Summer Skin Care: ಬೇಸಿಗೆಯಲ್ಲಿ ಚರ್ಮದ ಕಾಂತಿ ಕಾಪಾಡಲು ಸಹಕಾರಿ ಈ ಆಹಾರಗಳು

ಬೇಸಿಗೆಯಲ್ಲಿ ನಿಮ್ಮ ಚರ್ಮವನ್ನು ರಕ್ಷಿಸಲು ನೈಸರ್ಗಿಕ ಮಾರ್ಗವನ್ನು ಹುಡುಕುತ್ತಿರುವಿರಾ? ಈ ಬೇಸಿಗೆಯಲ್ಲಿ ಮನೆಯಲ್ಲಿಯೇ ಲಭ್ಯವಿರುವ ಕೆಲವು ಆಹಾರಗಳನ್ನು ಸೇವಿಸುವ ಮೂಲಕ ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳಬಹುದು.

Summer Skin Care: ಬೇಸಿಗೆಯಲ್ಲಿ ಚರ್ಮದ ಕಾಂತಿ ಕಾಪಾಡಲು ಸಹಕಾರಿ ಈ ಆಹಾರಗಳು
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: May 20, 2023 | 5:35 PM

ಬೇಸಿಗೆಯಲ್ಲಿ ಚರ್ಮವನ್ನು ಆರೈಕೆ ಮಾಡುವುದು ತುಂಬಾ ಮುಖ್ಯ. ಸೂರ್ಯನ ನೇರಳಾತೀತ ಕಿರಣಗಳು ಕಪ್ಪುಕಲೆಗಳು ವಯಸ್ಸಾದ ಲಕ್ಷಣಗಳೊಂದಿಗೆ ಚರ್ಮವನ್ನು ಹಾನಿಗೊಳಿಸುತ್ತದೆ. ಬೇಸಿಗೆಯಲ್ಲಿ ಚರ್ಮದ ದುರಸ್ತಿಗಾಗಿ ಅನೇಕ ಪ್ರತ್ಯಕ್ಷವಾದ ಪರಿಹಾರಗಳು ಇದ್ದರೂ, ನೈಸರ್ಗಿಕ ಚಿಕಿತ್ಸೆಗಳು ಅದಕ್ಕಿಂತಲೂ ಉತ್ತಮವಾಗಿರುತ್ತದೆ. ನೈಸರ್ಗಿಕ ಚಿಕಿತ್ಸೆಗಳು ಎಂದರೆ, ಫೇಸ್ ಪ್ಯಾಕ್, ಇತ್ಯಾದಿಗಳ ಬಗ್ಗೆ ನಾವು ಹೇಳುತ್ತಿಲ್ಲ, ಬದಲಾಗಿ ನಾವು ಸೇವಿಸಬೇಕಾದ ಆಹಾರಗಳ ಬಗ್ಗೆ ಹೇಳುತ್ತಿದ್ದೇವೆ. ಏಕೆಂದರೆ ಸೌಂದರ್ಯವು ಒಳಗಿನಿಂದ ಬರುತ್ತದೆ. ನೀವು ತಿನ್ನುವ ಆಹಾರವು ನಿಮ್ಮ ಚರ್ಮದ ಮೇಲೆ ಪ್ರತಿಫಲಿಸುತ್ತದೆ. ಆದ್ದರಿಂದ ಉತ್ತಮವಾದ ಆಹಾರಗಳನ್ನು ಸೇವಿಸುವ ಮೂಲಕ ಚರ್ಮವನ್ನು ಆರೋಗ್ಯಕರವಾಗಿಡಬಹುದು.

ಬೇಸಿಗೆಯಲ್ಲಿ ಚರ್ಮವನ್ನು ಹೇಗೆ ರಕ್ಷಿಸಿಕೊಳ್ಳಬಹುದು?

ಸೂರ್ಯನ ಹಾನಿಕಾರಕ ನೇರಳಾತೀತ (UV) ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸುವುದು ಬಹಳ ಮುಖ್ಯ. ಅತಿಯಾಗಿ ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಸನ್ ಬರ್ನ್, ಅಕಾಲಿಕ ವಯಸ್ಸಾಗುವಿಕೆ ಮತ್ತು ಇತರ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಹೆಚ್ಚಿನ ಸನ್ ಪ್ರೊಟೆಕ್ಷನ್ ಫ್ಯಾಕ್ಟರ್ (ಎಸ್.ಪಿ.ಎಫ್) ಹೊಂದಿರುವ ಸನ್ ಸ್ಕ್ರೀನ್ ನ್ನು ಅನ್ವಯಿಸುವುದು ಅತ್ಯಗತ್ಯ. ನಿಮ್ಮ ಚರ್ಮದ ಆರೋಗ್ಯವನ್ನು ಬೆಂಬಲಿಸಲು ಮತ್ತೊಂದು ಪರಿಣಾಮಕಾರಿ ಮಾರ್ಗವೆಂದರೆ ಉತ್ತಮ ಆಹಾರವನ್ನು ಸೇವಿಸುವುದು. ಸರಿಯಾದ ಪೋಷಣೆಯು ಚರ್ಮದ ಚೈತನ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಡಯೆಟಿಷಿಯನ್ ಗಗನ್ ಸಿಧು ಅವರು ಬೇಸಿಗೆಯಲ್ಲಿ ಅಡುಗೆ ಮನೆಯಲ್ಲಿ ಸುಲಭವಾಗಿ ಸಂಗ್ರಹಿಸಬಹುದಾದ ಕೆಲವು ಸಾಮಾನ್ಯ ಆಹಾರ ಆಯ್ಕೆಗಳ ಬಗ್ಗೆ ತಿಳಿಸಿದ್ದಾರೆ. ಬೇಸಿಗೆಯ ಋತುವಿನ ಉದ್ದಕ್ಕೂ ಹೊಳೆಯುವ ಚರ್ಮವನ್ನು ಪಡೆಯಲು ನಿಮಗೆ ಸಹಾಯಕವಾಗುವ ಆಹಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಬೇಸಿಗೆಯಲ್ಲಿ ಹೊಳೆಯುವ ಚರ್ಮಕ್ಕಾಗಿ ಅಡುಗೆ ಮನೆಯಲ್ಲಿ ಇಡಬೇಕಾದ 6 ಆಹಾರಗಳು:

ಪುದಿನಾ ಚಟ್ನಿ: ಪುದಿನಾ ನೈಸರ್ಗಿಕ ಶೀತಕವಾಗಿದ್ದು, ಅದು ನಮ್ಮ ದೇಹವನ್ನು ಅತಿಯಾದ ಶಾಖದಿಂದ ರಕ್ಷಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಗಮವಾಗಿ ನಡೆಸುತ್ತದೆ. ಮತ್ತು ಚರ್ಮವನ್ನು ಮೊಡವೆಗಳಿಂದ ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ. ಆದ್ದರಿಂದ ಪುದೀನಾ ಚಟ್ನಿಯನ್ನು ತಯಾರಿಸಬಹುದು ಮತ್ತು ರೆಫ್ರಿಜರೆಟರ್ ನಲ್ಲಿ ಗಾಜಿನ ಭರಣಿಯಲ್ಲಿ ಸಂಗ್ರಹಿಸಿಡಬಹುದು ಮತ್ತು 10 ದಿನಗಳವರೆಗೆ ಇದು ತಾಜಾವಾಗಿರುತ್ತದೆ. ಇದನ್ನು ಊಟದ ಜೊತೆಗೆ ಸೇವನೆ ಮಾಡಬಹುದು. ಇದರ ಮೂಲಕ ಬೇಸಿಗೆಯಲ್ಲಿ ಚರ್ಮವನ್ನು ಸೂರ್ಯನ ಹಾನಿಗಳಿಂದ ಸಂರಕ್ಷಿಸಬಹುದು.

ಹಸಿ ಮೆಣಸಿನಕಾಯಿ: ಮೆಣಸಿನಕಾಯಿ ಎಂದಾಕ್ಷಣ ನೀವು ಒಮ್ಮೆ ಆಶ್ಚರ್ಯಗೊಳ್ಳಬಹುದು. ಆದರೆ ಹಸಿ ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿಯಂತೆ ದೇಹದಲ್ಲಿ ಯಾವುದೇ ಶಾಖವನ್ನು ಉತ್ಪತ್ತಿ ಮಾಡುವುದಿಲ್ಲ. ವಾಸ್ತವವಾಗಿ ಹಸಿಮೆಣಸಿನಕಾಯಿ ನಮ್ಮ ದೇಹವನ್ನು ಒಳಗಿನಿಂದ ತಂಪಾಗಿರಿಸುತ್ತದೆ. ಆದ್ದರಿಂದ ನಾವು ತಯಾರಿಸುವ ಆಹಾರದಲ್ಲಿ ಹಸಿಮೆಣಸಿನಕಾಯಿಯನ್ನು ಸೇರಿಸುವ ಮೂಲಕ ಚರ್ಮದ ರಕ್ಷಣೆಯನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ:Summer Skin Care: ಬೇಸಿಗೆಯಲ್ಲಿ ನಿಮ್ಮ ತ್ವಚೆ ಕಾಂತಿಯುತವಾಗಿರಲು ಹೀಗೆ ಮಾಡಿ

ನೆಲ್ಲಿಕಾಯಿ ಮುರಬ್ಬಾ: ನೆಲ್ಲಿಕಾಯಿ ರುಚಿಯಲ್ಲಿ ಸಾಕಷ್ಟು ಕಹಿಯಾಗಿದ್ದರೂ, ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದೇ ಕಾರಣದಿಂದ ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುವಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಇದರ ಹೆಚ್ಚಿನ ವಿಟಮಿನ್ ಸಿ ಅಂಶವು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಬೇಸಿಗೆ ಸಂಬಂಧಿತ ಚರ್ಮದ ಸಮಸ್ಯೆಗಳನ್ನು ತಡೆಯುತ್ತದೆ. ನೆಲ್ಲಿಕಾಯಿಯನ್ನು ತಿನ್ನಲು ಉತ್ತಮ ವಿಧಾನವೆಂದರೆ ಅರದ ಮುರಬ್ಬಾ ಮಾಡುವುದು. ಈ ಮುರಬ್ಬಾ ಸಿಹಿಯಾಗಿರುವುದರಿಂದ ತಿನ್ನಲು ರುಚಿಕರವಾಗಿರುತ್ತದೆ.

ಗೊಂದು : ಗೊಂದು ಎಂಬುದು ನೈಸರ್ಗಿಕ ಗಮ್ ಆಗಿದ್ದು, ಸಿಹಿತಿಂಡಿಗಳು, ಮಯೋನಿಸ್ ಮತ್ತಯ ಸಾಸ್ ಗಳಂತಹ ಆಹಾರವನ್ನು ದಪ್ಪಗಾಗಿಸಲು ಬಳಸಲಾಗುತ್ತದೆ. ಜೊತೆಗೆ ಇದು ದೇಹದ ಉಷ್ಣಾಂಶವನ್ನು ಕೂಡಾ ಕಡಿಮೆ ಮಾಡಲು ಸಹಕಾರಿಯಾಗಿದೆ. ಬೇಸಿಗೆಯ ಶಾಖದಿಂದ ತ್ವಚೆಯನ್ನು ಸಂರಕ್ಷಿಸಲು ಎರಡು ಚಮಚ ಗೊಂದನ್ನು ನೀರಿನಲ್ಲಿ ನೆನೆಸಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕೆಂದು ಗಗನ್ ಸಿಧು ಸಲಹೆ ನೀಡುತ್ತಾರೆ.

ಕಲ್ಲಂಗಡಿ: ಕಲ್ಲಂಗಡಿ ಬೇಸಿಗೆಯ ನೆಚ್ಚಿನ ಹಣ್ಣಾಗಿದೆ. ಇದು ತ್ವಚೆಯನ್ನು ಹೈಡ್ರೇಟ್ ಮಾಡಲು ಅತ್ಯುತ್ತಮವಾಗಿದೆ. ಇದರಲ್ಲಿ ನೀರಿನಾಂಶ ಹೆಚ್ಚಿದ್ದು, ನಮ್ಮ ತ್ವಚೆಯನ್ನು ಮೃದುವಾಗಿಡಲು ತೇವಾಂಶವನ್ನು ಒದಗಿಸುತ್ತದೆ. ಬೇಸಿಗೆಯಲ್ಲಿ ಹೊಳೆಯುವ ಚರ್ಮವನ್ನು ಪಡೆಯಲು ನೀವು ಕಲ್ಲಂಗಡಿ ಬೀಜಗಳನ್ನು ಸಹಾ ಸೇವಿಸಬಹುದು.

ಗುಲ್ಕಂದ್ ಹಾಲು: ಬೇಸಿಗೆಯಲ್ಲಿ ನಿಮ್ಮ ಕರುಳು, ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಡಲು ಗುಲ್ಕಂದ್ ಉತ್ತಮವಾಗಿದೆ. ಹಾಲಿಗೆ ಎರಡು ಚಮಚ ಗುಲ್ಕಂದ್ ಸೇರಿಸಿ ಕುಡಿಯುವ ಮೂಲಕ ಈ ಬೇಸಿಗೆಯಲ್ಲಿ ಶಾಖದಿಂದ ತ್ವಚೆಯನ್ನು ಸಂರಕ್ಷಿಸಬಹುದು ಎಂದು ಗಗನ್ ಸಿಧು ಸಲಹೆ ನೀಡುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: