ಸಾಂದರ್ಭಿಕ ಚಿತ್ರ
Image Credit source: Getty Images
ದೇಹದಲ್ಲಿರುವ ಪ್ರತಿಯೊಂದು ಭಾಗವು ಒಂದಕ್ಕೊಂದು ಸಂಪರ್ಕ ಇರುತ್ತದೆ. ಇದರಿಂದ ದೇಹದ ಒಂದು ಭಾಗದಲ್ಲಿ ಆಗುವ ಬದಲಾವಣೆ ಸೂಚನೆಯನ್ನು ಇನ್ನೊಂದು ಭಾಗ ಹೇಳುತ್ತದೆ. ಈ ಹೃದಯಾಘಾತ (Heart Blockage) ಎನ್ನುವುದು ಚಿಕ್ಕವರಿಂದ ಹಿಡಿದು ದೊಡ್ಡವರೆಗೂ ಇತ್ತೀಚೆಗೆ ಕಾಡುತ್ತಿರುವ ಬಹು ದೊಡ್ಡ ಸಮಸ್ಯೆಯಾಗಿದೆ. ಹೃದಯಾಘಾತ ಆಗುವ ಮುನ್ನ ಮನುಷ್ಯನ ದೇಹದಲ್ಲಿ ಕೆಲವೊಂದು ಭಾಗಗಳು ಸೂಚನೆಯನ್ನು ನೀಡುತ್ತದೆ, ಹೃದಯಾಘಾತಕ್ಕೂ ಮೊದಲು ಕಾಲಿನ ( Leg Pain) ಭಾಗಗಳಲ್ಲಿ ಆರೋಗ್ಯದಲ್ಲಿ ಬದಲಾವಣೆ ಆಗುತ್ತದೆ. ಹೃದಯ ಅಪಧಮನಿಯಲ್ಲಿ ಕೊಬ್ಬು, ಕೊಲೆಸ್ಟ್ರಾಲ್, ಕೆಲವೊಂದು ಅಡಚಣೆಗಳು ಸಂಗ್ರಹವಾಗುತ್ತದೆ. ಈ ವೇಳೆ ರಕ್ತದ ಹರಿವು ಕಡಿಮೆಯಾಗುತ್ತದೆ. ಈ ಅಡೆತಡೆಗಳು ಹೃದಯಕ್ಕೆ ಆಮ್ಲಜನಕ-ಸಮೃದ್ಧ ರಕ್ತದ ಪೂರೈಕೆಯನ್ನು ನಿರ್ಬಂಧಿಸುತ್ತವೆ. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಈ ವೇಳೆ ಇಂತಹ ಅಡಚಣೆಗಳು ಆಗುತ್ತಿದೆ ಎಂಬುದನ್ನು ಕಾಲುಗಳು ಸೂಚನೆ ನೀಡುತ್ತದೆ.
ಕಾಲಿನಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು
- ಕಾಲುಗಳಲ್ಲಿ ನೋವು ಮತ್ತು ಅಸ್ವಸ್ಥತೆ : ಹೃದಯ ಅಪಧಮನಿಗಳಲ್ಲಿನ ಅಡಚಣೆ ಉಂಟಾದಾಗ ರಕ್ತ ಪೂರೈಕೆ ಕಡಿಮೆಯಾಗುತ್ತದೆ. ಇದರಿಂದ ರಾತ್ರಿ ವೇಳೆ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಜತೆಗೆ ಅಸ್ವಸ್ಥತೆ ಉಂಟಾಗುತ್ತದೆ. ಮರಗಟ್ಟುವಿಕೆ, ಭಾರವಾದ ಭಾವನೆ ಅಥವಾ ಸ್ನಾಯು ಸೆಳೆತ (ಕ್ಲಾಡಿಕೇಶನ್) ಹೀಗೆ ಅನೇಕ ವಿಧಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಈ ಲಕ್ಷಣಗಳು ನಡೆಯುವಾಗ ಕಾಣಿಸಿಕೊಳ್ಳುತ್ತದೆ. ವಿಶ್ರಾಂತಿ ಪಡೆದರೆ ಕಡಿಮೆ ಆಗುತ್ತದೆ. ಒಂದು ವೇಳೆ ಈ ರೀತಿ ನೋವು ಎರಡು ದಿನಕ್ಕಿಂತ ಹೆಚ್ಚಾಗಿ ಕಾಣಿಸಿಕೊಂಡರೆ, ಇದು ಹೃದಯಾಘಾತದ ಎಚ್ಚರಿಕೆ ಎಂದು ಪರಿಗಣಿಸಲಾಗುತ್ತದೆ.
- ಕಾಲುಗಳು ಮರಗಟ್ಟುವಿಕೆ: ಪಾದಗಳು ಅಥವಾ ಕಾಲುಗಳಲ್ಲಿ ಶೀತ ಅಥವಾ ಮರಗಟ್ಟುವಿಕೆಯ ಭಾಸವಾದರೆ ಅದು ಹೃದಯ ಅಪಧಮನಿಗಳಲ್ಲಿನ ಅಡಚಣೆಗಳ ಸಾಮಾನ್ಯ ಲಕ್ಷಣವಾಗಿದೆ.ರಕ್ತದ ಹರಿವು ಕಡಿಮೆಯಾದರೆ ಆಮ್ಲಜನಕ ಮತ್ತು ಪೋಷಕಾಂಶಗಳು ಸಿಗುವುದಿಲ್ಲ. ಒಂದು ಕಾಲುಗಳು ಅಥವಾ ಪಾದಗಳು ತಣ್ಣಗಾಗಿದ್ದರೆ ಇದು ಸ್ಪಷ್ಟವಾಗುತ್ತದೆ. ಈ ಸಂವೇದನೆಯು ಆಗಾಗ್ಗೆ ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯಿರಿ.
- ಕಾಲುಗಳಲ್ಲಿ ಊತ : ಕಾಲುಗಳು ಅಥವಾ ಪಾದಗಳಲ್ಲಿ ಊತ ಕಾಣಿಸಿಕೊಂಡರೆ ಹೃದಯ ಅಪಧಮನಿಗಳಲ್ಲಿನ ಅಡಚಣೆಗಳ ಸಂಕೇತವಾಗಿರುತ್ತದೆ. ರಕ್ತದ ಹರಿವಿನಲ್ಲಿ ಕಳಪೆ ಇರುತ್ತದೆ. ಇದು ದೇಹದಲ್ಲಿ ದ್ರವದ ಶೇಖರಣೆಗೆ ಕಾರಣವಾಗುತ್ತದೆ. ಈ ಲಕ್ಷಣಗಳು ಕಾಲಿನಲ್ಲಿ ರಾತ್ರಿ ಹೊತ್ತಿನಲ್ಲಿ ಕಾಣಿಸಿಕೊಳ್ಳುತ್ತದೆ. ಈ ರೋಗಲಕ್ಷಣವನ್ನು ನಿರ್ಲಕ್ಷಿಸಬಾರದು, ಏಕೆಂದರೆ ಇದು ಹೃದಯ ಸಮಸ್ಯೆಗಳು ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು.
- ಕಾಲಿನ ಚರ್ಮದ ಬಣ್ಣದಲ್ಲಿ ಬದಲಾವಣೆ: ಕಾಲುಗಳು ಮತ್ತು ಪಾದಗಳ ಚರ್ಮದಲ್ಲಿ ಬದಲಾವಣೆಯಾದರೆ ಹೃದಯದ ಅಪಧಮನಿಗಳಲ್ಲಿನ ಅಡಚಣೆಗಳ ಬಗ್ಗೆ ಸ್ಪಷ್ಟವಾಗಿ ತಿಳಿಯುತ್ತದೆ. ಕಾಲಿನ ಚರ್ಮವು ಹೊಳಪು, ನೀಲಿ ಅಥವಾ ನೇರಳೆ ಬಣ್ಣದಲ್ಲಿ ಕಾಣಿಸಿಕೊಂಡರೆ ಇದು ಅದರ ಸೂಚನೆ ಎಂದು ಹೇಳಬಹುದು. ಇವೆಲ್ಲವೂ ಆಮ್ಲಜನಕಯುಕ್ತ ರಕ್ತದ ಕೊರತೆಯಿಂದ ಉಂಟಾಗುತ್ತವೆ.
- ಕಾಲಿನಲ್ಲಿ ಗುಣವಾಗದ ಗಾಯಗಳು: ಕಾಲಿನ ಅಥವಾ ಪಾದಗಳಲ್ಲಿ ಯಾವುದೇ ಗಾಯಗಳು ಅಥವಾ ಹುಣ್ಣುಗಳು ಕಡಿಮೆಯಾಗದೇ ಇದ್ದರೆ ಅದು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯ ಸೂಚನೆಯನ್ನು ನೀಡುತ್ತಿದೆ ಎಂದರ್ಥ. ರಕ್ತದ ಹರಿವು ಕಡಿಮೆಯಾದರೆ, ಈ ಗಾಯಗಳು ಕಡಿಮೆಯಾಗುವುದಿಲ್ಲ. ಇದರಿಂದ ಗಾಯಗಳು ಹೆಚ್ಚು ಕಾಲ ಉಳಿಯಲು ಅಥವಾ ಸೋಂಕಿಗೆ ಒಳಗಾಗಲು ಕಾರಣವಾಗಬಹುದು. ಗಂಭೀರ ರಕ್ತಪರಿಚಲನಾ ಸಮಸ್ಯೆಗಳನ್ನು ಸೂಚಿಸುತ್ತದೆ. ಈ ಬಗ್ಗೆ ವೈದ್ಯರನ್ನು ಸಂಪರ್ಕಿಸಿ ತಕ್ಷಣದಲ್ಲಿ ಗುಣಪಡಿಸುವುದು ಅಗತ್ಯವಾಗಿರುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ