ನಂಬೋದು ಕಷ್ಟ, ಆದ್ರೂ ನಿಜ; ಜಿಮ್​ಗೆ ಹೋಗುವ 103ರ ಅಜ್ಜಿಗೆ ವ್ಯಾಯಾಮ ಅಂದ್ರೆ ಪ್ರಾಣ!

ಅಮೆರಿದಕ ಕ್ಯಾಲಿಫೋರ್ನಿಯಾದ ತೆರೇಸಾ ಮೂರ್ ಎಂಬ ಹೆಸರಿನ 103 ವರ್ಷ ವಯಸ್ಸಿನ ಈ ಅಜ್ಜಿ ಬೆಳಿಗ್ಗೆದ್ದು ಜಿಮ್​ಗೆ ಹೋಗುತ್ತಾರೆ. ಅಲ್ಲಿ ಹಲವು ಕಸರತ್ತುಗಳನ್ನು ಮಾಡುತ್ತಾರೆ.

ನಂಬೋದು ಕಷ್ಟ, ಆದ್ರೂ ನಿಜ; ಜಿಮ್​ಗೆ ಹೋಗುವ 103ರ ಅಜ್ಜಿಗೆ ವ್ಯಾಯಾಮ ಅಂದ್ರೆ ಪ್ರಾಣ!
ಸಾಂದರ್ಭಿಕ ಚಿತ್ರImage Credit source: pixabay
Follow us
Ganapathi Sharma
|

Updated on: Mar 17, 2023 | 8:15 AM

ದೇಹ ಸದೃಢವಾಗಿರಬೇಕು (Fitness), ಆರೋಗ್ಯ (Health) ಚೆನ್ನಾಗಿರಬೇಕು ಅಂದುಕೊಳ್ಳುವುದೇನೋ ನಿಜ. ಆದರೆ ಮುಂಜಾನೆದ್ದು ವ್ಯಾಯಾಮಕ್ಕೆ (exercise) ಹೋಗುವುದು ಅಥವಾ ಜಾಗಿಂಗ್ ಹೋಗುವುದೆಂದರೆ ಅದೇಕೋ ಉದಾಸೀನ. ನಸುಕಿನ ತಂಪಾದ ವಾತಾವರಣಕ್ಕೆ ಬೆಚ್ಚಗೆ ಮಲಗಿಕೊಳ್ಳುವುದರಲ್ಲೇ ಅದೇನೋ ಹಿತ ಎಂದುಕೊಳ್ಳುತ್ತೀರಾ? ಹಾಗಿದ್ದರೆ ಈ ಅಜ್ಜಿಯನ್ನೊಮ್ಮೆ ನೋಡಿ. ನೀವು ಎಂಥವರೇ ಆಗಿದ್ದರೂ ಇವರಿಂದ ಸ್ಫೂರ್ತಿ ಪಡೆಯುವುದು ಖಂಡಿತ. ಹೌದು, ಅಮೆರಿದಕ ಕ್ಯಾಲಿಫೋರ್ನಿಯಾದ ತೆರೇಸಾ ಮೂರ್ ಎಂಬ ಹೆಸರಿನ 103 ವರ್ಷ ವಯಸ್ಸಿನ ಈ ಅಜ್ಜಿ ಬೆಳಿಗ್ಗೆದ್ದು ಜಿಮ್​ಗೆ ಹೋಗುತ್ತಾರೆ. ಅಲ್ಲಿ ಹಲವು ಕಸರತ್ತುಗಳನ್ನು ಮಾಡುತ್ತಾರಂತೆ. ಹಾಗೆಂದು ಅವರ ಮಗಳು ಶೀಲಾ ಮೂರ್ ತಿಳಿಸಿರುವುದಾಗಿ ಲಾಸ್​ ಏಂಜಲೀಸ್​ನ ‘ಫಾಕ್ಸ್​​ 11’ ವರದಿ ಮಾಡಿದೆ.

ಅಮ್ಮ ವಾರಕ್ಕೆ ಕನಿಷ್ಠ ಮೂರು ದಿನವಾದರೂ ಜಿಮ್​ಗೆ ತೆರಳುತ್ತಾರೆ. ಅದುವೇ ಅಮ್ಮನ ‘ಖುಷಿಯ ಜಾಗ’ ಎಂದಿದ್ದಾರೆ ಮೂರ್.

ಇಟಲಿ ಮೂಲದವರಾದ ತೆರೇಸಾ 1946ರಲ್ಲಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ವಿವಾಹವಾಗಿದ್ದರು. ಅಮ್ಮ ಇಟಲಿಯನ್ನು ತೊರೆದ ನಂತರ ಅವಳ ಜೀವನ ಅಕ್ಷರಶಃ ಅಲೆಮಾರಿಯಂತಾಗಿತ್ತು. ಅನೇಕ ಕಡೆಗಳಲ್ಲಿ ವಾಸ್ತವ್ಯ ಮಾಡಿದ ಆಕೆಯ ಕುತೂಹಲವೇ ನನ್ನ ಮಟ್ಟಿಗೆ ಪ್ರೇರಣಾದಾಯಕ ಅಂಶವಾಗಿದೆ ಎಂದು ಎಂದು ಮೂರ್ ಹೇಳಿದ್ದಾರೆ.

ಜಿಮ್ಮೇ ಸರ್ವಸ್ವ…

ನನ್ನ ಅಮ್ಮನೆಂದರೆ ಕೌತುಕದ ಕಣಜ. ಜಿಮ್​ಗೆ ಹೋಗಿ ಕಸರತ್ತು ಮಾಡುವುದರಲ್ಲಿ ಆಕೆಗೆ ಅದೇನೋ ಖುಷಿ. ಅಲ್ಲಿ ಆಕೆ ಅವಳ ಸ್ನೇಹಿತೆಯರನ್ನು ಭೇಟಿ ಮಾಡುತ್ತಾಳೆ. ಕಷ್ಟ-ಸುಖ ಹಂಚಿಕೊಳ್ಳುತ್ತಾಳೆ ಎಂದು ಮೂರ್ ತಿಳಿಸಿದ್ದಾರೆ.

ಇದನ್ನೂ ಓದಿ: Viral News: 18 ವರ್ಷ ತುಂಬುವ ಮೊದಲೇ ಚೊಚ್ಚಲ ಮಗು ಹೆತ್ತು 28ನೇ ವಯಸ್ಸಿಗೆ 9 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಆರೋಗ್ಯದ ಗುಟ್ಟು ಬಿಟ್ಟುಕೊಟ್ಟ ಅಜ್ಜಿ

ದೀರ್ಘ ಕಾಲ ಆರೋಗ್ಯಯುತ ಜೀವನ ಮಾಡಬೇಕೆಂದರೆ ಸದಾ ನಗುನಗುತ್ತಾ ಖುಷಿಯಾಗಿರಬೇಕು ಎನ್ನುತ್ತಾರೆ ಅಜ್ಜಿ ತೆರೇಸಾ. ಸದಾ ಸಂತಸದಿಂದ ಇರಲು ಯತ್ನಿಸಿ. ಒಳ್ಳೆಯ ವಿಚಾರಗಳನ್ನೇ ಯೋಚಿಸಿ. ಎಲ್ಲವೂ ಸುಂದರವಾಗಿದೆ ಎಂದು ಭಾವಿಸಿ. ಇದರಿಂದ ನಿಮ್ಮ ಮನಸ್ಸು ಆಹ್ಲಾದಮಯವಾಗಿರುವುದಲ್ಲದೆ ಉತ್ತಮ ಆರೋಗ್ಯ, ದೀರ್ಘಾಯಸ್ಸೂ ನಿಮ್ಮದಾಗಲಿದೆ ಎನ್ನುತ್ತಾರವರು. ಜತೆಗೆ, ನಿಯಮಿತ ವ್ಯಾಯಾಮ ಕೂಡ ನಮ್ಮನ್ನು ಲವಲವಿಕೆಯಿಂದ ಇಡುತ್ತದೆ ಎಂದಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್