Kannada Rajyotsava 2025: ಕನ್ನಡ ರಾಜ್ಯೋತ್ಸವಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ಕೋರಿ
ಕನ್ನಡ ರಾಜ್ಯೋತ್ಸವದ ಅಥವಾ ಕರ್ನಾಟಕ ರಾಜ್ಯೋತ್ಸವವನ್ನು ನಮ್ಮ ರಾಜ್ಯ ಒಗ್ಗೂಡಿದ ನೆನಪಿಗಾಗಿ ನವೆಂಬರ್ 1 ರಂದು ಆಚರಿಸಲಾಗುತ್ತದೆ. ಹೀಗಾಗಿ ಕನ್ನಡ ಎಂಬುದು ಬರೀ ಭಾಷೆಯಲ್ಲ, ಅದು ನಮ್ಮೆಲ್ಲರ ಉಸಿರಾಗಿದೆ. ಒಂದು ತಿಂಗಳುಗಳ ಕಾಲ ಕನ್ನಡ ರಾಜ್ಯೋತ್ಸವದ ಆಚರಣೆಗಳಿದ್ದು, ಕನ್ನಡಿಗರ ಪಾಲಿನ ವಿಶೇಷ ದಿನದಂದು ಆತ್ಮೀಯರಿಗೆ ಹಾಗೂ ಪ್ರೀತಿ ಪಾತ್ರರಿಗೆ ಈ ರೀತಿ ಸಂದೇಶ ಕಳುಹಿಸಿ ಶುಭಾಶಯ ಕೋರಬಹುದು.

ಕನ್ನಡ ರಾಜ್ಯೋತ್ಸವ 2025Image Credit source: Social Media
ಕನ್ನಡ ರಾಜ್ಯೋತ್ಸವ (Kannada Rajyotsava) ಕನ್ನಡಿಗರ ಪಾಲಿಗೆ ಸಂಭ್ರಮದ ದಿನ. ಈ ವಿಶೇಷ ದಿನಕ್ಕಾಗಿ ಕರ್ನಾಟಕದ ಜನರು ಕಾದು ಕುಳಿತಿದ್ದಾರೆ. ಹೌದು, ಎಲ್ಲಾ ಕನ್ನಡ ಮಾತನಾಡುವ ಪ್ರದೇಶಗಳು ಒಗ್ಗೂಡಿ ಒಂದೇ ರಾಜ್ಯವನ್ನು ರಚಿಸಲಾಯಿತು. ನಮ್ಮ ರಾಜ್ಯ ಒಗ್ಗೂಡಿದ ನೆನಪಿಗಾಗಿ ಈ ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಅಧಿಕೃತ ಆಚರಣೆಯು 1956 ರಲ್ಲಿ ಪ್ರಾರಂಭಿಸಲಾಗಿದ್ದು, ಅಂದಿನಿಂದ ಈ ದಿನವನ್ನು ಅದ್ದೂರಿಯಯಾಗಿ ಆಚರಿಸಲಾಗುತ್ತದೆ. ಹೀಗಾಗಿ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಈ ಅರ್ಥಪೂರ್ಣ ಸಂದೇಶ ಕಳುಹಿಸಿ ಕನ್ನಡ ಹಬ್ಬವನ್ನು ಆಚರಿಸಿ.
ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯಗಳು ಕೋರಲು ಇಲ್ಲಿವೆ ಸಂದೇಶಗಳು
- ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
- ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
- ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮ ಅಂತರಂಗದ ಮಾತು, ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು.
- ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಭಾಷೆಯನ್ನು ಹೆಮ್ಮೆಯಿಂದ ಆಚರಿಸೋಣ ಮತ್ತು ನಮ್ಮ ರಾಜ್ಯ ಮತ್ತು ದೇಶವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಭರವಸೆ ಇರಲಿ. ಮತ್ತೊಮ್ಮೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
- ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಎಲ್ಲರಿಗೂ ಕೂಡ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
- ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ, ತಾಯಿ ಕನ್ನಡಾಂಬೆಗೆ ಜಯವಾಗಲಿ. ಸಮಸ್ತ ಕನ್ನಡಿಗ ಕುಟುಂಬಕ್ಕೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಇದನ್ನೂ ಓದಿ:World Savings Day 2025: ಖರ್ಚು ತಗ್ಗಿಸಿ ಭವಿಷ್ಯದ ಭದ್ರ ಬುನಾದಿಗಾಗಿ ಹಣ ಕೂಡಿಡಿ
- ಕನ್ನಡದ ಮಾತು ಚೆನ್ನ, ಕನ್ನಡದ ನೆಲ ಚೆನ್ನ, ಕನ್ನಡಿಗರ ಮನಸ್ಸು ಚಿನ್ನ.. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
- ಕಲಿಯೋಕೆ ಕೋಟಿ ಭಾಷೆ, ಆಡೂಕೇ ಒಂದೆ ಭಾಷೆ, ಕನ್ನಡ.. ಕನ್ನಡ.. ಕಸ್ತೂರಿ ಕನ್ನಡ… ಕನ್ನಡ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
- ನುಡಿ ಕನ್ನಡ, ನಡೆ ಕನ್ನಡ, ಅಕ್ಷರ ಅಕ್ಷರದಲ್ಲಿ ಅರಿವು ಕನ್ನಡ. ಕರುನಾಡಿನ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.








