Breast Milk: ಎದೆಹಾಲು ಹೆಚ್ಚಳಕ್ಕೆ ಸುಲಭ ಉಪಾಯಗಳು ಇಲ್ಲಿವೆ

ಹಸಿಶುಂಠಿ, ಮೆಂತೆ, ಕಾಳುಮೆಣಸು, ಜೀರಿಗೆ, ಬಡೇಸೊಪ್ಪು, ಬೆಳ್ಳುಳ್ಳಿ, ಆಕಳ ಹಾಲು, ಅಳಿವೆ ಬೀಜ, ಒಣಹಣ್ಣುಗಳು,ತಿನ್ನುವ ಅಂಟು, ಹವಿಜ, ಆಹಾರದ ಜೊತೆಗೆ ಸಂಯೋಜಿಸುದರೊಂದಿಗೆ ಎದೆಹಾಲು ಹೆಚ್ಚಿಸಬಹುದಾಗಿದೆ.

Breast Milk: ಎದೆಹಾಲು ಹೆಚ್ಚಳಕ್ಕೆ ಸುಲಭ ಉಪಾಯಗಳು ಇಲ್ಲಿವೆ
ಎದೆಹಾಲುImage Credit source: Parentune.com
Follow us
ಅಕ್ಷತಾ ವರ್ಕಾಡಿ
|

Updated on:Feb 23, 2023 | 5:35 PM

ಅಡಿಗೆ ಮನೆಯಲ್ಲಿರುವಂತಹ, ಸುಲಭವಾಗಿ ಲಭ್ಯವಾಗುವಂತಹ ಪದಾರ್ಥಗಳು, ಸುಲಭ ಲಭ್ಯತೆ, ನೈಸರ್ಗಿಕವಾಗಿ ಸಿಗುವಂತದ್ದು ಪಾರಂಪರಿಕವಾಗಿ ತಾಯಿಯ ಎದೆ ಹಾಲನ್ನು ಹೆಚ್ಚಿಸಲು ಹೆಚ್ಚಿನ ಪ್ರಯೋಜನಕಾರಿಯಾಗಿದೆ. ಹಸಿಶುಂಠಿ, ಮೆಂತೆ, ಕಾಳುಮೆಣಸು, ಜೀರಿಗೆ, ಬಡೇಸೊಪ್ಪು, ಬೆಳ್ಳುಳ್ಳಿ, ಆಕಳ ಹಾಲು, ಅಳಿವೆ ಬೀಜ, ಒಣಹಣ್ಣುಗಳು,ತಿನ್ನುವ ಅಂಟು, ಹವಿಜ, ಆಹಾರದ ಜೊತೆಗೆ ಸಂಯೋಜಿಸುದರೊಂದಿಗೆ ಎದೆಹಾಲು ಹೆಚ್ಚಿಸಬಹುದಾಗಿದೆ.

ತಾಯಿಯ ಎದೆಹಾಲು ಹೆಚ್ಚಳಕ್ಕೆ ಮನೆಮದ್ದು:

ಹಸಿಶುಂಠಿ:

ಚಹಾ ಕುಡಿಯುವ ರೂಢಿ ಇರುವವರು ಚಹಾ ಮಾಡುವಾಗ ಹಸಿಶುಂಠಿ ಬಳಸಿ ಕುಡಿಯಬಹುದು. ಇದಲ್ಲದೆ ಇತರ ಆಹಾರಗಳಲ್ಲಿ ಒಣಶುಂಠಿ ಪುಡಿಯನ್ನು ಉಪಯೋಗಿಸುವುದು ತಾಯಿಯ ಎದೆಹಾಲು ಹೆಚ್ಚಿಸಲು ಸಹಾಯಮಾಡುತ್ತದೆ.

ಮೆಂತೆ:

ಮೆಂತೆ ಕಾಳು ಹಲವು ಔಷಧಿಯ ಗುಣಗಳನ್ನು ಹೊಂದಿದೆ. ಇದನ್ನು ಅಕ್ಕಿ ನೆನಸುವಾಗ ಹಾಕಿ ನೆನೆಸಿ ತಿಂಡಿಗೆ ದೋಸೆ ಮಾಡಿ ಕೊಡಬಹುದು. ಮೆಂತೆಯ ಸೊಪ್ಪಿನಪಲ್ಯ ಮಾಡಿ ಊಟದಲ್ಲಿ ಕೊಡಬಹುದು.

ಕಾಳುಮೆಣಸು:

ಇದನ್ನು ಬಾಣಂತಿಯರ ಅಡುಗೆಯಲ್ಲಿ ಖಾರದ ರುಚಿ ತರಲು ಉಪಯೋಗಿಸಬಹುದು. ಇದನ್ನು ರವೆ ಉಪ್ಪಿಟ್ಟು ಮುರುಗಲ ಸಾರಿನಲ್ಲಿ ಉಪಯೋಗಿಸಬೇಕು.ಕಾಳುಮೆಣಸನ್ನು ಇತಿಮಿತಿಯಲ್ಲಿ ಉಪಯೋಗಿಸಿ.

ಜೀರಿಗೆ:

ಬಾಣಂತಿಯರಿಗೆ ಕಷಾಯ ಕುಡಿಯಲು ನೀಡುವುದು ಪರಂಪರೆ ಇದರಲ್ಲಿ ದೊಡ್ಡಪ್ರಮಾಣದಲ್ಲಿ ಜೀರಿಗೆ ಇರುವುದು.ಅಲ್ಲದೇ ಒಗ್ಗರಣೆಗೆ ಬಳಸಬಹುದು. ಮುರುಗಲು ಸಿಪ್ಪೆಯನ್ನು ನೆನೆಸಿ ಹಿಂಡಿ ತೆಗೆದ ನೀರಿಗೆ ಕಾಳುಮೆಣಸು ಹಾಗೂ ಜೀರಿಗೆ ರುಬ್ಬಿ ಬೇರೆಸಿ ಕುದಿಸಿ ಸಾರು ಮಾಡಿ ಅನ್ನದ ಜೊತೆಗೆ ಉಪಯೋಗಿಸಬಹುದು.

ಬಡೇಸೊಪ್ಪು:

ತಿಂಡಿ ಊಟದ ನಂತರ ಬಡೆಸೊಪ್ಪನ್ನು ಜಗಿದು ತಿನ್ನಲು ಕೊಡಬಹುದು. ಸಾಧ್ಯವಾದರೆ ಅಡಿಕೆಯನ್ನು ತುಪ್ಪದಲ್ಲಿ ಹುರಿದು ಪುಡಿ ಮಾಡಿ, ಬಡೇಸೊಪ್ಪುನ್ನೂ ಹುರಿದು ಪುಡಿ ಮಾಡಿ, ಸ್ವಲ್ಪ ಸಕ್ಕರೆ ಪುಡಿ, ಸಣ್ಣ ತುಂಡು ಒಣಕೊಬ್ಬರಿ, ವಿಳ್ಯದೆಲೆ, ಸುಣ್ಣದೊಂದಿಗೆ ತಿನ್ನಲು ಕೊಡಬಹುದು. ತಾಯಿಯ ಎದೆಹಾಲು ಹೆಚ್ಚಳದೊಂದಿಗೆ ಜೀರ್ಣಕ್ಕೂ ಸಹಾಯವಾಗುತ್ತದೆ.

ಬೆಳ್ಳುಳ್ಳಿ:

ಒಣ ಕೊಬ್ಬರಿಯನ್ನು ಹುರಿದು ಬೆಳ್ಳುಳ್ಳಿ, ಉಪ್ಪು, ಖಾರದಪುಡಿ, ಚಿಟಿಕೆ ಸಕ್ಕರೆ ಸೇರಿಸಿ ಪುಡಿ ಮಾಡಿ ಇಟ್ಟುಕೊಂಡರೆ ತಿಂಡಿ ಊಟದ ಜೊತೆಗೆ ತಿನ್ನಬಹುದು.

ಆಕಳ ಹಾಲು:

ಆಕಳ ಹಾಲು ಸಹಜವಾಗಿಯೇ ಎದೆ ಹಾಲನ್ನು ವೃದ್ಧಿ ಮಾಡಲು ಸಹಾಯಮಾಡುತ್ತದೆ. ಅದನ್ನ ಹೇಗೆ ಬೇಕಾದರೂ ಉಪಯೋಗಿಸಬಹುದು.

ಅಳಿವೆ ಬೀಜ:

ಅಳಿವೆ ಬೀಜವನ್ನು ಚೆನ್ನಾಗಿ ಆರಿಸಿ, ತೊಳೆದು ಒಣಗಿಸಿಟ್ಟುಕೊಳ್ಳಬೇಕು. ಒಂದು ಕಾಯಿ ಹಸಿ ಕೊಬ್ಬರಿಗೆ ಒಂದು ಲೋಟ ಅಳಿವೆ ಬೀಜ ಹಾಗೂ ಎರಡು ಲೋಟ ಬೆಲ್ಲ ಸೇರಿಸಿ ಕಲಸಿ ಒಂದು ಗಂಟೆ ನೆನೆಯಲು ಇಡಬೇಕು. ನಂತರ ಸ್ವಲ್ಪ ತುಪ್ಪ ಸೇರಿಸಿ ದಪ್ಪ ಬಾಣಲೆಯಲ್ಲಿ ಹದವಾಗಿ ಕಾಯಿಸಬೇಕು. ಹದಕ್ಕೆ ಬಂದ ನಂತರ ಲಿಂಬೆ ಹಣ್ಣಿನ ಗಾತ್ರದ ಲಾಡು ಕಟ್ಟಬೇಕು. ದಿನಕ್ಕೆ ಎರಡು ಬಾರಿ ಹಾಲಿನೊಟ್ಟಿಗೆ ಲಾಡು ತಿನ್ನಬಹುದು.

ಒಣಹಣ್ಣುಗಳು:

ಒಣಹಣ್ಣುಗಳು ಅಂದರೆ ಗೇರು ಬೀಜ, ಬಾದಾಮಿ, ಉತ್ತುತ್ತಿ, ಒಣದ್ರಾಕ್ಷಿ,ಅಕ್ರೊಡ, ಪಿಸ್ತಾಮುಂತಾದವುಗಳನ್ನ ಸರಿಯಾದ ಪ್ರಮಾಣದಲ್ಲಿ ಹುರಿದು ಪುಡಿಮಾಡಿ ತುಪ್ಪದಲ್ಲಿ ಕರಿದ ತಿನ್ನುವ ಆಂಟಿನೊಂದಿಗೆ ಬೆರೆಸಿ ಅಲೆಮನೆ ಬೆಲ್ಲದ ಪಾಕದಲ್ಲಿ ಸೇರಿಸಿ ಉಂಡೆ ಮಾಡಿ ತಿನ್ನಲು ಕೊಡಬಹುದು. ಈ ಪೌಷ್ಟಿಕ ಲಾಡುಗಳನ್ನು ಮಗುವಿಗೆ ಒಂದು ತಿಂಗಳಾದ ನಂತರ ತಾಯಿ ಸೇವಿಸುವುದು ಸೂಕ್ತ. ಕಾರಣ ತಾಯಿಯು ಹಸಿ ಬಾಳಂತಿಯಾದ ಕಾರಣ ಜೀರ್ಣ ಶಕ್ತಿ ಸ್ವಲ್ಪ ಕಡಿಮೆ ಇರುವುದು.

ಇದನ್ನು ಓದಿ: ಒತ್ತಡದಿಂದ ಆರೋಗ್ಯದ ಮೇಲಾಗುವ ಪ್ರಭಾವ ಮತ್ತು ಸರಳ ನಿಭಾವಣೆ

ಹುಡಿ ಅಂಟು:

ತಿನ್ನುವ ಅಂಟನ್ನ ಚೆನ್ನಾಗಿ ಆರಿಸಿ, ಬಿಸಿಲಿನಲ್ಲಿ ಒಣಗಿಸಿಟ್ಟುಕೊಳ್ಳಬೇಕು, ಜೊತೆಗೆ 250ಗ್ರಾಂ ಉತ್ತುತ್ತಿ ತೆಗೆದುಕೊಳ್ಳಿ, 250ಗ್ರಾಂ ಒಣಕೊಬ್ಬರಿ ತುರಿದು ಹುರಿದಿಟ್ಟುಕೊಳ್ಳಿ. ಸ್ವಲ್ಪ ಬೆಣ್ಣೆ ಕಾಯಿಸಿ ಬಿಸಿ ಬಿಸಿ ತುಪ್ಪವನ್ನು ಹದವಾದ ಅಂಟಿನ ಮೇಲೆ ಸುರಿಯಬೇಕು. ಆಗ ತಿನ್ನುವ ಅಂಟು ಅರಳುತ್ತದೆ. ತಣ್ಣಗಾದ ಮೇಲೆ ಅವಶ್ಯವಿರುವಷ್ಟು ಪುಡಿ ಸಕ್ಕರೆಯನ್ನು ಸೇರಿಸಬೇಕು. ಈ ಎಲ್ಲ ಮಿಶ್ರಣದ ಪುಡಿಯನ್ನು ದಿನಕ್ಕೆ ಎರಡು ಬಾರಿ ಎರಡು ಚಮಚದಷ್ಟು ತಿನ್ನಬಹುದು. ಸಾಮಾನ್ಯವಾಗಿ ಮಗುವಿಗೆ ಐದು ದಿನವಾದ ನಂತರ ತಾಯಿಗೆ ತಿನ್ನಲು ಕೊಡುವರು.

ಶಾವಿಗೆ:

ಗೋಧಿಯಿಂದಲೇ ಮಾಡಿದ (ಮೈದಾದಿಂದ ಅಲ್ಲ) ಶಾವಿಗೆಯನ್ನು ತುಪ್ಪದಲ್ಲಿ ಹುರಿದು, ಕುದಿಸಿ, ಹಾಲು ಸಕ್ಕರೆ, ಏಲಕ್ಕಿ ಪುಡಿಯನ್ನು ಸೇರಿಸಿ ತಿನ್ನಲು ಕೊಡಬಹುದು. ಶಾವಿಗೆ ಬದಲಿಗೆ ಗೋದಿಕಡಿ ಬೇಯಿಸಿ ಬೆಲ್ಲ ಅಥವಾ ಸಕ್ಕರೆ ಹಾಕಿ ದಲಿಯಾ ರೀತಿಯಲ್ಲಿ ಮಾಡಿ ಕೊಡಬಹುದು. ರುಚಿಗೆ ಏಲಕ್ಕಿ ಪುಡಿ ಹಾಲು ಸೇರಿಸಬಹುದು.

ದಾಲ್ಚಿನ್ನಿ ಅಥವಾ ಚಕ್ಕೆ:

ದಾಲ್ಚಿನ್ನಿ ,ಬೇಳೆ ಅಥವಾ ಅನ್ನ ಬೇಯಿಸುವಾಗ ಹಾಕಬಹುದು ಆದರೆ ಇದನ್ನ ಇಷ್ಟಪಡುವವರು ವಿರಳ. ಕೊತ್ತಂಬರಿ ಕಾಳನ್ನು ಕಷಾಯದಲ್ಲಿ ಉಪಯೋಗಿಸಬಹುದು ಮತ್ತು ಸೊಪ್ಪಿನ ಪಲ್ಯಗಳಿಗೆ ಪುಡಿಮಾಡಿ ಸೇರಿಸಬಹುದು. ಹಾಗೆಯೇ ಕೊತ್ತಂಬರಿ ಸೊಪ್ಪನ್ನು ಉಪ್ಪಿಟ್ಟು, ಸಾರಿಗೆ ಸೇರಿಸಿ ಉಪಯೋಗಿಸಬಹುದು. ಈ ಎಲ್ಲ ಉಪಾಯಗಳನ್ನು ಅವರವರ ಪ್ರಕೃತಿ ಅನುಸಾರ ಇತಿಮಿತಿಯಲ್ಲಿ ಬಳಸಿ.

– ಶ್ರೀಮತಿ ರಕ್ಷಾ ರವಿಕಿರಣ ಪಟವರ್ಧನ ಶಿರಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:34 pm, Thu, 23 February 23

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು