ಯುವಜನರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಹೊಸ Gen-Z ಅಂಚೆ ಕಚೇರಿ ಸ್ಥಾಪಿಸಿದ ಇಂಡಿಯಾ ಪೋಸ್ಟ್
ಕೇಂದ್ರ ಸರ್ಕಾರವು ಯುವಕರನ್ನು ಆಕರ್ಷಿಸಲು ಮತ್ತು ಅಂಚೆ ಸೇವೆಗಳನ್ನು ಆಧುನೀಕರಿಸಲು Gen-Z ಅಂಚೆ ಕಚೇರಿಗಳನ್ನು ಪರಿಚಯಿಸಿದೆ. ಕೇರಳ ಮತ್ತು ಆಂಧ್ರದಲ್ಲಿ ಸ್ಥಾಪಿಸಲಾದ ಈ ಕಚೇರಿಗಳು ಸೃಜನಾತ್ಮಕ ವಿನ್ಯಾಸ, ತಂತ್ರಜ್ಞಾನ ಮತ್ತು QR-ಆಧಾರಿತ ಸೇವೆಗಳನ್ನು ಒಳಗೊಂಡಿವೆ. ಇದು ವಿದ್ಯಾರ್ಥಿಗಳಿಗೆ ಸಂಶೋಧನೆ ಮತ್ತು ಅಂಚೆ ಸೇವೆಗಳನ್ನು ಸುಲಭವಾಗಿ ಬಳಸಲು ಸಹಕಾರಿ. ಯುವಜನರೊಂದಿಗೆ ಇಂಡಿಯಾ ಪೋಸ್ಟ್ ಸಂಪರ್ಕ ಸಾಧಿಸಲು ಇದು ಮಹತ್ವದ ಹೆಜ್ಜೆಯಾಗಿದೆ.

ಕೇಂದ್ರ ಸರ್ಕಾರ ಅಂಚೆ ಕಚೇರಿಗಳನ್ನು (India Post) ಉಳಿಸಲು ಹಾಗೂ ಮತ್ತೆ ಹೆಚ್ಚು ಹೆಚ್ಚು ಕಾರ್ಯನಿರ್ವಹಿಸಲು ಹೊಸ ಪ್ಲಾನ್ ಮಾಡಿದೆ. Gen Z (ಜೆನ್-ಜಿ) 1997 ರಿಂದ 2012 ರ ನಡುವೆ ಜನಿಸಿದ ತಲೆಮಾರಿಗಾಗಿ ಹೊಸ ಯೋಜನೆಯೊಂದನ್ನು ಅಂಚೆ ಕಚೇರಿ ಮೂಲಕ ಪರಿಚಯಿಸಿದೆ. ಡಿಸೆಂಬರ್ 9 ರಂದು ಇಂಡಿಯಾ ಪೋಸ್ಟ್ ಎರಡು ಆಧುನಿಕ ಮತ್ತು ವಿದ್ಯಾರ್ಥಿ ಕೇಂದ್ರಿತ Gen-Z ಅಂಚೆ ಕಚೇರಿಗಳನ್ನು ಸ್ಥಾಪಿಸಿದೆ. ಒಂದನ್ನು ಕೇರಳದ ಕೊಟ್ಟಾಯಂನ CMS ಕಾಲೇಜು, ಮತ್ತೊಂದು ವಿಶಾಖಪಟ್ಟಣಂನ ಆಂಧ್ರ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಯಿತು. ಈ ಹೊಸ ಅಂಚೆ ಕಚೇರಿಗಳ ವಿನ್ಯಾಸಗಳು ಸೃಜನಶೀಲತೆ ಮತ್ತು ತಂತ್ರಜ್ಞಾನದಿಂದ ಕೂಡಿದೆ. Gen-Z ಆಧಾರಿತ ಅಂಚೆ ಕಚೇರಿಗಳು ಇಂದಿನ ಮಕ್ಕಳಿಗೆ ತುಂಬಾ ಅಗತ್ಯವಾಗಿದೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚು ಸಂಶೋಧನೆ ಮಾಡಲು ಸಹಾಯ ಮಾಡುತ್ತದೆ.
ಕೇರಳದ ಕೊಟ್ಟಾಯಂನಲ್ಲಿರುವ ಸಿಎಮ್ಎಸ್ ಕಾಲೇಜಿನಲ್ಲಿ ಎರಡು ಆಧುನಿಕ ಶೈಲಿಯ ಜೆನ್-ಝಡ್-ವಿಷಯದ ಅಂಚೆ ಕಚೇರಿಗಳನ್ನು ತೆರೆಯಲಾಗಿದೆ. ಇನ್ನೊಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಆಂಧ್ರ ವಿಶ್ವವಿದ್ಯಾಲಯದಲ್ಲಿ. ಮೊದಲ Gen-Z ಅಂಚೆ ಕಚೇರಿಯನ್ನು ಐಐಟಿ ದೆಹಲಿಯಲ್ಲಿ ತೆರೆಯಲಾಗಿದೆ. ಇದು ಅಂಚೆ ಸೇವೆಗಳಿಗೆ ಆಧುನಿಕ ಸ್ಪರ್ಶವನ್ನು ತರುವ ಪ್ರಯತ್ನದ ಭಾಗವಾಗಿದೆ. ಕೇರಳ ಹಾಗೂ ಆಂಧ್ರದಲ್ಲಿರುವ ಎರಡು Gen-Z ಅಂಚೆ ವಿಶಿಷ್ಟವಾದ ಆಧುನಿಕ ಒಳಾಂಗಣಗಳನ್ನು ಹೊಂದಿವೆ. ಉತ್ತಮ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಜತೆಗೆ ಯುವಕರಿಗೆ ವಿಶ್ರಾಂತಿ ವಾತಾವರಣವನ್ನು ನೀಡುತ್ತವೆ. ಇನ್ನು ಕೇರಳದಲ್ಲಿ ಅಂಚೆ ಕಚೇರಿ ಸ್ಥಳವನ್ನು ವಿದ್ಯಾರ್ಥಿಗಳು ಸ್ವತಃ ಇಂಡಿಯಾ ಪೋಸ್ಟ್ ಸಹಯೋಗದೊಂದಿಗೆ ವಿನ್ಯಾಸಗೊಳಿಸಿದ್ದಾರೆ.
ಇದನ್ನೂ ಓದಿ: ಇಂಥಾ ಸುಗಂಧ ದ್ರವ್ಯ ನೋಡಿರಲು ಸಾಧ್ಯವೆ ಇಲ್ಲ, ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರ
ಎಕ್ಸ್ ಪೋಸ್ಟ್ ಇಲ್ಲಿದೆ ನೋಡಿ:
When Gen Z design their own @IndiaPostOffice in the ‘City of Letters’, this is how it turns out…refreshing, creative & rooted in tradition.
The Gen Z extension counter in Kerala’s CMS College, Kottayam brings together creativity, sustainability & modern service delivery in a… pic.twitter.com/WYMwuMyFZz
— Jyotiraditya M. Scindia (@JM_Scindia) December 8, 2025
ಇದು QR-ಆಧಾರಿತವಾಗಿದ್ದು, ‘ಮೈ ಸ್ಟಾಂಪ್’ ಮುದ್ರಕವನ್ನು ಹೊಂದಿದೆ. ಅಂಚೆ ಕಚೇರಿಗಳನ್ನು ಹೆಚ್ಚು ಬಳಸಲು ಹಾಗೂ ಇಂಡಿಯಾ ಪೋಸ್ಟ್ ಭಾರತದ ಯುವಜನರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಈ ಪ್ರಯತ್ನವನ್ನು ಮಾಡಿದೆ. ಯುವಕ -ಯುವತಿಯರನ್ನು ಹೆಚ್ಚು ಹೆಚ್ಚು ಆಕರ್ಷಣೆ ಮಾಡಲು ಸರ್ಕಾರ ಈ ಹೊಸ ಪ್ಲಾನ್ ಮಾಡಿದೆ. ಹೊಸ ಕಚೇರಿಗಳು ಅಂಚೆ ಸೇವೆಗಳನ್ನು ವಿದ್ಯಾರ್ಥಿಗಳಿಗೆ ಹೆಚ್ಚು ಸುಲಭವಾಗಿ ಮತ್ತು ಆರಾಮದಾಯಕವಾಗಿಸಿವೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




