ಬೇಸಿಗೆಗೆ ಮನುಷ್ಯನ ಚರ್ಮದ ಮೇಲಾಗುವ ಪರಿಣಾಮಗಳೇನು? ಟ್ಯಾನ್ ರಿಮೂ ಮಾಡಲು ಇಲ್ಲಿದೆ ಮನೆ ಮದ್ದು
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಬೇಸಿಗೆ ಹೆಚ್ಚಾಗುತ್ತಿದೆ. ಬೇಸಿಗೆಯಿಂದಾಗಿ ಆರೋಗ್ಯದಲ್ಲಿ ಏರುಪೇರು, ಚರ್ಮದ ಮೇಲೆ ಭೀಕರ ಪರಿಣಾಮಗಳು ಬೀರುತ್ತಿವೆ. ಸೂರ್ಯದ ಕಿರಣಗಳು ನೇರವಾಗಿ ಚರ್ಮದ ಮೇಲೆ ಬೀಳುತ್ತಿರುವುದರಿಂದ ನಾನಾ ಸಮಸ್ಯೆಗಳಾಗುತ್ತಿವೆ. ಹೀಗಾಗಿ ಚರ್ಮದ ಆರೈಕೆ ಅತಿ ಮುಖ. ಚರ್ಮರೋಗ ತಜ್ಞರು ಚರ್ಮದ ಆರೈಕೆ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಬೇಸಿಗೆ (Summer) ಬಂತ್ತೆಂದರೆ ಸಾಕು ಸಮುದ್ರದ ಕಿನಾರೆಗೆ ಹೋಗಿ ಮೋಜು ಮಸ್ತಿ ಮಾಡೋಕೆ ನೂರಾರು ಪ್ಲಾನ್ ಮಾಡ್ತೀವಿ. ಅದರಲ್ಲೂ ಈ ಬೇಸಿಗೆ ಸಮಯದಲ್ಲೇ ಹೆಚ್ಚು ಹೆಚ್ಚು ಜಾತ್ರೆಗಳು, ರಥೋತ್ಸವಗಳು, ಹೋಳಿಯಂತಹ ಸಂಭ್ರಮದ ಹಬ್ಬಗಳು ಬರುವುದರಿಂದ ಯುವಕರಂತೋ ಬೀದಿ ಬೀದಿ ಸುತ್ತಾಡ್ತಿರುತ್ತಾರೆ. ಮಕ್ಕಳಿಗೆ ಬೇಸಿಗೆ ರಜೆ ಬೇರೆ ಇರುತ್ತೆ. ಅಜ್ಜಿ ಮನೆ, ಇಲ್ಲ ಪೋಷಕರೊಂದಿಗೆ ಅಲ್ಲಿ ಇಲ್ಲಿ ಸುತ್ತಾಡಿ ಮಕ್ಕಳ ಕೋಮಲ ತ್ವಚೆ ಕೂಡ ಹಾಳಾಗುತ್ತೆ. ಐದತ್ತು ದಿನ ಬೇಸಿಗೆ ರಜೆ (Summer Holidays) ಮುಗಿಸಿ ಮನೆಗೆ ಬಂದಾಗ ಇಡೀ ದೇಹ ಟ್ಯಾನ್ (Tan) ಆಗಿರುತ್ತೆ. ಸುಂದರವಾಗಿರುವ ಹೆಣ್ಮಕ್ಕಳಂತೂ ಈ ಬೇಸಿಗೆಯಲ್ಲಿ ಆಚೆ ಬರುವುದಕ್ಕೂ ಸರ್ಕಸ್ ಮಾಡ್ತಿತ್ತಾರೆ. ಹಾಗಾದ್ರೆ ಬನ್ನಿ ಈ ಆರ್ಟಿಕಲ್ನಲ್ಲಿ ಸೂರ್ಯನ ಕಿರಣಗಳಿಂದಾಗಿ ದೇಹ ಟ್ಯಾನ್ ಹೇಗೆ ಆಗುತ್ತೆ. ಅದರಿಂದ ನಾವು ಯಾವ ರೀತಿ ರಕ್ಷಣೆ ಪಡೆಯಬೇಕು ಎಂಬ ಬಗ್ಗೆ ಖಾಸಗಿ ಆಸ್ಪತ್ರೆಯ ಚರ್ಮರೋಗ ತಜ್ಞರಾದ ಡಾ.ರಶ್ಮೀ ಅವರು ಮಾಹಿತಿ ನೀಡಿದ್ದಾರೆ. ಅವರು ಏನು ಹೇಳುತ್ತಾರೆ ಎಂಬುವುದನ್ನು ಇಲ್ಲಿ ತಿಳಿಯೋಣ. ಬರೋಬ್ಬರಿ ಮೂರು ತಿಂಗಳ ಕಾಲ ಇರುವ ಬೇಸಿಗೆಯಿಂದ ನಮ್ಮ ದೇಹ, ಚರ್ಮ, ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಕಷ್ಟ. ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ಆರೋಗ್ಯದಲ್ಲೂ ಏರುಪೇರಾಗುತ್ತೆ. ಅದೇ ರೀತಿ ದೇಹ ಕೂಡ ಸುಡಲಾರಂಭಿಸುತ್ತೆ. ಮುಖದಲ್ಲಿ ಮೊಡವೆ, ದೇಹವೆಲ್ಲಾ ಬೆಂಕಿಯಲ್ಲಿ ಸುಡುವಂತಹ ಅನುಭವ, ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಆರೋಗ್ಯ ಮತ್ತು ಚರ್ಮದ ರಕ್ಷಣೆ ಮೇಲೆ ಹೆಚ್ಚಿನ ಗಮನ ಇಡಬೇಕು. ಕೆಲವರದು ಎಣ್ಣೆಯುಕ್ತ ಚರ್ಮ ಇರುತ್ತೆ, ಮತ್ತೆ ಕೆಲವರದು ಒಣ ಚರ್ಮ ಹೀಗಾಗಿ ನಮ್ಮ...