ಬಿಳಿ ಚಾಕೊಲೇಟ್ ನಿಜವಾದ ಚಾಕೊಲೇಟಾ? ಸತ್ಯಾಂಶ ಇಲ್ಲಿದೆ

ಚಾಕೊಲೇಟ್ ಪ್ರೀಯರಿಗೆ ಈ ಪ್ರಶ್ನೆ ಮೂಡಿರಬಹುದು. ಬಿಳಿ ಚಾಕೊಲೇಟ್ ನಿಜವಾದ ಚಾಕೊಲೇಟಾ? ಎಂದು. ಬಿಳಿ ಚಾಕೊಲೇಟ್ ಮಾಮೂಲಿ ಚಾಕೊಲೇಟ್​​​​ನಂತೆ ಅಲ್ಲ. ಆದರೆ ಅದು ಕೂಡು ಚಾಕೊಲೇಟ್ ಅಹರ್ತೆಯನ್ನು ಪಡೆದ್ದಿಯಾ? ಪಡೆದಿದ್ದರೆ ಯಾವೆಲ್ಲ ಗುಣಗಳನ್ನು ಹೊಂದಿದೆ. ಬಿಳಿ ಚಾಕೊಲೇಟ್​​​ಗೆ ಬಳಸುವ ಪಾಕಗಳು ಏನ್​​ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಬಿಳಿ ಚಾಕೊಲೇಟ್ ನಿಜವಾದ ಚಾಕೊಲೇಟಾ? ಸತ್ಯಾಂಶ ಇಲ್ಲಿದೆ
ಬಿಳಿ ಚಾಕೊಲೇಟ್
Image Credit source: Getty Images
Edited By:

Updated on: Apr 23, 2025 | 12:47 PM

ಚಾಕೊಲೇಟ್ (chocolate) ಎಂದಾಕ್ಷಣ ಕಂದು ಬಣ್ಣದಲ್ಲಿರುತ್ತದೆ. ಆದರೆ ಕೆಲವೊಂದು ಬಿಳಿ ಬಣ್ಣದ ಚಾಕೊಲೇಟ್ (white chocolate)  ಕೂಡ ಇರುತ್ತದೆ. ಇದು ನಿಜವಾದ ಚಾಕೊಲೇಟ್ ಎಂಬ ಪ್ರಶ್ನೆ ಮೂಡುವುದು ಸಹಜ, ಬಿಳಿ ಬಣ್ಣದ ಚಾಕೊಲೇಟ್ ಅಷ್ಟೊಂದು ರುಚಿ ಇಲ್​ಲವೆಂದರು, ಅದು ಆರ್ಕಷವಾಗಿರುತ್ತದೆ. ಜತೆಗೆ ಅದು ವಿಶೇಷವಾಗಿರುತ್ತದೆ. ಬಿಳಿ ಬಣ್ಣದ ಚಾಕೊಲೇಟ್​ ಕೋಕೋ ಪರಿಮಳ ಮತ್ತು ಸುವಾಸನೆಯೊಂದಿಗೆ ಕೆನೆಭರಿತ, ಬಾಯಲ್ಲಿ ಕರಗುವಂತೆ ಇರುತ್ತದೆ. ನಯವಾದ ವಿನ್ಯಾಸ ಮತ್ತು ಮೃದುವಾದ ರುಚಿಯೊಂದಿಗೆ ಅದ್ಭುತವಾಗಿರುತ್ತದೆ. ಆದರೆ ಬಿಳಿ ಚಾಕೊಲೇಟ್ ನಿಜವಾದ ಚಾಕೊಲೇಟ್ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ.

ಬಿಳಿ ಚಾಕೊಲೇಟ್ ಉಳಿದ ಚಾಕೊಲೇಟ್‌ಗಳಂತೆ ಅಲ್ಲ ಯಾಕೆ?

ಬಿಳಿ ಚಾಕೊಲೇಟ್​​​ನಲ್ಲಿ ಕೋಕೋ ಎಲ್ಲಿದೆ? ಎಂಬ ಸಂಶಯ ಬರಬಹುದು. ಇದು ಹಾಲು ಅಥವಾ ಡಾರ್ಕ್ ಚಾಕೊಲೇಟ್‌ಗಿಂತ ಭಿನ್ನವಾಗಿದೆ. ಬಿಳಿ ಚಾಕೊಲೇಟ್ ಕಂದು ಚಾಕೊಲೇಟ್​​ನಂತೆ ಬಣ್ಣ ಮತ್ತು ದಪ್ಪ ಸುವಾಸನೆಯನ್ನು ಉಂಟು ಮಾಡುವ ಕೋಕೋ ಘನವಸ್ತುಗಳನ್ನು ಹೊಂದಿರುವುದಿಲ್ಲ. ಬದಲಾಗಿ, ಇದನ್ನು ಕೋಕೋ ಬೆಣ್ಣೆಯಿಂದ ತಯಾರಿಸಲಾಗುತ್ತದೆ, ಇದು ಕೋಕೋ ಬೀನ್ಸ್‌ನಿಂದ ತೆಗೆಯಲಾದ ಕೊಬ್ಬು. ವಿಶಿಷ್ಟವಾದ ಚಾಕೊಲೇಟ್ ಪರಿಮಳವನ್ನು ಹೊಂದಿದ್ದು, ಬಿಳಿ ಚಾಕೊಲೇಟ್‌ನ ಐಷಾರಾಮಿ ಕೆನೆಭರಿತ ವಿನ್ಯಾಸಕ್ಕೆ ಕೊಡುಗೆ ನೀಡುತ್ತದೆ.

ಬಿಳಿ ಚಾಕೊಲೇಟ್ ನಿಜವಾದ ಚಾಕೊಲೇಟ್ ಎಂದು ನಿರೂಪಿಸುವುದು ಹೇಗೆ?

ಬಿಳಿ ಚಾಕೊಲೇಟ್ ನಿಜವಾದ ಚಾಕೊಲೇಟ್ ಎಂದು ಅರ್ಹತೆಯನ್ನು ಈಗಾಗಲೇ ಪಡೆದಿದೆ. 2004 ರಲ್ಲಿ, US FDA (ಆಹಾರ ಮತ್ತು ಔಷಧ ಆಡಳಿತ) ಬಿಳಿ ಚಾಕೊಲೇಟ್​​​ಗೆ ಕೂಡ ನಿಜವಾದ ಚಾಕೊಲೇಟ್ ಎಂದು ಹೇಳಿದೆ. iದು ಕನಿಷ್ಠ 20% ಕೋಕೋ ಬೆಣ್ಣೆ ಯನ್ನು ಹೊಂದಿದೆ. ಹಾಲಿನ ಘನವಸ್ತುಗಳ ಕನಿಷ್ಠ 14% ಇದೆ. ಕನಿಷ್ಠ 3.5% ಹಾಲಿನ ಕೊಬ್ಬು ಹೊಂದಿದ್ದು, 55% ಕ್ಕಿಂತ ಹೆಚ್ಚು ಪೌಷ್ಟಿಕ ಕಾರ್ಬೋಹೈಡ್ರೇಟ್ ಸಿಹಿಕಾರಕಗಳನ್ನು ಹೊಂದಿರಬಾರದು. ಪಾಮ್ ಅಥವಾ ತೆಂಗಿನ ಎಣ್ಣೆಯಂತಹ ಯಾವುದೇ ತರಕಾರಿ ಕೊಬ್ಬುಗಳಿಲ್ಲ.

ಇದನ್ನೂ ಓದಿ
ಬೇಸಿಗೆಯಲ್ಲಿ ಪ್ರತಿದಿನ 1 ಲೋಟ ಸೋಂಪು ನೀರನ್ನು ಕುಡಿಯಬೇಕಂತೆ
ಬರಿಗಣ್ಣಿಗೆ ಕಾಣದ ಹೊಚ್ಚ ಹೊಸ ಬಣ್ಣವನ್ನು ಕಂಡು ಹಿಡಿದ ವಿಜ್ಞಾನಿಗಳು
ಡಿಫರೆಂಟ್‌ ಆಗಿ ಚಾಕೊಲೇಟ್‌ ಮೊಮೊಸ್‌ ತಯಾರಿಸಿದ ಬೀದಿ ಬದಿ ವ್ಯಾಪಾರಿ
ತಪ್ಪಿಯೂ ಅಡುಗೆ ಕೋಣೆಯಲ್ಲಿ ಬ್ಲಾಕ್ ಗ್ರಾನೈಟ್ ಬಳಕೆ ಮಾಡಬೇಡಿ!

ಇದನ್ನೂ ಓದಿ: ಬೇಸಿಗೆಯಲ್ಲಿ ಪ್ರತಿದಿನ 1 ಲೋಟ ಸೋಂಪು ನೀರನ್ನು ಕುಡಿಯಿರಿ, ಹಲವು ಪ್ರಯೋಜನಗಳನ್ನು ಪಡೆಯಿರಿ

ಬಿಳಿ ಚಾಕೊಲೇಟ್ ವಿಧಗಳು

ಬಿಳಿ ಚಾಕೊಲೇಟ್ ಚೀಸ್ ಕೇಕ್

ಬೆರ್ರಿ ಕಾಂಪೋಟ್‌ನೊಂದಿಗೆ ಬಿಳಿ ಚಾಕೊಲೇಟ್ ಪರ್ಫೈಟ್

ಬಿಳಿ ಚಾಕೊಲೇಟ್ ಮತ್ತು ನಿಂಬೆ ಪಾನಕ

ಬಾದಾಮಿ ಮತ್ತು ಬಿಳಿ ಚಾಕೊಲೇಟ್

ಮ್ಯಾಂಗೋ ವೈಟ್ ಚಾಕೊಲೇಟ್ ಮೌಸ್ಸ್

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ