ಪಾರಿವಾಳಗಳಿಗೆ ಆಹಾರ ನೀಡಿದಕ್ಕೆ 97 ವರ್ಷದ ವೃದ್ಧೆಯ ಮೇಲೆ 2.5 ಲಕ್ಷ ರೂ ದಂಡ

ಸಾಕಷ್ಟು ಪಾರಿವಾಳ, ಬೆಳ್ಳಕ್ಕಿಗಳು ಬರುತ್ತಿದ್ದು, ಇಡೀ ಪ್ರದೇಶ ವಾಸನೆಯಿಂದ ಕೂಡಿದೆ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ದೂರಿದ್ದಾರೆ. ಪ್ರಾರಂಭದಲ್ಲಿ ನಗರಸಭೆ ಈ ವೃದ್ಧೆಗೆ 10 ಸಾವಿರ ರೂಪಾಯಿ ದಂಡ ವಿಧಿಸಿತ್ತು, ಆದರೆ ಈ ನೋಟಿಸನ್ನು ನಿರ್ಲಕ್ಷ್ಯಿಸಿದ್ದರಿಂದ ಇತ್ತೀಚಿಗಷ್ಟೇ 2,500 ಪೌಂಡ್‌ಗಳಿಗೆ ಅಂದರೆ 2.5 ಲಕ್ಷ ರೂ.ದಂಡ ವಿಧಿಸಿದೆ. ಇದಲ್ಲದೆ ಮುಂದೆ ಹೀಗೆ ಮುಂದುವರಿದರೆ ಸ್ವಂತ ಮನೆಯಿಂದ ಹೊರಹಾಕಲಾಗುವುದು ಎಂದು ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.

ಪಾರಿವಾಳಗಳಿಗೆ ಆಹಾರ ನೀಡಿದಕ್ಕೆ 97 ವರ್ಷದ  ವೃದ್ಧೆಯ ಮೇಲೆ 2.5 ಲಕ್ಷ ರೂ ದಂಡ
Feeding pigeons Image Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on:Apr 02, 2024 | 2:17 PM

ಯುನೈಟೆಡ್ ಕಿಂಗ್‌ಡಮ್​​​ನ  97 ವರ್ಷದ ವೃದ್ಧೆಯೊಬ್ಬರು ಪ್ರತೀ ದಿನ ತನ್ನ ಮನೆಯ ಅಂಗಳದಲ್ಲಿ ಪಾರಿವಾಳಗಳಿಗೆ ಆಹಾರ ನೀಡುತ್ತಿರುವುದನ್ನು ಕಂಡು ಸ್ಥಳೀಯರು ನಗರಸಭೆಗೆ ದೂರು ನೀಡಿದ್ದಾರೆ. ಪರಿಣಾಮ ಪಾರಿವಾಳಗಳಿಗೆ ಆಹಾರ ನೀಡದಂತೆ ನೋಟಿಸ್​​ ಬಂದಿದೆ. 2.5 ಲಕ್ಷ ರೂ. ದಂಡ, ಅಷ್ಟೇ ಅಲ್ಲದೆ, ಮುಂದೆ ಹೀಗೆ ಮುಂದುವರಿದರೆ ಸ್ವಂತ ಮನೆಯಿಂದ ಹೊರಹಾಕಲಾಗುವುದು ಎಂದು ಎಚ್ಚರಿಕೆ ಕೂಡ ನೀಡಲಾಗಿದೆ.

ಮಿರರ್ ವರದಿಯ ಪ್ರಕಾರ, ಸಂಗೀತ ಶಿಕ್ಷಕರಾಗಿರುವ ಅನ್ನೆ ಸಿಗೋ(97) ಅವರಿಗೆ ಪಕ್ಷಿಗಳೆಂದರೆ ತುಂಬಾ ಇಷ್ಟ. ಅವರು ತಮ್ಮ ಮನೆಯಲ್ಲಿ ಕೆಲವು ಪಕ್ಷಿಗಳನ್ನು ಸಹ ಸಾಕಿದ್ದಾರೆ. ಆದರೆ ಕಳೆದ ಹಲವು ತಿಂಗಳುಗಳಿಂದ ಇವರ ಅಂಗಳಕ್ಕೆ ಗುಬ್ಬಚ್ಚಿ, ಪಾರಿವಾಳ ಬರಲಾರಂಭಿಸಿದ್ದವು. ಅನ್ನಿ ಅವುಗಳಿಗೆ ಕೂಡ ಆಹಾರ ನೀಡುತ್ತಿದ್ದರು. ಇದರಿಂದಾಗಿ ಅನೇಕ ಪಕ್ಷಿಗಳು ಪ್ರತೀ ದಿನ ಮನೆಗೆ ಬರಲಾರಂಭಿಸಿದವು. ಇದರಿಂದಾಗಿ ನಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶ ಕೊಳಕಾಗಿದೆ ಎಂದು ಸ್ಥಳೀಯರು ಅನ್ನೆ ಮೇಲೆ ನಗರಸಭೆಯಲ್ಲಿ ದೂರು ನೀಡಿದ್ದಾರೆ.

ಕಾನೂನು ಕ್ರಮದ ಎಚ್ಚರಿಕೆ:

ಆಹಾರ ಧಾನ್ಯ ವಿತರಣೆಯಿಂದ ಸಾಕಷ್ಟು ಪಾರಿವಾಳ, ಬೆಳ್ಳಕ್ಕಿಗಳು ಬರುತ್ತಿದ್ದು, ಇಡೀ ಪ್ರದೇಶ ವಾಸನೆಯಿಂದ ಕೂಡಿದೆ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ದೂರಿದ್ದಾರೆ. ಪ್ರಾರಂಭದಲ್ಲಿ ನಗರಸಭೆ ಈ ವೃದ್ಧೆಗೆ 10 ಸಾವಿರ ರೂಪಾಯಿ ದಂಡ ವಿಧಿಸಿತ್ತು, ಆದರೆ ಈ ನೋಟಿಸನ್ನು ನಿರ್ಲಕ್ಷ್ಯಿಸಿದ್ದರಿಂದ ಇತ್ತೀಚಿಗಷ್ಟೇ 2,500 ಪೌಂಡ್‌ಗಳಿಗೆ ಅಂದರೆ 2.5 ಲಕ್ಷ ರೂ.ದಂಡ ವಿಧಿಸಿದೆ. ಇದಲ್ಲದೆ ಮುಂದೆ ಹೀಗೆ ಮುಂದುವರಿದರೆ ಸ್ವಂತ ಮನೆಯಿಂದ ಹೊರಹಾಕಲಾಗುವುದು ಎಂದು ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.

ಪಾರಿವಾಳಗಳಿಗೆ ಆಹಾರ ನೀಡುವುದು ಹಲವು ದೇಶಗಳಲ್ಲಿ ಅಪರಾಧ:

ಇಂಗ್ಲೆಂಡ್, ಥೈಲ್ಯಾಂಡ್, ಕೊಲಂಬಿಯಾ, ಕೆನಡಾ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದು ಅಪರಾಧವಾಗಿದೆ. ಹೆಚ್ಚು ಪಾರಿವಾಳಗಳು ಬರುವುದರಿಂದ ಪ್ರದೇಶಗಳಲ್ಲಿ ಕೊಳಕು ಉಂಟಾಗುತ್ತದೆ. ಇದರಿಂದಾಗಿ ಸೋಂಕು ಹರಡುವ ಅಪಾಯವಿದೆ. ಇದು ಸ್ವಚ್ಛತೆಯ ಮೇಲೂ ಪರಿಣಾಮ ಬೀರುತ್ತದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:57 am, Tue, 2 April 24

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!