Kannada Rajyotsava 2024 : ಕನ್ನಡ ರಾಜ್ಯೋತ್ಸವಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಶುಭಕೋರಲು ಇಲ್ಲಿದೆ ಸಂದೇಶಗಳು
ಕನ್ನಡವೇ ಸತ್ಯ. ಕನ್ನಡವೇ ನಿತ್ಯ'. ಕನ್ನಡ ಎಂಬುದು ಬರೀ ಭಾಷೆಯಲ್ಲ, ಅದು ನಮ್ಮೆಲ್ಲರ ಉಸಿರು. ಹೀಗಾಗಿ ನವೆಂಬರ್ 1 ಬಂತೆಂದರೆ ಸಾಕು, ಎಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮವು ಮನೆ ಮಾಡುತ್ತದೆ. ಸುಮಾರು ಒಂದು ತಿಂಗಳುಗಳ ಕಾಲ ಕನ್ನಡ ರಾಜ್ಯೋತ್ಸವದ ಆಚರಣೆಗಳಿರುತ್ತದೆ. ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ನಿಮ್ಮ ಆತ್ಮೀಯರಿಗೆ ಹಾಗೂ ಪ್ರೀತಿ ಪಾತ್ರರಿಗೆ ವಿಶೇಷವಾಗಿ ಶುಭಾಶಯಗಳು ಕೋರಬೇಕೆಂದು ಬಯಸಿದ್ದರೆ ಸಂದೇಶಗಳು ಇಲ್ಲಿದೆ.
ಇಡೀ ಕರ್ನಾಟಕ ರಾಜ್ಯದ ಜನರು ಪ್ರತಿ ವರ್ಷ ಎದುರು ನೋಡುವ ಕರುನಾಡಿನ ಹಬ್ಬವೇ ಕನ್ನಡ ರಾಜ್ಯೋತ್ಸವ. ನಮ್ಮ ರಾಜ್ಯ ಒಗ್ಗೂಡಿದ ನೆನಪಿಗಾಗಿ ನವೆಂಬರ್ 1 ರಂದು ಆಚರಿಸಲಾಗುತ್ತದೆ. ಈ ದಿನದ ಅಧಿಕೃತ ಆಚರಣೆಯು 1956 ರಲ್ಲಿ ಪ್ರಾರಂಭಿಸಲಾಗಿದ್ದು, ಎಲ್ಲಾ ಕನ್ನಡ ಮಾತನಾಡುವ ಪ್ರದೇಶಗಳು ಒಗ್ಗೂಡಿ ಒಂದೇ ರಾಜ್ಯವನ್ನು ರಚಿಸಿದ ಸವಿನೆನಪಿನ ದಿನವಾಗಿದೆ. ಈ ವಿಶೇಷ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ವಿಶೇಷ ಸಂದೇಶಗಳನ್ನು ಕಳುಹಿಸಿ ಕನ್ನಡ ರಾಜ್ಯೋತ್ಸವದ ದಿನದ ಶುಭಾಶಯಗಳನ್ನು ಕೋರಬಹುದು.
- ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು.
- ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಭಾಷೆಯನ್ನು ಹೆಮ್ಮೆಯಿಂದ ಆಚರಿಸೋಣ ಮತ್ತು ನಮ್ಮ ರಾಜ್ಯ ಮತ್ತು ದೇಶವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಭರವಸೆ ಇರಲಿ. ಮತ್ತೊಮ್ಮೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
- ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಸಮಸ್ತ ಕನ್ನಡಿಗ ಕುಟುಂಬಕ್ಕೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
- ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ, ತಾಯಿ ಕನ್ನಡಾಂಬೆಗೆ ಜಯವಾಗಲಿ. ಸಮಸ್ತ ಕನ್ನಡಿಗ ಕುಟುಂಬಕ್ಕೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
- ಕಲಿಯೋಕೆ ಕೋಟಿ ಭಾಷೆ, ಆಡೂಕೇ ಒಂದೆ ಭಾಷೆ, ಕನ್ನಡ.. ಕನ್ನಡ.. ಕಸ್ತೂರಿ ಕನ್ನಡ… ಎಲ್ಲರಿಗೂ ಕೂಡ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
- ನುಡಿ ಕನ್ನಡ, ನಡೆ ಕನ್ನಡ, ಅಕ್ಷರ ಅಕ್ಷರದಲ್ಲಿ ಅರಿವು ಕನ್ನಡ.. ಎಲ್ಲಾ ಕನ್ನಡಿಗರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.
- ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ.. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:34 pm, Tue, 29 October 24