Kitchen Hacks :ಅಡುಗೆಗೆ ಬಳಸುವ ಎಣ್ಣೆ ಕಲಬೆರಕೆಯುಕ್ತವೇ? ಪತ್ತೆ ಹಚ್ಚಲು ಇಲ್ಲಿದೆ ಸುಲಭ ವಿಧಾನ
ಇತ್ತೀಚಿನ ದಿನಗಳಲ್ಲಿ ಹೆಚ್ಚಿದ ಆಹಾರ ಕಲಬೆರಕೆ ಜೊತೆಗೆ ಕರಿದ ಎಣ್ಣೆಯನ್ನೇ ಮತ್ತೆ ಮತ್ತೆ ಬಳಸುವುದು, ಅಗ್ಗದ ವಸ್ತುಗಳ ಬಳಕೆ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತಿದೆ. ಅದಲ್ಲದೇ, ಮಾರುಕಟ್ಟೆಯಲ್ಲಿ ಕಲಬೆರಕೆಯುಕ್ತ ಎಣ್ಣೆ ಮಾರಾಟ ಮಾಡಲಾಗುತ್ತಿದ್ದು, ಇದರ ಬಳಕೆಯೂ ಆರೋಗ್ಯಕ್ಕೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಹೀಗಾಗಿ ನಾವು ಬಳಸುತ್ತಿರುವ ಎಣ್ಣೆ ಶುದ್ಧವಾಗಿದೆಯೇ, ಸೇವನೆಗೆ ಯೋಗ್ಯವಾಗಿದೆಯೇ ಎನ್ನುವ ಬಗ್ಗೆ ಗಮನ ಹರಿಸುವುದಿಲ್ಲ. ನೀವೇನಾದ್ರೂ ಅಡುಗೆಗೆ ಬಳಸುವ ಎಣ್ಣೆ ಕಲಬೆರಕೆಯಾಗಿದೆಯೇ ಎಂದು ಮನೆಯಲ್ಲೇ ಈ ವಿಧಾನಗಳ ಮೂಲಕ ಪತ್ತೆ ಹಚ್ಚಬಹುದಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಇತ್ತೀಚೆಗಿನ ದಿನಗಳಲ್ಲಿ ಸೇವಿಸುವ ಆಹಾರ ಪದಾರ್ಥಗಳೆಲ್ಲವೂ ಕಲಬೆರಕೆಯುಕ್ತವಾಗಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳನ್ನು ಖರೀದಿ ಮಾಡುವಾಗ ಎಷ್ಟು ಜಾಗರೂಕರಾಗಿದ್ದರೂ ಸಾಲದು. ದಿನನಿತ್ಯ ಅಡುಗೆಗೆ ಬಳಸುವ ಎಣ್ಣೆಯಲ್ಲಿಯೂ ಕಲಬೆರಕೆ ಮಾಡಲಾಗುತ್ತಿದೆ. ಈ ನಕಲಿ ಅಥವಾ ಕಲಬೆರಕೆಯುಕ್ತ ಅಡುಗೆ ಎಣ್ಣೆ ಬಳಕೆಯಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹೀಗಾಗಿ ಖರೀದಿಸುವ ಅಡುಗೆ ಎಣ್ಣೆಯ ಶುದ್ಧತೆಯನ್ನು ಗುರುತಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ .
ಅಡುಗೆ ಎಣ್ಣೆಯ ಶುದ್ಧತೆ ಪರೀಕ್ಷಿಸುವ ವಿಧಾನಗಳು
- ಅಡುಗೆ ಎಣ್ಣೆಯಲ್ಲಿ ಸಾಂದ್ರೀಕೃತ ಸೋಡಿಯಂ ಬೈಕಾರ್ಬನೇಟ್ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಆಮ್ಲೀಯ ದ್ರಾವಣದಲ್ಲಿ ಕೆಂಪು ಬಣ್ಣ ಕಾಣಿಸಿಕೊಂಡರೆ, ಅದು ಕಲಬೆರಕೆಯಾಗಿದೆ. ಬಣ್ಣ ಬದಲಾಗದೇ ಇದ್ದರೆ ಶುದ್ಧ ಎಣ್ಣೆ ಎನ್ನುವುದು ಖಚಿತವಾಗುತ್ತದೆ.
- ಒಂದು ಬೌಲ್ ಗೆ ಸ್ವಲ್ಪ ಎಣ್ಣೆಯನ್ನು ಸುರಿದು, ಅದನ್ನು ರೆಫ್ರಿಜರೇಟರ್ನಲ್ಲಿ ಇರಿಸಿ. ಅರ್ಧ ಗಂಟೆ ಬಳಿಕ ನೋಡಿದರೆ ನಿಮಗೆ ಎಣ್ಣೆಯಲ್ಲಿ ಕಲಬೆರಕೆಯಾಗಿದೆ ಎನ್ನುವುದು ತಿಳಿಯುತ್ತದೆ. ಗಟ್ಟಿಯಾಗಿದ್ದರೆ ಶುದ್ಧ ಎಣ್ಣೆ ಎಂದರ್ಥ. ಒಂದು ವೇಳೆ ದ್ರವ ರೂಪದಲ್ಲಿದ್ದರೆ ಕಲಬೆರಕೆಯಾಗಿದೆ ಎಂದರ್ಥ
- ಒಂದು ಬೌಲ್ ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಎಣ್ಣೆ ತೆಗೆದುಕೊಂಡು ಅದಕ್ಕೆ ಒಂದು ಚಮಚ ಬೆಣ್ಣೆಯನ್ನು ಸೇರಿಸಿಕೊಳ್ಳಿರಿ. ಸ್ವಲ್ಪ ಸಮಯ ಬಿಟ್ಟು ಇದನ್ನು ಗಮನಿಸಿ. ಎಣ್ಣೆಯ ಬಣ್ಣ ಬದಲಾಗದಿದ್ದರೆ ಅದು ಶುದ್ಧವಾದ ಎಣ್ಣೆ ಎಂದರ್ಥ. ಒಂದು ವೇಳೆ ಎಣ್ಣೆಯೂ ಕೆಂಪು ಬಣ್ಣಕ್ಕೆ ಬದಲಾದರೆ ಎಣ್ಣೆಯಲ್ಲಿ ಕಲಬೆರಕೆ ಮಾಡಲಾಗಿದೆ.
- ಬಿಳಿ ಕಾಗದದ ಮೇಲೆ ಸ್ವಲ್ಪ ಪ್ರಮಾಣ ಎಣ್ಣೆಯನ್ನು ಹರಡಿ ಒಣಗಲು ಬಿಡಿ. ಒಂದು ವೇಳೆ ನೀವು ಅಡುಗೆ ಬಳಸುವ ಎಣ್ಣೆ ಶುದ್ಧವಾಗಿದ್ದರೆ ಆ ಪ್ರದೇಶ ಜಿಡ್ಡಾಗಿ ನಿಂತುಕೊಳ್ಳದೇ ಸುತ್ತಲಿನ ಪ್ರದೇಶದಲ್ಲಿ ಹರಡಿಕೊಳ್ಳುತ್ತದೆ. ಅಶುದ್ದವಾಗಿದ್ದರೆ ಜಿಡ್ಡಾಗಿ ನಿಂತುಕೊಳ್ಳುತ್ತದೆ
- ಅಡುಗೆ ಎಣ್ಣೆಯ ಶುದ್ಧತೆ ಪರೀಕ್ಷಿಸುವ ಮತ್ತೊಂದು ಸುಲಭ ವಿಧಾನವೆಂದರೆ ರುಚಿ ನೋಡುವುದು. ಸ್ವಲ್ಪ ಎಣ್ಣೆಯನ್ನು ನೆಕ್ಕಿ ರುಚಿ ನೋಡಿ, ಶುದ್ಧ ಎಣ್ಣೆ ಪರಿಮಳದೊಂದಿಗೆ ನೈಸರ್ಗಿಕ ರುಚಿ ಹೊಂದಿರುತ್ತದೆ. ಕಲಬೆರಕೆಯುಕ್ತ ಎಣ್ಣೆಯೂ ರುಚಿಯಲ್ಲಿ ಕಹಿಯಾಗಿರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:56 pm, Sat, 1 March 25




