Jaggery: ನೀವು ಖರೀದಿಸಿರುವ ಬೆಲ್ಲ ಅಸಲಿಯೇ ನಕಲಿಯೇ? ಪತ್ತೆ ಹಚ್ಚಲು ಇಲ್ಲಿದೆ ಸುಲಭ ವಿಧಾನ

ಮನೆಯಲ್ಲಿ ಯಾವುದೇ ಸಿಹಿ ತಿಂಡಿ ಮಾಡಿದರೂ ಬೆಲ್ಲವನ್ನು ಬಳಸಿಯೇ ಬಳಸುತ್ತಾರೆ. ಈ ನೈಸರ್ಗಿಕ ಸಿಹಿಕಾರಕವಾಗಿ ಬೆಲ್ಲದಲ್ಲಿಯೂ ಕಲಬೆರಕೆ ಕಾಣಬಹುದು. ಬೆಲ್ಲಕ್ಕೆ ಸೀಮೆಸುಣ್ಣದ ಪುಡಿ ಅಥವಾ ಸೋಡಾ ಸೇರಿದಂತೆ ಇನ್ನಿತರ ರಾಸಾಯನಿಕಗಳನ್ನು ಬೆರೆಸಿ ಕಲಬೆರಕೆ ಮಾಡಲಾಗುತ್ತಿದೆ. ಹೆಚ್ಚಿನವರು ಬೆಲ್ಲದ ಬಣ್ಣ ನೋಡಿಯೇ ಖರೀದಿ ಮಾಡುತ್ತಾರೆ. ಮಾರುಕಟ್ಟೆಯಿಂದ ಖರೀದಿ ಮಾಡಿ ತಂದ ಬೆಲ್ಲದ ಶುದ್ಧತೆಯನ್ನು ಹೇಗೆ ಪರೀಕ್ಷಿಸಬಹುದು? ಎನ್ನುವ ಮಾಹಿತಿ ಇಲ್ಲಿದೆ.

Jaggery: ನೀವು ಖರೀದಿಸಿರುವ ಬೆಲ್ಲ ಅಸಲಿಯೇ ನಕಲಿಯೇ? ಪತ್ತೆ ಹಚ್ಚಲು ಇಲ್ಲಿದೆ ಸುಲಭ ವಿಧಾನ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 25, 2025 | 12:34 PM

ಯಾವುದೇ ಸಿಹಿ ತಿಂಡಿಯಿರಲಿ ಸಕ್ಕರೆಗಿಂತ ಬೆಲ್ಲ ಬಳಸಿದರೇನೇ ರುಚಿ ಹೆಚ್ಚು ಹಾಗೂ ಆರೋಗ್ಯಕ್ಕೂ ಉತ್ತಮ. ಭಾರತೀಯ ಅಡುಗೆ ಮನೆಯಲ್ಲಿ ಬೆಲ್ಲವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ಜೀವಸತ್ವಗಳು, ಖನಿಜಗಳು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿದೆ. ಹೀಗಾಗಿ ನಿಯಮಿತ ಬೆಲ್ಲ ಸೇವನೆಯಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ. ಆದರೆ ಮಾರುಕಟ್ಟೆಯಲ್ಲಿ ಕಲಬೆರಕೆಯುಕ್ತ ಬೆಲ್ಲ ಮಾರಾಟ ಮಾಡಲಾಗುತ್ತದೆ. ಕಲಬೆರಕೆ ಬೆಲ್ಲ ಸೇವನೆಯಿಂದ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ಹೀಗಾಗಿ ಬೆಲ್ಲ ಅಸಲಿಯೇ ನಕಲಿಯೇ ಎಂದು ಈ ಕೆಲವು ವಿಧಾನಗಳಿಂದ ಕಂಡು ಹಿಡಿಯಬಹುದು.

  •  ಬೆಲ್ಲದ ವಿನ್ಯಾಸದಿಂದಲೇ ಅದು ಅಸಲಿಯೇ ನಕಲಿಯೇ ಎಂದು ಪತ್ತೆ ಹಚ್ಚಬಹುದು. ಶುದ್ಧ ಬೆಲ್ಲವು ಹಗುರ ಮತ್ತು ಮೃದುವಾಗಿದ್ದು, ಸ್ವಲ್ಪ ಜಿಗುಟಾಗಿರುತ್ತದೆ. ಈ ಬೆಲ್ಲವನ್ನು ಸುಲಭವಾಗಿ ಒಡೆಯಬಹುದು. ಆದರೆ ಕಲಬೆರಕೆ ಬೆಲ್ಲವು ಗಟ್ಟಿಯಾಗಿದ್ದು, ಪುಡಿ ಮಾಡುವುದು ಕಷ್ಟಕರ.
  • ಬೆಲ್ಲಕ್ಕೆ ಸಲ್ಫರ್ ಸಂಯುಕ್ತ ಬಳಸಿ ಕಲಬೆರಕೆ ಮಾಡಿದ್ದರೆ ಅದನ್ನು ಸುಲಭವಾಗಿ ಪರೀಕ್ಷಿಸಬಹುದು. ಹೀಗಾಗಿ ಒಂದು ತುಂಡು ಬೆಲ್ಲವನ್ನು ನೀರಿನಲ್ಲಿ ಕರಗಿಸಿಕೊಳ್ಳಿ. ಅದಕ್ಕೆ ಕೆಲವು ಹನಿ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿ. ಈ ವೇಳೆ ಗುಳ್ಳೆಗಳು ಕಾಣಿಸಿಕೊಂಡರೆ ಸಲ್ಫರ್ ಕಲಬೆರಕೆಯಾಗಿರುವುದು ಖಚಿತ.
  • ಶುದ್ಧ ಬೆಲ್ಲದ ಬಣ್ಣವು ಕಂದು ಅಥವಾ ಹಳದಿ ಬಣ್ಣದ್ದಾಗಿರುತ್ತದೆ. ಬೆಲ್ಲದ ಬಣ್ಣವು ತುಂಬಾ ಪ್ರಕಾಶಮಾನವಾಗಿ ಹಾಗೂ ಆಕರ್ಷಕವಾಗಿದ್ದರೆ ಅದಕ್ಕೆ ಕೃತಕ ಬಣ್ಣಗಳನ್ನು ಸೇರಿಸಿರುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಒಂದು ಸಣ್ಣ ತುಂಡನ್ನು ನೀರಿನಲ್ಲಿ ಕರಗಿಸಿ. ನೀರಿನ ಬಣ್ಣ ಬದಲಾದರೆ ಅದಕ್ಕೆ ಬಣ್ಣ ಹಾಕಲಾಗಿದ್ದು ಕಲಬೆರಕೆಯಾಗಿದೆ ಎಂದು ಅರ್ಥ ಮಾಡಿಕೊಳ್ಳಿ.
  • ಶುದ್ಧ ಬೆಲ್ಲವು ರುಚಿಯಲ್ಲಿ ಸಿಹಿಯಾಗಿದ್ದು ಸ್ವಲ್ಪ ಮಣ್ಣಿನ ಪರಿಮಳವನ್ನು ಹೊರಸೂಸುತ್ತದೆ. ಆದರೆ ಬೆಲ್ಲವು ಅತಿಯಾದ ಸಿಹಿ, ರಾಸಾಯನಿಕ ಅಥವಾ ಮಸಾಲೆಯುಕ್ತವಾಗಿದ್ದರೆ ಅದು ಕಲಬೆರಕೆ ಬೆಲ್ಲ ಎನ್ನುವುದು ಖಚಿತವಾಗುತ್ತದೆ.
  • ಶುದ್ಧ ಬೆಲ್ಲವನ್ನು ಬಿಸಿ ಮಾಡಿದರೆ ಕರಗಿ ದಪ್ಪ ದ್ರವವಾಗುತ್ತದೆ. ಆದರೆ ನೀವು ಮಾರುಕಟ್ಟೆಯಿಂದ ಖರೀದಿ ಮಾಡಿರುವ ಬೆಲ್ಲವೂ ಕಲಬೆರಕೆಯಾಗಿದ್ದರೆ ಬಿಸಿ ಮಾಡಿದಾಗ ಸಕ್ಕರೆ ಹರಳುಗಳು ಇಲ್ಲದಿದ್ದರೆ ಶೇಷವು ಉಳಿದುಬಿಡಬಹುದು. ಹೀಗೆ ಉಳಿದರೆ ಬೆಲ್ಲದಲ್ಲಿ ರಾಸಾಯನಿಕಗಳನ್ನು ಬೆರೆಸಲಾಗಿದೆ ಎಂದರ್ಥ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ