ಜನವರಿ 2026
Image Credit source: Getty Images
2026 ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ಜನರು ಉತ್ಸುಕತೆಯಿಂದ ಕಾಯುತ್ತಿದ್ದಾರೆ. ವರ್ಷದ ಮೊದಲ ತಿಂಗಳಾದ ಜನವರಿ (January) ಹೊಸ ವರ್ಷದ, ಹೊಸತನ, ಭರವಸೆಯ ಆರಂಭವನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೆ ಈ ತಿಂಗಳಿನಲ್ಲಿ ಸಾಮಾಜಿಕ ಅರಿವು, ಶಿಕ್ಷಣ ಮತ್ತುಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಒಂದಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಗಳನ್ನು ಆಚರಿಸಲಾಗುತ್ತದೆ. ವರ್ಷದ ಮೊದಲ ತಿಂಗಳಿನಲ್ಲಿ ಆಚರಿಸಲಾಗುವ ವಿಶೇಷ ದಿನಗಳು ಯಾವುವು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಜನವರಿ ತಿಂಗಳ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ:
- ಜನವರಿ 1, 2026 – ಹೊಸ ವರ್ಷ
- ಜನವರಿ 1, 2026 – ಜಾಗತಿಕ ಕುಟುಂಬ ದಿನ
- ಜನವರಿ 2, 2026 – ವಿಶ್ವ ಅಂತರ್ಮುಖಿ ದಿನ
- ಜನವರಿ 4, 2026 – ವಿಶ್ವ ಬ್ರೈಲ್ ದಿನ
- ಜನವರಿ 5, 2026 – ರಾಷ್ಟ್ರೀಯ ಪಕ್ಷಿ ದಿನ
- ಜನವರಿ 6, 2026 – ವಿಶ್ವ ಯುದ್ಧ ಅನಾಥರ ದಿನ
- ಜನವರಿ 6, 2026 – ಗುರು ಗೋಬಿಂದ್ ಸಿಂಗ್ ಜಯಂತಿ
- ಜನವರಿ 8, 2026 – ಭೂಮಿಯ ತಿರುಗುವಿಕೆ ದಿನ
- ಜನವರಿ 10, 2026 – ವಿಶ್ವ ಹಿಂದಿ ದಿನ
- ಜನವರಿ 10, 2026 – ವಿಶ್ವ ತರ್ಕ ದಿನ
- ಜನವರಿ 11, 2026 – ರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಗೃತಿ ದಿನ
- ಜನವರಿ 12, 2026 – ರಾಷ್ಟ್ರೀಯ ಯುವ ದಿನ
- ಜನವರಿ 15, 2026 – ಭಾರತೀಯ ಸೇನಾ ದಿನ
- ಜನವರಿ 16, 2026 – ರಾಷ್ಟ್ರೀಯ ನವೋದ್ಯಮ ದಿನ
- ಜನವರಿ 17, 2026 – ವಿಶ್ವ ಧರ್ಮ ದಿನ
- ಜನವರಿ 20, 2026 – ಪೆಂಗ್ವಿನ್ ಜಾಗೃತಿ ದಿನ
- ಜನವರಿ 23, 2026 – ಪರಾಕ್ರಮ ದಿವಸ
- ಜನವರಿ 23, 2026 – ಕೈಬರಹ ದಿನ
- ಜನವರಿ 24, 2026 – ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
- ಜನವರಿ 24, 2026 – ಅಂತರರಾಷ್ಟ್ರೀಯ ಶಿಕ್ಷಣ ದಿನ
- ಜನವರಿ 25, 2026 – ರಾಷ್ಟ್ರೀಯ ಮತದಾರರ ದಿನ
- ಜನವರಿ 25, 2026 – ರಾಷ್ಟ್ರೀಯ ಪ್ರವಾಸೋದ್ಯಮ ದಿನ
- ಜನವರಿ 26, 2026 – ಗಣರಾಜ್ಯೋತ್ಸವ
- ಜನವರಿ 26, 2026 – ಅಂತರರಾಷ್ಟ್ರೀಯ ಕಸ್ಟಮ್ಸ್ ದಿನ
- ಜನವರಿ 27, 2026 – ರಾಷ್ಟ್ರೀಯ ಭೌಗೋಳಿಕ ದಿನ
- ಜನವರಿ 29, 2026 – ಭಾರತೀಯ ಪತ್ರಿಕಾ ದಿನ
- ಜನವರಿ 30, 2026 – ವಿಶ್ವ ಕುಷ್ಠರೋಗ ದಿನ
- ಜನವರಿ 30, 2026 – ಅಂತಾರಾಷ್ಟ್ರೀಯ ಜೀಬ್ರಾ ದಿನ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ