ಚಳಿಗಾಲದಲ್ಲಿ ಮೂಲಂಗಿ ತಿನ್ನುವುದು ಉತ್ತಮವೇ. ಅದರ ಸುವಾಸನೆ, ಹಾಗೂ ರೆಸಿಪಿಗಳು ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಚಳಿಗಾಲದಲ್ಲಿ ಉಂಟು ಮಾಡುತ್ತದೆ. ಮೂಲಂಗಿಯು ಚಳಿಗಾಲದಲ್ಲಿ ಸೇವಿಸುವ ಆಹಾರಗಳಲ್ಲಿ ಒಂದು. ಮೂಲಂಗಿ ರೆಸಿಪಿಗಳನ್ನು ಮಾಡುವಾಗ ಇದಕ್ಕೆ ಕಾಳುಮೆಣಸು ಹಾಕಿ ಏಕೆಂದರೆ ಇದು ಉತ್ತಮ ಪೋಷಕಾಂಶವಾಗಿದೆ. ಕೆಲವು ಜನರಿಗೆ, ಮೂಲಂಗಿಯು ಗ್ಯಾಸ್, ಉಬ್ಬುವುದು ಅಥವಾ ವಾಯು ಉಂಟುಮಾಡಬಹುದು. ಆದರೆ ಚಳಿಗಾಲದಲ್ಲಿ ಇದನ್ನು ತಿಂದರೆ ಮತ್ತಷ್ಟು ತೊಂದರೆಯನ್ನು ಉಂಟು ಮಾಡಬಹುದು ಎಂಬ ಭಯ ನಿಮ್ಮಲ್ಲಿದೆ. ಭಯಬೇಡ, ಇದು ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿದೆ ಎಂದು ಪೌಷ್ಟಿಕತಜ್ಞ ಲೀಮಾ ಮಹಾಜನ್ ತಿಳಿಸಿದ್ದಾರೆ.
ಉಬ್ಬುವಿಕೆಯ ಸಮಸ್ಯೆಗಳಿಲ್ಲದೆ ಮೂಲಂಗಿಯನ್ನು ಸೇವನೆ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿ ತಿಳಿಸಿದ್ದಾರೆ ನೋಡಿ.
ತಿನ್ನುವ ಮೊದಲು ನೆನೆಸಿ: ಮೂಲಂಗಿಯನ್ನು ಕತ್ತರಿಸಿ ತಿನ್ನುವ ಮೊದಲು ಸುಮಾರು 30 ನಿಮಿಷಗಳ ಕಾಲ ತಣ್ಣನೆಯ ನೀರಿನಲ್ಲಿ ನೆನೆಸಿಡಿ. ಈ ಸರಳ ಹಂತವು ಗ್ಯಾಸ್, ಉಬ್ಬುವುದು ಅಥವಾ ವಾಯು ಉಂಟು ಮಾಡುವುದಿಲ್ಲ.
ಜೀರ್ಣಕಾರಿ ಮಸಾಲೆಗಳನ್ನು ಸೇರಿಸಿ: ಮೂಲಂಗಿ ಜೀರ್ಣಿಸಿಕೊಳ್ಳಲು ಸುಲಭವಾಗುವಂತೆ ಮಾಡುವ ಅತ್ಯುತ್ತಮ ವಿಧಾನವೆಂದರೆ ಅದರ ಅದಕ್ಕೆ ಬಳಸುವ ಮಸಾಲೆಗಳು. ತುರಿದ ಶುಂಠಿ, ಹುರಿದ ಅಜ್ವೈನ್ (ಕ್ಯಾರಂ ಬೀಜಗಳು), ಪುದೀನ ಮತ್ತು ತುಳಸಿ ಹೆಚ್ಚು ಬಳಸಿ.
ಪ್ರೋಬಯಾಟಿಕ್ ಆಹಾರಗಳು: ಮೂಲಂಗಿಯನ್ನು ಪ್ರೋಬಯಾಟಿಕ್ ಆಹಾರಗಳು ಜತೆಗೆ ಸೇವನೆ ಮಾಡಬೇಕು. ಆಗಾ ಆದರಿಂದ ಜೀರ್ಣಿಸಿಕೊಳ್ಳಲು ಸುಲಭವಾಗಿರುತ್ತದೆ. ಪ್ರೋಬಯಾಟಿಕ್‌ಗಳು ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕ್ರಿಸ್‌ಮಸ್ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳು ಕೋರಲು ಇಲ್ಲಿದೆ ಸಂದೇಶಗಳು
ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ: ಮೂಲಂಗಿಯು ಪೌಷ್ಟಿಕವಾಗಿದ್ದರೂ, ಅವುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಉಬ್ಬುವುದು ಮತ್ತು ಜೀರ್ಣಕಾರಿ ಅಸ್ವಸ್ಥತೆಗೆ ಕಾರಣವಾಗಬಹುದು.ಮೂಲಂಗಿಯ ಹೆಚ್ಚಿನ ಫೈಬರ್ ಅಂಶವು ಸೂಕ್ಷ್ಮವಾದ ಹೊಟ್ಟೆಯನ್ನು ಕೆರಳಿಸಬಹುದು
ಸಂಪೂರ್ಣವಾಗಿ ಬೇಯಿಸಿ: ಮೂಲಂಗಿಯನ್ನು ಬೇಯಿಸುವುದರಿಂದ ಅದರಲ್ಲಿರುವ ಗ್ಯಾಸ್, ಉಬ್ಬುವುದು ಅಥವಾ ವಾಯು ಉಂಟು ಮಾಡುವ ಅಂಶಗಳು ಹೋಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ