Important Days in January 2026: ಜನವರಿ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಗಳ ಪಟ್ಟಿ
ಹೊಸ ವರ್ಷಕ್ಕೆ ಇನ್ನೇನು ಕೆಲವು ದಿನಗಳು ಬಾಕಿ ಇದೆ. ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿಒಂದೊಂದು ಉದ್ದೇಶ ಮತ್ತು ಆಶಯಯೊಂದಿಗೆ ಒಂದಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಜನವರಿ 2026 ರಲ್ಲಿ ಯಾವೆಲ್ಲಾ ದಿನಾಚರಣೆಗಳು ಇವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಜನವರಿ 2026Image Credit source: Getty Images
2026 ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ಜನರು ಉತ್ಸುಕತೆಯಿಂದ ಕಾಯುತ್ತಿದ್ದಾರೆ. ವರ್ಷದ ಮೊದಲ ತಿಂಗಳಾದ ಜನವರಿ (January) ಹೊಸ ವರ್ಷದ, ಹೊಸತನ, ಭರವಸೆಯ ಆರಂಭವನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೆ ಈ ತಿಂಗಳಿನಲ್ಲಿ ಸಾಮಾಜಿಕ ಅರಿವು, ಶಿಕ್ಷಣ ಮತ್ತುಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಒಂದಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಗಳನ್ನು ಆಚರಿಸಲಾಗುತ್ತದೆ. ವರ್ಷದ ಮೊದಲ ತಿಂಗಳಿನಲ್ಲಿ ಆಚರಿಸಲಾಗುವ ವಿಶೇಷ ದಿನಗಳು ಯಾವುವು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಜನವರಿ ತಿಂಗಳ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ:
- ಜನವರಿ 1, 2026 – ಹೊಸ ವರ್ಷ
- ಜನವರಿ 1, 2026 – ಜಾಗತಿಕ ಕುಟುಂಬ ದಿನ
- ಜನವರಿ 2, 2026 – ವಿಶ್ವ ಅಂತರ್ಮುಖಿ ದಿನ
- ಜನವರಿ 4, 2026 – ವಿಶ್ವ ಬ್ರೈಲ್ ದಿನ
- ಜನವರಿ 5, 2026 – ರಾಷ್ಟ್ರೀಯ ಪಕ್ಷಿ ದಿನ
- ಜನವರಿ 6, 2026 – ವಿಶ್ವ ಯುದ್ಧ ಅನಾಥರ ದಿನ
- ಜನವರಿ 6, 2026 – ಗುರು ಗೋಬಿಂದ್ ಸಿಂಗ್ ಜಯಂತಿ
- ಜನವರಿ 8, 2026 – ಭೂಮಿಯ ತಿರುಗುವಿಕೆ ದಿನ
- ಜನವರಿ 10, 2026 – ವಿಶ್ವ ಹಿಂದಿ ದಿನ
- ಜನವರಿ 10, 2026 – ವಿಶ್ವ ತರ್ಕ ದಿನ
- ಜನವರಿ 11, 2026 – ರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಗೃತಿ ದಿನ
- ಜನವರಿ 12, 2026 – ರಾಷ್ಟ್ರೀಯ ಯುವ ದಿನ
- ಜನವರಿ 15, 2026 – ಭಾರತೀಯ ಸೇನಾ ದಿನ
- ಜನವರಿ 16, 2026 – ರಾಷ್ಟ್ರೀಯ ನವೋದ್ಯಮ ದಿನ
- ಜನವರಿ 17, 2026 – ವಿಶ್ವ ಧರ್ಮ ದಿನ
- ಜನವರಿ 20, 2026 – ಪೆಂಗ್ವಿನ್ ಜಾಗೃತಿ ದಿನ
- ಜನವರಿ 23, 2026 – ಪರಾಕ್ರಮ ದಿವಸ
- ಜನವರಿ 23, 2026 – ಕೈಬರಹ ದಿನ
- ಜನವರಿ 24, 2026 – ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
- ಜನವರಿ 24, 2026 – ಅಂತರರಾಷ್ಟ್ರೀಯ ಶಿಕ್ಷಣ ದಿನ
- ಜನವರಿ 25, 2026 – ರಾಷ್ಟ್ರೀಯ ಮತದಾರರ ದಿನ
- ಜನವರಿ 25, 2026 – ರಾಷ್ಟ್ರೀಯ ಪ್ರವಾಸೋದ್ಯಮ ದಿನ
- ಜನವರಿ 26, 2026 – ಗಣರಾಜ್ಯೋತ್ಸವ
- ಜನವರಿ 26, 2026 – ಅಂತರರಾಷ್ಟ್ರೀಯ ಕಸ್ಟಮ್ಸ್ ದಿನ
- ಜನವರಿ 27, 2026 – ರಾಷ್ಟ್ರೀಯ ಭೌಗೋಳಿಕ ದಿನ
- ಜನವರಿ 29, 2026 – ಭಾರತೀಯ ಪತ್ರಿಕಾ ದಿನ
- ಜನವರಿ 30, 2026 – ವಿಶ್ವ ಕುಷ್ಠರೋಗ ದಿನ
- ಜನವರಿ 30, 2026 – ಅಂತಾರಾಷ್ಟ್ರೀಯ ಜೀಬ್ರಾ ದಿನ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:23 pm, Sun, 28 December 25




