Kannada Rajyotsava: ಮೊಬೈಲ್ನಲ್ಲಿ ಕನ್ನಡ ಟೈಪ್ ಮಾಡಲು ಕಷ್ಟವೇ? ಇಲ್ಲಿದೆ ಸುಲಭ ವಿಧಾನ
ಕೆಲವು ವರ್ಷದ ಹಿಂದೆ ಕನ್ನಡ ಟೈಪಿಂಗ್ ನನ್ನ ಮೊಬೈಲ್ನಲ್ಲಿ ಮಾಡಲು ಹಲವಾರು ಬಾರಿ ನಾನು ಪ್ರಯತ್ನಿಸಿದ್ದೆ, ನನ್ನ ಮಿತ್ರರು ಒಂದು ಆ್ಯಪ್ ಹೇಳಿದರು.
ಕೆಲವು ವರ್ಷದ ಹಿಂದೆ ಕನ್ನಡ ಟೈಪಿಂಗ್ ನನ್ನ ಮೊಬೈಲ್ನಲ್ಲಿ ಮಾಡಲು ಹಲವಾರು ಬಾರಿ ನಾನು ಪ್ರಯತ್ನಿಸಿದ್ದೆ, ನನ್ನ ಮಿತ್ರರು ಒಂದು ಆ್ಯಪ್ ಹೇಳಿದರು. ಅದನ್ನಿಟ್ಟುಕೊಂಡು ಸರಿ ಸುಮಾರು ಎರಡು ತಿಂಗಳುಗಳ ಕಾಲ ಗುದ್ದಾಡಿದೆ, ಮೊಬೈಲ್ನಲ್ಲಿ ಕನ್ನಡ ಟೈಪಿಂಗ್ ಮಾಡಲು ಬರಲಿಲ್ಲ. ಆನಂತರ ಈ ಕೆಳಗಿನ ಉಪಾಯವನ್ನು ಕಂಡುಕೊಂಡೆ.
ತಮ್ಮ ಮೊಬೈಲಿನ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಜೀ ಬೋರ್ಡ್ ಎಂಬ ಆಪ್ ಇದೆ. ಅದನ್ನ ಡೌನ್ಲೋಡ್ ಮಾಡಿ, ಡೌನ್ಲೋಡ್ ಪೂರ್ಣಗೊಂಡನಂತರ ಅದರ ಸೆಟ್ಟಿಂಗ್ ಅನ್ನು ಪೂರ್ಣಗೊಳಿಸಿ. ನಂತರ ಜೀ ಬೋರ್ಡ್ ಕೀಬೋರ್ಡ್ ಅನ್ನು ಆರಿಸಿಕೊಳ್ಳಿ. ಆನಂತರ ಕನ್ನಡ ಭಾಷೆಯನ್ನು ಸೇರಿಸಿ ಅನಂತರ ಇನ್ನೊಮ್ಮೆ ಕನ್ನಡ ಭಾಷೆಯನ್ನು ಸೇರಿಸಿ. ಈಗ ನಿಮ್ಮ ಮೊಬೈಲ್ ಕನ್ನಡ ಟೈಪಿಂಗ್ ಗೆ ತಯಾರಿದೆ.
ಆನಂತರ ವಾಟ್ಸಾಪ್ ನಲ್ಲಿ ಸಂದೇಶ ಬರೆಯುವಲ್ಲಿ ಹೋಗಿ, ಕೀಬೋರ್ಡಿನ ಮೇಲೆ ಇರುವಂತಹ ಮೈಕ್ ಚಿನ್ಹೆಯನ್ನು ಒತ್ತಿ ನಂತರ ಮಾತನಾಡಿ ಸುಂದರವಾದ ಅಂತಹ ಕನ್ನಡ ಅಕ್ಷರಗಳು ನಿಮ್ಮ ವಾಟ್ಸಪ್ ಸಂದೇಶದಲ್ಲಿ ಮೂಡಿಬರುತ್ತವೆ.
ಈ ಕೀಬೋರ್ಡ್ ನಲ್ಲಿರುವ ಗ್ಲೋಬ ಚಿನ್ಹೆ ಮುಟ್ಟಿದಾಗ ಕನ್ನಡ ಭಾಷೆ ಇದ್ದದ್ದು ಇಂಗ್ಲೀಷ್ ಭಾಷೆಯಾಗಿ ಪರಿವರ್ತನೆಯಾಗುತ್ತದೆ ಇಂಗ್ಲಿಷ್ ಭಾಷೆ ಇದ್ದದ್ದು ಕನ್ನಡ ಇಂಗ್ಲಿಷ್ ಆಗಿ ಪರಿವರ್ತನೆಯಾಗುತ್ತದೆ. ಈ ರೀತಿಯಾಗಿ ಭಾಷೆಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬಹುದು. ಆದರೆ ಈ ಕೀಬೋರ್ಡ್ ಉಪಯೋಗಿಸುವಾಗ ಇಂಟರ್ನೆಟ್ ಇರುವುದು ಅತಿ ಅವಶ್ಯಕ.
ಟೈಪ್ ಮಾಡಲಿಕ್ಕೆ ಆಗಲ್ಲ ಸಾರ್ ಟೈಮಿಲ್ಲ ಎಂದು ಹೇಳುವವರಿಗೆ ಇದೊಂದು ಉತ್ತಮ ಸಾಧನೆಯಾಗಿದೆ. ಸ್ವಲ್ಪ ದಿನ ರೂಢಿ ಮಾಡಿದರೆ ಎಲ್ಲ ಒತ್ತಕ್ಷರಗಳನ್ನೂ ಕೂಡ ಉತ್ತಮವಾಗಿ ಟೈಪ್ ಮಾಡಬಹುದು.
ಮಾಹಿತಿ: ಡಾ. ರವಿಕಿರಣ ಪಟವರ್ಧನ ಶಿರಸಿ, ಆಯುರ್ವೇದ ವೈದ್ಯರು
Published On - 9:53 am, Tue, 1 November 22