International Mountain Day 2025: ಅಂತಾರಾಷ್ಟ್ರೀಯ ಪರ್ವತ ದಿನಾಚರಣೆಯ ಉದ್ದೇಶವೇನು ಗೊತ್ತಾ?
ಪರ್ವತಗಳು ಭೂಮಿಯ ಮೇಲಿನ ನೈಸರ್ಗಿಕ ರತ್ನಗಳಾಗಿದ್ದು, ಅವು ವಿಶ್ವದ ಜನಸಂಖ್ಯೆಯ 15% ಜನರಿಗೆ ನೆಲೆಯಾಗಿವೆ. ಶುದ್ಧ ನೀರು, ಆಹಾರ ಮತ್ತು ಔಷಧ ಸೇರಿದಂತೆ ಅನೇಕ ಪ್ರಮುಖ ಮಾನವರಿಗೆ ಒದಗಿಸಿಕೊಡುತ್ತಿವೆ. ಹಾಗಾಗಿ ಪರ್ವತಗಳ ಮಹತ್ವವನ್ನು ಸಾರಲು ಪ್ರತಿವರ್ಷ ಡಿಸೆಂಬರ್ 11 ರಂದು ಅಂತಾರಾಷ್ಟ್ರೀಯ ಪರ್ವತ ದಿನವನ್ನು ಆಚರಿಸಲಾಗುತ್ತದೆ.

ಪರ್ವತಗಳು (Mountain) ಪ್ರಕೃತಿಯ ಅದ್ಭುತ ಎಂದರೆ ತಪ್ಪಾಗಲಾರದು. ಅಲ್ಲದೆ ಇದು ಮನುಷ್ಯರ ದೈನಂದಿನ ಜೀವನಕ್ಕೆ ಬೇಕಾದ ಅರ್ಧದಷ್ಟು ನೀರನ್ನು ಒದಗಿಸುತ್ತಿದೆ, ಆಹಾರವನ್ನು ಒದಗಿಸುತ್ತಿವೆ. ಅದೆಷ್ಟೋ ಪ್ರಾಣಿ, ಪಕ್ಷಿಗಳಿಗೆ ಆಶ್ರಯವನ್ನೂ ಒದಗಿಸುತ್ತಿದೆ. ಒಟ್ಟಾರೆಯಾಗಿ ಜೀವಸಂಕುಲದ ಉಳಿವಿಗಾಗಿ ಪರ್ವತಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತಿವೆ. ಆದರೆ ಇಂದು ಹವಾಮಾನ ಬದಲಾವಣೆ, ಮನುಷ್ಯನದ ದುರಾಸೆಗಳ ಕಾರಣದಿಂದ ಪರ್ವತಗಳು ಅಪಾಯಕ್ಕೆ ಸಿಲುಕಿವೆ. ಈ ನಿಟ್ಟಿನಲ್ಲಿ ಪರ್ವತಗಳ ರಕ್ಷಣೆಗಾಗಿ, ನಮ್ಮ ಜೀವನದಲ್ಲಿ ಪರ್ವತಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಡಿಸೆಂಬರ್ 11 ರಂದು ಅಂತಾರಾಷ್ಟ್ರೀಯ ಪರ್ವತ ದಿನವನ್ನು ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಪರ್ವತ ದಿನದ ಇತಿಹಾಸವೇನು?
1992 ರ ಪರಿಸರ ಮತ್ತು ಅಭಿವೃದ್ಧಿ ಕುರಿತ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಪರ್ವತ ಪರಿಸರ ವ್ಯವಸ್ಥೆಗಳ ಸಂರಕ್ಷಣೆಗೆ ವಿಶೇಷ ಗಮನ ನೀಡಲಾಯಿತು. ತರುವಾಯ, ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯು ಡಿಸೆಂಬರ್ 11, 2001 ರಂದು ಅಂತಾರಾಷ್ಟ್ರೀಯ ಪರ್ವತಗಳ ವರ್ಷವನ್ನು ಪ್ರಾರಂಭಿಸಿತು. ನಂತರ, 2002 ರಲ್ಲಿ, ಪರ್ವತಗಳ ಸುಸ್ಥಿರ ಅಭಿವೃದ್ಧಿಗಾಗಿ ಅಂತಾರಾಷ್ಟ್ರೀಯ ಪರ್ವತ ದಿನವನ್ನು ಆಚರಿಸುವುದಾಗಿ ಘೋಷಿಸಲಾಯಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್ 11 ರಂದು ಅಂತಾರಾಷ್ಟ್ರೀಯ ಪರ್ವತ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ
ಅಂತಾರಾಷ್ಟ್ರೀಯ ಪರ್ವತ ದಿನದ ಮಹತ್ವವೇನು?
- ಪರ್ವತಗಳು ಪ್ರಕೃತಿಯ ಅಮೂಲ್ಯ ಕೊಡುಗೆ ಮತ್ತು ನಮ್ಮ ಪರಿಸರ, ನಮ್ಮ ಜೀವನ ಮತ್ತು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಪರ್ವತಗಳನ್ನು ರಕ್ಷಿಸುವುದು ಮತ್ತು ಅವುಗಳ ಮಹತ್ವದ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ.
- ಹವಾಮಾನ ನಿಯಂತ್ರಣ, ಜಲ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಜೀವವೈವಿಧ್ಯಕ್ಕೆ ಪರ್ವತಗಳು ಅತ್ಯಗತ್ಯ. ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಪರ್ವತ ಪ್ರದೇಶಗಳು ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋದ್ಯಮದ ಪ್ರಮುಖ ತಾಣಗಳಾಗಿವೆ. ಆದ್ದರಿಂದ ಈ ದಿನದಂದು ಇವುಗಳ ಪ್ರಾಮುಖ್ಯತೆಗಳ ಬಗ್ಗೆ ತಿಳಿಸಲಾಗುತ್ತದೆ.
- ಪರ್ವತ ರಕ್ಷಣೆಗಾಗಿ ಈ ವಿಶೇಷ ದಿನದಂದು ಜಾಗೃತಿ ಕಾರ್ಯಕ್ರಮಗಳು, ಸೆಮಿನಾರ್ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




