ಥೈಲ್ಯಾಂಡ್ ಹೆಚ್ಚಿನ ಪ್ರವಾಸಿಗರ ಫೇವರೆಟ್ ದೇಶ ಅಂತಾನೆ ಹೇಳಬಹುದು. ಲಕ್ಷಾಂತರ ಪ್ರವಾಸಿಗರು ಪ್ರತಿವರ್ಷ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿನ ಬೀಚ್, ಪ್ರಕೃತಿ ಸೌಂದರ್ಯ, ಜಲಕ್ರೀಡೆ, ರಾತ್ರಿ ಜೀವನ ಮುಂತಾದವುಗಳನ್ನು ಎಂಜಾಯ್ ಮಾಡಲೇಂದೇ ಇಲ್ಲಿಗೆ ಜನ ಪ್ರವಾಸ ಹೋಗುತ್ತಿರುತ್ತಾರೆ. ನೀವು ಕೂಡಾ ಥೈಲ್ಯಾಂಡ್‌ಗೆ ಟ್ರಿಪ್ ಹೋಗ್ಬೇಕು ಎಂಬ ಪ್ಲಾನ್ ಹಾಕಿದ್ದೀರಾ? ಅದರಲ್ಲೂ ಹೊಸ ವರ್ಷಕ್ಕೆ ಏನಾದ್ರೂ ಥೈಲ್ಯಾಂಡ್ ಟ್ರಿಪ್ ಹೋಗುವ ಪ್ಲಾನ್‌ನಲ್ಲಿ ಇದ್ದರೆ ನಿಮಗಿದೆ ಇಲ್ಲೊಂದು ಭರ್ಜರಿ ಆಫರ್. ಹೌದು ನ್ಯೂ ಇಯರ್ ಸಲುವಾಗಿ IRCTC ಕಮ್ಮಿ ಬಜೆಟ್‌ನ ಥೈಲ್ಯಾಂಡ್ ಟ್ರಿಪ್ ಪ್ಯಾಕೇಜ್ ಅನ್ನು ಘೋಷಿಸಿದ್ದು, ಈ ಪ್ಯಾಕೇಜ್ ಮೂಲಕ 1 ಲಕ್ಷಕ್ಕೂ ಕಡಿಮೆ ಬೆಲೆಗೆ ನೀವು ಬ್ಯಾಂಕಾಕ್, ಪಟ್ಟಾಯ ಟ್ರಿಪ್ ಹೋಗಬಹುದಾಗಿದೆ.
ಭಾರತೀಯ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಮ್ ಕಾರ್ಪೊರೇಷನ್ ಲಿಮಿಟೆಡ್ (IRCTC) ಹೊಸ ವರ್ಷದ ಸಲುವಾಲು ಥೈಲ್ಯಾಂಡ್‌ನ ಬ್ಯಾಂಕಾಕ್ ಮತ್ತು ಪಟ್ಟಾಯಕ್ಕೆ 6 ಹಗಲುಗಳು ಮತ್ತು 5 ರಾತ್ರಿಯ ಲೋ ಬಜೆಟ್ ಟೂರ್ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಡಿಸೆಂಬರ್ 27, 2024 ರಂದು ಈ ಫಾರಿನ್ ಟ್ರಿಪ್ ಇರಲಿದೆ.
ಈ ಪ್ಯಾಕೇಜ್ ಮೂಲಕ ಸಫಾರಿ ವರ್ಲ್ಡ್, ಮೆರೈನ್ ಪಾರ್ಕ್, ಚಾವೊ ಫ್ರಯಾ ರಿವರ್ ಕ್ರೂಸ್, ಟೆಂಪಲ್ ಮತ್ತು ಸಿಟಿ ಟೂರ್ಸ್ ಆಫ್ ಬ್ಯಾಂಕಾಕ್, ಕೋರಲ್ ಐಲ್ಯಾಂಡ್ ಮತ್ತು ಪಟ್ಟಾಯದಲ್ಲಿನ ಟಿಫಾನಿ ಶೋನಂತಹ ಜನಪ್ರಿಯ ತಾಣಗಳಿಗೆ ಭೇಟಿ ನೀಡಬಹುದಾಗಿದೆ. ಅಲ್ಲದೆ ಪ್ರವಾಸಿಗರಿಗೆ 3 ಸ್ಟಾರ್ ಹೋಟೆಲ್‌ಗಳಲ್ಲಿ ವಸತಿಯ ಜೊತೆಗೆ ಭಾರತೀಯ ರೆಸ್ಟೋರೆಂಟ್‌ಗಳಲ್ಲಿ ಪ್ರತಿದಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆಯೂ ಲಭ್ಯವಿದೆ. ಜೊತೆಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವ ವೆಚ್ಚವನ್ನು ಸಹ IRCTC ಭರಿಸಲಿದೆ. ಒಮ್ಮೆ ನೀವು ಪ್ಯಾಕೇಜ್ ಅನ್ನು ಬುಕ್ ಮಾಡಿದರೆ, ನೀವು ಇನ್ನು ಯಾವುದೇ ಹೆಚ್ಚುವರಿ ಹಣವನ್ನು ಪಾತಿಸುವ ಅವಶ್ಯಕತೆಯಿಲ್ಲ.
ಸಿಂಗಲ್ ಆಕ್ಯುಪೆನ್ಸಿ: ರೂ 75,675
ಡಬಲ್ ಶೇರಿಂಗ್: ರೂ 64,695
ಟ್ರಿಪಲ್ ಶೇರಿಂಗ್: 59,910 ರೂ
ಇದನ್ನೂ ಓದಿ: ಕಮ್ಮಿ ಬಜೆಟ್‌ನಲ್ಲಿ ದುಬೈ ಟ್ರಿಪ್ ಹೋಗಲು ಬಯಸಿದ್ರೆ ಇಲ್ಲಿದೆ ನಿಮಗೊಂದು ಬಂಪರ್ ಆಫರ್
ಡಿಸೆಂಬರ್ 27 ರಂದು ರಾತ್ರಿ 10:35 ಕ್ಕೆ ಸರಿಯಾಗಿ ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫ್ಲೈಟ್ ನಿರ್ಗಮಿಸಿ ಡಿಸೆಂಬರ್ 28 ರ ಬೆಳಿಗ್ಗೆ ಬ್ಯಾಂಕಾಕ್‌ಗೆ ತಲುಪುತ್ತದೆ. ಬ್ಯಾಂಕಾಕ್ ಮತ್ತು ಪಟ್ಟಾಯದಲ್ಲಿ ಡಿಸೆಂಬರ್ 28 ರಿಂದ ಡಿಸೆಂಬರ್ 31 ರವರೆಗೆ ಟ್ರಿಪ್ ನಡೆಯಲಿದೆ. ಬ್ಯಾಂಕಾಕ್‌ನಿಂದ ಹಿಂದಿರುಗುವ ಭಾರತಕ್ಕೆ ವಿಮಾನವನ್ನು ಜನವರಿ 1 ಕ್ಕೆ ನಿಗದಿಪಡಿಸಲಾಗಿದೆ.
IRCTC ಜಂಟಿ ಜನರಲ್ ಮ್ಯಾನೇಜರ್ ಯೋಗೇಂದ್ರ ಸಿಂಗ್ ಅವರ ಪ್ರಕಾರ, ಈ ಪ್ಯಾಕೇಜ್ ಎಲ್ಲಾ ಭಾರತೀಯ ಪ್ರವಾಸಿಗರಿಗೆ ಮುಕ್ತವಾಗಿದ್ದು, ಜೈಪುರ ವಿಮಾನ ನಿಲ್ದಾಣದಿಂದ ಬ್ಯಾಂಕಾಕ್‌ಗೆ ಪ್ರವಾಸ ಹೊರಡಲಿದೆ. ಹೆಚ್ಚಿನ ವಿವರಗಳಿಗಾಗಿ ಅಥವಾ ಟೂರ್ ಬುಕಿಂಗ್‌ಗಾಗಿ ಈ ಕೆಳಗೆ ನೀಡಿರುವ IRCTC ಯ ಅಧೀಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ