ಮಳೆಗಾಲದಲ್ಲಿ ಕಪ್ಪೆಗಳು ಮನೆಯೊಳಗೆ ಬಂದ್ರೆ ಅದೃಷ್ಟ ಖುಲಾಯಿಸುತ್ತಾ?

ಮಳೆಗಾಲ ಆರಂಭವಾಗುತ್ತಿದ್ದಂತೆ ವಟ ವಟ ಎನ್ನುವ ತಾವಿದ್ದೇವೆ ಎಂದು ನೆನಪಿಸುತ್ತೆ ಈ ಕಪ್ಪೆಗಳು. ಮಳೆಗಾಲದ ಅನುಭವ ನೀಡುವ ಈ ಕಪ್ಪೆಗಳು ಹಾಗೂ ಹಳ್ಳ ಕೊಳ್ಳಗಳಲ್ಲಿ ಮಾತ್ರವಲ್ಲದೇ ಮನೆಯೊಳಗೆ ಮೆಲ್ಲನೆ ಎಂಟ್ರಿ ಕೊಟ್ಟು ಮೂಲೆಯಲ್ಲಿ ಅವಿತುಕೊಳ್ಳುವುದಿದೆ. ಆದರೆ ಮನೆ ಯೊಳಗೆ ಕಪ್ಪೆ ಏನಾದ್ರು ಕಾಣಿಸಿಕೊಂಡರೆ ಅದನ್ನು ಹೊರಗೆ ಹಾಕದೇ ಇದ್ದರೆ ಕೆಲವರಿಗೆ ಸಮಾಧಾನ ಅನ್ನೋದೇ ಇರಲ್ಲ. ಆದರೆ ಕಪ್ಪ ಮನೆಯೊಳಗೆ ಬರುವುದು ಅದೃಷ್ಟದ ಸಂಕೇತನಾ? ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಮಳೆಗಾಲದಲ್ಲಿ ಕಪ್ಪೆಗಳು ಮನೆಯೊಳಗೆ ಬಂದ್ರೆ ಅದೃಷ್ಟ ಖುಲಾಯಿಸುತ್ತಾ?
ಮಳೆಗಾಲದಲ್ಲಿ ಕಪ್ಪೆಗಳು ಮನೆಯೊಳಗೆ ಬಂದ್ರೆ ಅದೃಷ್ಟ
Updated By: Digi Tech Desk

Updated on: Jun 17, 2025 | 5:19 PM

ಮಳೆಗಾಲ (rainy season) ಶುರುವಾಗುತ್ತಿದ್ದಂತೆ ಈ ಕಪ್ಪೆಗಳ ವಟಗುಟ್ಟುವಿಕೆ ಶುರುವಾಗುತ್ತದೆ. ಜೋರಾದ ಸುರಿದ ಮಳೆಗೆ ಬಾವಿ, ನದಿ, ಕೆರೆ, ಹಳ್ಳಗಳು ತುಂಬಿ ಹರಿಯುತ್ತಿದ್ದಂತೆ ಅಡಗಿ ಕುಳಿತ ಕಪ್ಪೆಗಳು ನಾವಿದ್ದೇವೆ ಎಂದು ನೆನಪಿಸುವಂತೆ ಕಣ್ಣ ಮುಂದೆ ಕಾಣಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ಈ ಕಪ್ಪೆ (frog) ಗಳು ಮನೆಯೊಳಗೆ ಎಂಟ್ರಿ ಕೊಡುವುದಿದೆ. ದೊಡ್ಡ ಕಪ್ಪೆಗಳು ಮನೆಯ ಮೂಲೆಗಳಲ್ಲಿ ಅವಿತು ಕುಳಿತು ಕೊಂಡರೆ ಸಣ್ಣ ಸಣ್ಣ ಕಪ್ಪೆಗಳು ಗೋಡೆಗಳ ಮೇಲೆ ಜಿಗಿಯುತ್ತ ಕಣ್ಣಿಗೆ ಬೀಳುತ್ತದೆ. ಕೆಲವರು ಈ ಕಪ್ಪೆಗಳು ಕಂಡೊಡನೆ ಸಾಯಿಸುತ್ತಾರೆ. ಮನೆಯೊಳಗೆ ಕಪ್ಪೆಗಳು ಎಂಟ್ರಿ ಕೊಟ್ಟರೆ ಅದೃಷ್ಟ (good luck) ಖುಲಾಯಿಸುತ್ತಾ? ಈ ಕುರಿತಾದ ಕುತೂಹಲಕಾರಿ ಸಂಗತಿಗಳನ್ನು ನೀವು ತಿಳಿದುಕೊಳ್ಳಿ.

 

ಮನೆಯೊಳಗೆ ಕಪ್ಪೆ ಎಂಟ್ರಿ ಕೊಟ್ಟರೆ ಅದನ್ನು ಎತ್ತಿ ಹೊರಗೆ ಚೆಲ್ಲುವವರೇ ಹೆಚ್ಚು. ಆದರೆ ಹಿಂದೂ ಧರ್ಮ ಹಾಗೂ ಶಾಸ್ತ್ರದ ಪ್ರಕಾರವಾಗಿ ಕಪ್ಪೆ ಮಂಗಳಕರವಂತೆ. ಮನೆಯೊಳಗೆ ಕಪ್ಪೆ ಏನಾದ್ರು ಬಂತೆಂದರೆ ಅದು ಸಮೃದ್ಧಿ, ಪ್ರಗತಿ ಹಾಗೂ ಆರೋಗ್ಯವನ್ನು ಹೊತ್ತು ತರುತ್ತದೆ ಎನ್ನಲಾಗಿದೆ.  ಕಪ್ಪೆ ಬಂದರೆ ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ಹರಿಸುವುದು ಮುಖ್ಯ.

ಇದನ್ನೂ ಓದಿ
ಬೆಕ್ಕು ಆದಾಗೇ ನಿಮ್ಮ ಮನೆಗೆ ಬಂದ್ರೆ ಏನರ್ಥ, ಅದೃಷ್ಟ ಕೈ ಹಿಡಿಯುತ್ತಾ?
ಪರ್ಸ್‌ನಲ್ಲಿ ಹೆಂಡ್ತಿ ಫೋಟೋ ಇಟ್ಕೊಂಡ್ರೆ ಏನಾಗುತ್ತೆ ಗೊತ್ತಾ?
ವರ್ಷಕ್ಕೊಮ್ಮೆ ಮಾತ್ರ ಮೊಟ್ಟೆ ಇಡಲು ಹೊರಗೆ ಬರುತ್ತೆ ಈ ಮಹಾಬಲಿ ಕಪ್ಪೆ
ಪಾರಿವಾಳದ ಗರಿಯನ್ನು ಮನೆಯಲ್ಲಿಟ್ಟರೆ ಏನಾಗುತ್ತೆ ಗೊತ್ತಾ?

ಒಂದು ವೇಳೆ ಕಪ್ಪೆ ಮನೆಯೊಳಗೆ  ಬಂದ ಮೇಲೆ ನಿಮ್ಮ ಮನೆ ಸ್ವಚ್ಛವಾಗಿಲ್ಲದಿದ್ದರೆ ಮನೆಗೆ ದರಿದ್ರ ಲಕ್ಷ್ಮಿಯನ್ನು ಆಕರ್ಷಿಸುತ್ತದೆ. ಹೀಗಾದಾಗ ಮನೆಯಲ್ಲಿ ಸಮೃದ್ಧಿ ನೆಲೆಸುವುದಿಲ್ಲ. ಹಣವು ನೀರಿನಂತೆ ಹರಿದು ಹೋಗುತ್ತದೆ ಎನ್ನಲಾಗಿದೆ. ಅದೃಷ್ಟದ ಸಂಕೇತವೆಂದು ಪರಿಗಣಿಸುವ ಈ ಕಪ್ಪೆಯೂ ಮನೆಯ ಹೊರಭಾಗದಲ್ಲಿ ಏಕಾಏಕಿ ನೋಡಿದರೆ ಆದರಿಂದಲೂ ಸಕಾರಾತ್ಮಕ ಬದಲಾವಣೆಗಳಾಗುತ್ತದೆಯಂತೆ. ನಿಮ್ಮ ಮುಂಭಾಗದಲ್ಲಿ ಕಪ್ಪೆಗಳು ಹಾರಿ ಹೋದರೆ ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ ಎಂದು ಸೂಚಿಸುತ್ತದೆ.

ಮನೆಯಲ್ಲಿ ಕಪ್ಪೆ ವಾಸವಿದ್ದರೆ ಮನೆಯಲ್ಲಿ ಏಳಿಗೆಯನ್ನು ಕಾಣಬಹುದು. ಸಂಬಂಧಗಳು ಗಟ್ಟಿಗೊಳ್ಳುತ್ತದೆ ಹಾಗೂ ಉತ್ತಮ ಸ್ನೇಹ ಸಂಬಂಧಗಳು ಬೆಳೆಯುತ್ತದೆ. ಸದಾ ಮನೆಯಲ್ಲಿ ಸಂಪತ್ತು ತುಂಬಿರಲು ಮನೆಯಲ್ಲಿ ಕಪ್ಪೆಯ ವಿಗ್ರಹವನ್ನು ಇಡುತ್ತಾರೆ. ಹೀಗಾಗಿ ಮನೆಯೊಳಗೆ ಕಪ್ಪೆ ಬಂತೆಂದು ಓಡಿಸುವ ಮುನ್ನ ಅದೃಷ್ಟ ಸಂಕೇತ ಎನ್ನುವುದನ್ನು ಮರೆಯಬೇಡಿ.

ಇದನ್ನೂ ಓದಿ :ಬೆಕ್ಕು ಆದಾಗೇ ನಿಮ್ಮ ಮನೆಗೆ ಕಾಲಿಟ್ರೆ ಅದೃಷ್ಟವೋ ಅದೃಷ್ಟ, ಹೇಗೆ ಗೊತ್ತಾ?

ಅಷ್ಟೇ ಅಲ್ಲದೇ, ಮನೆಯಲ್ಲಿ ಕಪ್ಪೆಯಿದ್ರೆ ರೋಗಗಳು ಹತ್ತಿರವೇ ಸುಳಿಯುವುದಿಲ್ಲ ಎನ್ನಲಾಗಿದೆ. ಕಪ್ಪೆ ರೋಗದಿಂದ ನಮ್ಮನ್ನು ರಕ್ಷಿಸುವುದರಿಂದ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುತ್ತವೆ.   ಹೀಗಾಗಿ ಮಳೆಗಾಲದಲ್ಲಿ ಕಪ್ಪೆಗಳು ಮನೆಯೊಳಗೆ ಬರುತ್ತವೆ ಎಂದು ಟೆನ್ಶನ್ ಮಾಡಿಕೊಳ್ಳುವ ಇದರಿಂದ ಇರುವ ಪ್ರಯೋಜನಗಳ ಬಗ್ಗೆ ತಿಳಿದು ಖುಷಿ ಪಡಿ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:44 pm, Tue, 17 June 25