Kannada Learning Platform: 9 ವರ್ಷಗಳಿಂದ 27 ಸಾವಿರ ಪರಭಾಷಿಗರಿಗೆ ಕನ್ನಡ ಕಲಿಸಿದ “ಕನ್ನಡ ಗೊತ್ತಿಲ್ಲ” ತಂಡ

|

Updated on: Feb 24, 2023 | 12:25 PM

2014 ರಲ್ಲಿ ಪರಭಾಷಾ ಕನ್ನಡಾಭಿಮಾನಿಗಳಿಗೆ ಕನ್ನಡ ಕಲಿಸುವ ಉದ್ದೇಶದಿಂದ ವಾಟ್ಸ್ ಆ್ಯಪ್‌ ಮೂಲಕ ಒಂದು ಒಳ್ಳೆಯ ಪ್ರಯತ್ನಕ್ಕೆ ಕೈ ಹಾಕಿದ ಮಂಗಳೂರಿನ ಪೂತ್ತೂರು ಮೂಲದ ಅನುಪ್ ಮಯ್ಯ ಇದೀಗಾ ತಮ್ಮ ಕನ್ನಡ ಗೊತ್ತಿಲ್ಲ ತಂಡದವರೊಂದಿಗೆ 27 ಸಾವಿರ ಪರ ಭಾಷಿಗರಿಗೆ ಕನ್ನಡವನ್ನು ಕಲಿಸಿದ್ದಾರೆ.

Kannada Learning Platform: 9 ವರ್ಷಗಳಿಂದ 27 ಸಾವಿರ ಪರಭಾಷಿಗರಿಗೆ ಕನ್ನಡ ಕಲಿಸಿದ ಕನ್ನಡ ಗೊತ್ತಿಲ್ಲ ತಂಡ
Anup Maiya, founder of KannadaGottilla.com
Image Credit source: Facebook
Follow us on

2014 ರಲ್ಲಿ ಪರಭಾಷಾ ಕನ್ನಡಾಭಿಮಾನಿಗಳಿಗೆ ಕನ್ನಡ ಕಲಿಸುವ ಉದ್ದೇಶದಿಂದ ವಾಟ್ಸ್ ಆ್ಯಪ್‌ ಮೂಲಕ ಒಂದು ಒಳ್ಳೆಯ ಪ್ರಯತ್ನಕ್ಕೆ ಕೈ ಹಾಕಿದ ಮಂಗಳೂರಿನ ಪೂತ್ತೂರು ಮೂಲದ ಅನುಪ್ ಮಯ್ಯ ಇದೀಗಾ ತಮ್ಮ ‘ಕನ್ನಡ ಗೊತ್ತಿಲ್ಲ’ ತಂಡದವರೊಂದಿಗೆ 27 ಸಾವಿರ ಪರ ಭಾಷಿಗರಿಗೆ, 11 ರಾಷ್ಟ್ರಗಳಲ್ಲಿ ಕನ್ನಡವನ್ನು ಕಲಿಸಿದ್ದಾರೆ. ನಮ್ಮ ಭಾಷೆ ಹಾಗೂ ಸಂಸ್ಕೃತಿಯನ್ನು ಪರಭಾಷಿಗರೊಂದಿಗೆ ಹಂಚುವ ಮೂಲಕ ಕನ್ನಡವನ್ನು ವಿಶ್ವದಾದ್ಯಂತ ಪಸರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿಸಿದ್ದಾರೆ. ಇತ್ತೀಚೆಗಷ್ಟೇ ಕನ್ನಡ ಗೊತ್ತಿಲ್ಲ ಟ್ವಿಟರ್​ ಖಾತೆಯ ಮೂಲಕ 9 ವರ್ಷದ ತಮ್ಮ ತಂಡದ ಕಾರ್ಯ ಹಾಗೂ 27 ಸಾವಿರ ಪರ ಭಾಷಿಗರಿಗೆ ಕನ್ನಡ ಕಲಿಸಿರುವ ಹೆಮ್ಮೆಯ ಸಂಗತಿಗಳನ್ನು ಹಂಚಿಕೊಂಡು We are Back ಎಂದು ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ.

ಹಲವು ವರ್ಷಗಳ ಹಿಂದೆ ಐಟಿ ಉದ್ಯಮದಲ್ಲಿ ಕೆಲಸ ಮಾಡುತ್ತಿರುವಾಗ ನಾನು ಪುಣೆಯಲ್ಲಿದ್ದೆ. ಆ ಸಮಯದಲ್ಲಿ ಅಲ್ಲಿನ ಮರಾಠಿ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುವ ಆಸೆ ನನ್ನಲ್ಲಿ ಇತ್ತು. ಸಾಕಷ್ಟು ಹುಡುಕಾಟದ ನಂತರವೂ, ಅಲ್ಲಿನ ಭಾಷೆಯ ಮೂಲಭೂತ ಅಂಶಗಳನ್ನು ಅನುಕೂಲಕರ ರೀತಿಯಲ್ಲಿ ತಿಳಿದುಕೊಳ್ಳಲು ನನಗೆ ಸಹಾಯ ಮಾಡುವ ಯಾವುದೇ ಕೋರ್ಸ್ ಅಥವಾ ಆನ್‌ಲೈನ್ ಪರಿಕರವನ್ನು ಕಂಡುಹಿಡಿಯಲಾಗಲಿಲ್ಲ. ಆದ್ದರಿಂದ ನನ್ನ ರೀತಿಯಲ್ಲಿಯೇ  ಕನ್ನಡ ಗೊತ್ತಿಲ್ಲದ ಪರಭಾಷಿಗರಿಗೆ ಕನ್ನಡ ಹಾಗೂ ಅಲ್ಲಿನ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಒಂದು ಒಳ್ಳೆಯ ಅವಕಾಶವನ್ನು ನೀಡುವ ವೇದಿಕೆಯನ್ನು ಕಲ್ಪಿಸಬೇಕು ಎಂದು ನಿರ್ಧರಿಸಿದೆ ಎಂದು ಸಂಸ್ಥಾಪಕರಾದ ಅನುಪ್ ಮಯ್ಯ ಹೇಳಿಕೊಂಡಿದ್ದಾರೆ.

ಕನ್ನಡ ಗೊತ್ತಿಲ್ಲ ತಂಡದ ಪ್ರಾರಂಭಿಕ ದಿನಗಳು:

ಪ್ರಾರಂಭದಲ್ಲಿ (2014) ಫೋನ್‌ನಲ್ಲಿ ಕನ್ನಡ ಮಾತನಾಡುತ್ತಾ ಭಾಷೆಯನ್ನು ಕಲಿಸಬೇಕು ಎಂಬ ಯೋಚನೆ ಹಾಕಲಾಗಿತ್ತು. ಆದರೆ ಇದು ಖರ್ಚು ಜಾಸ್ತಿ ಎನಿಸಿ ವಾಟ್ಸ್ ಆ್ಯಪ್‌ ಮೂಲಕ ಇದರ ತರಗತಿಯನ್ನು ಪ್ರಾರಂಭಿಸಲಾಯಿತು. ಇದೀಗಾ ವಾಟ್ಸ್ ಆ್ಯಪ್‌ ಮೂಲಕ ಸಾವಿರಾರು ಜನರಿಗೆ ಕನ್ನಡವನ್ನು ಮಾತನಾಡುವ ಇನ್ನೂ ಹೆಚ್ಚಿನ ಆಸಕ್ತಿ ಇರುವವರಿಗೆ ಕನ್ನಡವನ್ನು ಬರೆಯಲು ಮತ್ತು ಓದಲು ಕೂಡ ಕಲಿಸಲಾಗುತ್ತದೆ. ಇದಲ್ಲದೇ #ABCT ಅಭಿಯಾನದ ಮೂಲಕ Anybody Can Teach ಎಂಬ ಕಿರು ಟ್ಯುಟೋರಿಯಲ್‌ಗಳ ಆನ್‌ಲೈನ್ ವೀಡಿಯೊಗಳನ್ನು ಕೂಡ ಇದರ ವೆಬ್‌ಸೈಟ್‌ನಲ್ಲಿ ಎಲ್ಲರಿಗೂ ಲಭ್ಯವಿದೆ.

ಇದನ್ನೂ ಓದಿ: ಪರೀಕ್ಷೆ ಸಮೀಪಿಸುತ್ತಿದೆ ಎಂದು ಮಕ್ಕಳಿಗೆ ಒತ್ತಡ ನೀಡದಿರಿ, ಮಾನಸಿಕ ಆರೋಗ್ಯಕ್ಕೆ ಈ ಆಹಾರಗಳನ್ನು ನೀಡಿ

ಕನ್ನಡ ಗೊತ್ತಿಲ್ಲ ತಂಡದಲ್ಲಿ ನೀವು ಕನ್ನಡ ಕಲಿಯುವುದು ಹೇಗೆ?

kannadagottilla.com ವೈಬ್​​ ಸೈಟ್​ನಲ್ಲಿ  ನಿಮಗೆ ಹಂತ ಹಂತವಾಗಿ ಸಲಹೆಗಳನ್ನು ನೀಡಲಾಗಿದೆ

ಕನ್ನಡ ಮಾತನಾಡಲು ಕಲಿಯಲು:

ಕರ್ನಾಟಕಕ್ಕೆ ಹೊಸಬರೇ? ಕನ್ನಡದಲ್ಲಿ ಮಾತನಾಡಲು ಬರುವುದಿಲ್ಲ ಎಂಬ ಭಯ ನಿಮಗಿದೆಯೇ? 30 ದಿನಗಳ ಅತ್ಯಂತ ಕಡಿಮೆ ಅವಧಿಯಲ್ಲಿ ನಿಮಗೆ ಕನ್ನಡದ ಮೂಲಭೂತ ಅಂಶಗಳನ್ನು ಕಲಿಸಲಾಗುತ್ತದೆ. ಪ್ರಾರಂಭದ ಮೊದಲ ಹಂತದ ಕನ್ನಡವನ್ನು ನೀವು ಕಲಿಯಲು 349 ರೂ. ನೀಡಿ ನೋಂದಣಿ ಮಾಡಿ ಕೊಳ್ಳಬೇಕು. ನಿಮ್ಮ ನೋಂದಣಿಯ ನಂತರ 15 ದಿನಗಳ ಗರಿಷ್ಠ ಅವಧಿಯ ಅಂತರವಿರುವ ವಾಟ್ಸ್ ಆ್ಯಪ್‌ ಗುಂಪಿಗೆ ನಿಮ್ಮನ್ನು ಸೇರಿಸಲಾಗುತ್ತದೆ. 30 ದಿನಗಳ ಕೋರ್ಸ್ ಪ್ರತಿದಿನ 4-5 ಪದಗಳು/ವಾಕ್ಯಗಳನ್ನು ಒಳಗೊಂಡಿರುತ್ತದೆ. ಪರಿಣಾಮಕಾರಿ ರೆಕಾರ್ಡಿಂಗ್ ಸಹ ವಾಟ್ಸ್ ಆ್ಯಪ್‌ ಮೂಲಕ ಕಳುಹಿಸಿಕೊಡುತ್ತಾರೆ. ಹೀಗೆ ಪ್ರತಿಯೊಂದು ಹಂತ ಹಂತವಾಗಿ ಕನ್ನಡವನ್ನು ಮಾತಾಡಲು ಕಲಿಸಲಾಗುತ್ತದೆ.

ಕನ್ನಡ ಬರೆಯಲು ಕಲಿಯಬಹುದು:

ಹಂತ 1: ಇದು ಕನ್ನಡ ವರ್ಣಮಾಲೆಯ ಎಲ್ಲಾ ಅಕ್ಷರಗಳನ್ನು ಒಳಗೊಂಡಿರುತ್ತದೆ. ಕೋರ್ಸ್ ಅಂತ್ಯದ ವೇಳೆಗೆ ಸರಳ ಪದಗಳನ್ನು ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.

ಹಂತ 2:  ಇದು ಕಾಗುನೀತ ಮತ್ತು ಒತ್ತಾಕ್ಷರ (ಸಂಯೋಜಿತ ಅಕ್ಷರಗಳು ಮತ್ತು ಎರಡು ವ್ಯಂಜನ ಶಬ್ದಗಳು/ಅಕ್ಷರಗಳು) ಒಳಗೊಂಡಿದೆ. ಈ ಕೋರ್ಸ್ ಮುಗಿಯುವ ಹೊತ್ತಿಗೆ, ನೀವು ಶೇಕಡಾ 80ರಷ್ಟು ಕನ್ನಡವನ್ನು ಬರೆಯುವುದು ಮತ್ತು ಓದುವುದನ್ನು ಕಲಿಯಬಹುದಾಗಿದೆ. ಇದಲ್ಲದೇ ಬಸ್​ ಹಾಗೂ ಮೆಟ್ರೋಗಳಲ್ಲಿನ ಬೋರ್ಡ್‌ಗಳನ್ನು ಇತರರನ್ನು ಅವಲಂಬಿಸದೆ ಸುಲಭವಾಗಿ ಓದಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:17 pm, Fri, 24 February 23