AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test : ನಿಮ್ಮ ಕಿವಿಯೊಳಗೆ ಕೂದಲು ಇವೆಯೇ? ಹಾಗಾದ್ರೆ ನೀವು ಅದೃಷ್ಟವಂತರಂತೆ

ನೀವು ಕೆಲವರ ಕಿವಿಯನ್ನು ಗಮನಿಸಿರಬಹುದು. ಕೆಲವರಿಗೆ ಕಿವಿಯ ತುಂಬಾ ಕೂದಲಿರುತ್ತದೆ. ಇನ್ನು ಕೆಲವರಿಗೆ ಕಿವಿಯ ಮೇಲೆ ಒಂದೇ ಒಂದು ಕೂದಲು ಕೂಡ ಇರುವುದಿಲ್ಲ. ಕೆಲವೊಂದಿಷ್ಟು ಜನರಿಗೆ ಕಿವಿಯ ಮೇಲೆ ಕೂದಲು ಚಿಕ್ಕದಾಗಿರುತ್ತದೆ. ಆದರೆ ಈ ಕೂದಲಿನ ಆಧಾರದ ಮೇಲೆ ವ್ಯಕ್ತಿತ್ವವನ್ನು ನಿರ್ಧರಿಸಬಹುದು ಎನ್ನಲಾಗಿದೆ. ನಿಮ್ಮ ಕಿವಿಯ ಮೇಲೆ ಕೂದಲು ಹೆಚ್ಚಿದೆಯೇ, ಕಡಿಮೆಯಿದೆಯೇ ಎಂದು ಒಮ್ಮೆ ಪರೀಕ್ಷಿಸಿ. ಈ ಮೂಲಕ ನಿಮಗೆ ಗೊತ್ತಿರದ ರಹಸ್ಯಮಯ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದಾಗಿದ್ದು, ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Personality Test : ನಿಮ್ಮ ಕಿವಿಯೊಳಗೆ ಕೂದಲು ಇವೆಯೇ? ಹಾಗಾದ್ರೆ ನೀವು ಅದೃಷ್ಟವಂತರಂತೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jan 28, 2025 | 11:15 AM

Share

ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ ವ್ಯಕ್ತಿತ್ವ, ಗುಣ ಸ್ವಭಾವ ಹಾಗೂ ಯೋಚಿಸುವ ರೀತಿಯಿಂದಲೇ ಗುರುತಿಸಿಕೊಳ್ಳುತ್ತಾರೆ. ಹೀಗಾಗಿ ಒಬ್ಬರನ್ನೊಬ್ಬರು ಹೋಲಿಕೆ ಮಾಡಿ ಈ ವ್ಯಕ್ತಿಯೂ ಹೀಗೆಯೇ ಎಂದು ನಿಖರವಾಗಿ ಹೇಳಲು ಅಸಾಧ್ಯ. ಆದರೆ ಆ ವ್ಯಕ್ತಿಯನ್ನು ಹೇಗೆ ಎಲ್ಲರೊಂದಿಗೆ ವರ್ತಿಸುತ್ತಾನೆ ಎನ್ನುವುದರ ಮೇಲೆ ವ್ಯಕ್ತಿಯ ವ್ಯಕ್ತಿತ್ವ ನಿರ್ಧರಿಸಬಹುದು. ಆದರೆ, ಕಿವಿಯ ಮೇಲಿನ ಕೂದಲು ಕೂಡ ವ್ಯಕ್ತಿತ್ವ ಬಿಚ್ಚಿಡುತ್ತದೆಯಂತೆ. ಕಿವಿಯ ಮೇಲಿನ ಕೂದಲಿನ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಅಥವಾ ಗುಣಸ್ವಭಾವ ತಿಳಿದುಕೊಳ್ಳಬಹುದಂತೆ.

  • ಕಿವಿಯೊಳಗಿನ ಕೂದಲು : ಕೆಲವರಿಗೆ ಕಿವಿಯ ಮೇಲಲ್ಲ, ಕಿವಿಯ ಒಳಗೆ ಕೂದಲಿರುತ್ತದೆ. ಈ ರೀತಿ ಕೂದಲು ಇರುವ ವ್ಯಕ್ತಿಗಳು ತುಂಬಾನೇ ಅದೃಷ್ಟವಂತರಂತೆ. ಈ ಜನರಿಗೆ ಹಣದ ವಿಷಯದಲ್ಲಿಯೂ ಸಧೃಢರಾಗಿರುತ್ತಾರೆ. ಜೀವನದ ಯಾವುದೇ ಸಂದರ್ಭದಲ್ಲಿ ಹಣದ ಸಮಸ್ಯೆಯನ್ನು ಎದುರಿಸುವುದೇ ಇಲ್ಲವಂತೆ. ಅದೃಷ್ಟ ಯಾವಾಗಲೂ ಇವರ ಜೊತೆಗೆ ಇದ್ದು ಹೀಗಾಗಿ ಆರ್ಥಿಕವಾಗಿ ಸದೃಢ ಹಾಗೂ ಉತ್ತಮ ಜೀವನವನ್ನು ನಡೆಸುತ್ತಾರೆ.
  • ಕಿವಿಯ ಹೊರಭಾಗದ ಕೂದಲು : ಕೆಲವರಿಗೆ ಕಿವಿಯ ಹೊರಭಾಗದಲ್ಲಿ ದಟ್ಟವಾದ ಕೂದಲಿದ್ದು, ಕಿವಿಯೇ ಮುಚ್ಚಿ ಹೋಗಿರುತ್ತದೆ. ಈ ವ್ಯಕ್ತಿಗಳು ಸೃಜನಶೀಲರಾಗಿರುತ್ತಾರೆ. ತಮ್ಮ ಕಲೆಯಿಂದಲೇ ಜನರನ್ನು ಆಕರ್ಷಿಸುವ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಈ ಜನರ ವ್ಯಕ್ತಿತ್ವವು ತುಂಬಾ ಪ್ರಭಾವಶಾಲಿಯಾಗಿರುತ್ತದೆ. ತನ್ನ ಸುತ್ತಮುತ್ತಲಿನ ಜನರ ನಡುವೆ ಎದ್ದು ಕಾಣುವಂತೆ ಮಾಡುತ್ತದೆ. ಎಲ್ಲರ ಸ್ನೇಹ ಸಂಪಾದಿಸುವ ಗುಣ ಇವರದ್ದಾಗಿದ್ದು, ಸಾಮಾಜಿಕವಾಗಿ ಎಲ್ಲರೊಂದಿಗೂ ಬೆರೆಯುತ್ತಾರೆ. ಈ ಜನರು ಸಮಾಜದಲ್ಲಿ ಒಳ್ಳೆಯ ಹೆಸರು ಸಂಪಾದಿಸಿ ಖ್ಯಾತಿಗೆ ಪಾತ್ರರಾಗುತ್ತಾರೆ.
  • ಕಿವಿಗಳ ಮೇಲೆ ಸಣ್ಣ ಕೂದಲು : ಕಿವಿಯ ಮೇಲೆ ಸಣ್ಣದಾದ ಹೊಂದಿದ್ದರೆ ಅದು ಮಂಗಳಕರವಲ್ಲವಂತೆ. ಈ ಜನರು ಜೀವನದಲ್ಲಿ ಸಮಸ್ಯೆಗಳನ್ನೇ ಎದುರಿಸುವುದೇ ಹೆಚ್ಚು. ಯಾವುದೇ ಕೆಲಸಕ್ಕೆ ಕೈಹಾಕಿದರೂ ಅಡೆತಡೆಗಳು ಬಂದೇ ಬರುತ್ತದೆ. ಕಠಿಣ ಪರಿಶ್ರಮದ ಹೊರತಾಗಿ ಯಶಸ್ವಿಯಾಗುವುದಿಲ್ಲ. ಹೀಗಾಗಿ ಕೆಲಸ ಕಾರ್ಯಗಳಲ್ಲಿ ಪರಿಶ್ರಮ ಅತ್ಯಗತ್ಯವಾಗಿ ಬೇಕಾಗುತ್ತದೆ. ಎಲ್ಲರಿಗೂ ಸಹಾಯ ಮಾಡುವ ಗುಣ ಇವರಾದ್ದಾಗಿದ್ದು, ಆದರೆ ತಮ್ಮ ಜೀವನುದ್ದಕ್ಕೂ ಹಣದ ಸಮಸ್ಯೆಯನ್ನು ಎದುರಿಸುತ್ತಾರೆ.
  • ಕಿವಿಗಳ ಮೇಲೆ ಉದ್ದವಾದ ಕೂದಲು : ಕಿವಿಯ ಮೇಲೆ ಉದ್ದವಾದ ಕೂದಲು ಇದ್ದರೆ ಈ ಜನರು ಪ್ರತಿಭಾವಂತರು. ತಮ್ಮ ಪ್ರತಿಭೆಯಿಂದಲೇ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ಪ್ರೀತಿಪಾತ್ರರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿರುತ್ತಾರೆ. ಉತ್ತಮ ಕೇಳುಗರು ಹಾಗೂ ಸಲಹೆಗಾರರಾಗಿರುತ್ತಾರೆ. ಹೀಗಾಗಿ ಇವರ ಸುತ್ತಮುತ್ತಲಿನ ವ್ಯಕ್ತಿಗಳು ಇವರ ಬಳಿಯೇ ಸಲಹೆಗಳನ್ನು ಪಡೆಯುತ್ತಾರೆ. ದೇವರ ಮೇಲೆ ಅತೀವ ನಂಬಿಕೆ ಹಾಗೂ ಭಕ್ತಿಯನ್ನು ಹೊಂದಿದ್ದು, ತಮ್ಮ ಜೀವನವನ್ನು ಆಧ್ಯಾತ್ಮಿಕತೆಯಲ್ಲಿಯೇ ಕಳೆಯಲು ಬಯಸುತ್ತಾರೆ. ಹೀಗಾಗಿ ದೇವರ ಕೃಪೆ ಈ ವ್ಯಕ್ತಿಗಳ ಮೇಲೆ ಸದಾ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ