National Best Friends Day 2021: ನೋವಲ್ಲೂ ಜತೆಗಿರುವ ಉತ್ತಮ ಸ್ನೇಹಿತರನ್ನು ನೆನೆಯಿರಿ

ನಾವು ಖುಷಿಯಲ್ಲಿದ್ದಾಗ ಎಲ್ಲರೂ ನಮ್ಮ ಜತೆ ಇರುತ್ತಾರೆ. ಆದರೆ ನಾವು ನೋವಿನಲ್ಲಿರುವಾಗಲೂ ನಮ್ಮ ಜತೆ ಇರುವವರು ನಿಜವಾದ ಸ್ನೇಹಿತರಾಗಿರುತ್ತಾರೆ. ಅಂತವರ ಜತೆ ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು ಕಳೆಯಬೇಕು.

National Best Friends Day 2021: ನೋವಲ್ಲೂ ಜತೆಗಿರುವ ಉತ್ತಮ ಸ್ನೇಹಿತರನ್ನು ನೆನೆಯಿರಿ
ಪ್ರಾತಿನಿಧಿಕ ಚಿತ್ರ
Follow us
preethi shettigar
| Updated By: shruti hegde

Updated on: Jun 08, 2021 | 10:20 AM

ಸ್ನೇಹಿತನಿಲ್ಲದ ಜೀವನ ಬಾನಿಲ್ಲದ ಚಂದಿರನಿದ್ದಂತೆ ಎಂಬ ಮಾತಿದೆ. ಅದು ನೂರಕ್ಕೆ ನೂರು ನಿಜ. ಬಾಲ್ಯದಿಂದ ಹಿಡಿದು ಮುಪ್ಪಿನವರೆಗೂ ಒಬ್ಬ ಸ್ನೇಹಿತ ಬೇಕು. ಗೆಳೆಯ-ಗೆಳತಿ ಎನ್ನುವ ಸಂಬಂಧಗಳ ಅರಿವಿರದವರು ಬಹುಷಃ ಜೀವನದಲ್ಲಿ ಅದೆಷ್ಟೋ ಸುಂದರ ಸನ್ನಿವೇಶಗಳನ್ನು ಕಳೆದುಕೊಂಡಿರುತ್ತಾರೆ. ಕ್ಲಾಸ್ ಬಂಕ್ ಮಾಡಿ ಸಿನಿಮಾ ನೋಡುವುದರಿಂದ ಹಿಡಿದು, ಪರೀಕ್ಷೆ ಹಿಂದಿನ ದಿನ ನೋಡ್ಸ್ ಕೊಡುವ, ಪ್ರೀತಿಯ ನಿವೇದನೆ ಮಾಡಲು ಬೆನ್ನಿಗೆ ಕಾವಾಲಾಗಿ ನಿಲ್ಲುವ, ತುಂಟಾಟ ಮಾಡಿ ಸಿಕ್ಕಿ ಹಾಕಿಕೊಂಡಾಗ ನೆನಪಾಗುವ ಗೆಳೆಯರು ನಿಜಕ್ಕೂ ಸದಾ ಜತೆಗಿರಬೇಕು. ಜೀವನದಲ್ಲಿನ ಅದೆಷ್ಟೋ ಘಟನೆಗಳನ್ನು ಪೋಷಕರಲ್ಲಿ ಹೇಳಲು ಮುಜುಗರ ಭಾವ ಕಾಡುತ್ತದೆ. ಆದರೆ ಸ್ನೇಹಿತರಲ್ಲಿ ಯಾವ ಅಡ್ಡಿ, ಆತಂಕ ಇರುವುದಿಲ್ಲ. ಇಂತಹ ಉತ್ತಮ ಸ್ನೇಹಿತರನ್ನು ನೆನೆಸಿಕೊಳ್ಳಲು ಪ್ರತಿ ವರ್ಷ ಜೂನ್ 8 ರಂದು ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ.

ಪ್ರತಿಯೊಬ್ಬರೂ ಹೊಂದಿರುವ ಉತ್ತಮ ಸ್ನೇಹಿತರನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಪ್ರತಿದಿನ ಅವರನ್ನು ಭೇಟಿಯಾಗಲು ಸಾಧ್ಯವಾಗದಿದ್ದರೂ ಸಹ, ನಿಮ್ಮ ಮನಸ್ಸಿಗೆ ಹತ್ತಿರದ ಗೆಳೆಯರು ಅಗತ್ಯವಿರುವಾಗ ಖಂಡಿತಾ ಜತೆಗಿರುತ್ತಾರೆ. ಕೊರೊನಾ ಸೋಂಕು ಹೆಚ್ಚಿರುವ ಈ ಕಾಲಘಟ್ಟದಲ್ಲಿ ಸ್ನೇಹಿತರನ್ನು ಭೇಟಿ ಮಾಡಿ ಶುಭಾಶಯ ತಿಳಿಸುವುದು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ನೆಚ್ಚಿನ ಸ್ನೇಹಿತರ ಜತೆಗಿನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಹುದು. ಕರೆ ಮಾಡಿ ಶುಭಾಶಯ ತಿಳಿಸಬಹುದು ಮತ್ತು ಎಂದಿಗೂ ಹೇಳಲಾಗದ ಕೆಲವೊಂದಿಷ್ಟು ವಿಷಯಗಳನ್ನು ಪರಸ್ಪರ ಹಂಚಿಕೊಳ್ಳಬಹದು.

ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನದ ಇತಿಹಾಸ ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು 1935, ಜೂನ್ 8 ರಂದು ಮೊದಲ ಬಾರಿಗೆ ಆಚರಣೆಗೆ ತರಲಾಯಿತು. ಅಂದಿನಿಂದ ಪ್ರತಿ ವರ್ಷ ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು ಜೂನ್ 8 ರಂದು ಆಚರಿಸಲಾಗುತ್ತಿದೆ. ಕಾಲಾನಂತರದಲ್ಲಿ, ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವು ಅನೇಕ ದೇಶಗಳಲ್ಲಿ ಆಚರಣೆಗೆ ಬಂತು. ಈ ಆಚರಣೆಯೂ ಯುವಕರಲ್ಲಿ ಹೆಚ್ಚು ಮನ್ನಣೆ ಪಡೆಯಿತು. ಈ ದಿನದಂದು ವಿಶೇಷವಾಗಿ ಪಾರ್ಟಿ , ಕೆಕ್ ಕಟ್ಟಿಂಗ್ ಮಾಡಿ ತಮ್ಮ ನೆಚ್ಚಿನ ಸ್ನೇಹಿತರಿಗೆ ಶುಭಾಶಯ ಕೋರುವುದು ಆರಂಭವಾಯಿತು.

ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನದ ಮಹತ್ವ ಜೀವನದಲ್ಲಿ ನಮ್ಮ ಜತೆಗಿರುವ ಉತ್ತಮ ಸ್ನೇಹಿತರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಒಂದು ದಿನ ಬೇಕಾಗಾಗಿಲ್ಲ. ಆದರೆ ಇಂತಹದ್ದೇ ದಿನ ಎಂದು ಮೀಸಲಿಟ್ಟಾಗ ಆ ದಿನ ಸ್ನೇಹಕ್ಕೆ ಒಂದು ಮಹತ್ವದ ಬೆಸುಗೆಯಾಗುತ್ತದೆ. ಹೀಗಾಗಿ ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ನಾವು ಖುಷಿಯಲ್ಲಿದ್ದಾಗ ಎಲ್ಲರೂ ನಮ್ಮ ಜತೆ ಇರುತ್ತಾರೆ. ಆದರೆ ನಾವು ನೋವಿನಲ್ಲಿರುವಾಗಲೂ ನಮ್ಮ ಜತೆ ಇರುವವರು ನಿಜವಾದ ಸ್ನೇಹಿತರಾಗಿರುತ್ತಾರೆ. ಅಂತವರ ಜತೆ ಈ ದಿನ ಕಳೆಯಬೇಕು. ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನದಂದು ಉಡುಗೊರೆ ನೀಡಿ ಖುಷಿ ಪಡಿಸಬಹುದು ಮತ್ತು ಮನದಲ್ಲಿನ ಭಾವನೆಗಳ ಬಗ್ಗೆ ಸ್ನೇಹಿತರ ಜತೆ ಪರಸ್ಪರ ಹಂಚಿಕೊಳ್ಳಬಹುದು.

ಇದನ್ನೂ ಓದಿ:

World Oceans Day 2021: ಸಮುದ್ರಕ್ಕೆ ಪ್ರವಾಸ ಹೋಗುವುದು ಬಲು ಇಷ್ಟ ಎನ್ನುವವರು ಸಾಗರದ ಕಾಳಜಿಯ ಬಗ್ಗೆಯೂ ಗಮನಹರಿಸಿ

ಕಿಚ್ಚ ಸುದೀಪ್ ಗೆಳೆಯನಲ್ಲ ಎಂದಿದ್ದ ನಟ ದರ್ಶನ್ ಟ್ವಿಟ್‌ಗೆ ಇದೀಗ 4 ವರ್ಷ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ