ಮಾರುಕಟ್ಟೆಯಲ್ಲಿ ಹಲಸಿನ ಹಣ್ಣಿನ ಕಾರುಬಾರು ಶುರುವಾಗಿದೆ. ಈ ಹಣ್ಣಿನ ಮೈ ಮೇಲೆ ಮುಳ್ಳುಗಳಿದ್ದು ನೋಡುವುದಕ್ಕೆ ಒರಟಾಗಿ ಕಂಡರೂ ರುಚಿ ಮಾತ್ರ ಅದ್ಭುತ. ಈ ಹಣ್ಣಿನೊಳಗೆ ಜಿಗುಟಾದ ಬಿಳಿ ಬಣ್ಣದ ಅಂಟಿದ್ದು, ಇದು ಕೈಗೆ ಅಂಟಿಕೊಳ್ಳುತ್ತದೆ. ಹೀಗಾಗಿ ಈ ತೊಂದರೇನೇ ಬೇಡವೆಂದು ಸಿಪ್ಪೆ ಸುಲಿದ ಹಣ್ಣುಗಳನ್ನೆ ಖರೀದಿಸುವವರೇ ಹೆಚ್ಚು. ಒಂದು ವೇಳೆ ನೀವೇನಾದರೂ ಮಾರುಕಟ್ಟೆಯಿಂದ ಹಲಸಿನ ಹಣ್ಣು ತಂದು ಕತ್ತರಿಸುವಿರಾದರೆ ಈ ಸಲಹೆಗಳನ್ನು ಅನುಸರಿಸಿ.
* ಹಲಸಿನ ಹಣ್ಣನ್ನು ಕತ್ತರಿಸುವಾಗ ಕೆಳಗಡೆ ಪೇಪರ್ ಇಟ್ಟುಕೊಳ್ಳಿ. ಇಲ್ಲವಾದರೆ ಇದರ ಒಳಗಿರುವ ಬಿಳಿ ಬಣ್ಣದ ಅಂಟು ನೆಲಕ್ಕೆ ಹಾಗೂ ಕೈಗಳಿಗೆ ಅಂಟಿಕೊಳ್ಳುತ್ತದೆ.
* ಕತ್ತರಿಸುವ ಮುನ್ನ ಕೈಗೆ ಹಾಗೂ ಚಾಕುವಿಗೆ ತೆಂಗಿನೆಣ್ಣೆಯನ್ನು ಹಚ್ಚಿಕೊಳ್ಳಿ. ಹೀಗೆ ಮಾಡಿದ್ದಲ್ಲಿ ಅಂಟು ಕೈಗೆ ತಾಗಿದರೂ ಮೆತ್ತಿಕೊಳ್ಳುವುದಿಲ್ಲ.
* ಹಣ್ಣನ್ನು ಎರಡು ಭಾಗವಾಗಿ ಕತ್ತರಿಸಿದ ಬಳಿಕ ಹಲಸಿನ ಹಣ್ಣಿನ ಒಳಭಾಗದಲ್ಲಿರುವ ಅಂಟನ್ನು ಪೇಪರ್ ನಿಂದ ಒರೆಸಿಕೊಳ್ಳಿ.
ಇದನ್ನೂ ಓದಿ: ಧೂಮಪಾನ ಹಾಗೂ ತಂಬಾಕು ಸೇವನೆಯಿಂದ ದೂರವಿರುವುದು ಹೇಗೆ? ಇಲ್ಲಿದೆ ಸಿಂಪಲ್ ಮನೆ ಮದ್ದು
* ಹಣ್ಣಿನ ಮೇಲಿರುವ ನಾರುಗಳನ್ನು ಚಾಕುವಿನಿಂದ ಕತ್ತರಿಸಿ ಹಣ್ಣನ್ನು ಬೇರ್ಪಡಿಸಿ ಸವಿಯ ಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: