AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಥಾ ಸುಗಂಧ ದ್ರವ್ಯ ನೋಡಿರಲು ಸಾಧ್ಯವೆ ಇಲ್ಲ, ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರ

"ಶುಮುಖ್" ವಿಶ್ವದ ಅತಿ ದುಬಾರಿ ಸುಗಂಧ ದ್ರವ್ಯವಾಗಿದ್ದು, ಇದರ ಬೆಲೆ 1.3 ಮಿಲಿಯನ್ ಯುಎಸ್ ಡಾಲರ್‌ಗಳು. ದುಬೈನಲ್ಲಿ ಪ್ರದರ್ಶಿಸಲಾದ ಈ ಐಷಾರಾಮಿ ಪರ್ಫ್ಯೂಮ್ ಅನ್ನು ಅಸ್ಗರ್ ಆಡಮ್ ಅಲಿ ಮೂರು ವರ್ಷಗಳ ಪರಿಶ್ರಮದಿಂದ ತಯಾರಿಸಿದ್ದಾರೆ. 3,571 ವಜ್ರಗಳು, ಚಿನ್ನ, ಬೆಳ್ಳಿ ಹಾಗೂ ಮುತ್ತುಗಳಿಂದ ಅಲಂಕೃತಗೊಂಡಿರುವ ಇದರ ಬಾಟಲಿಯು ಎರಡು ಗಿನ್ನಿಸ್ ವಿಶ್ವ ದಾಖಲೆಗಳನ್ನು ಗೆದ್ದಿದೆ, ಇದು ದುಬೈನ ವೈಭವಕ್ಕೆ ಸಾಕ್ಷಿಯಾಗಿದೆ.

ಇಂಥಾ ಸುಗಂಧ ದ್ರವ್ಯ ನೋಡಿರಲು ಸಾಧ್ಯವೆ ಇಲ್ಲ, ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರ
ಶುಮುಖ್ ಸುಗಂಧ ದ್ರವ್ಯ
ಅಕ್ಷಯ್​ ಪಲ್ಲಮಜಲು​​
|

Updated on: Dec 12, 2025 | 3:37 PM

Share

ನೀವು ಇಂಥಹ ಸುಗಂಧ ದ್ರವ್ಯವನ್ನು​​​ ಎಲ್ಲಿಯೂ ನೋಡಿರಲು ಸಾಧ್ಯವಿಲ್ಲ. ಇದೊಂದು ದುಬಾರಿ ಸುಗಂಧ ದ್ರವ್ಯ, ಮೊದಲ ಬಾರಿ ದುಬೈನಲ್ಲಿ ಇದನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಇದರ ಹೆಸರು ಶುಮುಖ್, (Shumukh perfume) ಈ ಸುಗಂಧ ದ್ರವ್ಯದ ಬೆಲೆ 1.3 ಮಿಲಿಯನ್ ಯುಎಸ್ ಡಾಲರ್‌, ಅಂದರೆ ಸುಮಾರು 10.8 ಕೋಟಿ ರೂ., ನಬೀಲ್ ಪರ್ಫ್ಯೂಮ್ಸ್‌ನ ಸಂಸ್ಥಾಪಕರಾದ ಮಾಸ್ಟರ್ ಸುಗಂಧ ದ್ರವ್ಯ ತಯಾರಕ ಅಸ್ಗರ್ ಆಡಮ್ ಅಲಿ ಇದನ್ನು ತಯಾರಿಸಿದ್ದು, ಇದಕ್ಕಾಗಿ ಮೂರು ವರ್ಷ ಕಾಲ ಕೆಲಸ ಮಾಡಿದ್ದಾರೆ. ಸುಮಾರು 500 ಸೂತ್ರೀಕರಣ ಪ್ರಯತ್ನಗಳ ಫಲಿತಾಂಶ ಇದ್ದಾಗಿದೆ.

ಇದು ಇತರ ಸುಗಂಧ ದ್ರವ್ಯದ ರೀತಿಯಲ್ಲ, ಇದಕ್ಕೊಂದು ವಿಶೇಷತೆ ಇದೆ. 3-ಲೀಟರ್ ಮುರಾನೊ ಗಾಜಿನ ಫ್ಲಾಕನ್‌ನಲ್ಲಿ ಇರಿಸಲಾಗಿದೆ, ಇದನ್ನು 1.97 ಮೀಟರ್ ಎತ್ತರದ ಒಂದು ರಚನೆಯೊಳಗೆ ಪ್ರದರ್ಶಿಸಲಾಗಿದೆ. ಬೆರಗುಗೊಳಿಸುವ ಕಲಾತ್ಮಕತೆ, ಹಾಗೂ ಇದನ್ನು ಐಷಾರಾಮಿತನದಿಂದ ಅಲಂಕರಿಸಲ್ಪಟ್ಟಿದೆ. ಇದರ ವಿನ್ಯಾಸಕ್ಕಾಗಿ 3,571 ವಜ್ರಗಳು, 2.5 ಕೆಜಿ 18-ಕ್ಯಾರೆಟ್ ಚಿನ್ನ, 5.9 ಕೆಜಿ ಶುದ್ಧ ಬೆಳ್ಳಿ, ಜೊತೆಗೆ ಮುತ್ತುಗಳು ಮತ್ತು ಸ್ವಿಸ್ ನೀಲಮಣಿ ಬಳಸಲಾಗಿದೆ. ಇದೊಂದು ದುಬೈನ ಐಷಾರಾಮಿ ಜೀವನಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಬೆಂಗಳೂರು ವಿಶ್ವದ ಅತ್ಯುತ್ತಮ ನಗರ, ಆದರೆ ಒಂದು ನ್ಯೂನತೆ ಇದೆ ಎಂದ ಜಪಾನ್ ಉದ್ಯಮಿ

ಇಲ್ಲಿದೆ ನೋಡಿ ವಿಡಿಯೋ

‘ಶುಮುಖ್’ ಹೆಸರಿನ ಅರ್ಥವೇನು?

ಶುಮುಖ್ ಎಂಬ ಹೆಸರಿನ ಅಕ್ಷರಶಃ ಅರ್ಥ “ಅತ್ಯುನ್ನತವಾದದ್ದಕ್ಕೆ ಅರ್ಹ”, ಮತ್ತು ಅದರ ಅದ್ದೂರಿ ವಿನ್ಯಾಸವನ್ನು ನೋಡಿದಾಗ ಆ ವಿವರಣೆಯು ಸಂಪೂರ್ಣವಾಗಿ ಅರ್ಥವಾಗುತ್ತದೆ. ಬಾಟಲಿಯನ್ನು ದುಬೈನ ಪರಂಪರೆಯಂತೆ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಫಾಲ್ಕನ್‌ಗಳು ಮತ್ತು ಅರೇಬಿಯನ್ ಕುದುರೆಗಳು ಗುಲಾಬಿಗಳು, ಮುತ್ತುಗಳು ಮತ್ತು ನಗರದ ಅತ್ಯಾಧುನಿಕ ಸ್ಕೈಲೈನ್‌ ಮಾಡಲಾಗಿದೆ. ಶ್ರೀಗಂಧದ , ಕಸ್ತೂರಿ, ಧೂಪದ್ರವ್ಯ, ಅಗರ್ವುಡ್ ಮತ್ತು ಅಂಬರ್, ಟರ್ಕಿಶ್ ಗುಲಾಬಿ ಮತ್ತು ಯಲ್ಯಾಂಗ್-ಯಲ್ಯಾಂಗ್ ನಂತಹ ಮೃದುವಾದ ಹೂವಿನ ಪದರಗಳನ್ನು ಬಳಸಲಾಗಿದೆ. ಇದು ರಿಮೋಟ್ ಕಂಟ್ರೋಲ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ಗೆದ್ದ ವಿಶ್ವದ ಮೊದಲ ಸುಗಂಧ ದ್ರವ್ಯವಾಗಿದೆ. ಒಂದು ಸುಗಂಧ ದ್ರವ್ಯ ಬಾಟಲಿಯನ್ನು ಅತಿ ಹೆಚ್ಚು ವಜ್ರದಿಂದ ವಿನ್ಯಾಸ ಮಾಡಿರುವುದು ಮೊದಲ ಸುಗಂಧ ದ್ರವ್ಯ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು