ಹಸುವಿನ ಕೆಚ್ಚಲಿನಿಂದ ನೇರವಾಗಿ ಮಗುವಿಗೆ ಹಾಲು ಕುಡಿಸುವುದು ಸರಿಯೇ? ವೈದ್ಯರು ಹೇಳೋದೇನು?
ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬ ತನ್ನ ಮಗುವಿಗೆ ಹಸುವಿನ ಕೆಚ್ಚಲಿನಿಂದ ನೇರವಾಗಿ ಹಾಲು ಕುಡಿಸಿರುವ ವಿಡಿಯೋ ವೈರಲ್ ಆಗಿದೆ. ಇದೀಗ ಪುಟ್ಟ ಮಗುವಿಗೆ ಈ ರೀತಿ ಹಸುವಿನ ಕೆಚ್ಚಲಿನಿಂದ ನೇರವಾಗಿ ಹಾಲು ಕುಡಿಸುವುದು ಸರಿಯೇ? ಎಂದು ಪ್ರಶ್ನೆ ಮಾಡಲಾಗಿದೆ. ಈ ಬಗ್ಗೆ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಮಗುವಿಗೆ ದನದ ಕೆಚ್ಚಲಿನಿಂದ ನೇರವಾಗಿ ಹಾಲು ಕುಡಿಸುವುದು ಸರಿಯೇ? ಎಂಬ ಪ್ರಶ್ನೆಯೊಂದು ಎದ್ದಿದೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ. ವ್ಯಕ್ತಿಯೊಬ್ಬ ತನ್ನ ಮಗುವಿಗೆ ದನದ ಕೆಚ್ಚಲಿನಿಂದ ನೇರವಾಗಿ ಹಾಲು ಕುಡಿಸಿದ್ದಾನೆ. ಇದೀಗ ಈ ಬಗ್ಗೆ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದಾರೆ. ಹೌದು, ಹಸುವಿನ ಕೆಚ್ಚಲಿನಿಂದ (feeding baby raw milk) ತನ್ನ ಪುಟ್ಟ ಮಗುವಿಗೆ ನೇರವಾಗಿ ಹಾಲು ಕುಡಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಜನರು ಆಶ್ಚರ್ಯಚಕಿತರಾಗುತ್ತಾರೆ. ಈ ವೇಳೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಗುವಿಗೆ ಹಸುವಿನ ಹಾಲು ಅಥವಾ ಎಮ್ಮೆ ಹಾಲು ನೀಡಬಹುದೇ ಎಂದು ಕೇಳಿದ್ದಾರೆ. ಮಗುವಿಗೆ ಈ ರೀತಿ ಹಸುವಿನ ಕೆಚ್ಚಲಿನಿಂದ ನೇರವಾಗಿ ಹಸಿ ಹಾಲು ಕುಡಿಸುವುದು ಎಷ್ಟು ಸುರಕ್ಷಿತ? ಈ ಬಗ್ಗೆ ತಜ್ಞರ ಅಭಿಪ್ರಾಯ ಇಲ್ಲಿದೆ ನೋಡಿ.
ತಜ್ಞರು ಹೇಳೋದೇನು?
ಈ ಬಗ್ಗೆ NDTV ಜೊತೆ ವಿಶೇಷ ಸಂವಾದ ನಡೆಸಿದ ಗ್ರೇಟರ್ ನೋಯ್ಡಾ ವೆಸ್ಟ್‌ನ ಸರ್ವೋದಯ ಆಸ್ಪತ್ರೆಯ ಹಿರಿಯ ಮಕ್ಕಳ ತಜ್ಞೆ ಡಾ. ಅರ್ಚನಾ ಯಾದವ್ ಹಸುವಿನ ಹಾಲು ನವಜಾತ ಶಿಶುವಿಗೆ ಸುರಕ್ಷಿತವಲ್ಲ, ಇದರಿಂದ ಹಲವು ಸಮಸ್ಯೆ ಎದುರಿಸಬೇಕಾಗಬಹುದು ಎಂದು ಹೇಳಿದ್ದಾರೆ. ನವಜಾತ ಶಿಶುವಿನ ಜೀರ್ಣಾಂಗ ವ್ಯವಸ್ಥೆಯು ಹಸುವಿನ ಹಾಲಿನಲ್ಲಿರುವ ಪ್ರೋಟೀನ್ ಮತ್ತು ಕೊಬ್ಬನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ, ಇದು ಮಗುವಿನ ಹೊಟ್ಟೆಯಲ್ಲಿ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಇದರ ಜತೆಗೆ ಹಸುವಿನ ಹಾಲನ್ನು ಬೇಗನೆ ನೀಡುವುದರಿಂದ ಮಗುವಿಗೆ ಹಾಲಿನ ಅಲರ್ಜಿ ಉಂಟಾಗಬಹುದು. ಹಸುವಿನ ಹಾಲಿನಲ್ಲಿ ನವಜಾತ ಶಿಶುವಿಗೆ ಅಗತ್ಯವಿರುವ ಕಬ್ಬಿಣ, ವಿಟಮಿನ್ ಸಿ ಮತ್ತು ಇತರ ಅಗತ್ಯ ಪೋಷಕಾಂಶಗಳು ಇರುವುದಿಲ್ಲ. ಇದು ಮಗುವಿನಲ್ಲಿ ಅಪೌಷ್ಟಿಕತೆ ಅಥವಾ ರಕ್ತಹೀನತೆಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಕೃತಿ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ ಸ್ವರ್ಗದಂತಿರುವ “ರಾಣಿ ಝರಿ”
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Is this good for a baby? Please answer pic.twitter.com/8wXKBvofaO
— Aulia dr (@DonaldTunp75739) July 21, 2025
ನೇರವಾಗಿ ಕೆಚ್ಚಲಿನಿಂದ ಹಾಲು ಕುಡಿಸುವುದು ಎಷ್ಟು ಅಪಾಯಕಾರಿ?
ಈ ಬಗ್ಗೆ ಶಿಶುವೈದ್ಯ ಪುನೀತ್ ಆನಂದ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕೆಚ್ಚಲಿನಿಂದ ನೇರವಾಗಿ ಹಾಲು ಕುಡಿಸುವುದು ಮಗುವಿಗೆ ತುಂಬಾ ಅಪಾಯಕಾರಿ. ಅಂತಹ ಹಾಲಿನಲ್ಲಿ ಇ. ಕೋಲಿ, ಸಾಲ್ಮೊನೆಲ್ಲಾ, ಬ್ರೂಸೆಲ್ಲಾ ಮತ್ತು ಟಿಬಿ ಸೂಕ್ಷ್ಮಜೀವಿಗಳು (ಮೈಕೋಬ್ಯಾಕ್ಟೀರಿಯಂ) ಇರಬಹುದು, ಇದು ಮಾರಕ ಸೋಂಕುಗಳಿಗೆ ಕಾರಣವಾಗಬಹುದು. ಮಗುವಿಗೆ ಎಂದಿಗೂ ಹಸಿ, ಕುದಿಸದ ಹಾಲನ್ನು ನೀಡಬೇಡಿ. ಇದು ಕೂಡ ಅಪಾಯಕಾರಿ, ಯಾವಾಗಲೂ ಹಾಲನ್ನು ಚೆನ್ನಾಗಿ ಕುದಿಸಿ ಮತ್ತು ಶುಚಿತ್ವದ ಬಗ್ಗೆ ಕಾಳಜಿ ವಹಿಸಿ ಎಂದು ವೈದ್ಯರು ಹೇಳಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಮಗುವಿಗೆ ಹಸು ಅಥವಾ ಎಮ್ಮೆ ಹಾಲು ಯಾವುದು ಒಳ್ಳೆಯದು?
ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ, ‘ಮಗುವಿಗೆ ಹುಟ್ಟಿನಿಂದ 6 ತಿಂಗಳವರೆಗೆ ತಾಯಿಯ ಹಾಲನ್ನು ಮಾತ್ರ ನೀಡಬೇಕು. ತಾಯಿಯ ಹಾಲು ಲಭ್ಯವಿಲ್ಲದಿದ್ದರೆ, ವೈದ್ಯರ ಸಲಹೆಯೊಂದಿಗೆ ಫಾರ್ಮುಲಾ ಹಾಲು ನೀಡುವುದು ಉತ್ತಮ. ಮಗುವಿಗೆ ಕನಿಷ್ಠ 12 ತಿಂಗಳು (1 ವರ್ಷ) ಆದಾಗ ಮಾತ್ರ ಹಸುವಿನ ಹಾಲು ನೀಡಬೇಕು. ಆಗ ಮಗುವಿನಲ್ಲಿ ಜೀರ್ಣಶಕ್ತಿ ಬೆಳೆಯುತ್ತದೆ. 1 ವರ್ಷದ ನಂತರವೂ, ಹಸು ಅಥವಾ ಎಮ್ಮೆ ಹಾಲು ನೀಡುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ ಡಾ. ಅರ್ಚನಾ ಯಾದವ್ ತಿಳಿಸಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ