International Tea Day 2023: ಅಂತರರಾಷ್ಟ್ರೀಯ ಚಹಾ ದಿನದ ಇತಿಹಾಸ, ದಿನಾಂಕ ಹಾಗೂ ಮಹತ್ವದ ಕುರಿತು ಮಾಹಿತಿ ಇಲ್ಲಿದೆ

|

Updated on: May 20, 2023 | 2:32 PM

ಪ್ರತೀ ವರ್ಷ ಮೇ 21 ರಂದು ಅಂತಾರಾಷ್ಟ್ರೀಯ ಚಹಾದಿನವನ್ನು ಆಚರಿಸಲಾಗುತ್ತದೆ. ನೀರಿನ ನಂತರ ಅತೀ ಹೆಚ್ಚು ಕುಡಿಯುವ ಪಾನೀಯವೆಂದರೆ ಅದು ಚಹಾ ಎಂದು ನಿಮಗೆ ತಿಳಿದಿದೆಯೇ?

International Tea Day 2023: ಅಂತರರಾಷ್ಟ್ರೀಯ ಚಹಾ ದಿನದ ಇತಿಹಾಸ, ದಿನಾಂಕ ಹಾಗೂ ಮಹತ್ವದ ಕುರಿತು ಮಾಹಿತಿ ಇಲ್ಲಿದೆ
International Tea Day 2023
Follow us on

ಒಂದು ಕಪ್​​​ ಬೇಡ, ಕೇವಲ ಒಂದು ಸಿಪ್​ ಟೀ ಸಿಕ್ಕಿದ್ರೆ ಸಾಕು, ಇಲ್ಲದಿದ್ದರೆ ನನ್ನ ದಿನವೇ ಪ್ರಾರಂಭ ಆಗಲ್ಲ ಅನ್ನೋರೇ ಹೆಚ್ಚು. ಹೌದು ಟೀ ಎಂದರೆ ಬಹುತೇಕರಿಗೆ ಅಚ್ಚು ಮೆಚ್ಚು. ಆದ್ದರಿಂದ ಟೀ ಪ್ರಿಯರಿಗಾಗಿ ಅಂತರಾಷ್ಟ್ರೀಯ ಚಹಾ ದಿನ (International Tea Day) ಯಾವಾಗ? ಮತ್ತು ಯಾಕೆ ಆಚರಿಸುತ್ತಾರೆ? ಎಂಬೆಲ್ಲಾ ವಿಷಯಗಳ ಕುರಿತು ಮಾಹಿತಿ ಇಲ್ಲಿದೆ. ಪ್ರತೀ ವರ್ಷ ಮೇ 21 ಅಂತಾರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತದೆ. ನೀರಿನ ನಂತರ ಅತೀ ಹೆಚ್ಚು ಕುಡಿಯುವ ಪಾನೀಯವೆಂದರೆ ಅದು ಚಹಾ ಎಂದು ನಿಮಗೆ ತಿಳಿದಿದೆಯೇ?

ಅಂತರರಾಷ್ಟ್ರೀಯ ಚಹಾ ದಿನದ ಇತಿಹಾಸ:

ಚಹಾವು ಈಶಾನ್ಯ ಭಾರತ, ಉತ್ತರ ಮ್ಯಾನ್ಮಾರ್ ಮತ್ತು ನೈಋತ್ಯ ಚೀನಾದಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ಆದರೆ ಇಂದಿಗೂ ಕೂಡ ನಿಖರವಾದ ಸ್ಥಳ ತಿಳಿದಿಲ್ಲ. ಆದರೆ 5ಸಾವಿರ ವರ್ಷಗಳ ಹಿಂದೆ ಚೀನಾದಲ್ಲಿ ಚಹಾವನ್ನು ಕುಡಿಯಲಾಗುತ್ತಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. 2005ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಚಹಾ ದಿನವನ್ನು ಭಾರತದಲ್ಲಿ ಆಚರಿಸಲಾಯಿತು. ಅಂತರರಾಷ್ಟ್ರೀಯ ಚಹಾ ದಿನವನ್ನು ಯುಎನ್‌ನ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಆಚರಿಸುತ್ತದೆ. ಇದಕ್ಕೂ ಮುನ್ನ, ಚಹಾ ಉತ್ಪಾದಿಸುವ ರಾಷ್ಟ್ರಗಳಾದ ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ವಿಯೆಟ್ನಾಂ, ಇಂಡೋನೇಷ್ಯಾ, ಕೀನ್ಯಾ, ಮಲಾವಿ, ಮಲೇಷ್ಯಾ, ಉಗಾಂಡಾ, ಭಾರತ ಮತ್ತು ಟಾಂಜಾನಿಯಾಗಳಲ್ಲಿ ಡಿಸೆಂಬರ್ 15 ಅನ್ನು ಅಂತರರಾಷ್ಟ್ರೀಯ ಚಹಾ ದಿನವಾಗಿ ಆಚರಿಸಲಾಗುತ್ತಿತ್ತು.

ಇದನ್ನೂ ಓದಿ: ಐಸ್ ಕ್ರೀಮ್ ತಿಂದ ನಂತರ ನೀರು ಕುಡಿಯಲೇ ಬೇಡಿ, ಕುಡಿದರೆ ಈ ಸಮಸ್ಯೆ ಕಾಣಿಸಿಕೊಳ್ಳಬಹುದು

ಅಂತರರಾಷ್ಟ್ರೀಯ ಚಹಾ ದಿನದ ಮಹತ್ವ:

ಚಹಾ ಬೆಳೆಗಾರರು ಮತ್ತು ಕಾರ್ಮಿಕರ ಮೇಲೆ ಜಾಗತಿಕ ಚಹಾ ವ್ಯಾಪಾರದ ಬಗ್ಗೆ ಸರ್ಕಾರ ಮತ್ತು ನಾಗರಿಕರಿಗೆ ತಿಳಿಸಲು ಹಾಗೂ ಚಹಾ ಉತ್ಪಾದಿಸುವ ದೇಶಗಳು ಎದುರಿಸುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ಚಹಾ ದಿನವನ್ನು ಆಚರಣೆಗೆ ತರಲಾಯಿತು. ಇದಲ್ಲದೇ ಚಹಾ ಉತ್ಪಾದನೆ ಮತ್ತು ಸಂಸ್ಕರಣೆ ತೀವ್ರ ಬಡತನವನ್ನು ಕಡಿಮೆಮಾಡಲು ಮತ್ತು ಮಹಿಳಾ ಸಬಲೀಕರಣಕ್ಕೆ ಕೊಡುಗೆ ನೀಡುವುದು ಈ ದಿನದ ಪ್ರಮುಖ ಉದ್ದೇಶ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 2:30 pm, Sat, 20 May 23