AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year 2026: ಮೋಜು-ಮಸ್ತಿ ಮಾತ್ರವಲ್ಲ, ಈ ರೀತಿಯೂ ಅರ್ಥಪೂರ್ಣವಾಗಿ ಹೊಸ ವರ್ಷವನ್ನು ಆಚರಿಸಬಹುದು

ಹೊಸ ವರ್ಷಕ್ಕೆ ಇನ್ನೆರಡು ದಿನಗಳು ಬಾಕಿ ಉಳಿದಿವೆ. ಪ್ರತಿ ವರ್ಷ ಸಹ ತಡರಾತ್ರಿಯ ವರೆಗೆ ಪಾರ್ಟಿ, ಮೋಜಿ-ಮಸಿ ಮಾಡುತ್ತಾ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಆದ್ರೆ ಕೆಲವರಿಗೆ ಈ ಪಾರ್ಟಿ ಗೀರ್ಟಿ ಎಲ್ಲಾ ಇಷ್ಟ ಆಗೋಲ್ಲ. ನೀವು ಸಹ ಇದೇ ಗುಂಪಿನವರೇ? ಹಾಗಿದ್ರೆ ನೀವು ಈ ರೀತಿಯಾಗಿ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಿ. ಖಂಡಿತವಾಗಿಯೂ ಇದು ನಿಮ್ಮ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ.

New Year 2026: ಮೋಜು-ಮಸ್ತಿ ಮಾತ್ರವಲ್ಲ, ಈ ರೀತಿಯೂ ಅರ್ಥಪೂರ್ಣವಾಗಿ  ಹೊಸ ವರ್ಷವನ್ನು ಆಚರಿಸಬಹುದು
ಹೊಸ ವರ್ಷ 2026Image Credit source: Unsplash
ಮಾಲಾಶ್ರೀ ಅಂಚನ್​
|

Updated on:Dec 29, 2025 | 11:01 AM

Share

2025 ನೇ ವರ್ಷ ಮುಗಿಯುತ್ತಾ ಬಂತು ಇನ್ನೇನೂ ಹೊಸ ಭರವಸೆ, ಉತ್ಸಾಹದೊಂದಿಗೆ 2026 ಕ್ಕೆ ಕಾಲಿಡುತ್ತಿದ್ದೇವೆ. ಹೆಚ್ಚಿನವರು ಹೊಸ ವರ್ಷವನ್ನು (New Year) ಪಾರ್ಟಿ,  ತಮ್ಮ ನೆಚ್ಚಿನ ಸ್ಥಳಕ್ಕೆ ಟ್ರಿಪ್‌ ಹೋಗುವ ಮೂಲಕ ಅಲ್ಲಿ ಮೋಜಿ-ಮಸ್ತಿ ಮಾಡುತ್ತಾ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುತ್ತಾರೆ. ಆದ್ರೆ ಕೆಲವರಿಗೆ ಈ ಗದ್ದಲಗಳು ಇಷ್ಟವಾಗುವುದಿಲ್ಲ, ಮನಸ್ಸಿಗೆ ನೆಮ್ಮದಿ, ತೃಪ್ತಿ ಸಿಗುವಂತಹ ಕಾರ್ಯಗಳನ್ನು ಮಾಡಲು ಮಾಡಲು ಬಯಸುತ್ತಾರೆ. ನೀವು ಕೂಡ ಈ ಬಾರಿ ತಡರಾತ್ರಿಯ ಮೋಜು-ಮಸ್ತಿನಿಂದ ಕೊಂಚ ದೂರವಿದ್ದು, ಅರ್ಥಪೂರ್ಣವಾಗಿ ಹೊಸ ವರ್ಷವನ್ನು ಆಚರಿಸಲು ಬಯಸುತ್ತೀರಾ? ಹಾಗಿದ್ರೆ ನೀವು ಈ ರೀತಿ ಸರಳವಾಗಿ ನ್ಯೂ ಇಯರ್‌ ಆಚರಿಸಿ.

ಹೊಸ ವರ್ಷವನ್ನು ಈ ರೀತಿ ಅರ್ಥಪೂರ್ಣವಾಗಿ ಆಚರಿಸಿ:

ಪ್ರಕೃತಿಯೊಂದಿಗೆ ಸಮಯವನ್ನು ಕಳೆಯಿರಿ: ಗದ್ದಲಗಳಿಂದ ದೂರವಿದ್ದು, ಶಾಂತ ಮನಸ್ಸಿನಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಆಸೆಯಿದ್ದರೆ ನೀವು ಪ್ರಕೃತಿಯೊಂದಿಗೆ ಸಮಯವನ್ನು ಕಳೆಯಬಹುದು. ಹೊಸ ವರ್ಷದ ದಿನದಂದು ಮುಂಜಾನೆ ಬೇಗ ಎದ್ದು, ಒಂದೊಳ್ಳೆ ಸ್ಥಳಕ್ಕೆ ಸೂರ್ಯೋದಯವನ್ನು ವೀಕ್ಷಿಸಲು ಹೋಗಬಹುದು, ಉದ್ಯಾನವನ, ಸರೋವರ  ಸೇರಿದಂತೆ ಪ್ರಕೃತಿಯ ಮಡಿಲಲ್ಲಿ ಸಮಯವನ್ನು ಕಳೆಯಿಯಿ. ಇದು ನಿಮ್ಮ ಮನಸ್ಸಿನ ಒತ್ತಡವನ್ನೆಲ್ಲಾ ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ.

ಡಿಜಿಟಲ್ ಡಿಟಾಕ್ಸ್: ನಾವು ಫೋನನ್ನು ಬಿಟ್ಟು ಇರುವುದೇ ಇಲ್ಲ. ಹೀಗಿರುವಾಗ ಹೊಸ ವರ್ಷವನ್ನು ಡಿಜಿಟಲ್‌ ಡಿಟಾಕ್ಸ್‌ ದಿನವನ್ನಾಗಿ ಮಾಡಿ. ಫೋನ್‌, ಲ್ಯಾಪ್‌ಟಾಪ್‌ ಪರದೆಯಿಂದ ಸ್ವಲ್ಪ ದೂರವಿದ್ದು, ನಿಮ್ಮ ನೆಚ್ಚಿನ ಪುಸ್ತಕವನ್ನು ಓದಿ ಅಥವಾ ಮನಸ್ಸಿಗೆ ಶಾಂತಿ ನೀಡುವ ಸ್ಥಳಕ್ಕೆ ಭೇಟಿ ನೀಡಿ.  ಖಂಡಿತವಾಗಿಯೂ ಇದು ಪಾರ್ಟಿಗಳಿಗಿಂತ ಹೆಚ್ಚಿನ ತೃಪ್ತಿಯನ್ನು ಮನಸ್ಸಿಗೆ ನೀಡುತ್ತದೆ.

ಗುರಿಗಳನ್ನು ಹೊಂದಿಸಿ: ಹೊಸ ವರ್ಷದ ಮೊದಲ ದಿನವು ನಿಮ್ಮೊಂದಿಗೆ ನೀವು ಮಾತನಾಡಲು ಒಂದು ದಿನ. ಒಂದು ಡೈರಿಯನ್ನು ಖರೀದಿಸಿ ಮತ್ತು ಕಳೆದ ವರ್ಷ ಹೇಗೆ ಹೋಯಿತು,  ಮುಂಬರುವ ವರ್ಷದಲ್ಲಿ ನೀವು ಏನನ್ನು ಸಾಧಿಸಲು ಬಯಸುತ್ತೀರಿ, ಜೀವನದಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರಲು ಬಯಸುತ್ತೀರಿ ಎಂಬುದನ್ನು ಬರೆಯಿರಿ. ಹೀಗೆ ನಿಮ್ಮ ಆಲೋಚನೆಗಳನ್ನು ಪುಸ್ತಕದ ಮೇಲೆ ಗೀಚಿದಾಗ ನಿಮ್ಮ ಮನಸ್ಸು ಸ್ಪಷ್ಟ ಮತ್ತು ಶಾಂತವಾಗಿರುತ್ತದೆ.

ಪ್ರೀತಿಪಾತ್ರರ ಜೊತೆ ಸಮಯ ಕಳೆಯಿರಿ: ಪಾರ್ಟಿ ಪಬ್‌ ಅಂತೆಲ್ಲಾ ಹೋಗಲು ಇಷ್ಟವಿಲ್ಲದಿದ್ದರೆ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಮನೆಯಲ್ಲಿ ಆಟವಾಡುತ್ತಾ, ಮೂವಿಗಳನ್ನು ನೋಡುತ್ತಾ, ಎಲ್ಲರೂ ಜೊತೆಗೂಡಿ ತಮಾಷೆ ಮಾಡುತ್ತಾ ಸಮಯವನ್ನು ಕಳೆಯಬಹುದು. ಇದು ನಿಮ್ಮ ಒತ್ತಡವನ್ನೆಲ್ಲಾ ದೂರ ಮಾಡಿ, ಮನಸ್ಸಿಗೆ ಖುಷಿ ನೀಡುವಂತೆ ಮಾಡುತ್ತದೆ. ಜೊತೆಗೆ ಹೊಸ ವರ್ಷವನ್ನು ಸಕಾರಾತ್ಮಕತೆಯೊಂದಿಗೆ ಆರಂಭಿಸಲು ಅನುವುಮಾಡಿಕೊಡುತ್ತದೆ.

ಇದನ್ನೂ ಓದಿ: ಕ್ರಿಸ್ಮಸ್‌, ನ್ಯೂ ಇಯರ್‌ಗೆ ಟ್ರಿಪ್‌ ಹೋಗೋ ಪ್ಲಾನ್‌ ಇದ್ಯಾ? ಹಾಗಿದ್ರೆ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ

ಸೇವೆ ಮತ್ತು ದಾನ: ಹೊಸ ವರ್ಷವನ್ನು ವಿಭಿನ್ನವಾಗಿ ಅರ್ಥಪೂರ್ಣವಾಗಿ ಆಚರಿಸಲು ಬಯಸಿದರೆ, ಈ ದಿನದಂದು ಅನಾಥಾಶ್ರಮ, ವೃದ್ಧಾಶ್ರಮ ಅಥವಾ ಪ್ರಾಣಿಗಳ ಆಶ್ರಯ ತಾಣಕ್ಕೆ ಭೇಟಿ ನೀಡಿ, ಅಲ್ಲಿ ಅವರೊಂದಿಗೆ ಸಮಯ ಕಳೆಯುತ್ತಾ ನಿಮ್ಮ ಕೈಲಾದಷ್ಟು ಅವರಿಗೆ ಸಹಾಯ ಮಾಡಿ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ. ಹೀಗೆ ಇತರರ ಮುಖದಲ್ಲಿ ನಗು ತರಿಸುವುದು ಹೊಸ ವರ್ಷದ ಅತ್ಯಂತ ಸುಂದರ ಮತ್ತು ಅರ್ಥಪೂರ್ಣ ಆರಂಭವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:01 am, Mon, 29 December 25

ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕೊಟ್ಟ ಶಿಕ್ಷೆ ಘನಘೋರ
ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕೊಟ್ಟ ಶಿಕ್ಷೆ ಘನಘೋರ