ದಕ್ಷಿಣ ಭಾರತದ ಸ್ಟೈಲ್​​ನಲ್ಲಿ ಕಾಂಗರೂ ಬಿರಿಯಾನಿ, ಮಾಡುವ ವಿಧಾನ ಇಲ್ಲಿದೆ ನೋಡಿ

ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಹೀಗೆ ಅನೇಕ ರೀತಿ ಬಿರಿಯಾನಿಗಳನ್ನು ನೀವು ಸೇವಿಸಿರಬಹುದು, ಆದರೆ ಎಂದಾದರೂ ಕಾಂಗರೂ ಬಿರಿಯಾನಿ ತಿಂದಿದ್ದೀರಾ? ಸಾಧ್ಯನೇ ಇಲ್ಲ. ತಿನ್ನುವುದು ಬಿಡಿ, ಅದನ್ನೂ ಮಾಡುವದು ಹೇಗೆ ? ಎಂಬುದು ಕೂಡ ಗೊತ್ತಿರಲ್ಲ. ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಒಂದು ವಿಡಿಯೋ ವೈರಲ್​ ಆಗಿದೆ. ನಿಪುನ್ ಲಿಯಾನಪತಿರಾನಾ ಎಂಬ ವ್ಯಕ್ತಿ ತನ್ನ ಇನ್‌ಸ್ಟಾಗ್ರಾಮ್‌ ಈ ಬಗ್ಗೆ ತಿಳಿಸಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

ದಕ್ಷಿಣ ಭಾರತದ ಸ್ಟೈಲ್​​ನಲ್ಲಿ ಕಾಂಗರೂ ಬಿರಿಯಾನಿ, ಮಾಡುವ ವಿಧಾನ ಇಲ್ಲಿದೆ ನೋಡಿ
ವೈರಲ್​ ವಿಡಿಯೋ
Edited By:

Updated on: May 03, 2025 | 5:31 PM

ಬಿರಿಯಾನಿ (biryani) ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಈ ದಕ್ಷಿಣ ಭಾರತದ ಜನರಿಗೆ ಬಿರಿಯಾನಿ ಪಂಚಪ್ರಾಣ, ಅದರಲ್ಲೂ ಆಂಧ್ರಪ್ರದೇಶ, ಹೈದರಬಾದ್​, ತಮಿಳುನಾಡು, ಕೇರಳ, ಮಂಗಳೂರು, ಇನ್ನು ಅನೇಕ ಕಡೆ ನಾನ್​​​ವೇಜ್ ಪ್ರಿಯರೇ ಹೆಚ್ಚು. ವಿಭಿನ್ನ ರೀತಿಯ ಬಿರಿಯಾನಿಯನ್ನು ಇಲ್ಲಿನ ಜನ ಪ್ರಯೋಗ ಮಾಡುತ್ತಾರೆ. ಬೇರೆ ಬೇರೆ ವಿಧಗಳ ಬಿರಿಯಾನಿ ಇರುತ್ತದೆ. ಆದರೆ ಈ ಬಿರಿಯಾನಿ ತಿಂದರಲೂ ಸಾಧ್ಯವಿಲ್ಲ, ಕಾಂಗರೂ ಬಿರಿಯಾನಿಯ (kangaroo biryani) ಬಗ್ಗೆ ಕೇಳಿದ್ದೀರಾ? ಹೌದು ಕಾಂಗರೂ ಮಾಂಸದೊಂದಿಗೆ ದಕ್ಷಿಣ ಭಾರತೀಯ ಶೈಲಿಯ ಬಿರಿಯಾನಿಯ ಪಾಕವಿಧಾನದ ವೀಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಆಹಾರ ಪ್ರಿಯರಿಂದ ಇದೊಂದು ವಿಚಿತ್ರವಾಗಿದ್ದರೂ, ಇದು ನಿಜ, ಕಾಂಗರ್​​​​​ ಮಾಂಸದಿಂದ ಮಾಡಿದ ಹೊಸ ಬಿರಿಯಾನಿ ರೆಸಿಪಿ.

ನಿಪುನ್ ಲಿಯಾನಪತಿರಾನಾ ಎಂಬ ವ್ಯಕ್ತಿ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ರೆಸಿಪಿಯನ್ನು ಹಂಚಿಕೊಂಡಿದ್ದಾರೆ. ಕಾಂಗರೂ ಮಾಂಸವು ತೆಳ್ಳಗಿರುತ್ತದೆ ಮತ್ತು ಜಿಗುಟಾಗಿರುತ್ತದೆ. ಈ ಮಾಂಸಕ್ಕೆ ಯಾವ ರೀತಿ ಮಸಾಲೆಗಳನ್ನು ತಯಾರಿಸಿಕೊಂಡಿರುವ ಎಂಬ ಬಗ್ಗೆಯೂ ಹೇಳಿದ್ದಾರೆ.

ಬೇಕಾಗುವ ಪದಾರ್ಥಗಳು:

500 ಗ್ರಾಂ ಕತ್ತರಿಸಿದ ಕಾಂಗರೂ ಮಾಂಸ

1 ಟೀಸ್ಪೂನ್ ಅರಿಶಿನ

ರುಚಿಗೆ ತಕ್ಕಷ್ಟು ಉಪ್ಪು

1 ಟೀಸ್ಪೂನ್ ಕರಿಮೆಣಸು

2 ಟೀಸ್ಪೂನ್ ಶುಂಠಿ ಎಣ್ಣೆ (ಎಳ್ಳು ಎಣ್ಣೆ)

2 ಟೀಸ್ಪೂನ್ ತುಪ್ಪ

2 ದೊಡ್ಡ ಕೆಂಪು ಈರುಳ್ಳಿ, ಹೋಳುಗಳು

1.5 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್

3 ಹಸಿರು ಮೆಣಸಿನಕಾಯಿಗಳು

1/2 ಕತ್ತರಿಸಿದ ಟೊಮೆಟೊಗಳು

1.5 ಟೀಸ್ಪೂನ್ ಬಿರಿಯಾನಿ ಮಸಾಲ

1/3 ಟೀಸ್ಪೂನ್ ಬಿಸಿ ಮೆಣಸಿನ ಪುಡಿ

1/2 ಟೀಸ್ಪೂನ್ ಕಾಶ್ಮೀರಿ ಮೆಣಸಿನ ಪುಡಿ

3 ಟೀಸ್ಪೂನ್ ದೇಸಿ ಅಥವಾ ಗ್ರೀಕ್ ಮೊಸರು

ಬೇಕಾದರೆ ನೀರು ಸೇರಿಸಿಕೊಳ್ಳಬಹುದು

3 ಕಪ್ ಬಾಸ್ಮತಿ ಅಕ್ಕಿ, 30 ನಿಮಿಷಗಳ ಕಾಲ ನೆನೆಸಿಡಿ

ಒಂದು ಹಿಡಿ ಕತ್ತರಿಸಿದ ಕೊತ್ತಂಬರಿ ಸೊಪ್ಪು

ಮಸಾಲೆಗಳು:

1/2 ದಾಲ್ಚಿನ್ನಿ ಕಡ್ಡಿ

2 ತುಂಡುಗಳು ಕಪ್ಪು ಕಲ್ಲಿನ ಹೂವು

1 ಜಟೆ

3 ಏಲಕ್ಕಿ ಬೀಜಗಳು

2 ಲವಂಗ

1 ಟೀಸ್ಪೂನ್ ಫೆನ್ನೆಲ್ ಬೀಜಗಳು

1.5 ಟೀಸ್ಪೂನ್ ಜೀರಿಗೆ ಬೀಜಗಳು

1 ಕರಿಬೇವಿನ ಎಲೆ

ವಿಡಿಯೋ ಇಲ್ಲಿದೆ ನೋಡಿ:

ಮಾಡುವ ವಿಧಾನ:

ಇದಕ್ಕೆ ಪ್ರಮುಖವಾಗಿ ಹಾಗೂ ಮೊದಲು ಅರಿಶಿನ, ಕರಿಮೆಣಸು ಮತ್ತು ಉಪ್ಪನ್ನು ಬಳಸುತ್ತಾರೆ. ಇದೆಲ್ಲವನ್ನು ಹಾಕಿ ಮಿಶ್ರಣ ಮಾಡಿದ್ದಾರೆ. ಒಂದು ದೊಡ್ಡ ಪಾತ್ರೆಯಲ್ಲಿ ಶುಂಠಿ, ಎಣ್ಣೆ ಹಾಕಿ, ಅದರ ಜತೆಗೆ ತುಪ್ಪ ಹಾಕಿ ಪ್ರೈ ಮಾಡಿ, ದಾಲ್ಚಿನ್ನಿ, ಏಲಕ್ಕಿ, ಕರಿಬೇವಿನ ಎಲೆ ಇತ್ಯಾದಿಗಳನ್ನು ಒಳಗೊಂಡಂತೆ ಆಯ್ದ ಸಂಪೂರ್ಣ ಮಸಾಲೆಗಳನ್ನು ಹಾಕಿ ಮಿಶ್ರಣ ಮಾಡಬೇಕು.

ನಂತರ ಕತ್ತರಿಸಿದ ಈರುಳ್ಳಿ ಹಾಕಿ ಅದು ಕಂದು ಬಣ್ಣಕ್ಕೆ ಬರುವವರೆಗೆ ಪ್ರೈ ಮಾಡಬೇಕು. ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಶ್ರಣ ಮಾಡಬೇಕು. ನಂತರ ಹಸಿರು ಮೆಣಸಿನಕಾಯಿಗಳು ಮತ್ತು ಕತ್ತರಿಸಿದ ಟೊಮೆಟೊಗಳನ್ನು ಸೇರಿಸಬೇಕು. ಮಾಂಸವನ್ನು ಈ ಪ್ರೈಗೆ ಹಾಕುವ ಮೊದಲು ಈ ಮಿಶ್ರಣವನ್ನು ಸುಮಾರು 4 ನಿಮಿಷಗಳ ಕಾಲ ಬೇಯಿಯಲು ಬಿಡಬೇಕು.  4 ನಿಮಿಷಗಳ ಕಾಲ ಕಾಂಗರೂ ಮಾಂಸಕ್ಕೆ ಅರಿಶಿನ, ಕರಿಮೆಣಸು ಮತ್ತು ಉಪ್ಪು ಮಸಾಲೆಗೆ ಹಾಕಿ ಮಿಶ್ರಣ ಮಾಡಬೇಕು. ನಂತರ ಬಿರಿಯಾನಿ ಮಸಾಲ, ಖಾರದ ಮೆಣಸಿನ ಪುಡಿ ಮತ್ತು ಕಾಶ್ಮೀರಿ ಮೆಣಸಿನ ಪುಡಿಯನ್ನು ಹಾಕಬೇಕು. ಮಸಾಲೆಗಳ ಸುವಾಸನೆ ಬರಲು ಅದನ್ನು ಸರಿಯಾಗಿ ಬೇಯಿಸಬೇಕು. ಸ್ವಲ್ಪ ಸಮಯದ ನಂತರ ಅದಕ್ಕೆ ಸ್ವಲ್ಪ ಮೊಸರು ಮತ್ತು ನೀರನ್ನು ಹಾಕಬೇಕು.

ಇದನ್ನೂ ಓದಿ: ಸ್ನಾನದ ನೀರಿಗೆ ಒಂದು ಚಿಟಿಕೆ ಕಲ್ಲುಪ್ಪು ಬೆರೆಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ?

ನಂತರದಲ್ಲಿ ಅದು ಕುದಿಯಲು ಪ್ರಾರಂಭಿಸುತ್ತದೆ. ಅದರ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ, ಉರಿಯನ್ನು ಕಡಿಮೆ ಮಾಡಬೇಕು. ಪಾತ್ರೆ ಮುಚ್ಚಲ ಮುಚ್ಚಿ, ಸುಮಾರು 45 ನಿಮಿಷಗಳ ಕಾಲ ಬೇಯಿಯಲು ಬೀಡಬೇಕು. ನಂತರ ನೆನೆಸಿದ ಅನ್ನವನ್ನು ನಿಧಾನವಾಗಿ ಬೆರೆಸಿ ಸ್ವಲ್ಪ ಹೆಚ್ಚು ನೀರನ್ನು ಹಾಕಬೇಕು. ನಂತರ ಅದರ ಮುಚ್ಚಲ ತೆಗೆದು ಕಡಿಮೆ ಉರಿಯಲ್ಲಿ ಸುಮಾರು ಒಂದು ಗಂಟೆಯವರೆಗೆ ಆವಿಯಲ್ಲೇ ಬೇಯಿಸಬೇಕು. ನಂತರ ಇದಕ್ಕೆ ಕತ್ತರಿಸಿಟ್ಟ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ ಎಂದು ನಿಪುನ್ ಲಿಯಾನಪತಿರಾನಾ ಹೇಳಿದ್ದಾರೆ. ಈ ಬಗ್ಗೆ ಅನೇಕರು ಕಮೆಂಟ್​​ ಮಾಡಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ಜೀವಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ