ನಿಂಬೆಹಣ್ಣು ಬೇಗ ಹಾಳಾಗಬಾರದೆಂದರೆ, ಅವುಗಳನ್ನು ಈ ರೀತಿ ಸಂಗ್ರಹಿಸಿಡಿ

ಸಾಮಾನ್ಯವಾಗಿ ಮಾರುಕಟ್ಟೆಯಿಂದ ತಂದಂತಹ ನಿಂಬೆಹಣ್ಣುಗಳು ಒಂದೆರಡು ದಿನಗಳಲ್ಲಿಯೇ ಒಣಗಿ ಹೋಗುತ್ತವೆ. ನಿಂಬೆಯ ಮೇಲ್ಭಾಗ ಕಂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಇವುಗಳನ್ನು ಫ್ರೆಶ್‌ ಆಗಿ ಕಾಯ್ದುಕೊಳ್ಳುವುದು ಸ್ವಲ್ಪ ಕಷ್ಟ. ಹೀಗಿರುವಾಗ ಈ ಕೆಲವು ಸರಳ ಸಲಹೆಗಳನ್ನು ಪಾಲಿಸುವ ಮೂಲಕ ನಿಂಬೆ ಹಣ್ಣನ್ನು ಹೆಚ್ಚು ಕಾಲ ಫ್ರೆಶ್‌ ಆಗಿ ಇಟ್ಟುಕೊಳ್ಳಬಹುದು.

ನಿಂಬೆಹಣ್ಣು ಬೇಗ ಹಾಳಾಗಬಾರದೆಂದರೆ, ಅವುಗಳನ್ನು ಈ ರೀತಿ ಸಂಗ್ರಹಿಸಿಡಿ
ಸಾಂದರ್ಭಿಕ ಚಿತ್ರ

Updated on: Dec 11, 2025 | 4:35 PM

ನಿಂಬೆಹಣ್ಣು (lemon) ಅಡುಗೆ ಮನೆಯಲ್ಲಿ ತೀರಾ ಹೆಚ್ಚಾಗಿ ಬಳಸುವ ಹಣ್ಣಾಗಿದೆ. ಹೌದು ಜ್ಯೂಸ್‌, ಅಡುಗೆಯಿಂದ ಹಿಡಿದು ಸ್ಕಿನ್‌ ಕೇರ್‌, ಮನೆ  ಕ್ಲಿನಿಂಗ್‌ ಕೆಲಸದಲ್ಲಿಯೂ ನಿಂಬೆ ಹಣ್ಣನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅದಕ್ಕಾಗಿಯೇ ಅನೇಕರು ಒಂದೆರಡಡು ನಿಂಬೆಹಣ್ಣು ಖರೀದಿಸುವ ಬದಲು ಹೆಚ್ಚಿನ ಪ್ರಮಾಣದಲ್ಲಿಯೇ ಇವುಗಳನ್ನು ಖರೀದಿಸುತ್ತಾರೆ. ಆದರೆ ಹೀಗೆ ಮಾರುಕಟ್ಟೆಯಲ್ಲಿ ಖರೀದಿಸಿ ತಂದಂತಹ ನಿಂಬೆ ಒಂದೆರಡು ದಿನಗಳಲ್ಲಿಯೇ ಒಣಗಿ ಹೋಗುತ್ತವೆ, ಅವುಗಳ ಮೇಲ್ಮೈ ಕಂದು ಬಣ್ಣಕ್ಕೆ ತಿರುಗುತ್ತವೆ. ನೀವು ಸಹ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಹಾಗಿದ್ರೆ ಈ ಒಂದಷ್ಟು ಸಲಹೆಯನ್ನು ಪಾಲಿಸಿ, ನಿಂಬೆಹಣ್ಣು ಬೇಗ ಹಾಳಾಗುವುದೇ ಇಲ್ಲ.

ನಿಂಬೆಹಣ್ಣನ್ನು ಈ ರೀತಿ ಸಂಗ್ರಹಿಸಿಡಿ:

ಖರೀದಿಸುವಾಗ ಗಮನಿಸಬೇಕಾದ ವಿಷಯಗಳು?

ನಿಂಬೆಹಣ್ಣುನ್ನು ದೀರ್ಘಕಾಲ ತಾಜಾವಾಗಿಡಲು, ಮೊದಲು ಮಾರುಕಟ್ಟೆಯಿಂದ ಸರಿಯಾದ ನಿಂಬೆಹಣ್ಣನ್ನು ಖರೀದಿಸುವುದು ಮುಖ್ಯ. ನಿಂಬೆ ತುಂಬಾ ಗಟ್ಟಿಯಾಗಿದ್ದರೆ, ಅದನ್ನು ಖರೀದಿಸಬೇಡಿ. ಸ್ವಲ್ಪ ಮೃದುವಾದ ನಿಂಬೆಹಣ್ಣನ್ನು ಆರಿಸಿ. ಅಲ್ಲದೆ ತಾಜಾ ನಿಂಬೆ ಉತ್ತಮ ವಾಸನೆಯನ್ನು ನೀಡುತ್ತದೆ. ಅದನ್ನೇ ಖರೀದಿಸಿ.

ರೆಫ್ರಿಜರೇಟರ್‌ನಲ್ಲಿ ಹೇಗೆ ಸಂಗ್ರಹಿಸುವುದು?

ನಿಂಬೆಹಣ್ಣುಗಳನ್ನು ದೀರ್ಘಕಾಲ ತಾಜಾವಾಗಿಡಲು, ಅವುಗಳನ್ನು ನೇರವಾಗಿ ರೆಫ್ರಿಜರೇಟರ್‌ನಲ್ಲಿ ಇಡಬೇಡಿ. ನಿಂಬೆಹಣ್ಣುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ಈಗ ಗಾಜಿನ ಬಾಟಲಿಯಲ್ಲಿ ನೀರನ್ನು ತುಂಬಿಸಿ, ನಿಂಬೆಹಣ್ಣನ್ನು ಆ ಪಾತ್ರೆಯಲ್ಲಿ ಇಟ್ಟು, ಬಿಗಿಯಾಗಿ  ಗಾಜಿನ ಬಾಟಲಿಯಲ್ಲಿ ಇರಿಸಿ ಮತ್ತು ಮುಚ್ಚಳ ಬಿಗಿಯಾಗಿ ಮುಚ್ಚಿ ಫ್ರಿಡ್ಜ್‌ನಲ್ಲಿ ಇಡಿ. ಈ ಸಲಹೆಯನ್ನು ಅನುಸರಿಸಿದರೆ, ನಿಂಬೆಹಣ್ಣುಗಳು ಬೇಗನೆ ಹಾಳಾಗುವುದಿಲ್ಲ. ಇದಲ್ಲದೆ ನಿಂಬೆ ರಸವನ್ನು ಸಹ ಫ್ರಿಡ್ಜ್‌ನಲ್ಲಿ ಶೇಖರಿಸಿಟ್ಟುಕೊಳ್ಳಬಹುದು.

ಇದನ್ನೂ ಓದಿ: ಪಾತ್ರೆ ತೊಳೆಯುವಾಗ ಅರಿವಿಲ್ಲದೆ ಮಾಡುವ ತಪ್ಪುಗಳು ಅಪಾಯವನ್ನು ಉಂಟುಮಾಡಬಹುದು

ರೆಫ್ರಿಜರೇಟರ್ ಇಲ್ಲದೆ ಸಂಗ್ರಹಿಸುವುದೇಗೆ?

ನಿಮ್ಮ ಬಳಿ ರೆಫ್ರಿಜರೇಟರ್ ಇಲ್ಲದಿದ್ದರೂ ಸಹ ನೀವು ನಿಂಬೆಹಣ್ಣುಗಳನ್ನು ಹೆಚ್ಚು ಕಾಲ ತಾಜಾವಾಗಿರುವಂತೆ ಸಂಗ್ರಹಿಸಬಹುದು.ಅದಕ್ಕಾಗಿ ಮೊದಲು ನಿಂಬೆಹಣ್ಣನ್ನು ತೊಳೆದು, ನೀರನ್ನು ಒರೆಸಿ, ನಂತರ ನಿಂಬೆಹಣ್ಣಿನ ಮೇಲ್ಮೈಗೆ ಎಣ್ಣೆಯನ್ನು ಲಘುವಾಗಿ ಹಚ್ಚಿ.ಇದಕ್ಕಾಗಿ ನೀವು ಸಾಸಿವೆ ಎಣ್ಣೆ ಅಥವಾ ತುಪ್ಪವನ್ನು ಬಳಸಬಹುದು. ಇದಾದ ನಂತರ, ನಿಂಬೆಹಣ್ಣುಗಳನ್ನು ಟಿಶ್ಯೂ ಪೇಪರ್‌ನಲ್ಲಿ ಪ್ರತ್ಯೇಕವಾಗಿ ಸುತ್ತಿ ಒಂದು ಪಾತ್ರೆಯಲ್ಲಿ ಇಟ್ಟು ತಂಪಾದ ಸ್ಥಳದಲ್ಲಿ ಇರಿಸಿ. ಈ ರೀತಿ ಮಾಡಿದರೆ ಹಣ್ಣು ದೀರ್ಘಕಾಲ ತಾಜಾ ಮತ್ತು ರಸಭರಿತವಾಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ