International Yoga Day 2024 : ಸಂಜೆ ಯೋಗ ಅಭ್ಯಾಸದ ಸಮಯದಲ್ಲಿ ನೀರು ಕುಡಿಯಬಾರದು ಏಕೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 21, 2024 | 12:48 PM

ಇಂದಿನ ಜನರು ತಮ್ಮ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಿಂದ ಬೇಡದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ದಿನನಿತ್ಯ ಯೋಗ, ವಾಕಿಂಗ್, ವ್ಯಾಯಾಮ ಮಾಡುವುದರಿಂದ ದೇಹವನ್ನು ಫಿಟ್ ಆಗಿರಿಸುವುದಲ್ಲದೆ, ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ. ಆದರೆ ಕೆಲವರು ಯೋಗದ ವೇಳೆ ನೀರನ್ನು ಕುಡಿಯುತ್ತಾರೆ. ಈ ಸಮಯದಲ್ಲಿ ನೀರು ಕುಡಿಯಬಾರದು ಏಕೆ? ನೀರು ಕುಡಿಯಲು ಸರಿಯಾದ ಸಮಯ ಯಾವುದು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

International Yoga Day 2024 : ಸಂಜೆ ಯೋಗ ಅಭ್ಯಾಸದ ಸಮಯದಲ್ಲಿ ನೀರು ಕುಡಿಯಬಾರದು ಏಕೆ?
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ ಯೋಗ ಮಾಡುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಯೋಗದ ಮಹತ್ವ ಹಾಗೂ ಹೆಚ್ಚೆಚ್ಚು ಜನರನ್ನು ಯೋಗ ಮಾಡುವಂತೆ ಉತ್ತೇಜಿಸಲು ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗವು ನಮ್ಮ ಮನಸ್ಸನ್ನು ಶಾಂತವಾಗಿ ಮತ್ತು ಆರೋಗ್ಯವಾಗಿಟ್ಟುಕೊಳ್ಳುತ್ತದೆ. ಆದರೆ ಕೆಲವರು ಯೋಗಾಭ್ಯಾಸ ವೇಳೆ ವಿಪರೀತ ನೀರು ಕುಡಿಯುತ್ತಾರೆ. ಈ ಅಭ್ಯಾಸವಿದ್ದರೆ ಇಂದೇ ನಿಲ್ಲಿಸಿಬಿಡುವುದು ಉತ್ತಮ.

  • ಯೋಗ ಮಾಡುವ ಮೊದಲು ಅಂದರೆ ಮೂವತ್ತು ನಿಮಿಷಗಳಿಗೂ ಮುಂಚಿತವಾಗಿ ನೀರು ಕುಡಿಯುವುದು ಸೂಕ್ತ. ಇದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.
  • ಯೋಗದ ಸಮಯದಲ್ಲಿ ಮನಸ್ಸು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಆದರೆ ನೀರು ಕುಡಿಯುವ ನೆಪದಲ್ಲಿ ಮನಸ್ಸು ಬೇರೆಡೆ ವಾಲುವ ಸಾಧ್ಯತೆ ಅಧಿಕವಾಗಿದೆ.
  • ಯೋಗ ಅಭ್ಯಾಸ ಮಾಡುವಾಗ ತುಂಬಾ ನೀರು ಕುಡಿದರೆ ನೈಸರ್ಗಿಕ ಕರೆಗೆ ಹೋಗಬೇಕಾಗುತ್ತದೆ. ಮೂತ್ರ ವಿಸರ್ಜನೆಯನ್ನು ತಡೆ ಹಿಡಿದು ಯೋಗಾಭ್ಯಾಸ ಮಾಡುವುದು ಆರೋಗ್ಯಕ್ಕೆ ಹಿತವಲ್ಲ.
  • ಯೋಗ ಮಾಡುವ ಮುಂಚಿತವಾಗಿ ಅತಿಯಾಗಿ ನೀರು ಕುಡಿದರೆ ಹೊಟ್ಟೆಯೂ ತುಂಬಿಕೊಂಡು ಆಸನಗಳನ್ನು ಮಾಡಲು ಕಷ್ಟವಾಗುತ್ತದೆ. ಹೀಗಾಗಿ ಆದಷ್ಟು ಖಾಲಿ ಹೊಟ್ಟೆಯಲ್ಲಿಯೇ ಯೋಗಾಸನಗಳನ್ನು ಮಾಡುವುದು ಉತ್ತಮ.
  • ಆಸನಗಳನ್ನು ಮಾಡಿದ ತಕ್ಷಣ ನೀರು ಕುಡಿಯುವುದು ಕೂಡ ತಪ್ಪು. ಇದರಿಂದ ದೇಹವು ಬಿಸಿಯಾಗಿ ಹೃದಯ ಬಡಿತವೂ ಹೆಚ್ಚಾಗುತ್ತದೆ. ಕುಡಿಯುವ ನೀರು ದೇಹದ ಉಷ್ಣತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅದಲ್ಲದೇ, ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.
  • ಸಾಮಾನ್ಯವಾಗಿ ಯೋಗದ ಬಳಿಕ ತಣ್ಣೀರು ಕುಡಿಯುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ತಕ್ಷಣವೇ ನೀರು ಕುಡಿದರೆ ಎದೆ ನೋವು, ಹೊಟ್ಟೆ ನೋವು, ವಾಂತಿ ಮುಂತಾದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
  • ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ದೇಹದಲ್ಲಿನ ನೀರು ಬೆವರಿನ ರೂಪದಲ್ಲಿ ಹೊರಗೆ ಹೋಗುತ್ತದೆ. ಹೀಗಾಗಿ ಯೋಗ ಮಾಡಿದ ಸುಮಾರು 30 ರಿಂದ 40 ನಿಮಿಷಗಳ ನಂತರ ನೀರು ಕುಡಿಯಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:46 pm, Fri, 21 June 24