ಶೌಚಾಲಯದಲ್ಲಿ ಇರುವೆಗಳು ಕಾಣಿಸುತ್ತಿರುವುದು ಈ ರೋಗದ ಸಂಕೇತವಾಗಿರಬಹುದು

ಯಾವುದೇ ವ್ಯಕ್ತಿಯ ಮನೆಯ ಸ್ನಾನಗೃಹದಲ್ಲಿ ಇರುವೆಗಳು ಹೆಚ್ಚಾಗಿ ಕಂಡುಬರುತ್ತಿದ್ದರೆ ಅದು ಆ ಮನೆಯಲ್ಲಿರುವ ವ್ಯಕ್ತಿಯ ಅನಾರೋಗ್ಯದ ಸಂಕೇತವಾಗಿರಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು, ಸ್ನಾನಗೃಹದಲ್ಲಿ ಇರುವೆಗಳು ಕಾಣಿಸಿಕೊಳ್ಳಲು ಹಲವಾರು ರೀತಿಯ ಕಾರಣಗಳಿರಬಹುದು. ಉದಾಹರಣೆಗೆ, ಸ್ನಾನಗೃಹದಲ್ಲಿ ಯಾವುದಾದರೂ ಕೀಟಗಳು ಸತ್ತು ಬಿದ್ದಿದ್ದರೆ, ಟೂತ್ ಪೇಸ್ಟ್ ಹಾಕಿದರೂ ಇರುವೆಗಳು ಬರಬಹುದು. ಇದಕ್ಕೆ ಇನ್ನಿತರ ಕಾರಣಗಳು ಕೂಡ ಇರಬಹುದು. ಆದರೆ ಸ್ನಾನಗೃಹದಲ್ಲಿ ಪದೇ ಪದೇ ಇರುವೆಗಳ ಕಂಡು ಬರುತ್ತಿರುವುದಕ್ಕೆ ಕಾರಣವು ಹೆಚ್ಚಾಗಿ ಮಧುಮೇಹಕ್ಕೆ ಸಂಬಂಧಿಸಿರಬಹುದು. ದೇಹದಲ್ಲಿ ಇನ್ಸುಲಿನ್ ಕೊರತೆಯಿದ್ದಾಗ, ವ್ಯಕ್ತಿಗೆ ಮಧುಮೇಹದ ಅಪಾಯ ಕಾಡಬಹುದು. ಹಾಗಾದರೆ ಮಧುಮೇಹದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ.

ಶೌಚಾಲಯದಲ್ಲಿ ಇರುವೆಗಳು ಕಾಣಿಸುತ್ತಿರುವುದು ಈ ರೋಗದ ಸಂಕೇತವಾಗಿರಬಹುದು
Edited By:

Updated on: Oct 17, 2024 | 5:38 PM

ಸಾಮಾನ್ಯವಾಗಿ ಯಾವುದೇ ವ್ಯಕ್ತಿಯ ಮನೆಯ ಸ್ನಾನಗೃಹದಲ್ಲಿ ಇರುವೆಗಳು ಹೆಚ್ಚಾಗಿ ಕಂಡುಬರುತ್ತಿದ್ದರೆ ಅದು ಆ ಮನೆಯಲ್ಲಿರುವ ವ್ಯಕ್ತಿಯ ಅನಾರೋಗ್ಯದ ಸಂಕೇತವಾಗಿರಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು, ಸ್ನಾನಗೃಹದಲ್ಲಿ ಇರುವೆಗಳು ಕಾಣಿಸಿಕೊಳ್ಳಲು ಹಲವಾರು ರೀತಿಯ ಕಾರಣಗಳಿರಬಹುದು. ಉದಾಹರಣೆಗೆ, ಸ್ನಾನಗೃಹದಲ್ಲಿ ಯಾವುದಾದರೂ ಕೀಟಗಳು ಸತ್ತು ಬಿದ್ದಿದ್ದರೆ, ಟೂತ್ ಪೇಸ್ಟ್ ಹಾಕಿದರೂ ಇರುವೆಗಳು ಬರಬಹುದು. ಇದಕ್ಕೆ ಇನ್ನಿತರ ಕಾರಣಗಳು ಕೂಡ ಇರಬಹುದು. ಆದರೆ ಸ್ನಾನಗೃಹದಲ್ಲಿ ಪದೇ ಪದೇ ಇರುವೆಗಳ ಕಂಡು ಬರುತ್ತಿರುವುದಕ್ಕೆ ಕಾರಣವು ಹೆಚ್ಚಾಗಿ ಮಧುಮೇಹಕ್ಕೆ ಸಂಬಂಧಿಸಿರಬಹುದು. ದೇಹದಲ್ಲಿ ಇನ್ಸುಲಿನ್ ಕೊರತೆಯಿದ್ದಾಗ, ವ್ಯಕ್ತಿಗೆ ಮಧುಮೇಹದ ಅಪಾಯ ಕಾಡಬಹುದು. ಅಂತಹ ಸಮಯದಲ್ಲಿ ನಿಮ್ಮ ಶೌಚಾಲಯಗಳಲ್ಲಿ ಇರುವೆಗಳು ಕಂಡು ಬರಬಹುದು.

ಮಧುಮೇಹ ಬರುವುದು ಹೇಗೆ?

ಮೇದೋಜ್ಜೀರಕ ಗ್ರಂಥಿಯಿಂದ ಹೊರಬರುವ ದ್ರವವನ್ನು ಇನ್ಸುಲಿನ್ ಎಂದು ಕರೆಯಲಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು ಇದರ ಮುಖ್ಯ ಕಾರ್ಯವಾಗಿದೆ. ಮಧುಮೇಹವು ಸಂಪೂರ್ಣವಾಗಿ ಜೀವನಶೈಲಿ ಮತ್ತು ಆಹಾರಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು ಆಹಾರ ಪದ್ಧತಿಯಲ್ಲಿ ತೊಂದರೆ ಉಂಟಾದರೆ ಮಧುಮೇಹ ಉಂಟಾಗಬಹುದು. ಮಾತ್ರವಲ್ಲ, ಯಕೃತ್ತಿನ ಸಮಸ್ಯೆಗಳು ಮತ್ತು ಥೈರಾಯ್ಡ್ ನಿಂದಲೂ ಮಧುಮೇಹ ಉಂಟಾಗಬಹುದು.

ಮಧುಮೇಹದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಈ ಸಲಹೆಯನ್ನು ಪಾಲಿಸಿ;

*ಮಧುಮೇಹವನ್ನು ನಿಯಂತ್ರಣದಲ್ಲಿಡಲು ಬಯಸುವವರು ಮೊದಲು ನೀವು ನಿಮ್ಮ ಆಹಾರವನ್ನು ನಿಯಂತ್ರಣದಲ್ಲಿಡಬೇಕು. ಬಾಯಿಗೆ ರುಚಿ ನೀಡುವ ಆಹಾರಗಳನ್ನು ಹೆಚ್ಚು ಸೇವನೆ ಮಾಡಬಾರದು.

*ಮಿತಿಯಲ್ಲಿ ಸಕ್ಕರೆಯನ್ನು ಸೇವಿಸಿ. ಸಮಯಕ್ಕೆ ಸರಿಯಾಗಿ ನಿಮ್ಮ ಔಷಧಿಗಳನ್ನು ತೆಗೆದುಕೊಳ್ಳಿ.

*ನೀವು ಮಧುಮೇಹಿಗಳಾಗಿದ್ದರೆ ಗಾಯಗಳು ಆಗುವುದನ್ನು ತಪ್ಪಿಸಬೇಕು. ಏಕೆಂದರೆ ಮಧುಮೇಹಿಗಳಲ್ಲಿ ಗಾಯಗಳು ಬೇಗನೆ ಗುಣವಾಗುವುದಿಲ್ಲ. *ಉಗುರುಗಳನ್ನು ಕತ್ತರಿಸುವಾಗಲೂ ಕೂಡ ಬಹಳ ಜಾಗರೂಕರಾಗಿರಬೇಕಾಗುತ್ತದೆ.

*ಮಧುಮೇಹ ರೋಗಿಗಳು ಪ್ರತಿನಿತ್ಯ ವ್ಯಾಯಾಮ ಮಾಡಬೇಕು. ಆದ್ದರಿಂದ, ಬೆಳಿಗ್ಗೆ ಸಾಧ್ಯವಾದಷ್ಟು ನಡೆಯಿರಿ, ಜಾಗಿಂಗ್ ಮಾಡಿ ಇದು ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.

ನಿಮ್ಮ ಮನೆಯ ಶೌಚಾಲಯಗಳಲ್ಲಿ ಪದೇ ಪದೇ ಇರುವೆಗಳು ಕಂಡು ಬರುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ, ನಿಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:31 pm, Thu, 17 October 24

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us