Jewellery Tips: ಉಡುಗೆಗೆ ಹೊಂದುವಂತೆ ಚೆಂದನೆಯ ಆಭರಣಗಳ ಆಯ್ಕೆ ಹೀಗಿರಲಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 28, 2025 | 4:20 PM

ಹೆಣ್ಣು ಮಕ್ಕಳು ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಮನೆಯಲ್ಲಿ ಮದುವೆ, ಇನ್ಯಾವುದೇ ಸಮಾರಂಭ ಇದ್ದು ಬಿಟ್ಟರೆ ಕೇಳುವುದೇ ಬೇಡ. ಒಂದು ತಿಂಗಳ ಹಿಂದೆಯೇ ತಯಾರಿಗಳು ನಡೆಯುತ್ತಿರುತ್ತವೆ. ಅದರಲ್ಲಿಯೂ ಯಾವ ಬಟ್ಟೆ ಧರಿಸುವುದು ಹಾಗೂ ಯಾವ ರೀತಿ ಆಭರಣಗಳು ಮ್ಯಾಚ್ ಆಗುತ್ತದೆ ಹೀಗೆ ನಾನಾ ರೀತಿಯ ಗೊಂದಲಗಳಿರುತ್ತವೆ. ಹೀಗಾಗಿ ನಿಮ್ಮ ಉಡುಗೆಗೆ ಹೊಂದುವಂತಹ ಆಭರಣಗಳ ಆಯ್ಕೆ ಮಾಡುವಾಗ ಕೆಲವು ವಿಚಾರಗಳು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ, ಈ ಕುರಿತಾದ ಕೆಲವು ಟಿಪ್ಸ್ ಇಲ್ಲಿದೆ.

Jewellery Tips: ಉಡುಗೆಗೆ ಹೊಂದುವಂತೆ ಚೆಂದನೆಯ ಆಭರಣಗಳ ಆಯ್ಕೆ ಹೀಗಿರಲಿ
ಸಾಂದರ್ಭಿಕ ಚಿತ್ರ
Follow us on

ಮಹಿಳೆಯರು ಆಭರಣಪ್ರಿಯರು. ಆದರೆ ಇದೀಗ ಚಿನ್ನದ ಆಭರಣದ ಬದಲಿಗೆ ವಿವಿಧ ವಿನ್ಯಾಸದ ಮಾರುಕಟ್ಟೆಯಲ್ಲಿ ಹೆಂಗಳೆಯರ ಮನಸ್ಸು ಗೆಲ್ಲುತ್ತಿದೆ. ಹೀಗಾಗಿ ಹೆಚ್ಚಿನವರು ಟೆಂಪಲ್ ಜ್ಯುವೆಲ್ಲರಿ ಸೇರಿದಂತೆ ಟ್ರೆಂಡಿಂಗ್ ನಲ್ಲಿರುವ ಆಕರ್ಷಕ ವಿನ್ಯಾಸದ ಆಭರಣಗಳು ಖರೀದಿ ಮಾಡುತ್ತಾರೆ. ಅದಲ್ಲದೇ, ಯಾವುದೇ ಸಮಾರಂಭಗಳಾಗಿರಲಿ ಅಲ್ಲಿಗೆ ನಾವು ರೆಡಿಯಾಗಬೇಕಾದರೆ ಈವೆಂಟ್ ಗೆ ತಕ್ಕಂತೆ ಸಿದ್ಧವಾಗುವುದು ಮುಖ್ಯ. ಈ ಆಭರಣಗಳ ವಿಷಯದಲ್ಲಿ ತಮ್ಮ ಉಡುಗೆಗೆ ಮ್ಯಾಚ್ ಆಗುತ್ತದೆಯೇ ಇಲ್ಲವೋ, ಈ ಆಭರಣ ಧರಿಸಿದರೆ ತಾನು ಸುಂದರವಾಗಿ ಕಾಣುತ್ತೇನೋ ಇಲ್ಲವೋ ಹೀಗೆ ನಾನಾ ರೀತಿಯ ಪ್ರಶ್ನೆಗಳಿರುತ್ತದೆ. ಹೀಗಾಗಿ ಯಾವ ಬಟ್ಟೆಗೆ ಯಾವ ಆಭರಣ ಧರಿಸಿದರೆ ನೀವು ಆಕರ್ಷಕವಾಗಿ ಕಾಣುತ್ತೀರಿ ಎನ್ನುವ ವಿಚಾರಗಳ ಬಗ್ಗೆ ಹೆಚ್ಚು ಗಮನ ಕೊಡುವುದು ಮುಖ್ಯ.

  • ಸಂದರ್ಭಕ್ಕೆ ಅನುಗುಣವಾಗಿ ಆಭರಣ ಆಯ್ಕೆ ಮಾಡಿಕೊಳ್ಳಿ : ಆಭರಣಗಳನ್ನು ಖರೀದಿ ಮಾಡುವ ವೇಳೆ ನೀವು ಇದನ್ನು ಧರಿಸುವ ಸಂದರ್ಭ ಯಾವುದು ಎನ್ನುವುದು ತಿಳಿದಿರಲಿ. ಹೋಗುವ ಸ್ಥಳ ಅಥವಾ ಸಮಾರಂಭದ ಬಗ್ಗೆ ತಿಳಿದಿರಲಿ. ಮದುವೆ ಅಥವಾ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರೆ ನಿಮ್ಮ ಡ್ರೆಸ್ ತುಂಬಾನೇ ಹೆವಿ ಇದ್ದರೆ ಈ ಸಂದರ್ಭದಲ್ಲಿ ಹಗುರವಾದ ಆಭರಣಗಳನ್ನು ಧರಿಸುವುದು ಸೂಕ್ತ. ಸಮಯ ಸಂದರ್ಭಕ್ಕೆ ಅನುಗುಣವಾಗಿ ಉಡುಗೆ ಹಾಗೂ ಆಭರಣಗಳನ್ನು ತೊಟ್ಟರೆ ಸುಂದರವಾಗಿ ಕಾಣಿಸಿಕೊಳ್ಳಬಹುದು.
  • ಮುತ್ತಿನ ಆಭರಣಗಳ ಆಯ್ಕೆಯಿರಲಿ : ಮಹಿಳೆಯರಿಗೆ ಮುತ್ತಿನ ಆಭರಣದ ಮೇಲೆ ಎಲ್ಲಿಲ್ಲದ ಆಸೆಯಿರುತ್ತದೆ. ಸಿಂಪಲ್ ಡ್ರೆಸ್ ಇರಲಿ ಅಥವಾ ಕ್ಯಾಶುಯಲ್ ಡ್ರೆಸ್ ಇರಲಿ. ಒಂದು ಎಳೆಯ ಮುತ್ತಿನ ಸರವು ನಿಮ್ಮ ನೋಟವನ್ನೇ ಬದಲಾಯಿಸುತ್ತದೆ. ಅದಲ್ಲದೇ, ಮದುವೆ ಅಥವಾ ಇನ್ನಿತ್ತರ ಸಮಾರಂಭಗಳಿಗೆ ಮುತ್ತಿನ ಹಾರ , ಮುತ್ತಿನ ಜೋಕರ್ ಗಳು ಧರಿಸುವುದು ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.
  • ಉಡುಪಿನ ಬಣ್ಣದ ಜೊತೆ ಆಭರಣಗಳನ್ನು ಹೊಂದಿಸಿ : ಧರಿಸುವ ಉಡುಗೆಗೆ ಆಭರಣಗಳನ್ನು ಮಿಸ್ ಮ್ಯಾಚ್ ಮಾಡುವುದು ಗೊತ್ತಿರಬೇಕು. ನೀವು ಧರಿಸುವ ಉಡುಪಿನಲ್ಲಿ ಚಿನ್ನ, ಬೆಳ್ಳಿಯ ಬಣ್ಣವಿದ್ದರೆ ಅದಕ್ಕೆ ಹೊಂದುವ ಆಭರಣಗಳಾದ ಜೋಡಿಸಿ ಧರಿಸಿಕೊಳ್ಳಿ. ಇಲ್ಲಿ ಮುಖ್ಯವಾಗಿ ಧರಿಸುವ ಆಭರಣಗಳು ನಿಮಗೆ ಆರಾಮದಾಯಕವಾಗಿದೆಯೇ ಎನ್ನುವುದು ಮುಖ್ಯ.
  • ಬಟ್ಟೆಗೆ ಹೊಂದುವ ಜುಮ್ಕಿಗಳಿರಲಿ : ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಜುಮ್ಕಾಗಳು ಲಭ್ಯವಿದೆ. ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳುತ್ತೀರಿ ಎಂದಾದರೆ ಹಿಂದೆ ಮುಂದೆ ಯೋಚಿಸದೇ ಜುಮ್ಕಾಗಳನ್ನು ಆಯ್ಕೆ ಮಾಡಿಕೊಳ್ಳಿ. ಅದಲ್ಲದೇ, ಇಂಡೋ-ವೆಸ್ಟರ್ನ್ ಜೊತೆಗೆ ಜುಮ್ಕಿಗಳನ್ನು ಮ್ಯಾಚ್ ಮಾಡಿ ಧರಿಸುವುದು ನಿಮ್ಮ ನೋಟವನ್ನು ಬದಲಾಯಿಸುತ್ತದೆ.
  • ಧರಿಸುವ ಆಭರಣಗಳಲ್ಲಿ ಸಮತೋಲನ ಕಾಪಾಡಿ : ಉಡುಪಿ ತಕ್ಕಂತೆ ಆಭರಣವನ್ನು ಆಯ್ಕೆಮಾಡುವಾಗ, ಸಮತೋಲನವನ್ನು ಕಾಪಾಡಿಕೊಂಡರೆ ಅಂದವಾಗಿ ಕಾಣಿಸಿಕೊಳ್ಳಲು ಸಾಧ್ಯ. ಉದಾಹರಣೆಗೆ ನೀವು ನೆಕ್ಲೇಸ್ ಧರಿಸುತ್ತಿದ್ದರೆ, ಸರಳ ಕಿವಿಯೋಲೆಗಳು ಮತ್ತು ಕಡಗಗಳನ್ನು ಜೋಡಿಸಿಕೊಳ್ಳಿ. ಅದೇ ರೀತಿ ದೊಡ್ಡದಾದ ಕಿವಿಯೋಲೆಗಳನ್ನು ಧರಿಸುತ್ತಿದ್ದರೆ,ಸರಳವಾದ ನೆಕ್ಲೇಸ್ ಧರಿಸುವುದು ಮುಖ್ಯವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ