AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಸ್ಮಸ್‌, ನ್ಯೂ ಇಯರ್‌ಗೆ ಟ್ರಿಪ್‌ ಹೋಗೋ ಪ್ಲಾನ್‌ ಇದ್ಯಾ? ಹಾಗಿದ್ರೆ ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ

ಕ್ರಿಸ್ಮಸ್‌ ಮತ್ತು ಹೊಸ ವರ್ಷದ ರಜಾದಿನಗಳಲ್ಲಿ ಬಹುತೇಕರು ಟ್ರಿಪ್‌ ಹೋಗ್ತಾರೆ. ಹೌದು ಕೆಲಸದ ಒತ್ತಡದಿಂದ ಕೊಂಚ ಬ್ರೇಕ್‌ ತೆಗೆದುಕೊಂಡು ರಿಲ್ಯಾಕ್ಸ್‌ ಆಗಲು ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಟ್ರಿಪ್‌ ಹೋಗ್ತಾರೆ. ಈ ಬಾರಿ ನೀವು ಸಹ ಟ್ರಿಪ್‌ ಪ್ಲಾನ್‌ ಮಾಡಿದ್ದೀರಾ? ನಿಮ್ಮ ಈ ಪ್ರವಾಸ ಸ್ಮರಣೀಯವಾಗಿರಬೇಕೆಂದರೆ ತಪ್ಪಿಯೂ ಈ ಸಮಯದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಬೇಡಿ. ಏಕೆಂದರೆ ಪ್ರವಾಸದ ಸಂತೋಷ ಹಾಳಾಗುವುದರ ಜೊತೆಗೆ ನಿಮ್ಮ ಜೇಬಿಗೂ ಕತ್ತರಿ ಬೀಳಬಹುದು ಎಚ್ಚರ.

ಕ್ರಿಸ್ಮಸ್‌, ನ್ಯೂ ಇಯರ್‌ಗೆ ಟ್ರಿಪ್‌ ಹೋಗೋ ಪ್ಲಾನ್‌ ಇದ್ಯಾ? ಹಾಗಿದ್ರೆ  ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ
ಸಾಂದರ್ಭಿಕ ಚಿತ್ರ Image Credit source: Unsplash
ಮಾಲಾಶ್ರೀ ಅಂಚನ್​
|

Updated on: Dec 23, 2025 | 3:02 PM

Share

ಕ್ರಿಸ್ಮಸ್‌ (Christmas), ನ್ಯೂ ಇಯರ್‌ ಹಾಲಿಡೇ ಸಂದರ್ಭದಲ್ಲಿ ಹೆಚ್ಚಿನವರು ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಎಲ್ಲಾದ್ರೂ ಟ್ರಿಪ್‌ ಹೋಗ್ತಾರೆ.  ಹೌದು ಕೆಲಸದ ಒತ್ತಡದಿಂದ ಸ್ವಲ್ಪ ಬ್ರೇಕ್‌ ತೆಗೆದುಕೊಂಡು ಕ್ರಿಸ್ಮಸ್‌ ಸಂಭ್ರಮವನ್ನು ಸವಿಯಲು, ನ್ಯೂ ಇಯರ್‌ ಪಾರ್ಟಿ ಎಂಜಾಯ್‌ ಮಾಡಲು ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಟ್ರಿಪ್‌ ಹೋಗ್ತಾರೆ. ಇದೇ ರೀತಿ ನೀವು ಕೂಡ ಈ ಬಾರಿ ಟ್ರಿಪ್‌ ಪ್ಲಾನ್‌ ಮಾಡಿದ್ದೀರಾ? ಹಾಗಿದ್ರೆ ನಿಮ್ಮ ಈ ಪ್ರವಾಸವನ್ನು ಸ್ಮರಣೀಯವಾಗಿರಿಸಲು, ಜನಸಂದಣಿ, ಟ್ರಾಫಿಕ್‌ ಜಾಮ್‌ ಇತ್ಯಾದಿ ಕಿರಿಕಿರಿಯನ್ನು ಹಾಗೂ ಜೇಬಿಗೆ ಕತ್ತರಿ ಬೀಳುವುದನ್ನು ತಪ್ಪಿಸಲು ಬಯಸಿದರೆ ಈ ಕೆಲವು ಸ್ಥಳಗಳಿಗೆ ಈ ಸಮಯದಲ್ಲಿ ಭೇಟಿ ನೀಡಲೇಬೇಡಿ. ಆ ಟೂರಿಸ್ಟ್‌ ಪ್ಲೇಸ್‌ ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕ್ರಿಸ್‌ಮಸ್ ಮತ್ತು ಹೊಸ ವರ್ಷದಂದು ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ:

ಶಿಮ್ಲಾ ಮತ್ತು ಮನಾಲಿ: ಹೆಚ್ಚಿನ ಜನರು ಹೊಸ ವರ್ಷವನ್ನು ಆಚರಿಸಲು ಶಿಮ್ಲಾ ಮತ್ತು ಮನಾಲಿಗೆ ಹೋಗುತ್ತಾರೆ, ಆದರೆ ಈ ಸಮಯದಲ್ಲಿ ಈ ಗಿರಿಧಾಮಗಳಿಗೆ ಹೋಗುವುದನ್ನು ತಪ್ಪಿಸುವುದು ಉತ್ತಮ. ಏಕೆಂದರೆ ಈ ಸಮಯದಲ್ಲಿ ಹಿಮರಾಶಿಯ ಸೌಂದರ್ಯವನ್ನು ಸವಿಯಲು ಸಾಕಷ್ಟು ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡ್ತಾರೆ. ಪ್ರವಾಸಿಗರು ಹೆಚ್ಚಾದಂತೆ ಟ್ರಾಫಿಕ್‌ ಜಾಮ್‌, ಜನಸಂದಣಿ ಸಹ ಹೆಚ್ಚಾಗುತ್ತದೆ.  ಇದಲ್ಲದೆ, ಹೋಟೆಲ್‌ಗಳು ಹೆಚ್ಚಾಗಿ ಸಂಪೂರ್ಣವಾಗಿ ಬುಕ್ ಆಗಿರುತ್ತವೆ. ಜೊತೆಗೆ ಹೋಟೆಲ್‌ ಬೆಲೆಗಳೂ ಬೆಲೆ ದುಬಾರಿಯಾಗಿರುತ್ತದೆ.

ನೈನಿತಾಲ್ ಮತ್ತು ಮಸ್ಸೂರಿ: ಉತ್ತರಖಂಡದ ಫೇಮಸ್‌ ಪ್ರವಾಸಿ ತಾಣಗಳೆಂದರೆ ಅದು ನೈನಿತಾಲ್‌ ಮತ್ತು ಮಸ್ಸೂರಿ. ಕ್ರಿಸ್‌ಮಸ್‌ ರಜೆಯನ್ನು ಆನಂದಿಸಲು ಪ್ರವಾಸಿಗಳು ಈ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ನೀವು ಸಹ  ಹೊಸ ವರ್ಷವನ್ನು ಆಚರಿಸಲು ನೈನಿತಾಲ್ ಅಥವಾ ಮಸ್ಸೂರಿಗೆ ಪ್ರವಾಸವನ್ನು ಯೋಜಿಸುತ್ತಿದ್ದರೆ, ಅದನ್ನು ರದ್ದುಗೊಳಿಸಿ. ಈ ಗಿರಿಧಾಮಗಳು ತುಂಬಾ ಚಿಕ್ಕದಾಗಿದ್ದು, ಜನಸಂದಣಿಯ ಕಾರಣದಿಂದ ಕಿರಿಕಿರಿ ಉಂಟಾಗಬಹುದು. ಇದು ನಿಮ್ಮ ಪ್ರವಾಸದ ಖುಷಿಯನ್ನೇ ಹಾಳುಮಾಡಬಹುದು.

ಇದನ್ನೂ ಓದಿ: ಕ್ರಿಸ್ಮಸ್‌ ಹಬ್ಬಕ್ಕೆ ಮನೆಯಲ್ಲೇ ಬಲು ಸುಲಭವಾಗಿ ತಯಾರಿಸಿ ಆರೋಗ್ಯಕರ ಡ್ರೈಫ್ರೂಟ್‌ ಕೇಕ್‌

ಜೈಪುರ ಮತ್ತು ಉದಯಪುರ: ನೀವು ಕ್ರಿಸ್‌ಮಸ್ ಮತ್ತು ಹೊಸ ವರ್ಷವನ್ನು ಆಚರಿಸಲು ರಾಜಸ್ಥಾನದ ಜೈಪುರ ಮತ್ತು ಉದಯಪುರಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ಈ ಪ್ಲಾನ್‌ ಕ್ಯಾನ್ಸಲ್‌ ಮಾಡಿ. ಏಕೆಂದರೆ ಈ ಸಮಯದಲ್ಲಿ ಇಲ್ಲಿನ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಬೆಲೆಗಳು ದುಬಾರಿಯಾಗಿರುತ್ತವೆ. ಇದರಿಂದ ನಿಮ್ಮ ಜೇಬಿಗೆ ಕತ್ತರಿ ಬೀಳಬಹುದು.

ಗೋವಾ:  ಕ್ರಿಸ್ಮಸ್‌ ಮತ್ತು ಹೊಸ ವರ್ಷವನ್ನು ಸಂಭ್ರಮಿಸಲು ಹೆಚ್ಚಿನ ಜನರು ಗೋವಾ ಟ್ರಿಪ್‌ ಪ್ಲಾನ್‌ ಮಾಡ್ತಾರೆ. ಆದ್ರೆ ಈ ಪೀಕ್‌ ಸಮಯದಲ್ಲಿ ಈ ಸ್ಥಳಕ್ಕೆ ಹೋಗುವುದನ್ನು ಆದಷ್ಟು ತಪ್ಪಿಸಿ. ಏಕೆಂದರೆ ಈ ಟೈಮ್‌ನಲ್ಲಿ ಗೋವಾದಲ್ಲಿ ಹೋಟೆಲ್ ಮತ್ತು ಟ್ಯಾಕ್ಸಿ ದರಗಳು ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗುತ್ತವೆ. ಜನಸಂದಣಿಯೂ ಸಾಕಷ್ಟು ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ