Chanakya Niti: ಸಾಲ ತೆಗೆದುಕೊಳ್ಳುವ, ನೀಡುವ ಮೊದಲು ಚಾಣಕ್ಯರು ಹೇಳಿರುವ ಈ ಮಾತುಗಳನ್ನು ಪಾಲಿಸಿ
ಬಹುತೇಕ ಹೆಚ್ಚಿನವರು ಮನೆ ಕಟ್ಟುವಾಗ, ಮದುವೆ ಮಾಡುವಾಗ, ಬ್ಯುಸಿನೆಸ್ ಮಾಡುವ ಸಂದರ್ಭದಲ್ಲಿ ಸಾಲ ಪಡೆಯುತ್ತಾರೆ. ಹೀಗೆ ಸಾಲ ತೆಗೆದುಕೊಳ್ಳುವಾಗ ಮತ್ತು ಮುಖ್ಯವಾಗಿ ಸಾಲ ಕೊಡುವಾಗ ಒಂದಷ್ಟು ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಈ ಸಾಲದ ಕಾರಣದಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಬಹುದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅವು ಯಾವುವು ಎಂಬ ಸಂಪೂರ್ಣ ವಿವರ ಇಲ್ಲಿದೆ.

ಆಚಾರ್ಯ ಚಾಣಕ್ಯರು (Acharya Chanakya) ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಹಣಕಾಸು, ಆರ್ಥಿಕ ವಿಷಯಗಳ ಬಗ್ಗೆಯೂ ಸಾಕಷ್ಟು ವಿಚಾರಗಳ ಹೇಳಿಕೊಟ್ಟಿದ್ದಾರೆ. ಹೌದು ಹಣಕ್ಕೆ ಸಂಬಂಧಿಸಿದ ಯೋಜನೆಗಳು ಹೇಗಿರಬೇಕು? ಹಣವನ್ನು ಎಲ್ಲಿ ಖರ್ಚು ಮಾಡಬೇಕು? ಹಣವನ್ನು ಎಲ್ಲಿ ಖರ್ಚು ಮಾಡಬಾರದು? ಹಣವನ್ನು ಹೇಗೆ ಉಳಿಸುವುದು? ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಆರ್ಥಿಕ ಸಂಕಷ್ಟ ಎದುರಾಗಬಾರದೆಂದರೆ ಸಾಲ ತೆಗೆದುಕೊಳ್ಳುವಾಗ ಮತ್ತು ಸಾಲ ಕೊಡುವಾಗ ಒಂದಷ್ಟು ವಿಚಾರಗಳ ಬಗ್ಗೆ ಮೊದಲೇ ತಿಳಿದುಕೊಳ್ಳಬೇಕು ಎಂದಿದ್ದಾರೆ. ಅದೇನೆಂಬುದರ ಸಂಪೂರ್ಣ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಸಾಲ ತೆಗೆದುಕೊಳ್ಳುವ ಮುನ್ನ ಯೋಚಿಸಿ:
ಸಾಲ ತೆಗೆದುಕೊಳ್ಳುವ ಮೊದಲು, ನಿಮ್ಮ ಅಗತ್ಯತೆಗಳು ಮತ್ತು ಸಾಮರ್ಥ್ಯಗಳನ್ನು ನಿರ್ಣಯಿಸುವುದು ಬಹಳ ಮುಖ್ಯ. ನಿಜವಾಗಿಯೂ ಸಾಲದ ಅಗತ್ಯವಿರುವವರು ಮತ್ತು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವ ಸಾಮರ್ಥ್ಯವಿರುವವರು ಮಾತ್ರ ಸಾಲವನ್ನು ತೆಗೆದುಕೊಳ್ಳಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಅತಿಯಾದ ಖರ್ಚು ಅಥವಾ ತೆಗೆದುಕೊಂಡ ಸಾಲವನ್ನು ತೀರಿಸದೆ ಇರುವುದು ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟವನ್ನು ಉಂಟುಮಾಡಬಹುದು. ಇದಲ್ಲದೆ, ಸಾಲವನ್ನು ತೆಗೆದುಕೊಳ್ಳುವ ಮೊದಲು ಸಾಲದ ಮೂಲವನ್ನು ಪರಿಗಣಿಸುವುದು ಮುಖ್ಯ. ವಿಶ್ವಾಸಾರ್ಹ ಮೂಲಗಳಿಂದ ಸಾಲವನ್ನು ತೆಗೆದುಕೊಳ್ಳಬೇಕು. ಬ್ಯಾಂಕ್, ಹಣಕಾಸು ಸಂಸ್ಥೆ ಅಥವಾ ವಿಶ್ವಾಸಾರ್ಹ ಸ್ನೇಹಿತರಿಂದ ಸಾಲ ಪಡೆಯುವುದು ಯಾವಾಗಲೂ ಸುರಕ್ಷಿತವಾಗಿದೆ ಎನ್ನುತ್ತಾರೆ ಚಾಣಕ್ಯ.
ಇದನ್ನೂ ಓದಿ: ಜೀವನದಲ್ಲಿ ಹಣದ ಕೊರತೆ ಬರಬಾರದೆಂದರೆ ಈ ವಿಚಾರಗಳನ್ನು ಅನುಸರಿಸಿ
ಸಾಲ ನೀಡುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು:
ಹಣವನ್ನು ಸಾಲ ನೀಡುವ ಮೊದಲು, ಆ ವ್ಯಕ್ತಿಯು ವಿಶ್ವಾಸಾರ್ಹ ವ್ಯಕ್ತಿಯೇ ಮತ್ತು ಸಾಲವನ್ನು ಮರು ಪಾವತಿಸಲು ಸಮರ್ಥನೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ಚಾಣಕ್ಯ ಹೇಳುತ್ತಾರೆ. ಹಣವನ್ನು ಸಾಲವಾಗಿ ನೀಡುವಾಗ ಆತುರಪಡಬಾರದು, ಭಾವನೆಗಳಿಗೆ ಬಲಿಯಾಗಬಾರದು ಬದಲಿಗೆ ಯೋಚಿಸಬೇಕು ಮತ್ತು ವಿಶ್ವಾಸಾರ್ಹ ವ್ಯಕ್ತಿಗೆ ಮಾತ್ರ ಸಾಲವನ್ನು ನೀಡಬೇಕು. ಸರಿಯಾದ ಯೋಜನೆಗಳಿಲ್ಲದೆ ಯಾರಿಗಾದರೂ ಹಣವನ್ನು ಸಾಲವಾಗಿ ನೀಡುವುದು ಸಂಬಂಧಗಳು ಹಾಳಾಗಲು ಮತ್ತು ಮತ್ತು ಆರ್ಥಿಕ ನಷ್ಟಗಳಿಗೆ ಕಾರಣವಾಗಬಹುದು. ಇದಲ್ಲದೆ ನೀವು ನೀಡಿದ ಸಾಲಕ್ಕೆ ಲಿಖಿತ ದಾಖಲೆಗಳನ್ನು ಹೊಂದಿಸಿಕೊಳ್ಳುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ ಭವಿಷ್ಯದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳಬಹುದು ಎನ್ನುತ್ತಾರೆ ಚಾಣಕ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




