International Translation Day 2021: ಅನುವಾದ ದಿನದ ಥೀಮ್, ಇತಿಹಾಸ ಮತ್ತು ಮಹತ್ವ ತಿಳಿಯಿರಿ
ಅಂತರಾಷ್ಟ್ರೀಯ ಅನುವಾದ ದಿನ: ಭಾಷೆಯ ಬಗೆಗಿನ ತಿಳಿವಳಿಕೆಯನ್ನು ವೃದ್ಧಿಸಲು, ಸಂವಹನವನ್ನು ಸುಧಾರಿಸಲು, ರಾಷ್ಟ್ರಗಳ ನಡುವೆ ಸಹಕಾರವನ್ನು ವೃದ್ಧಿಸಲು ಜತೆ ಜತೆಗೆ ವಿಶ್ವದಾದ್ಯಂತ ಶಾಂತಿ ಮತ್ತು ಭದ್ರತೆಗೆ ಕೊಡುಗೆ ನೀಡುವ ಭಾಷಾ ತಜ್ಞರ ಕೆಲಸವನ್ನು ಗೌರವಿಸಲು ಅಂತರಾಷ್ಟ್ರೀಯ ಅನುವಾದ ದಿನವು ಒಂದು ಅವಕಾಶ ನೀಡುತ್ತದೆ.
ಅಂತರರಾಷ್ಟ್ರೀಯ ಅನುವಾದ ದಿನವನ್ನು ಪ್ರತೀ ವರ್ಷ ಸೆಪ್ಟೆಂಬರ್ 30ರಂದ ಆಚರಿಸಲಾಗುತ್ತದೆ. ಭಾಷಾಂತರ ಉದ್ಯಮ ಮತ್ತು ನಮ್ಮ ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವ ಭಾಷೆಗಳ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಈ ದಿನ ಹೊಂದಿದೆ. ಇದು ಭಾಷಾ ತಜ್ಞರ (ಅನುವಾದಕರ) ಪ್ರಯತ್ನಗಳನ್ನು ಗೌರವಿಸುವ ಉದ್ದೇಶವನ್ನು ಹೊಂದಿದೆ.
ಭಾಷೆಯ ಬಗೆಗಿನ ತಿಳಿವಳಿಕೆಯನ್ನು ವೃದ್ಧಿಸಲು, ಸಂವಹನವನ್ನು ಸುಧಾರಿಸಲು, ರಾಷ್ಟ್ರಗಳ ನಡುವೆ ಸಹಕಾರವನ್ನು ವೃದ್ಧಿಸಲು ಜತೆ ಜತೆಗೆ ವಿಶ್ವದಾದ್ಯಂತ ಶಾಂತಿ ಮತ್ತು ಭದ್ರತೆಗೆ ಕೊಡುಗೆ ನೀಡುವ ಭಾಷಾ ತಜ್ಞರ ಕೆಲಸವನ್ನು ಗೌರವಿಸಲು ಅಂತರಾಷ್ಟ್ರೀಯ ಅನುವಾದ ದಿನವು ಒಂದು ಅವಕಾಶ ನೀಡುತ್ತದೆ ಎಂದು ಯುಎನ್ (ಯುನೈಟೆಡ್ ನೇಷನ್) ಹೇಳಿದೆ. ಈ ವರ್ಷದ ಅನುವಾದ ದಿನದ ಥೀಮ್ ‘ಅನುವಾದದಲ್ಲಿ ಯನೈಟೆಡ್’ ಆಗಿದೆ. ಭಾಷಾಂತರಕಾರರು ಸಾಹಿತ್ಯ, ವಿಜ್ಞಾನವನ್ನು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾಸಿಸಲು ಸಹಾಯ ಮಾಡುತ್ತಾರೆ. ಇದು ಉತ್ತಮ ಪ್ರಗತಿಗೆ ಸಹಾಯವಾಗುತ್ತದೆ.
ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಟ್ರಾನ್ಸ್ಲೇಟರ್ (ಎಫ್ಐಟಿ) ಈ ದಿನವನ್ನು ಮೊದಲಿಗೆ 1953ರಂದು ಆರಂಭಿಸಿತು. 2017 ಮೇ 24ರಂದು ಜನರಲ್ ಅಸೆಂಬ್ಲಿ 71/288ರ ನಿರ್ಣಯವನ್ನು ಅಂಗೀಕರಿಸಿತು. ರಾಷ್ಟ್ರಗಳ ನಡುವೆ ಸಂಬಂಧ ಮತ್ತು ಭಾಷಾ ತಜ್ಞರ ಪ್ರಾಮುಖ್ಯತೆ, ಶಾಂತಿ, ತಿಳುವಳಿಕೆ ಮತ್ತು ಪ್ರಗತಿಯನ್ನು ಪ್ರೋತ್ಸಾಹಿಸಲು ಸೆಪ್ಟೆಂಬರ್ 30ರಂದು ಅಂತರರಾಷ್ಟ್ರೀಯ ಅನುವಾದ ದಿನವನ್ನು ವಿಶ್ವ ಸಂಸ್ಥೆ ಘೋಷಿಸಿತು.
ಯುಎನ್ ವೆಬ್ಸೈಟ್ ಪ್ರಕಾರ, ಸೇಂಟ್, ಜೆರೋಮ್ ದೇಶದ ಈಶಾನ್ಯ ಪ್ರದೇಶದ ಇಟಾಲಿಯನ್ ಪಾದ್ರಿಯಾಗಿದ್ದು, ಹೊಸ ಒಡಂಬಡಿಕೆಯನ್ನು ಗ್ರೀಕ್ ಹಸ್ತಪ್ರತಿಗಳಿಂದ ಲ್ಯಾಟಿನ್ ಭಾಷೆಗೆ ಭಾಷಾಂತರಿಸುವ ಪ್ರಯತ್ನಕ್ಕೆ ಹೆಸರಾಗಿದ್ದರು. ಅವರ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ:
International Friendship Day 2021: ಭಾರತದಲ್ಲಿ ಸ್ನೇಹಿತರ ದಿನದ ಆಚರಣೆ ಯಾವಾಗ ಮತ್ತು ಈ ದಿನದ ಮಹತ್ವ ತಿಳಿಯಿರಿ
Published On - 11:09 am, Thu, 30 September 21