International Biodiversity Day 2024: ಜೀವವೈವಿಧ್ಯದ ನಾಶ ಮನುಕುಲಕ್ಕೆ ಆಪತ್ತು ಖಚಿತ

| Updated By: ಅಕ್ಷಯ್​ ಪಲ್ಲಮಜಲು​​

Updated on: May 21, 2024 | 5:13 PM

ಮಾನವನ ಸ್ವಾರ್ಥದಿಂದ ಸುಂದರ ಸೃಷ್ಟಿಯು ನಾಶವಾಗುತ್ತಿದೆ. ಹೀಗಾಗಿ ಈ ಜೀವ ವೈವಿಧ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿ ವರ್ಷ ಮೇ 22ರಂದು ಅಂತಾ ರಾಷ್ಟ್ರೀಯ ಜೀವವೈವಿಧ್ಯದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಮಹತ್ವ ಹಾಗೂ ಇತಿಹಾಸದ ಬಗೆಗಿನ ಮಾಹಿತಿಯು ಇಲ್ಲಿದೆ.

International Biodiversity Day 2024: ಜೀವವೈವಿಧ್ಯದ ನಾಶ ಮನುಕುಲಕ್ಕೆ ಆಪತ್ತು ಖಚಿತ
Follow us on

ಪ್ರಕೃತಿಯೇ ಅದ್ಭುತವಾದ ಸೃಷ್ಟಿ. ಸುತ್ತಲೂ ಹಚ್ಚ ಹಸಿರ ಪರಿಸರ, ಲೆಕ್ಕವಿಲ್ಲದಷ್ಟು ಜೀವ ರಾಶಿಗಳು, ಹಳ್ಳಕೊಳ್ಳಗಳು ಹೀಗೆ ಸುಂದರವಾದ ಪ್ರಕೃತಿಗೆ ಕಾರಣವಾಗಿರುವ ಅಂಶಗಳು ಒಂದೆರಡಲ್ಲ. ಆದರೆ, ಮನುಷ್ಯನ ಅಭಿವೃದ್ಧಿಪರ ಚಟುವಟಿಕೆಗಳು ಜೀವವೈವಿಧ್ಯಗಳ ನಾಶಕ್ಕೆ ಕಾರಣವಾಗಿದೆ. ಕಾಡುಗಳ ನಾಶ, ಹವಾಮಾನ ಬದಲಾವಣೆ, ಅರಣ್ಯಗಳಲ್ಲಿ ವಾಹನ ಸಂಚಾರ, ಪ್ರಾಣಿ ಬೇಟೆ ಸೇರಿದಂತೆ ಇನ್ನಿತ್ತರ ಚಟುವಟಿಕೆಗಳಿಂದ ಜೀವ ವೈವಿಧ್ಯ ಅಪಾಯದಂಚಿನಲ್ಲಿದೆ. ಹೀಗಾಗಿ ಜೀವವೈವಿಧ್ಯಗಳನ್ನು ರಕ್ಷಿಸುವ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿಶ್ವ ಜೀವವೈವಿಧ್ಯ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.

ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನದ ಇತಿಹಾಸ

1992ರ ಮೇ 22ರಂದು ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಜೈವಿಕ ವೈವಿಧ್ಯದ ಒಪ್ಪಂದ ಅಳವಡಿಸಿಕಕೊಂಡಿತು. 2000ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಮೇ 22ರಂದು ವಿಶ್ವ ಜೀವವೈವಿಧ್ಯ ದಿನವನ್ನು ಆಚರಿಸಲು ನಿರ್ಧರಿಸಿತು. ಈ ಹಿಂದೆ ಡಿಸೆಂಬರ್‌ 29ರಂದು ಆಚರಿಸಲಾಗುತ್ತಿತ್ತು. ಆದಾದ ಬಳಿಕ ಪ್ರತಿ ವರ್ಷ ಮೇ 22ರಂದು ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನವೆಂದು ಆಚರಿಸಲಾಗುತ್ತದೆ.

ಇದನ್ನೂ ಓದಿ: ಈರುಳ್ಳಿ ಹಾಳಾಗದಂತೆ ಸಂಗ್ರಹಿಸಿಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನದ ಮಹತ್ವ ಹಾಗೂ ಆಚರಣೆ

ಜೀವ ವೈವಿಧ್ಯತೆಯ ಮಹತ್ವವನ್ನು ಅರ್ಥ ಮಾಡಿಸಲು ವಿಶ್ವಸಂಸ್ಥೆಯು ಒಂದು ದಿನವನ್ನು ಮೀಸಲಿಟ್ಟಿದೆ. ಸಮೃದ್ಧ ಸಂಪತ್ತಾಗಿರುವ ಜೀವವೈವಿಧ್ಯವನ್ನು ಕಾಪಾಡುವ, ಅವುಗಳನ್ನು ಉಳಿಸಿ, ಬೆಳೆಸುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವು ಈ ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನದ್ದಾಗಿದೆ. ಈ ದಿನದಂದು ಜೀವವೈವಿಧ್ಯತೆಯನ್ನು ರಕ್ಷಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಹಾಗೂ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ