Famous Ancient Cities : ಕಾಲಾಂತರದಲ್ಲಿ ಅವನತಿ ಕಂಡ ವಿಶ್ವದ ಏಳು ಪ್ರಸಿದ್ಧ ನಗರಗಳಿವು
ಇತಿಹಾಸದ ಪುಟಗಳನ್ನೊಮ್ಮೆ ತೆರೆದಾಗ ಭೀಕರ ಯುದ್ಧಗಳು, ಪ್ರಕೃತಿ ವಿಕೋಪಗಳಂತಹ ಘಟನೆಗಳು ನಡೆದಿವೆ. ಈ ಕಾರಣದಿಂದಲೇ ಅದೆಷ್ಟೋ ನಗರಗಳು ನಾಶವಾಗಿ ಹೋಗಿವೆ. ಆದರೆ ದೊರೆತ ಕುರುಹುಗಳು ನಗರಗಳು ಇದ್ದವು ಎನ್ನುವುದಕ್ಕೆ ಸಾಕ್ಷಿಯಾಗಿವೆ. ಹಾಗಾದ್ರೆ ಅವನತಿಯನ್ನು ಕಂಡ ಪ್ರಾಚೀನ ನಗರಗಳ ಬಗೆಗಿನ ಮಾಹಿತಿಯು ಇಲ್ಲಿದೆ.

ಒಂದು ಕಾಲದಲ್ಲಿ ತನ್ನ ಸಮೃದ್ಧತೆಯಿಂದ ಜನಪ್ರಿಯತೆ ಗಳಿಸಿದ್ದ ನಗರಗಳು ಕಾಲ ಕಳೆದಂತೆ ದಾಳಿಯಿಂದ ಪ್ರಕೃತಿ ವಿಕೋಪಗಳಿಂದ ಕಣ್ಮರೆಯಾಗಿ ಹೋದವು. ಹೀಗಾಗಿ ಅಲ್ಲಿದ್ದ ಕೆಲ ಜನರು ಇರಲು ಸೌಕರ್ಯಗಳಿಲ್ಲದೇನೆ ಬೇರೆಡೆ ವಲಸೆ ಹೋಗಿ ಬಿಟ್ಟರು. ಇಂದಿಗೂ ಆ ನಗರಗಳು ಇವೆಯಾದರೂ ಈ ಹಿಂದೆ ಇದ್ದ ಅಸ್ತಿತ್ವವೇ ಈಗ ಇಲ್ಲ.
*ಮೆಹೆಂಜೊದಾರೊ : ಮೆಹೆಂಜೊದಾರೊ ಸಿಂಧೂ ಕಣಿವೆ ನಾಗರಿಕತೆಯ ಅತಿದೊಡ್ಡ ವಸಾಹತು ಹಾಗೂ ವಿಶ್ವದ ಆರಂಭಿಕ ಪ್ರಮುಖ ನಗರಗಳಲ್ಲಿ ಒಂದು. ಸರಿಸುಮಾರು 40,000 ಸಾವಿರ ಜನಸಂಖ್ಯೆಯನ್ನು ಹೊಂದಿದ ಈ ನಗರವನ್ನು 1700 BCE ಯಿಂದ ಕೈಬಿಡಲಾಯಿತು. ಈ ನಗರವನ್ನು ಪುರಾತತ್ತ್ವ ಶಾಸ್ತ್ರಜ್ಞರು 1920 ರ ದಶಕದಲ್ಲಿ ಮತ್ತೆ ಪತ್ತೆ ಹಚ್ಚಿದರು. 1980 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಕೊಂಡಿತು.
* ಆಂಗ್ಕೋರ್: ಅಂಕೋರ್ ನಗರವು 800 BC ಯ ನಂತರ ನೆಲೆಗೊಂಡ ನಗರಗಳಲ್ಲಿ ಒಂದು. ಕಾಂಬೋಡಿಯದಲ್ಲಿರುವ ಈ ಪ್ರದೇಶವು 1431 ರಲ್ಲಿ ಥಾಯ್ ಸೈನ್ಯದ ಆಕ್ರಮಣದಿಂದಾಗಿ ಅಂತ್ಯ ಕಂಡಿತು. 1800 ರ ಮೊದಲು ಈ ನಗರದ ಯಾವುದೇ ಕುರುಹುಗಳು ಸಿಕ್ಕಿರಲಿಲ್ಲ. ಆದರೆ ಈ ನಗರವನ್ನು ಫ್ರೆಂಚ್ ಪುರಾತತ್ತ್ವ ಶಾಸ್ತ್ರಜ್ಞರ ಗುಂಪೊಂದು ಮರುಶೋಧನೆ ಮಾಡಿ ಈ ನಗರವಿದ್ದಿತ್ತೆಂದು ಪತ್ತೆ ಹಚ್ಚಿತು.
* ಪೆಟ್ರಾ: ವಿಶ್ವದ ಅತ್ಯಂತ ಸುಂದರ ನಗರಗಳ ಸಾಲಿಗೆ ಈ ಪೆಟ್ರಾ ಕೂಡ ಸೇರುತ್ತದೆ. ಜೋರ್ಡಾನ್ ಬಳಿಯಿರುವ ಪ್ರಾಚೀನ ನಗರವಾಗಿದ್ದು, ಇದು 363 BC ಯಲ್ಲಿ ತೀವ್ರ ಭೂಕಂಪದಿಂದಾಗಿ ಸಂಪೂರ್ಣವಾಗಿ ನಾಶವಾಯಿತು. ಈ ಪಕೃತಿಯು ಮುನಿಸಿಕೊಂಡ ಕಾರಣ ಬಹುತೇಕ ಜನರು ಬೇರೆ ಬೇರೆ ಕಡೆಗೆ ವಲಸೆ ಹೋಗಿ ಬಿಟ್ಟರು. ಹೀಗೊಂದು ನಗರವಿತ್ತೆಂದು 1812 ರಲ್ಲಿ ಸ್ವಿಸ್ ಸಂಶೋಧಕರು ಕಂಡು ಹಿಡಿದರು.
* ಪೊಂಪೈ : ಒಂದು ಕಾಲದಲ್ಲಿ ಪೊಂಪೈ ನಗರವು ರೋಮ್‌ನ ಅತ್ಯಂತ ಅದ್ಭುತವಾದ ಪ್ರವಾಸಿ ತಾಣವಾಗಿತ್ತು. ಆದರೆ ರೋಮನ್ ನಗರವಾದ ಪೊಂಪೈವು ಜ್ವಾಲಾಮುಖಿಯ ಸ್ಫೋಟದಿಂದ ನಾಶವಾಯಿತು. ನಗರದ ಜನರು ಈ ಜ್ವಾಲಾಮುಖಿ ಲಾವಾ ಮತ್ತು ಬಂಡೆಗಳ ಅಡಿಯಲ್ಲಿ ಹುದುಗಿ ಹೋಗಿ ಬಿಟ್ಟರು. ಆ ಸಮಯಕ್ಕೆ ಪೊಂಪೈಯ ಜನಸಂಖ್ಯೆಯು 20 ಸಾವಿರವಾಗಿತ್ತು. 1748 ರ ವೇಳೆಗೆ ಪೊಂಪೈ ನಗರವಿತ್ತೆಂಬುದನ್ನು ಮರುಶೋಧಿಸಿದರು.
* ವಿಜಯನಗರ : ವಿಜಯನಗರ ಸಾಮ್ರಾಜ್ಯ ಹಂಪಿ ದೇಶದಲ್ಲೆ ಪುರಾತನ ಹಾಗೂ ಹೇರಳವಾದ ಸಂಪತ್ತನ್ನು ಹೊಂದಿದ್ದ ಸಾಮ್ರಾಜ್ಯವಾಗಿತ್ತು. ಆದರೆ 1565 ರಲ್ಲಿ, ಡೆಕ್ಕನ್ ಸುಲ್ತಾನರು ವಿಜಯನಗರದ ನಾಯಕ ಅಳಿಯ ರಾಮರಾಯನನ್ನು ವಶಪಡಿಸಿಕೊಂಡು ಕೊಂಡರು. ನಂತರದಲ್ಲಿ ಈ ವಿಜಯನಗರವು ಅವಶೇಷಗಳಲ್ಲಿ ಉಳಿಯಿತು.
* ತಕ್ಷಶಿಲಾ : ತಕ್ಷಶಿಲಾವು ಪಾಕಿಸ್ತಾನದ ಪಂಜಾಬ್‌ನ ಪೊಥೋಹಾರ್ ಪ್ರದೇಶದಲ್ಲಿದೆ. ಇದು ಪ್ರಾಚೀನ ಗಾಂಧಾರದ ರಾಜಧಾನಿಯಾಗಿತ್ತು. ಈ ತಕ್ಷಶಿಲಾವನ್ನು ಹಲವಾರು ಪಡೆಗಳು ವಶಪಡಿಸಿಕೊಂಡವು. ಐದನೇ ಶತಮಾನದಲ್ಲಿ ಹನ್ಸ್ ನಗರವನ್ನು ನಾಶಪಡಿಸಿದರು. ಆದರೆ 19 ನೇ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷ್ ಪುರಾತತ್ವಶಾಸ್ತ್ರಜ್ಞ ಅಲೆಕ್ಸಾಂಡರ್ ಕನ್ನಿಂಗ್ಯಾಮ್ ಎನ್ನುವವರು ಈ ಸ್ಥಳವಿತ್ತೆನ್ನೆವುದನ್ನು ಮರುಶೋಧಿಸಿದರು.
* ಬ್ಯಾಬಿಲೋನ್ : ಪ್ರಾಚೀನ ಪ್ರಪಂಚದ ಅತ್ಯಂತ ಶ್ರೀಮಂತ ನಗರಗಳಲ್ಲಿ ಈ ಬ್ಯಾಬಿಲೋನ್ ಕೂಡ ಒಂದು. ಬ್ಯಾಬಿಲೋನ್ ಹಲವಾರು ಸಾಮ್ರಾಜ್ಯಗಳ ಉದಯ ಮತ್ತು ಪತನಕ್ಕೆ ಸಾಕ್ಷಿಯಾಗಿದೆ. ಇರಾಕ್‌ನ ಆಧುನಿಕ ಬಾಗ್ದಾದ್‌ನಿಂದ ದಕ್ಷಿಣಕ್ಕೆ 85 ಕಿಲೋಮೀಟರ್‌ಗಳಷ್ಟು ದೂರದಲ್ಲಿದೆ.




