾರಂಟಿ ಅನ್ನೋದೇ ಇಲ್ಲ. ಸಣ್ಣ ಪುಟ್ಟ ಕಾರಣಗಳಿಂದಲೂ ಬ್ರೇಕಪ್ ಆಗಬಹುದು. ಇಲ್ಲದಿದ್ದರೆ ಲವ್ ಎನ್ನುವ ಹೆಸರಿನಲ್ಲಿ ಮೋಸ ಮಾಡಲು ಬಹುದು. ಆದರೆ ನೀವು ಪ್ರೀತಿಸುವ ಹುಡುಗನಲ್ಲಿ ಈ ನಡವಳಿಕೆಗಳು ಕಂಡು ಬಂದರೆ ಆತನು ನಿಮಗೆ ಕೈ ಕೊಡೋದು ಪಕ್ಕಾ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.

Relationship Tips : ನಿಮ್ಮ ಹುಡುಗನು ಈ ರೀತಿ ನಡೆದುಕೊಂಡ್ರೆ ನಿಮಗೆ ಕೈ ಕೊಡೋದು ಪಕ್ಕಾ
ಸಾಂದರ್ಭಿಕ ಚಿತ್ರ
Follow us on

ಪ್ರೀತಿ ಮಾಯೆ ಹುಷಾರು, ಕಣ್ಣೀರು ಮಾರೋ ಬಜಾರು ಎನ್ನುವ ಹಾಡಿದೆ. ಆದರೆ ಈ ಪ್ರೀತಿಗೆ ಕಣ್ಣಿಲ್ಲ. ಯಾವಾಗ ಯಾರ ಮೇಲೆ ಪ್ರೀತಿ ಹುಟ್ಟುತ್ತೆ ಎಂದು ಹೇಳುವುದು ಕಷ್ಟ. ಆದರೆ ಈ ಪ್ರೀತಿಗೆ ಜಾತಿ, ಧರ್ಮ, ಅಂತಸ್ತು, ವಯಸ್ಸಿನ ಅಂತರವು ಬೇಕಾಗಿಲ್ಲ. ಆದರೆ ಈಗಿನ ಕಾಲದಲ್ಲಿ ಲವ್ ಗೆ ಗ್ಯಾರಂಟಿನೂ ಇಲ್ಲ, ವ್ಯಾರಂಟಿನೂ ಇಲ್ಲ ಎನ್ನುವುದು ಮಾತಿದೆ. ಕೆಲವರು ಹುಡುಗಿ ಸಿಕ್ಕಿದ್ದಾಳೆಂದರೆ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವರು ಇದ್ದಾರೆ. ಅದಲ್ಲದೇ ಹುಡುಗನಿಗೆ ಮೋಸ ಮಾಡುವವರು ಹುಡುಗಿಯರೂ ಇದ್ದಾರೆ. ಆದರೆ ಪ್ರೇಮಿಯ ನಡವಳಿಕೆ ಈ ರೀತಿಯಾಗಿದ್ದರೆ ಹುಡುಗಿಯರು ಎಷ್ಟು ಹುಷಾರಾಗಿತ್ತಿರೋ ಅಷ್ಟು ಒಳ್ಳೆಯದು.

* ಸರಿಯಾಗಿ ಸಂವಹನ ನಡೆಸದೇ ಇರುವುದು : ಪ್ರೀತಿಯಲ್ಲಿ ಸಂಭಾಷಣೆಯು ಅತಿ ಮುಖ್ಯ. ಇದು ಸಂಬಂಧವನ್ನು ಮತ್ತಷ್ಟು ಹತ್ತಿರವಾಗಿಸುತ್ತದೆ. ಆದರೆ ಒಂದು ವೇಳೆ ನೀವು ಪ್ರೀತಿಸುವ ಹುಡುಗನು ಇದ್ದಕ್ಕಿದ್ದಂತೆ ಸಂಪರ್ಕ ಮಾಡಲು ಸಿಗದಿದ್ದರೆ ಆಗಲೇ ನೀವು ಆತನು ನಿಮ್ಮನ್ನು ಕಡೆಗಣಿಸುತ್ತಿದ್ದಾನೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಅದಲ್ಲದೇ, ಕರೆ ಹಾಗೂ ಮೆಸೇಜ್ ಗೆ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದರೆ ಆತನಿಗೆ ನೀವು ಮುಖ್ಯವಾಗಿರುವುದಿಲ್ಲ ಎನ್ನುವುದನ್ನು ಸೂಚಿಸುತ್ತದೆ.

* ಕುಟುಂಬ ಹಾಗೂ ಸ್ನೇಹಿತರಿಗೆ ಪ್ರೇಯಸಿಯನ್ನು ಪರಿಚಯಿಸದಿರುವುದು : ಸಾಮಾನ್ಯವಾಗಿ ತಾನು ಪ್ರೀತಿಸುವ ಹುಡುಗಿಯನ್ನು ತನ್ನ ಕುಟುಂಬದವರಿಗೆ ಪರಿಚಯಿಸಬೇಕು ಎನ್ನುವುದಿರುತ್ತದೆ. ಆದರೆ ಒಂದು ವೇಳೆ ನೀವು ಪ್ರೀತಿಸುವ ಹುಡುಗನು ಕುಟುಂಬದವರಿಗೆ, ಸ್ನೇಹಿತರಿಗೆ ನಿಮ್ಮನ್ನು ಪರಿಚಯ ಮಾಡಿಕೊಡುವುದಿಲ್ಲ ಎಂದಾದರೆ ಅದನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯ. ಅದಲ್ಲದೇ ಯಾವಾಗ ಬೇಕಾದರೂ ನಿಮ್ಮಿಂದ ದೂರವಾಗುವ ಸಾಧ್ಯತೆಯಿದೆ ಎನ್ನುವುದನ್ನು ನೀವು ಅರಿತುಕೊಳ್ಳುವುದು ಮುಖ್ಯ.

* ಸಹಾಯ ಎಂದಾಗ ಜಾರಿಕೊಳ್ಳುವುದು : ಸಂಬಂಧದಲ್ಲಿ ಕಷ್ಟದ ಕಾಲದಲ್ಲಿ ಒಬ್ಬರಿಗೆ ಮತ್ತೊಬ್ಬರು ನೆರಳಾಗಿರುವುದು ಮುಖ್ಯ. ನಿಮ್ಮಿಂದ ಪದೇ ಪದೇ ಒಂದಲ್ಲ ಒಂದು ಪಡೆದುಕೊಂಡ ಪ್ರಿಯತಮನು ನೀವು ಕಷ್ಟವೆಂದಾಗ ನಿಮ್ಮ ಜೊತೆಗೆ ನಿಲ್ಲುವುದಿಲ್ಲ. ಆರ್ಥಿಕವಾಗಿ ಯಾವುದೇ ಸಹಾಯ ಮಾಡದೇ ಇದ್ದಾಗ ನಿಮ್ಮನ್ನು ಅತಿ ಮುಖ್ಯವೆಂದು ಆತನು ಪರಿಗಣಿಸಿಲ್ಲ. ಆತನು ಸ್ವಾರ್ಥಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾನೆ ಎನ್ನುವುದು ಸ್ಪಷ್ಟವಾಗುತ್ತದೆ.

* ಭವಿಷ್ಯದ ಬಗ್ಗೆ ಚರ್ಚಿಸದೇ ಇರುವುದು : ಸಂಬಂಧದಲ್ಲಿ ಇಬ್ಬರೂ ಕೂಡ ತಮ್ಮ ಭವಿಷ್ಯದ ಬಗ್ಗೆ ಚರ್ಚಿಸುವುದು ಬಹಳ ಮುಖ್ಯವಾಗುತ್ತದೆ. ಆದರೆ ಹುಡುಗಿಯು ತನ್ನ ಹುಡುಗನೊಂದಿಗೆ ಈ ಬಗ್ಗೆ ಚರ್ಚೆ ಮಾಡಲೂ ಪ್ರಯತ್ನಿಸಿದರೂ, ಅದನ್ನು ನಿರ್ಲಕ್ಷ್ಯ ಮಾಡಬಹುದು. ನಿಮ್ಮ ಹುಡುಗನಿಗೆ ಈ ಸಂಬಂಧವನ್ನು ಮುಂದಿನ ಹಂತಕ್ಕೆ ಅಂದರೆ ಮದುವೆವರೆಗೆ ತೆಗೆದುಕೊಂಡು ಹೋಗಲು ಇಷ್ಟವಿಲ್ಲ. ನಿಮ್ಮನ್ನು ಟೈಮ್ ಪಾಸ್ ಗೆಂದು ಲವ್ ಪ್ರೀತಿ ಮಾಡುತ್ತಿದ್ದು, ಈ ಸಂಬಂಧ ತುಂಬಾ ಸಮಯವಿರುವುದು ಎಂದು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.

ಇದನ್ನೂ ಓದಿ: ಸಂಜೆ ಕಾಫಿ ಟೀ ಜೊತೆಗೆ ಗಿರ್ಮಿಟ್ ಸವಿದರೆ ಮಜಾನೇ ಬೇರೆ, ಸುಲಭ ರೆಸಿಪಿ

* ಸ್ವಾರ್ಥದ ಭಾವನೆ : ಸಂಬಂಧಗಳು ಯಾವಾಗಲೂ ಪರಸ್ಪರ ಕೊಡು ತೆಗೆದುಕೊಳ್ಳುವಂತಿರಬೇಕು. ಆದರೆ ನಿಮ್ಮ ಪ್ರಿಯಕರ ತನ್ನ ಬಗ್ಗೆ ಮಾತ್ರ ಯೋಚಿಸಿದರೆ ನಿಮ್ಮನ್ನು ಬಳಸಿಕೊಳ್ಳುತ್ತಾನೆ. ಆತನ ಸ್ವಾರ್ಥಕ್ಕೆ ನಿಮ್ಮ ಬಳಿ ಪ್ರೀತಿಯ ನಾಟಕವಾಡುತ್ತಿದ್ದಾನೆ ಎಂದರ್ಥ. ಹೀಗಾಗಿ ಈ ಗುಣ ಸ್ವಭಾವ ಹೊಂದಿರುವ ಹುಡುಗನು ಯಾವಾಗ ಬೇಕಾದರೂ ನಿಮ್ಮಿಂದ ದೂರವಾಗಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Published On - 5:53 pm, Wed, 17 July 24