Relationship: ಸಂತೋಷದ ದಾಂಪತ್ಯ ರಹಸ್ಯ ಏನು? ಜೀವನಪೂರ್ತಿ ಸಂಬಂಧ ನಿಭಾಯಿಸುವುದು ಹೇಗೆ?

ಹಲವಾರು ದಶಕಗಳ ನಂತರವೂ ದಂಪತಿಗಳು ಪರಸ್ಪರ ಬದ್ಧರಾಗಿ ಮತ್ತು ಗಾಢವಾಗಿ ಪ್ರೀತಿ ಮಾಡಲು ಯಾವ ಅಂಶ ಕಾರಣ? ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ. ಇಲ್ಲಿದೆ ಮಾಹಿತಿ.

Relationship: ಸಂತೋಷದ ದಾಂಪತ್ಯ ರಹಸ್ಯ ಏನು? ಜೀವನಪೂರ್ತಿ ಸಂಬಂಧ ನಿಭಾಯಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: May 20, 2023 | 3:43 PM

ಮದುವೆ ಎಂಬುದು ಎರಡು ಜೀವಗಳ ಮತ್ತು ಕುಟುಂಬದ ಬೆಸುಗೆ. ಇದರಲ್ಲಿ ಸಾಕಷ್ಟು ಭರವಸೆಗಳೊಂದಿಗೆ ಜೀವನಪರ್ಯಂತ ಜೊತೆಯಾಗಿ ನಡೆಯುವ ಹಾಗೂ ಬಂಧಗಳಲ್ಲಿ ಏರಿಳಿತ, ಸುಖ-ದುಃಖಗಳಲ್ಲಿ ಒಟ್ಟಾಗಿ ನಿಲ್ಲುವ ಭಾಷೆ ನೀಡುವುದಾಗಿದೆ. ಇದೊಂದು ಪವಿತ್ರ ಬಂಧ. ಹುಟ್ಟುವಾಗ ನಮಗೆ ಕೆಲವು ಸಂಬಂಧಗಳು ಬೆಸೆದುಕೊಂಡಿರುತ್ತದೆ. ಆದರೆ ಮದುವೆ ಎನ್ನುವುದು ಎಲ್ಲಿಯೋ ಗಂಡು ಹೆಣ್ಣು ಜೊತೆಯಾಗುವುದು. ನೀವು ನೋಡಿರಬಹುದು ಕೆಲವು ವಿವಾಹ ಜೀವನಪರ್ಯಂತ ಜೊತೆಯಾಗಿ ಜೀವನ ಸಾಗಿಸುತ್ತಾರೆ. ಆದರೆ ಅವುಗಳಲ್ಲಿ ಕೆಲವರು ಇತರರಿಗಿಂತ ಬೇಗನೆ ಮಸುಕಾಗುತ್ತಾರೆ. ಸ್ನೇಹಿತರು ಮತ್ತು ಕುಟುಂಬಗಳಿಂದ ಮುರಿದ ಸಂಬಂಧಗಳು ಮತ್ತು ಪ್ರತ್ಯೇಕತೆಗಳ ಕಥೆಗಳನ್ನು ನಾವು ಆಗಾಗ್ಗೆ ಕೇಳುತ್ತೇವೆ ಆದರೆ ಅದೇ ಸಮಯದಲ್ಲಿ ದೀರ್ಘಕಾಲೀನ ವಿವಾಹಗಳ ಅದ್ಭುತ ಕಥೆಗಳನ್ನೂ ನೀವು ಕೇಳಿರಬಹುದು. ಅನೇಕ ದಂಪತಿಗಳು ಮದುವೆಯಾಗಿ ಅರ್ಧ ಶತಮಾನ ಮತ್ತು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದಾರೆ. ಇಳಿವಯಸ್ಸಿನಲ್ಲಿಯೂ, ಈ ದಂಪತಿಗಳು ಡೇಟಿಂಗ್​ನಲ್ಲಿ, ಮೊದಲ ಬಾರಿಗೆ ಭೇಟಿಯಾದಾಗ ಹೋಲಿಸಿದರೆ ಪರಸ್ಪರ ಇನ್ನೂ ಪ್ರೀತಿ ಕಡಿಮೆಯಾಗಿಲ್ಲ, ಬದಲಾಗಿ ಹೆಚ್ಚಾಗುತ್ತಿದೆ. ದಶಕದಿಂದ ದಶಕದವರೆಗೆ ಪರಸ್ಪರ ಗಾಢವಾಗಿ ಪ್ರೀತಿಸುವ ದಂಪತಿಗಳ ನಡುವೆ ಸಾಮಾನ್ಯವಾದ ಏನೋ ಇದೆ ಎಂದು ತೋರುತ್ತದೆ. ಸ್ನೇಹ, ಸಂವಹನ, ಆಳವಾದ ನಂಬಿಕೆ, ಗೌರವ, ನಂಬಿಗಸ್ತರಾಗಿರುವುದು ಈ ದಂಪತಿಗಳನ್ನು ಪರಸ್ಪರ ಇನ್ನು ಹೆಚ್ಚು ಅಂಟಿಕೊಳ್ಳುವಂತೆ ಮಾಡುವ ರಹಸ್ಯ ಸಂಹಿತೆ ಇದೆ.

ವಿಶ್ವದ ಅತಿ ದೀರ್ಘ ವಿವಾಹಗಳ ರಹಸ್ಯಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಮಾಹಿತಿ

-ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ ಹರ್ಬರ್ಟ್ ಫಿಶರ್ (ಯುಎಸ್ಎ, ಜನನ 1905) ಮತ್ತು ಜೆಲ್ಮೈರಾ ಫಿಶರ್ (ಯುಎಸ್ಎ, 1907) ಅತ್ಯಂತ ದೀರ್ಘಕಾಲದ ವಿವಾಹವನ್ನು ಆನಂದಿಸಿದ್ದಾರೆ ಎಂದು ಹೇಳುತ್ತದೆ. 2011ರ ಫೆಬ್ರವರಿ 27ರಂದು ಫಿಶರ್ ನಿಧನರಾದಾಗ ಈ ಜೋಡಿ ವಿವಾಹವಾಗಿ 86 ವರ್ಷ 290 ದಿನಗಳಾಗಿತ್ತು.

-ಹರ್ಬರ್ಟ್ ಮತ್ತು ಝೆಲ್ಮೈರಾ ಅಮೆರಿಕದ ಉತ್ತರ ಕೆರೊಲಿನಾದಲ್ಲಿ ಉತ್ತಮ ಸ್ನೇಹಿತರಾಗಿ ಒಟ್ಟಿಗೆ ಬೆಳೆದರು ಮತ್ತು ಕ್ರಮವಾಗಿ 18ನೇ ಮತ್ತು 16 ನೇ ವಯಸ್ಸಿನಲ್ಲಿ ವಿವಾಹವಾದರು. ಬಳಿಕ 5 ಮಕ್ಕಳು, 10 ಮೊಮ್ಮಕ್ಕಳು, 9 ಮರಿಮೊಮ್ಮಕ್ಕಳು ಮತ್ತು 1 ಮಿಮ್ಮಕ್ಕಳನ್ನು ಹೊಂದಿದ್ದಾರೆ. “ಸ್ನೇಹಿತ ಜೀವನಪರ್ಯಂತ ನನ್ನ ಜೊತೆಯಲ್ಲಿ ಇದ್ದಾನೆ, ನಮ್ಮ ಮದುವೆ ಜೀವಮಾನವಿಡೀ ನಡೆಯಿತು” ಎಂದು 2010 ರ ಪ್ರೇಮಿಗಳ ದಿನದಂದು ಟ್ವಿಟರ್ ಪ್ರಶ್ನೋತ್ತರದಲ್ಲಿ ಅವರು ಹೇಳಿದ್ದಾರೆ. ಅವರ ಸುದೀರ್ಘ ವಿವಾಹದ ರಹಸ್ಯದ ಬಗ್ಗೆ ಕೇಳಿದಾಗ, ಅವರು ಹೇಳಿದ್ದು ಹೀಗೆ, “ನಮ್ಮ ಮಧ್ಯೆ ಯಾವುದೇ ರಹಸ್ಯವಿಲ್ಲ. ನಾವು ಪರಸ್ಪರ ಜೊತೆಗೂಡಿ ನಮ್ಮ ಕುಟುಂಬಕ್ಕೆ ಏನು ಬೇಕೋ ಅದನ್ನು ಮಾಡಿದ್ದೇವೆ, ವಿಚ್ಛೇದನವು ಎಂದಿಗೂ ಒಂದು ಆಯ್ಕೆಯಾಗಿರಲಿಲ್ಲ ಅಥವಾ ಆಲೋಚನೆಯೂ ಆಗಿರಲಿಲ್ಲ. ದಂಪತಿಗಳು ಪರಸ್ಪರ ಗೌರವಿಸುವುದು, ಬೆಂಬಲಿಸುವುದು ಮತ್ತು ಸಂವಹನ ನಡೆಸುವುದು ಮುಖ್ಯ. ಯಾವಾಗಲೂ ನಂಬಿಗಸ್ತರಾಗಿರಿ, ಪ್ರಾಮಾಣಿಕರಾಗಿರಿ ಮತ್ತು ಸತ್ಯವನ್ನೇ ನುಡಿಯಿರಿ. ನಿಮ್ಮ ಪೂರ್ಣ ಪ್ರೀತಿ ನೀಡುವ ಮೂಲಕ ಒಬ್ಬರನ್ನೊಬ್ಬರು ಅತಿಯಾಗಿ ಪ್ರೀತಿಸಿ” ಎನ್ನುತ್ತಾರೆ.

ಯೂಜೀನ್ ಗ್ಲಾಡು ಮತ್ತು ಡೊಲೊರೆಸ್ ಗ್ಲಾಡು 25 ಮೇ 1940 ರಂದು ರೋಡ್ ಐಲೆಂಡ್​​​ನ ವೂನ್ಸಾಕೆಟ್ನಲ್ಲಿ ವಿವಾಹವಾದರು, 81 ವರ್ಷ 57 ದಿನಗಳ ವಿವಾಹದ ನಂತರ ಜುಲೈ 2021 ರಲ್ಲಿ ಗಿನ್ನಿಸ್ ವಿಶ್ವ ದಾಖಲೆಗೆ ಪ್ರವೇಶ ಗಿಟ್ಟಿಸಿಕೊಂಡರು. ಈ ದಂಪತಿಗಳು ಸಕ್ರಿಯ ಜೀವನಶೈಲಿಯನ್ನು ನಡೆಸಿ, ತಮ್ಮ ಪ್ರಮುಖ ವರ್ಷಗಳನ್ನು ನೃತ್ಯ, ದೋಣಿ ವಿಹಾರ, ಸ್ನೋಮೊಬೈಲಿಂಗ್, ಪಾದಯಾತ್ರೆ ಮುಂತಾದ ಉಲ್ಲಾಸ ಮಯ ಚಟುವಟಿಕೆಗಳೊಂದಿಗೆ ಕಳೆದರು.

ಇದನ್ನೂ ಓದಿ:Relationship: ನಿಮ್ಮ ಸಂಬಂಧದಲ್ಲಿ ಈ ಬದಲಾವಣೆಯಾಗಲು ಕಾರಣವೇನು?

ಮದುವೆಯಾದ ಹಲವಾರು ದಶಕಗಳ ನಂತರವೂ ದಂಪತಿಗಳು ಪರಸ್ಪರ ಬದ್ಧರಾಗಿರಲು ಮತ್ತು ಗಾಢವಾಗಿ ಪ್ರೀತಿ ಮಾಡಲು ಕಾರಣವೇನು? ಮತ್ತು ನಿಮ್ಮ ಮದುವೆ ದೀರ್ಘಕಾಲ ಉಳಿಯುವಂತೆ ಮಾಡಲು ಏನು ಮಾಡಬೇಕು? ಇಲ್ಲಿವೆ ಸಲಹೆಗಳು.

1. ನಂಬಿಕೆ, ಪ್ರಾಮಾಣಿಕತೆ ಮತ್ತು ಪರಸ್ಪರ ಗೌರವ ಈ ಮೂರು ಅಂಶಗಳು ಯಾವುದೇ ಆರೋಗ್ಯಕರ ಸಂಬಂಧದ ಅಡಿಪಾಯವನ್ನು ರೂಪಿಸುತ್ತವೆ. ಪರಸ್ಪರ ಸತ್ಯ, ನಿಷ್ಠೆಯಿಂದಿರಬೇಕು, ನಿಮ್ಮ ಭಾವನೆ ಅಥವಾ ಉದ್ದೇಶಗಳನ್ನು ಎಂದಿಗೂ ಮರೆಯಬಾರದು. ಪರಸ್ಪರರ ಅಭಿಪ್ರಾಯ ಮತ್ತು ನಿರ್ಧಾರಗಳನ್ನು ಗೌರವಿಸಿ. ನಿಮ್ಮ ಸಂಗಾತಿಗೆ ನಿಮ್ಮನಂತೆಯೇ ಅತ್ಯಂತ ಮಹತ್ವದ ಆಸಕ್ತಿಗಳಿವೆ ಎಂಬುದನ್ನು ಮರೆಯಬೇಡಿ.

2. ಪ್ರಣಯವನ್ನು ಎಂದಿಗೂ ಜೀವಂತವಾಗಿರಿಸಿಕೊಳ್ಳಿ. ಕಾಲಾನಂತರದಲ್ಲಿ, ನಿಮ್ಮ ಮುಂದಿನ ದಿನಚರಿಯಲ್ಲಿ ಡೇಟಿಂಗ್ ಮಾಡಲು ಕೆಲವು ರಾತ್ರಿಗಳನ್ನು ಮೀಸಲಿಡಿ. ಸಣ್ಣ ಸಣ್ಣ ಸಂತೋಷಗಳನ್ನು ಒಟ್ಟಿಗೆ ಅನುಭವಿಸಿ. ಒಟ್ಟಿಗೆ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಿ. ಅಥವಾ ಉದ್ಯಾನವನದಲ್ಲಿ ಸರಳ ಪಿಕ್ನಿಕ್ ಅಥವಾ ಒಂದು ಸಣ್ಣ ಡ್ರೈವ್ ಸಹ ನಿಮ್ಮ ಖುಷಿಯನ್ನು ಮರಳಿ ತರಬಹುದು. ಹಾಗಾಗಿ ನಿಮ್ಮ ಸಂಗಾತಿಗೆ ಇಷ್ಟವಾಗುವ ಹಾಗೇ ಏನಾದರೂ ಚಟುವಟಿಕೆ ಆಯೋಜಿಸಿ.

3. ಸಂಘರ್ಷಗಳನ್ನು ಯಾವುದೇ ಸಂದರ್ಭದಲ್ಲಾದರೂ ಪರಿಹರಿಸಿಕೊಳ್ಳಿ. ಯಾವ ಸಂಬಂಧದಲ್ಲಾದರೂ ಭಿನ್ನಾಭಿಪ್ರಾಯಗಳು ಮತ್ತು ವಿವಾದ ಸಾಮಾನ್ಯ. ಆದರೆ ನೀವು ಅವುಗಳನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದು ಫಲಿತಾಂಶವನ್ನು ನಿರ್ಧರಿಸುತ್ತದೆ. ಒಂದು ಹೆಜ್ಜೆ ಹಿಂದೆ ಹೋಗಿ, ಪರಸ್ಪರರ ನಿಮಗೆ ಏನು ಬೇಕುಎಂಬುದನ್ನು ನಿರ್ಧರಿಸಿ. ದೂಷಿಸುವುದು ಅಥವಾ ನೋಯಿಸುವ ರೀತಿಯಲ್ಲಿ ನಿಮ್ಮ ಮಾತುಗಳನ್ನು ಇರದಿರಲಿ. ಅದನ್ನು ಬಳಸುವುದನ್ನು ತಪ್ಪಿಸಿ.

4. ನೀವಿಬ್ಬರು ಹಂಚಿಕೊಂಡ ಗುರಿಗಳನ್ನು ಮತ್ತು ಅವುಗಳ ಕಡೆಗೆ ಒಟ್ಟಾಗಿ ಕೆಲಸ ಮಾಡುವುದರಿಂದ ನಿಮ್ಮಿಬ್ಬರ ನಡುವಿನ ಬಂಧ ಬಲಪಡಿಸುತ್ತದೆ. ಮನೆ ಖರೀದಿಸುವುದು, ಕುಟುಂಬ ನಿಭಾಯಿಸುವುದು ಅಥವಾ ಸಾಮಾನ್ಯ ಆಸಕ್ತಿಯನ್ನು ಅನುಸರಿಸುವುದು, ನೀವು ಪರಸ್ಪರರ ಕನಸುಗಳನ್ನು ಬೆಂಬಲಿಸುತ್ತೀರಿ ಎಂದರೆ ಅದಕ್ಕಿಂತ ಬೇರೆ ಖುಷಿಯಿಲ್ಲ.

5. ಸಂಬಂಧದಲ್ಲಿ ಸಂವಹನ ಅತ್ಯಗತ್ಯ. ಯಾವುದೇ ಸಂಬಂಧಕ್ಕೆ ಪರಿಣಾಮಕಾರಿ ಸಂವಹನ ನಿರ್ಣಾಯಕದ್ದಾಗಿದೆ. ನಿಮ್ಮ ಸಂವಹನದಲ್ಲಿ ಮುಕ್ತ ಮತ್ತು ಪ್ರಾಮಾಣಿಕರಾಗಿರಿ, ನಿಮ್ಮ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿ. ಸಂಗಾತಿಯ ಮಾತನ್ನು ಆಲಿಸಿ. ನಿರ್ಧಾರ ಯಾವುದಿರಲಿ ಕುಳಿತು ಮಾತನಾಡಿ. ಧ್ವನಿ ಎತ್ತರಿಸಿ ಮಾತನಾಡುವುದನ್ನು ಕಡಿಮೆ ಮಾಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: