Kedarnath Yatra: ಕಡಿಮೆ ಖರ್ಚಿನಲ್ಲಿ ಬೆಂಗಳೂರಿನಿಂದ ಕೇದಾರನಾಥ ತಲುಪುದು ಹೇಗೆ?

|

Updated on: Apr 05, 2024 | 10:57 AM

ಈ ವರ್ಷ ಮೇ 10 ರಂದು ಕೇದಾರನಾಥ ದೇಗುಲದ ಬಾಗಿಲು ತೆರೆಯುತ್ತದೆ. ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕೇದಾರನಾಥ ಪ್ರಯಾಣಿಸಬೇಕು ಎಂಬುದು ಸಾಕಷ್ಟು ಜನರ ಕನಸು. ಆದ್ದರಿಂದ ನೀವು ಕಡಿಮೆ ಖರ್ಚಿನಲ್ಲಿ ಹೇಗೆ ಪ್ರಯಾಣಿಸಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ,

Kedarnath Yatra: ಕಡಿಮೆ ಖರ್ಚಿನಲ್ಲಿ ಬೆಂಗಳೂರಿನಿಂದ ಕೇದಾರನಾಥ ತಲುಪುದು ಹೇಗೆ?
ಬೆಂಗಳೂರಿನಿಂದ ಕೇದಾರನಾಥ ಯಾತ್ರೆ
Image Credit source: Pinterest
Follow us on

ಹಿಮಾಲಯ ಪರ್ವತ ಶ್ರೇಣಿಯಲ್ಲಿ ಉತ್ತರಾಖಂಡ ರಾಜ್ಯದ ಚಮೋಲಿ (ಉತ್ತರಕಾಶಿ) ಜಿಲ್ಲೆಯಲ್ಲಿ ಮಂದಾಕಿನಿ ನದಿಯ ದಂಡೆಯ ಮೇಲಿರುವ ಶಿವನ ದೇವಾಲಯ ಕೇದಾರನಾಥ. ಪ್ರತಿಯೊಬ್ಬ ಹಿಂದುವೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕೇದಾರನಾಥವನ್ನು ಕಣ್ತುಂಬಿಸಿಕೊಳ್ಳಲು ಬಯಸುತ್ತಾರೆ. ಹವಾಮಾನ ವೈಪರೀತ್ಯದಿಂದಾಗಿ ಕೇದಾರನಾಥ ದೇವಾಲಯದ ಬಾಗಿಲು ಆರು ತಿಂಗಳಿಗೊಮ್ಮೆ ಮಾತ್ರ ತೆರೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ವರ್ಷ ಕೇದಾರನಾಥ ದೇಗುಲದ ಬಾಗಿಲು ಮೇ 10 ರಂದು ಬೆಳಿಗ್ಗೆ 6:30 ಕ್ಕೆ ತೆರೆಯಲಾಗುತ್ತದೆ. ಆದರಿಂದ ನೀವು ಕೂಡ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಲು ಬಯಸಿದರೆ ಬೆಂಗಳೂರಿನಿಂದ ಕಡಿಮೆ ಖರ್ಚಿಗೆ ಪ್ರಯಾಣಿಸುವ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

ಕೇದಾರನಾಥಕ್ಕೆ ತಲುಪುವ ಮಾರ್ಗಗಳು?

ಈ ದೇವಸ್ಥಾನಕ್ಕೆ ತಲುಪಲು ನೇರ ರಸ್ತೆ ಇಲ್ಲ. ಗೌರಿಕುಂಡ್‌ನಿಂದ 22 ಕಿ.ಮೀ ದೂರದ ಪ್ರಯಾಸಕರ ಚಾರಣದಿಂದ ಕೇದಾರನಾಥ ದೇವಾಲಯವನ್ನು ತಲುಪಬಹುದು. ಕೆಲವರು ಕಾಲ್ನಡಿಗೆಯಲ್ಲಿ ಹೋಗುತ್ತಾರೆ. ಕಾಲ್ನಡಿಗೆಯಲ್ಲಿ ಹೋದರೆ ಸುಮಾರು 16 ಕಿ.ಮೀ. ಇದಲ್ಲದೆ, ಈಗ ಕೇದಾರನಾಥ ದೇವಾಲಯವನ್ನು ತಲುಪಲು ಹೆಲಿಕಾಪ್ಟರ್ ಸೌಲಭ್ಯಗಳಿವೆ. ಆದರೆ ನೀವು ಮೊದಲೇ ಹೆಲಿಕಾಪ್ಟರ್ ಬುಕ್ ಮಾಡಬೇಕು.

ಇದನ್ನೂ ಓದಿ: ಬೆಂಗಳೂರಿಗರೇ, ಯುಗಾದಿ ಹಬ್ಬಕ್ಕೆ ಈ ಸ್ಥಳಗಳಲ್ಲಿ ಟ್ರಿಪ್ ಹೋದರೆ ಮಜಾನೇ ಬೇರೆ!

ಕಡಿಮೆ ಖರ್ಚಿನಲ್ಲಿ ಬೆಂಗಳೂರಿನಿಂದ ಕೇದಾರನಾಥ ತಲುಪುವ ಮಾರ್ಗ:

ಕೇದಾರನಾಥವನ್ನು ನೇರವಾಗಿ ತಲುಪಲು ಯಾವುದೇ ಮಾರ್ಗವಿಲ್ಲದಿರುವುದರಿಂದ ನೀವು ಕಡಿಮೆ ಖರ್ಚಿನಲ್ಲಿ ಹೋಗಲು ಬಯಸಿದರೆ ರೈಲು ಮಾರ್ಗ ಸೂಕ್ತ. ಹರಿದ್ವಾರ ಹಾಗೂ ರಿಷಿಕೇಶಿ ರೈಲು ನಿಲ್ದಾಣಕ್ಕೆ ತಲುಪಿ ಅಲ್ಲಿಂದ ಕೇದಾರನಾಥ ತಲುಪಬಹುದು.

ಬೆಂಗಳೂರಿನಿಂದ ಕೇದಾರನಾಥ:

  • ಮೊದಲು ಬೆಂಗಳೂರಿನಿಂದ ದೆಹಲಿಯ ವರೆಗೆ ರೈಲು ಮಾರ್ಗದ ಮೂಲಕ ಹೋಗಬೇಕು.  ಸೀಪ್ಲರ್​​​ ಕೋಚ್​ 930 ರೂ, ಇದಲ್ಲದೇ ಗರಿಷ್ಟ 1A ನಲ್ಲಿ 5990 ರೂ ಪಾವತಿಸಿ ಪ್ರಯಾಣಿಸಬಹುದು.
  • ದೆಹಲಿಯಿಂದ ಮತ್ತೆ ಹರಿದ್ವಾರಕ್ಕೆ ರೈಲು ಪ್ರಯಾಣ ಮಾಡಬಹುದು. ಇದಲ್ಲದೇ ದೆಹಲಿಯಿಂದ ನೀವು ಹರಿದ್ವಾರಕ್ಕೆ ಬಸ್​​ ಮೂಲಕ ಪ್ರಯಾಣಿಸಬಹುದು. ದೆಹಲಿಯಿಂದ ಹರಿದ್ವಾರಕ್ಕೆ ನೀವು ಸೀಪ್ಲರ್​​​ ಕೋಚ್​ನಲ್ಲಿ 190ರೂ ಪಾವತಿಸಿ ಪ್ರಯಾಣಿಸಬಹುದು.
  • ಹರಿದ್ವಾರದಿಂದ ಸೋನ್​​ಪ್ರಯಾಗ್​​ ಗೆ ಬಸ್​​ನಲ್ಲಿ ಪ್ರಯಾಣಿಸಲು 1500 ರೂ ಪಾವತಿಸಬೇಕು.
  • ಸೋನ್​​ ಪ್ರಯಾಗ್​​​ – ಗೌರಿಕುಂಡು: ಸೋನ್​​​ ಪ್ರಯಾಗ್​​ನಿಂದ ಗೌರಿ ಕುಂಡು ತನಕ ನೀವು ಜೀಪ್​​ನಲ್ಲಿ ಪ್ರಯಾಣಿಸಬೇಕು. ಈ ಪ್ರಯಾಣಕ್ಕೆ 50 ರೂ ಪಾವತಿಸಬೇಕು. ಗೌರಿ ಕುಂಡು ನಿಂದ ನೀವು ಕೇದಾರನಾಥಕ್ಕೆ ಟ್ರೆಕ್ಕಿಂಗ್​​ ಮೂಲಕ ತಲುಪಬೇಕು. ಸುಮಾರು 18 ಕಿಲೋ ಮೀಟರ್​​ ಟ್ರೆಕ್ಕಿಂಗ್​​ ನೀವು ಮಾಡಬೇಕು. ಇದಲ್ಲದೇ ಕುದುರೆಸವಾರಿ ಅಥವಾ ಡೋಲಿಯಲ್ಲಿ ಪಯಣಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ