AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Self Care Day 2024: ನಿಮ್ಮನ್ನು ನೀವೇ ಸ್ವ- ಆರೈಕೆ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಲಹೆಗಳು

ಇಂದಿನ ಒತ್ತಡದ ಜೀವನದ ನಡುವೆ ವಿಶೇಷವಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಮಯವಿಲ್ಲ. ವಿಶ್ರಾಂತಿಯಿಲ್ಲದೇ ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗುವ ಮೂಲಕ ನಮ್ಮನ್ನೇ ನಾವು ನಿರ್ಲಕ್ಷ್ಯ ಮಾಡುತ್ತಿದ್ದೇವೆ. ನಮ್ಮ ಆರೋಗ್ಯವನ್ನು ಕಾಪಾಡಲು ನಮಗಾಗಿ ನಾವು ಕಾಳಜಿ ವಹಿಸುವುದು ಅತೀ ಮುಖ್ಯ. ನಮ್ಮ ಕಾಳಜಿ ನಾವೇ ಮಾಡುವ ಸಲುವಾಗಿ ಅಂತಾರಾಷ್ಟ್ರೀಯ ಸ್ವ ಆರೈಕೆ ದಿನವನ್ನು ಮೀಸಲಿಡಲಾಗಿದೆ. ಈ ದಿನದಂದು ತಮ್ಮ ಸ್ವ ಆರೈಕೆಯನ್ನು ತಾವೇ ಹೇಗೆ ಮಾಡಬಹುದು ಎನ್ನುವ ಸಲಹೆಗಳು ಇಲ್ಲಿವೆ.

International Self Care Day 2024: ನಿಮ್ಮನ್ನು ನೀವೇ ಸ್ವ- ಆರೈಕೆ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಲಹೆಗಳು
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jul 24, 2024 | 11:25 AM

Share

ಇಂದಿನ ಬಿಡುವಿಲ್ಲದ ಜೀವನ ಶೈಲಿಯಿಂದ ಜನರು ವೈಯಕ್ತಿಕ ಜೀವನ ಹಾಗೂ ಕೆಲಸದಿಂದಾಗಿ ಒತ್ತಡ ಹಾಗೂ ಚಿಂತೆಗೆ ಒಳಗಾಗುತ್ತಿದ್ದಾರೆ. ಸೇವಿಸುವ ಆಹಾರದಲ್ಲಿಯು ಸಾಕಷ್ಟು ಬದಲಾವಣೆಗಳಾಗಿದ್ದು, ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಿದೆ. ಅದಲ್ಲದೇ ಮನೆಯ ಸದಸ್ಯರ ಆರೈಕೆಗೆ ಹಾಗೂ ಆರೋಗ್ಯದ ಕಾಳಜಿ ಮಾಡುವ ನಾವುಗಳು ನಮ್ಮ ಆರೈಕೆಗೆ ಸಮಯವನ್ನು ನೀಡುವುದಿಲ್ಲ. ಹೀಗಾಗಿ ದಿನದಲ್ಲಿ ಸ್ವಲ್ಪ ಸಮಯ ಮಾಡಿಕೊಂಡಾದರೂ ನಮ್ಮ ಬಗ್ಗೆ ನಾವು ಗಮನ ಕೊಡುವುದು ಮುಖ್ಯ.

* ನಿಮ್ಮ ದೇಹಕ್ಕೆ ಏನು ಬೇಕು ಎಂದು ಅರಿತುಕೊಳ್ಳಿ : ನಿಮಗೆ ಹೇಗೆ ಒಂದಷ್ಟು ಆಸೆ ಆಕಾಂಕ್ಷೆಗಳು ಇರುತ್ತದೆಯೋ, ಅದನ್ನು ಅರಿತು ನೀವು ಹೇಗೋ ಪೂರೈಸುತ್ತೀರಿ. ಅದೇ ರೀತಿ ದೇಹದೊಂದಿಗೂ ಸಂವಹನ ನಡೆಸುವುದು ಅತ್ಯಗತ್ಯ. ದೇಹಕ್ಕೆ ಅಗತ್ಯವಾಗಿರುವ ಸಮತೋಲಿತ ಆಹಾರ ಸೇವನೆ , ವ್ಯಾಯಾಮದಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ವಿಶ್ರಾಂತಿಯ ಅಗತ್ಯವಿದ್ದರೆ ಕಿರಿದಾದ ನಿದ್ರೆ ಮಾಡುವುದು ಒಳ್ಳೆಯದು.

* ನಿಮ್ಮ ಮನಸ್ಸನ್ನು ನಿರಾಳವಾಗಿಟ್ಟುಕೊಳ್ಳಿ : ಒತ್ತಡಡ ಜೀವನದ ನಡುವೆ ಮಾನಸಿಕ ನೆಮ್ಮದಿಯು ಹಾಳಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಮನಸ್ಸನ್ನು ನಿಯಂತ್ರಣದಲ್ಲಿಡಲು ಯೋಗ, ಧ್ಯಾನದಲ್ಲಿ ತೊಡಗಿಕೊಳ್ಳಿ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವುದು ಕೂಡ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

* ನಿಮಗಾಗಿ ವೇಳಾ ಪಟ್ಟಿ ರಚಿಸಿಕೊಳ್ಳಿ : ಬಿಡುವಿಲ್ಲದ ಜೀವನದಲ್ಲಿ ನಮಗಾಗಿ ನಾವು ಸಮಯ ಕೊಡುವುದು ಕಷ್ಟವಾಗಬಹುದು. ಅದರಲ್ಲಿಯು ಉದ್ಯೋಗದಲ್ಲಿರುವ ಮಹಿಳೆಯರು ಮನೆ ಹಾಗೂ ಉದ್ಯೋಗ ಎರಡನ್ನು ನಿಭಾಯಿಸಿಕೊಂಡು ಹೋಗಬೇಕು. ಹೀಗಾಗಿ ಟೈಮ್ ಟೇಬಲ್ ಸಿದ್ಧ ಪಡಿಸಿ ಅದರಂತೆ ತೊಡಗಿಕೊಳ್ಳಿ. ಬಿಡುವು ಮಾಡಿಕೊಂಡು ಪುಸ್ತಕ ಓದುವ ಹವ್ಯಾಸ, ಹಾಡು ಕೇಳುವುದು ಹೀಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.

* ಇಲ್ಲ ಎಂದು ಹೇಳುವುದನ್ನು ಕಲಿಯಿರಿ : ನಿಮ್ಮ ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಗಡಿಗಳನ್ನು ಹೊಂದಿಸುವುದು ಮುಖ್ಯ. ಯಾರೂ ಏನೇ ಹೇಳಿದರೂ ಓಕೆ ಹೇಳುವ ಬದಲು, ಇಲ್ಲ ಎನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ನೀವು ಅನಗತ್ಯವಾದ ಒತ್ತಡವನ್ನು ಮೈ ಮೇಲೆ ಎಳೆದುಕೊಳ್ಳುವುದನ್ನು ತಪ್ಪಿಸುತ್ತದೆ.

ಇದನ್ನೂ ಓದಿ: ಈ ವಿಶೇಷ ದಿನದಂದು ನಿಮ್ಮ ಕಸಿನ್ಸ್ ಗಳಿಗೆ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು

* ಸಮತೋಲಿನ ಆಹಾರ ಸೇವಿಸಿ : ಆರೋಗ್ಯವನ್ನು ಕಾಪಾಡಿಕೊಳ್ಳಲು ಸೇವಿಸುವ ಆಹಾರವು ಮುಖ್ಯ. ಅದಲ್ಲದೇ ತಿನ್ನುವ ಆಹಾರವು ಭಾವನೆಗಳು ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ತರಕಾರಿ, ಹಣ್ಣು ಹಂಪಲು, ಧಾನ್ಯಗಳು ಸೇರಿದಂತೆ ಆರೋಗ್ಯಕರ ಆಹಾರಗಳ ಬಗ್ಗೆ ಹೆಚ್ಚು ಗಮನ ನೀಡುವುದು ಉತ್ತಮ. ಸಂಸ್ಕರಿಸಿದ ಆಹಾರಗಳು ಹಾಗೂ ಸಕ್ಕರೆ ಅಂಶ ಹೆಚ್ಚಿರುವ ತಿಂಡಿ ತಿನಿಸುಗಳ ಸೇವನೆಯನ್ನು ಆದಷ್ಟು ತಪ್ಪಿಸಿ.

* ಸಾಕಷ್ಟು ವಿಶ್ರಾಂತಿ ಪಡೆಯಿರಿ : ಉದ್ಯೋಗ ಹಾಗೂ ಮನೆ ಹೀಗೆ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವ ಭರದಲ್ಲಿ ನಮ್ಮ ದೇಹಕ್ಕೆ ವಿಶ್ರಾಂತಿ ಬೇಕು ಎನ್ನುವುದನ್ನೇ ಮರೆತು ಬಿಡುತ್ತೇವೆ. ಹೀಗಾಗಿ ದಿನಕ್ಕೆ ಎಂಟು ಗಂಟೆಗಳ ಕಾಲ ನಿದ್ರೆ ಹಾಗೂ ಮಲಗುವ ಮುಂಚೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದು ಉತ್ತಮ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ