Kannada News Lifestyle Independence Day 2025: Best and meaningful Messages, Quotes, Wishes to share on Independence Day of India
Independence Day 2025: ಸ್ವಾತಂತ್ರ್ಯ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಕಳುಹಿಸಲು ಇಲ್ಲಿವೆ ಸಂದೇಶಗಳು
ಆಗಸ್ಟ್ 15 ಭಾರತೀಯರ ಪಾಲಿಗೆ ವಿಶೇಷ ದಿನ, ಬ್ರಿಟಿಷರ ದಾಸ್ಯದಿಂದ ಮುಕ್ತರಾದ ದಿನ. ಈ ವರ್ಷ 79 ನೇ ಸ್ವಾತಂತ್ರ್ಯ ದಿನವನ್ನು ನಾವೆಲ್ಲರೂ ಆಚರಿಸುತ್ತಿದ್ದೇವೆ. ಈ ವಿಶೇಷ ದಿನದಂದು ನೀವು ನಿಮ್ಮ ಆತ್ಮೀಯರೊಂದಿಗೆ ವಿಭಿನ್ನ ರೀತಿ ಶುಭಾಶಯಗಳನ್ನು ಕೋರಬಹುದು. ಫೇಸ್ ಬುಕ್, ವಾಟ್ಸ್ ಆ್ಯಪ್ ಸೇರಿದಂತೆ ಸೋಶಿಯಲ್ ಮೀಡಿಯಾದ ಮೂಲಕ ಶುಭಾಶಯ ಕೋರಲು ಮೆಸೇಜ್ಗಳು ಇಲ್ಲಿವೆ.
200 ವರ್ಷಗಳಷ್ಟು ಹೆಚ್ಚು ಕಾಲ ಭಾರತವನ್ನು ಆಳಿದ ಬ್ರಿಟಿಷರ ದಾಸ್ಯದಿಂದ ಮುಕ್ತವಾದ ದಿನ ಆಗಸ್ಟ್ 15. ಹೀಗಾಗಿ ಭಾರತೀಯರಿಗೆ ಸ್ವಾತಂತ್ರ್ಯ ದಿನ (Independence Day) ಎನ್ನುವುದು ಮರೆಯಲಾಗದ ದಿನವಾಗಿದ್ದು, ದೇಶದಾದಂತ್ಯ ಹಬ್ಬದಂತೆ ಆಚರಿಸುತ್ತಾರೆ. ಅದೆಷ್ಟೋ ಸಾಹಸಿಗಳ, ಸ್ವಾತಂತ್ರ್ಯ ಹೋರಾಟಗಾರ ತ್ಯಾಗ ಬಲಿದಾನದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಈ ಬಾರಿ 79 ನೇ ಸ್ವಾತಂತ್ರ್ಯೋತ್ಸವದ ಆಚರಣೆಗೆ ಸಜ್ಜಾಗಿದ್ದೇವೆ. ಈ ವಿಶೇಷ ದಿನದಂದು ನೀವು ನಿಮ್ಮ ಆತ್ಮೀಯರಿಗೆ ಈ ಕೆಲವು ಸಂದೇಶಗಳನ್ನು ಕಳುಹಿಸಿ ಶುಭಾಶಯಗಳನ್ನು ಕೋರಿ ಅರ್ಥಪೂರ್ಣ ದಿನವಾಗಿಸಬಹುದು.
ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಲು ಸಂದೇಶಗಳು ಇಲ್ಲಿವೆ
ಸ್ವಾತಂತ್ರ್ಯ ದಿನಾಚರಣೆಯ ಚೈತನ್ಯ ಸದಾ ನಮ್ಮೊಂದಿಗೆ ಇರಲಿ. ವೀರಯೋಧರನ್ನು ಸ್ಮರಿಸುತ್ತಾ ದೇಶಪ್ರೇಮ ಹರಡೋಣ. ಸ್ವಾತಂತ್ರ್ಯ ದಿನದ ಶುಭಾಶಯ.
ನಾಡಿನ ಸಮಸ್ತ ಜನತೆಗೆ 79 ನೇ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು.
ಸ್ವಾತಂತ್ರ್ಯ ದಿನಾಚರಣೆಯ ವೈಭವ ಸದಾ ನಮ್ಮೊಂದಿಗೆ ಇರಲಿ. ನಿಮಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
ನಮ್ಮ ದೇಶ ಈ ದಿನವನ್ನು ಆಚರಿಸಲು ಸಾವಿರಾರು ಜನರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಅವರ ತ್ಯಾಗವನ್ನು ಎಂದಿಗೂ ಮರೆಯಬಾರದು. ಅವರನ್ನು ಸ್ಮರಿಸುವ ಕೆಲಸ ನಮ್ಮಿಂದ ಆಗಲಿ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
ಸ್ವಾತಂತ್ರ್ಯಕ್ಕಾಗಿ ನೆತ್ತರು ಹರಿಸಿ ಪ್ರಾಣ ತ್ಯಾಗ ಮಾಡಿದ ವೀರರ ನೆನಪುಗಳನ್ನು ಅಮರವಾಗಿಸೋಣ ಎಲ್ಲರಿಗೂ 79 ನೇಯ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸೋಣ!
ನಮ್ಮ ಜಾತಿ ಧರ್ಮಗಳು ಯಾವುದೇ ಇರಲಿ, ಅಂತಿಮವಾಗಿ ನಾವು ಭಾರತೀಯರು ಎಂಬ ಭಾವ ನಮ್ಮಲಿರಲಿ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.