AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Care Tips : ಈ ಆಹಾರಗಳನ್ನು ಒಟ್ಟೊಟ್ಟಿಗೆ ತಿನ್ನಲೇಬೇಡಿ, ಆರೋಗ್ಯ ಕೆಡುವುದು ಖಂಡಿತ!

ಇಂದಿನ ಜೀವನ ಶೈಲಿ ಹಾಗೂ ಆಹಾರ ಕ್ರಮಗಳು ಸಂಪೂರ್ಣವಾಗಿ ಬದಲಾಗಿದೆ. ಹೀಗಾಗಿ ಆರೋಗ್ಯ ಸಮಸ್ಯೆಗಳು ಒಂದರ ಹಿಂದೆ ಒಂದರಂತೆ ಬರುತ್ತಲೇ ಇದೆ. ಅದಲ್ಲದೇ ಹೆಚ್ಚಿನವರು ತಿನ್ನುವ ಆಹಾರದ ಬಗ್ಗೆ ಗಮನ ಹರಿಸುವುದೇ ಇಲ್ಲ. ಕಣ್ಣ ಎದುರಿಗೆ ಏನಾದರೂ ಕಂಡರೆ ಸಾಕು, ತಿಂದು ಬಿಡುತ್ತಾರೆ. ಆದರೆ ಈ ಕೆಲವು ಆಹಾರಗಳನ್ನು ಒಟ್ಟೊಟ್ಟಿಗೆ ತಿನ್ನುವುದು ಒಳ್ಳೆಯದಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ.

Health Care Tips : ಈ ಆಹಾರಗಳನ್ನು ಒಟ್ಟೊಟ್ಟಿಗೆ ತಿನ್ನಲೇಬೇಡಿ, ಆರೋಗ್ಯ ಕೆಡುವುದು ಖಂಡಿತ!
Bad Food Combinations
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ|

Updated on: Apr 04, 2024 | 6:07 PM

Share

ತಿನ್ನೋದು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಏನಾದರೂ ಸಿಕ್ಕಿದರೆ ಸಾಕು, ತಿನ್ನಲು ಶುರು ಮಾಡುತ್ತಾರೆ. ಆದರೆ ನಾಲಿಗೆಗೆ ರುಚಿಯಾಗುತ್ತದೆ ಎಂದು ಸಿಕ್ಕ ಸಿಕ್ಕ ಆಹಾರಗಳನ್ನು ಸೇವಿಸುವುದು ಖಂಡಿತ ಒಳ್ಳೆಯದಲ್ಲ. ಹಸಿವಾದಾಗ ಆಹಾರಗಳನ್ನು ಸೇವನೆ ಮಾಡುವುದರಿಂದ ಹೊಟ್ಟೆ ತುಂಬುತ್ತದೆ ಏನೋ ನಿಜ. ಈ ಎಲ್ಲಾ ಆಹಾರಗಳನ್ನು ಒಟ್ಟಿಗೆ ತಿಂದರೆ, ಹುಳಿತೇಗು ಸೇರಿದಂತೆ ಇನ್ನಿತ್ತರ ಸಮಸ್ಯೆಗಳು ಎದುರಾಗುತ್ತದೆ.

  1. ಚಹಾದೊಂದಿಗೆ ಈ ಆಹಾರವನ್ನು ಸೇವಿಸಬೇಡಿ:ಕೆಲವರಿಗೆ ಚಹಾದೊಂದಿಗೆ ಏನಾದರೂ ತಿನ್ನುವ ಅಭ್ಯಾಸವಿರುತ್ತದೆ. ಹಾಗಂತ ನಟ್ಸ್‌, ಹಸಿರು ಎಲೆಗಳ ತರಕಾರಿಗಳು ಹಾಗೂ ಧಾನ್ಯಗಳಂತಹ ಆಹಾರ ಪದಾರ್ಥಗಳನ್ನು ಮುಟ್ಟಲೇ ಬೇಡಿ. ಒಂದು ವೇಳೆ ಚಹಾದೊಂದಿಗೆ ಇದನ್ನೆಲ್ಲಾ ತಿಂದರೆ ಆರೋಗ್ಯಕ್ಕೆ ಹಾನಿಯಾಗುವುದಂತೂ ಖಚಿತ.
  2. ಈ ಬೀಜಗಳನ್ನು ನೆನೆಸದೇ ತಿನ್ನಬೇಡಿ:ಬಾದಾಮಿ, ಕಡಲೆಕಾಯಿ, ಸೋಯಾಬೀನ್ ಮತ್ತು ವಾಲ್‌ನಟ್‌ ಗಳಲ್ಲಿ ಫೈಟಿಕ್ ಆಮ್ಲ ಇರುತ್ತವೆ. ಇದನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಸೇವಿಸುವ ಅಭ್ಯಾಸವಿರಲಿ. ಇಲ್ಲದಿದ್ದರೆ ಈ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
  3. ಅಯೋಡಿನ್ ಭರಿತ ಆಹಾರದೊಂದಿಗೆ ಇದರ ಸೇವನೆ ಆದಷ್ಟು ತಪ್ಪಿಸಿ: ಥೈರಾಯ್ಡ್ ಸಮಸ್ಯೆಯಿರುವವರು ಈ ಎಲೆಕೋಸು, ಹೂಕೋಸು ಹಾಗೂ ಕೋಸುಗಡ್ಡೆಯನ್ನು ಅಯೋಡಿನ್ ಭರಿತ ಆಹಾರಗಳೊಂದಿಗೆ ಅಪ್ಪಿ ತಪ್ಪಿಯೂ ಸೇವಿಸಲೇ ಬೇಡಿ. ಸೇವನೆ ಮಾಡಿದರೆ ಥೈರಾಯ್ಡ್ ಗ್ರಂಥಿಯ ಕಾರ್ಯವು ನಿಧಾನವಾಗಿ ಸಮಸ್ಯೆಯು ಅತಿರೇಕಕ್ಕೆ ತಿರುಗುವ ಸಾಧ್ಯತೆಯಿರುತ್ತದೆ.
  4. ಹಾಲಿನೊಂದಿಗೆ ಈ ಹಣ್ಣುಗಳ ಸೇವಿಸಬೇಡಿ : ವಿಟಮಿನ್ ಸಿ ಹೇರಳವಾಗಿರುವ ಕಿತ್ತಳೆ, ನಿಂಬೆ ಸೇರಿದಂತೆ ಇನ್ನಿತ್ತರ ಹಣ್ಣುಗಳನ್ನು ಈ ಹಾಲಿನೊಂದಿಗೆ ಸೇವಿಸುವುದನ್ನು ಆದಷ್ಟು ತಪ್ಪಿಸಿ. ಈ ಹಣ್ಣುಗಳನ್ನು l ಸೇವಿಸುವುದರಿಂದ ಗ್ಯಾಸ್ಟಿಕ್, ಎದೆಯುರಿಯಂತಹ ಸಮಸ್ಯೆಗಳು ಕಾಡಬಹುದು.
  5. ಹಾಲು ಮತ್ತು ಮೊಸರನ್ನು ಒಟ್ಟಿಗೆ ಸೇವಿಸುವುದು ಒಳ್ಳೆಯದಲ್ಲ : ಅಪ್ಪಿ ತಪ್ಪಿಯೂ ಈ ಆಹಾರವನ್ನು ಒಟ್ಟಿಗೆ ಸೇವಿಸುವಂತಿಲ್ಲ. ಹಾಲಿನಿಂದಲೇ ಮೊಸರನ್ನು ತಯಾರಿಸುತ್ತೇವೆಯಾದರೂ ಒಟ್ಟಿಗೆ ಸೇವನೆ ಮಾಡುವುದರಿಂದ ಅಡ್ಡಪರಿಣಾಮಗಳೇ ಹೆಚ್ಚು. ಇದರಿಂದಾಗಿ ಗ್ಯಾಸ್ಟಿಕ್ ಮತ್ತು ಅಜೀರ್ಣದ ಸಮಸ್ಯೆಗಳು ಉಂಟಾಗುತ್ತದೆ.
  6. ಮೀನು ಮತ್ತು ಹಾಲು : ರಾತ್ರಿ ಮೀನಿನ ಊಟ ಮಾಡಿದ ಬಳಿಕ ಹಾಲನ್ನು ಕುಡಿಯುವವರಿದ್ದಾರೆ. ಹಾಲು ಹಾಗೂ ಮೀನನ್ನು ತಿನ್ನುವುದರಿಂದ ಚರ್ಮ ಸಂಬಂಧಿ ಸಮಸ್ಯೆಗಳು ಬರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ