AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾತ್ರೆ ತೊಳೆಯುವಾಗ ಅರಿವಿಲ್ಲದೆ ಮಾಡುವ ಈ ತಪ್ಪುಗಳು ಅಪಾಯವನ್ನು ಉಂಟುಮಾಡಬಹುದು

ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಆರೋಗ್ಯದ ದೃಷ್ಟಿಯಿಂದ ಅಡುಗೆ ಪಾತ್ರೆಗಳನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದಕ್ಕಾಗಿ ಪ್ರಯಿಯೊಬ್ಬರೂ ಕೂಡ ಪ್ರತಿನಿತ್ಯ ಸ್ವಚ್ಛವಾಗಿ ಪಾತ್ರೆಗಳನ್ನು ತೊಳೆಯುತ್ತಾರೆ. ಆದ್ರೆ ಪಾತ್ರೆ ತೊಳೆಯುವ ಸಂದರ್ಭದಲ್ಲಿ ಅರಿವಿಲ್ಲದೆ ಮಾಡುವಂತಹ ಈ ಕೆಲವು ತಪ್ಪುಗಳು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಆ ತಪ್ಪುಗಳು ಯಾವುವು ಎಂಬುದನ್ನು ನೋಡೋಣ.

ಪಾತ್ರೆ ತೊಳೆಯುವಾಗ ಅರಿವಿಲ್ಲದೆ ಮಾಡುವ ಈ ತಪ್ಪುಗಳು ಅಪಾಯವನ್ನು ಉಂಟುಮಾಡಬಹುದು
ಸಾಂದರ್ಭಿಕ ಚಿತ್ರ Image Credit source: Freepik
ಮಾಲಾಶ್ರೀ ಅಂಚನ್​
|

Updated on: Dec 10, 2025 | 5:44 PM

Share

ಮನೆಯ ಸದಸ್ಯರ ಒಟ್ಟಾರೆ ಆರೋಗ್ಯವು ಅಡುಗೆ ಮನೆಯ ಮೇಲೆ ಅವಲಂಬಿತವಾಗಿದೆ ಎಂದರೆ ತಪ್ಪಾಗಲಾರದು. ಹೌದು ಅಡುಗೆಗೆ ಬಳಸುವ ಉತ್ಪನ್ನಗಳು, ಪಾತ್ರೆಗಳು, ಆಹಾರ, ಅಡುಗೆ ಮನೆಯ ಸ್ವಚ್ಛತೆ ಇವೆಲ್ಲವೂ ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದಕ್ಕಾಗಿಯೇ ಅಡುಗೆ ಮನೆಯನ್ನು ತುಂಬಾ ಸ್ವಚ್ಛವಾಗಿಡಬೇಕು, ಅಡುಗೆ ಪಾತ್ರೆಗಳನ್ನು (washing dishes) ಸ್ವಚ್ಛವಾಗಿ ತೊಳೆಯಬೇಕು. ಸಾಮಾನ್ಯವಾಗಿ ಪಾತ್ರೆಗಳನ್ನು ಎಲ್ಲರೂ ತುಂಬಾ ಸ್ವಚ್ಛವಾಗಿಯೇ ತೊಳೆಯುತ್ತಾರೆ. ಆದ್ರೆ ಪಾತ್ರೆ ತೊಳೆಯುವಾಗ ನಾವು ಅರಿವಿಲ್ಲದೆ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಇದು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಹಾಗಿದ್ರೆ ಆ ತಪ್ಪುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಪಾತ್ರೆ ತೊಳೆಯುವಾಗ ಈ ತಪ್ಪುಗಳನ್ನು ಮಾಡಲೇಬೇಡಿ:

ಹೆಚ್ಚು ಡಿಟರ್ಜೆಂಟ್ ಬಳಸುವುದು: ಇದು ಅನೇಕ ಜನರು ಮಾಡುವ ಮೊದಲ ತಪ್ಪು. ಹೆಚ್ಚು ಡಿಟರ್ಜೆಂಟ್ ಬಳಸುವುದರಿಂದ ಪಾತ್ರೆಗಳು ಚೆನ್ನಾಗಿ ಸ್ವಚ್ಛವಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ಸರಿಯಾದ ವಿಧಾನವಲ್ಲ. ಹೆಚ್ಚು ಡಿಟರ್ಜೆಂಟ್ ಅಥವಾ ಲಿಕ್ವಿಡ್‌ ಬಳಸುವುದರಿಂದ ಪಾತ್ರೆಗಳ ಮೇಲೆ ರಾಸಾಯನಿಕ ಪದರವು ನಿರ್ಮಾಣವಾಗಬಹುದು. ಇದು ಆಹಾರಕ್ಕೆ ಅಂಟಿದರೆ, ಅದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆದ್ದರಿಂದ, ಯಾವಾಗಲೂ ಅಗತ್ಯವಿರುವ ಪ್ರಮಾಣದ ಡಿಟರ್ಜೆಂಟ್ ಅನ್ನು ಮಾತ್ರ ಬಳಸಿ.

ಬಿಸಿನೀರಿನ ಬಳಕೆ: ಅನೇಕ ಜನರು ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬಿಸಿನೀರನ್ನು ಬಳಸುತ್ತಾರೆ. ಸಾಮಾನ್ಯವಾಗಿ, ಬಿಸಿನೀರು ಪಾತ್ರೆಗಳನ್ನು ಬೇಗನೆ ಸ್ವಚ್ಛಗೊಳಿಸುತ್ತದೆ. ಆದರೆ ಪ್ಲಾಸ್ಟಿಕ್ ಅಥವಾ ನಾನ್-ಸ್ಟಿಕ್ ಪಾತ್ರೆಗಳನ್ನು ಬಿಸಿ ನೀರಿನಿಂದ ತೊಳೆಯಬಾರದು. ಏಕೆಂದರೆ ಇದು ಪ್ಲಾಸ್ಟಿಕ್‌ನಿಂದ ಹಾನಿಕಾರಕ ಅಂಶಗಳನ್ನು ಹೊರಹಾಕುತ್ತದೆ. ಇದು ನಾನ್-ಸ್ಟಿಕ್ ಪಾತ್ರೆಗಳ ಲೇಪನವನ್ನು ಸಹ ಹಾನಿಗೊಳಿಸುತ್ತದೆ. ಇವು ಆರೋಗ್ಯಕ್ಕೆ ಹಾನಿಕಾರಕ.

ಸ್ಪಾಂಜ್‌ಗಳು ಮತ್ತು ಸ್ಕ್ರಬ್ಬರ್‌ಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು: ಸ್ಪಾಂಜ್‌ ಮತ್ತು ಸ್ಕ್ರಬ್ಬರ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಅವುಗಳನ್ನು ಸ್ವಚ್ಛಗೊಳಿಸದಿದ್ದರೆ, ಅವುಗಳ ಮೇಲೆ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಇದರಿಂದ ಪಾತ್ರೆ ತೊಳೆದರೆ, ಪಾತ್ರೆ ಇನ್ನಷ್ಟು ಕಲುಷಿತಗೊಳ್ಳುತ್ತದೆ.  ಆದ್ದರಿಂದ ಪ್ರತಿ ವಾರ ಸ್ಪಾಂಜ್  ಬದಲಾಯಿಸಿ. ಸ್ಕ್ರಬ್ಬರನ್ನು ಬಿಸಿ ನೀರಿನಲ್ಲಿ ನೆನೆಸಿ ಸ್ವಚ್ಛಗೊಳಿಸಿ.

ಇದನ್ನೂ ಓದಿ: ಆರೋಗ್ಯ ಚೆನ್ನಾಗಿರಬೇಕಂದ್ರೆ, ರಾತ್ರಿ ನಿಗದಿತ ಸಮಯದೊಳಗೆ ಊಟ ಮಾಡುವುದು ಸೂಕ್ತವಂತೆ

ನಾನ್-ಸ್ಟಿಕ್ ಪಾತ್ರೆ ಸ್ವಚ್ಛಗೊಳಿಸಲು ಸ್ಟೀಲ್ ಸ್ಕ್ರಬ್ಬರ್ ಬಳಸುವುದು: ಅನೇಕ ಜನರು ನಾನ್-ಸ್ಟಿಕ್ ಪಾತ್ರೆಗಳನ್ನು ತೊಳೆಯಲು ಸ್ಟೀಲ್ ಸ್ಕ್ರಬ್ಬರ್ ಬಳಸುತ್ತಾರೆ. ಇದು ಲೇಪನವನ್ನು ತೆಗೆದುಹಾಕುತ್ತದೆ. ಇದು ಹಾನಿಕಾರಕ ರಾಸಾಯನಿಕಗಳನ್ನು ಸಹ ಬಿಡುಗಡೆ ಮಾಡುತ್ತದೆ. ಆದ್ದರಿಂದ ನಾನ್-ಸ್ಟಿಕ್ ಪಾತ್ರೆಗಳನ್ನು ಮೃದುವಾದ ಸ್ಪಾಂಜ್‌ನಿಂದ ಸ್ವಚ್ಛಗೊಳಿಸಿ.

ಪಾತ್ರೆಗಳನ್ನು ಹೆಚ್ಚು ಹೊತ್ತು ಸಿಂಕ್‌ನಲ್ಲಿ ಇಡುವುದು: ಕೊಳಕು ಪಾತ್ರೆಗಳನ್ನು ಸಿಂಕ್ ನಲ್ಲಿ ಹೆಚ್ಚು ಹೊತ್ತು ಇಡಬೇಡಿ. ಹೆಚ್ಚು ಹೊತ್ತು ಅಲ್ಲಿಯೇ ಇಡುವುದರಿಂದ ಬ್ಯಾಕ್ಟೀರಿಯಾ ಅಂಟಿಕೊಳ್ಳಬಹುದು ಮತ್ತು ವಾಸನೆ ಬರಬಹುದು. ಊಟ ಮಾಡಿದ ತಕ್ಷಣ ಪಾತ್ರೆಗಳನ್ನು ತೊಳೆಯಿರಿ. ಇದು ಅಡುಗೆಮನೆಯನ್ನು ಸ್ವಚ್ಛವಾಗಿಡುವುದಲ್ಲದೆ ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ