ಬೆಳ್ಳುಳ್ಳಿ
ಕೆಲವರಿಗೆ ಬೆಳ್ಳುಳ್ಳಿಯೆಂದರೆ ಅಷ್ಟಕಷ್ಟೇ. ಹೀಗಾಗಿ ಬೆಳ್ಳುಳ್ಳಿಯನ್ನು ತಿನ್ನಲು ಇಷ್ಟ ಪಡುವುದೇ ಇಲ್ಲ. ಬೆಳ್ಳುಳ್ಳಿ ಅಡುಗೆಗೆ ಹೊಸ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯವನ್ನೂ ಕಾಪಾಡುತ್ತದೆ. ಬೆಳ್ಳುಳ್ಳಿ ವಿಟಮಿನ್ ಸಿ, ಕೆ, ಫೋಲೇಟ್, ನಿಯಾಸಿನ್ ಮತ್ತು ಥಯಾಮಿನ್‌ನ ಉತ್ತಮ ಮೂಲವಾಗಿದ್ದು, ಬೆಳ್ಳುಳ್ಳಿ ವಿವಿಧ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹೀಗೆ ಮಾಡಿದ್ದಲ್ಲಿ ಈ ಬೆಳ್ಳುಳ್ಳಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಬಹುದು.
ಬೆಳ್ಳುಳ್ಳಿ ತಾಜಾವಾಗಿಡಲು ಇಲ್ಲಿದೆ ಟಿಪ್ಸ್
- ಬೆಳ್ಳುಳ್ಳಿಯನ್ನು ಖರೀದಿಸುವಾಗ, ತಿಳಿ ಗುಲಾಬಿ ಬಣ್ಣದ ಬೆಳ್ಳುಳ್ಳಿ, ಮೊಳಕೆಯೊಡೆದ ಬೆಳ್ಳುಳ್ಳಿಯನ್ನು ಖರೀದಿಸಲೇಬೇಡಿ. ದೀರ್ಘಕಾಲದವರೆಗೆ ಶೇಖರಿಸಿಡಲು ಬೆಳ್ಳುಳ್ಳಿಯನ್ನು ಖರೀದಿಸುತ್ತಿದ್ದರೆ, ದೊಡ್ಡ ಉಂಡೆಗಳನ್ನೂ ಮತ್ತು ತೆಳುವಾದ ಸಿಪ್ಪೆಯೊಂದಿರುವ ಬೆಳ್ಳುಳ್ಳಿ ಖರೀದಿಸಿ. ಇದನ್ನು ತೇವಾಂಶ ಮತ್ತು ಸೂರ್ಯನ ಬೆಳಕಿನಿಂದ ದೂರವಿಡುವ ಮೂಲಕ ಇದು ಮೊಳಕೆಯೊಡೆಯುವುದನ್ನು ತಪ್ಪಿಸಿ.
- ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಗಾಳಿಯಾಡದ ಜಾರ್ ನಲ್ಲಿ ಹಾಕಿ ಫ್ರಿಜ್‌ನಲ್ಲಿ ಶೇಖರಿಸಿಡುವ ಮೂಲಕ ಒಂದು ವಾರದವರೆಗೆ ಬಳಸಬಹುದು. ಆದರೆ ನೀವು ಬೆಳ್ಳುಳ್ಳಿ ಹಾಕುವ ಜಾರ್ ತೇವಾಂಶವಿದೆಯೇ ಎಂದು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಈ ಬೆಳ್ಳುಳ್ಳಿ ಹಾಳಾಗಬಹುದು.
- ಬೆಳ್ಳುಳ್ಳಿಯನ್ನು ಸಂಗ್ರಹಿಸಲು ಸೆಣಬಿನ ಚೀಲ ಅತ್ಯುತ್ತಮ ಆಯ್ಕೆ ಎನ್ನಬಹುದು. ಸೆಣಬಿನ ಚೀಲಗಳು ಗಾಳಿಯಾಡುವ ಕಾರಣ, ಇದು ಬೆಳ್ಳುಳ್ಳಿಯನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಸಹಾಯ ಮಾಡುತ್ತದೆ. ಹೀಗಾಗಿ ಮನೆಯಲ್ಲಿ ಕಡಿಮೆ ಬೆಳಕು ಇರುವ ಮತ್ತು ತಂಪಾಗಿರುವ ಸ್ಥಳದಲ್ಲಿ ಈ ಸೆಣಬಿನ ಚೀಲವನ್ನು ಇರಿಸುವುದು ಮರೆಯಬೇಡಿ.
- ಬೆಳ್ಳುಳ್ಳಿಯನ್ನು ಸಂಗ್ರಹಿಸಲು ಹತ್ತಿ ಬಟ್ಟೆಯನ್ನು ಅಥವಾ ಹತ್ತಿ ಬಟ್ಟೆಯ ಚೀಲವನ್ನು ಸಹ ಬಳಸಬಹುದು. ಈ ಹತ್ತಿ ಬಟ್ಟೆಯಲ್ಲಿ ಗಾಳಿಯಾಡುವ ಕಾರಣ ಫ್ರೆಶ್ ಆಗಿರುತ್ತದೆ. ಆದರೆ ಈ ಹತ್ತಿ ಬಟ್ಟೆಯನ್ನು ಎರಡು ಮೂರು ಬಾರಿ ಮಡಚಿ ಬೆಳ್ಳುಳ್ಳಿಯನ್ನು ಹಾಕಿ ಕಟ್ಟಿಟ್ಟರೆ ಬೇಗನೇ ಹಾಳಾಗುವುದಿಲ್ಲ.
- ನೀವು ಸಿಪ್ಪೆ ಸುಲಿದ ಬೆಳ್ಳುಳ್ಳಿಯು ಬೇಗನೇ ಹಾಳಾಗುತ್ತದೆ. ಹೀಗಾಗಿ ಇದನ್ನು ಗಾಳಿಯಾಡದ ಜಾರ್ ಅಥವಾ ಚೀಲದಲ್ಲಿ ಸಂಗ್ರಹಿಸಿ ಫ್ರಿಡ್ಜ್‌ನಲ್ಲಿಡಿ. ಇಲ್ಲದಿದ್ದರೆ ಬೆಳ್ಳುಳ್ಳಿ ಪೇಸ್ಟ್ ಮಾಡಿ ಹಾಳಾಗದಂತೆ ತಾಜಾವಾಗಿ ಸಂಗ್ರಹಿಸಿಡುವುದು ಉತ್ತಮ ಮಾರ್ಗವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ