International Friendship Day 2021: ಭಾರತದಲ್ಲಿ ಸ್ನೇಹಿತರ ದಿನದ ಆಚರಣೆ ಯಾವಾಗ ಮತ್ತು ಈ ದಿನದ ಮಹತ್ವ ತಿಳಿಯಿರಿ
ಅಂತರಾಷ್ಟ್ರೀಯ ಸ್ನೇಹಿತರ ದಿನ: ಸ್ನೇಹ ಎಂಬ ಬಾಂಧವ್ಯ ಶುದ್ಧ ಸ್ವರೂಪದ್ದಾಗಿದ್ದು ರಕ್ತ ಸಂಬಂಧವಲ್ಲವಾದರೂ ಪ್ರೀತಿಯಿಂದ ಕೂಡಿದೆ. ಯಾವುದೇ ಜಾತಿ, ಬಣ್ಣ, ಜನಾಂಗ, ಸಂಸ್ಕೃತಿಯ ಬೇಧವಿಲ್ಲದೇ ಸ್ನೇಹದ ಬಲವಾದ ಬಂಧ ಮತ್ತು ಪ್ರೀತಿಯ ಪ್ರಾಮುಖ್ಯತೆಯನ್ನು ಸಾರಲು ಈ ದಿನವನ್ನು ಮೀಸಲಿಡಲಾಗಿದೆ.
ಪ್ರತೀ ವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರ ಭಾರತದಲ್ಲಿ ಅಂತರಾಷ್ಟ್ರೀಯ ಸ್ನೇಹಿತರ ದಿನವನ್ನು(International Friendship Day) ಆಚರಿಸಲಾಗುತ್ತದೆ. ಈ ವರ್ಷದ ಆಗಸ್ಟ್ ತಿಂಗಲಿನಲ್ಲಿ ಮೊದಲ ಭಾನುವಾರ 1ನೇ ತಾರೀಕಿನಂದು ಬಂದಿದೆ. ಸ್ನೇಹ ಎಂಬ ಒಳ್ಳೆಯ ಬಾಂಧವ್ಯದ ಮಹತ್ವವನ್ನು ಸಾರಲು ಈ ದಿನವನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಸ್ನೇಹ ಎಂಬ ಬಾಂಧವ್ಯ ಶುದ್ಧ ಸ್ವರೂಪದ್ದಾಗಿದ್ದು ರಕ್ತ ಸಂಬಂಧವಲ್ಲವಾದರೂ ಪ್ರೀತಿಯಿಂದ ಕೂಡಿದೆ. ಯಾವುದೇ ಜಾತಿ, ಬಣ್ಣ, ಜನಾಂಗ, ಸಂಸ್ಕೃತಿಯ ಬೇಧವಿಲ್ಲದೇ ಸ್ನೇಹದ ಬಲವಾದ ಬಂಧ ಮತ್ತು ಪ್ರೀತಿಯ ಪ್ರಾಮುಖ್ಯತೆಯನ್ನು ಸಾರಲು ಈ ದಿನವನ್ನು ಮೀಸಲಿಡಲಾಗಿದೆ.
ಭಾರತದಲ್ಲಿ ಫ್ರೆಂಡ್ಶಿಪ್ ಬ್ಯಾಂಡ್ ಕಟ್ಟುವ ಮೂಲಕ ಸ್ನೇಹಿತರ ನಡುವಿನ ಗಟ್ಟಿಯಾದ ಬಂಧವನ್ನು ಬೆಸೆಯಲಾಗುತ್ತದೆ. ಸ್ನೇಹಿತರು ಒಳ್ಳೆಯ ಉಡುಗೊರೆಯನ್ನು ನೀಡುವ ಮೂಲಕ ಒಬ್ಬರಿಗೊಬ್ಬರು ಶುಭಾಶಯಗಳನ್ನು ಹೇಳಿಕೊಳ್ಳುತ್ತಾರೆ. ಎಂದೆಂದೂ ನಮ್ಮ ಸ್ನೇಹದ ಬಂಧ ಹೀಗೆ ಇರಲಿ ಎಂಬ ಭರವಸೆಯೊಂದಿಗೆ ಈ ದಿನವನ್ನು ಸಂತೋಷದಿಂದ ಆಚರಿಸಲಾಗುತ್ತದೆ.
2011 ಏಪ್ರಿಲ್ 27ರಂದು ವಿಶ್ವ ಸಂಸ್ಥೆ ಜುಲೈ 30ರಂದು ಅಂತಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಘೋಷಣೆ ಮಾಡಿತು. ಆದರೆ ಭಾರತದಲ್ಲಿ ಆಗಸ್ಟ್ ಮೊದಲನೇ ಭಾನುವಾರ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಬಾಲ್ಯದಿಂದಲೂ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ, ಕಷ್ಟಕಾಲದಲ್ಲಿ ಬೆನ್ನಿಗೆ ನಿಂತು, ಮೆಟ್ಟಿಲೇರುವಾಗ ಕೈಹಿಡಿದು, ಆಟವಾಡುತ್ತಾ, ಪ್ರತೀ ಖುಷಿಯನ್ನು ಹಂಚಿಕೊಳ್ಳುವ ಒಬ್ಬ ಸ್ನೇಹಿತನಿದ್ದರೆ ಸಾಕು ಜಗತ್ತಿನಲ್ಲಿ ಏನನ್ನು ಬೇಕಾದರೂ ಗೆಲ್ಲಬಹುದು.
ಜಗತ್ತಿನಲ್ಲಿ ವಿವಿಧ ದೇಶಗಳಲ್ಲಿ ಬೇರೆ ಬೇರೆ ದಿನದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಭಾರತ ಮತ್ತು ಮಲೇಶಿಯಾದಲ್ಲಿ ಆಗಸ್ಟ್ ಮೊದಲ ಭಾನುವಾರ ಸ್ನೇಹ ದಿನವನ್ನು ಆಚರಿಸಿದರೆ ಓಬರ್ಲಿನ್, ಓಹಿಯೋದಲ್ಲಿ ಪ್ರತೀ ವರ್ಷ ಏಪ್ರಿಲ್ 8ನೇ ತಾರೀಕಿನಂದು ಈ ದಿನವನ್ನು ಆಚರಿಸಲಾಗುತ್ತದೆ. ಅರ್ಜೆಂಟೀನಾದಲ್ಲಿ ಜುಲೈ 20, ಬ್ರೆಜಿಲ್ ಜುಲೈ 20, ಮೆಕ್ಸಿಕೋದಲ್ಲಿ ಜುಲೈ 14 ಹೀಗೆ ಬೇರೆ ಬೇರೆ ದಿನದಂದು ಆಚರಿಸಲಾಗುತ್ತದೆ. ಈ ವರ್ಷದ ಸ್ನೇಹಿತರಿಗೆ ನೀವು ಕೊಡುವ ಉಡುಗೊರೆ ಭರ್ಜರಿಯಾಗಿರಲಿ, ಸದಾ ನೆನಪಿನಲ್ಲಿರುವಂತೆ ನಿಮ್ಮ ಸ್ನೇಹವು ಎಂದೂ ಗಟ್ಟಿಯಾಗಿರಲಿ.
ಇದನ್ನೂ ಓದಿ:
National Best Friends Day 2021: ನೋವಲ್ಲೂ ಜತೆಗಿರುವ ಉತ್ತಮ ಸ್ನೇಹಿತರನ್ನು ನೆನೆಯಿರಿ