Crying Benefits: ಅಳುವುದು ಒಳ್ಳೆಯದು! ಕಣ್ಣೀರು ಹೊರ ಹೋಗುವುದರಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತೇ?
ನಿಮ್ಮ ಮನಸ್ಸಿನ ಭಾವನೆಗಳಿಂದ ಹೊರ ಬರುವ ಕಣ್ಣೀರಿನಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಕೆಲವು ಕುತೂಹಲ ಮೂಡಿಸುವ ಇಂತಹ ವಿಷಯಗಳನ್ನು ನೀವು ತಿಳಿಯಲೇಬೇಕು.
ಮನಸ್ಸಿಗೆ ನೋವಾದಾಗ ಅಳುವುದು ಸಹಜ. ಕೆಲವು ಬಾರಿ ಮನಸ್ಸಿಗೆ ತುಂಬಾ ಖುಷಿಯಾದಾಗಲೂ ಕಣ್ಣಿನಲ್ಲಿ ನೀರು ಬರುತ್ತದೆ. ಬಾಯ್ತುಂಬ ನಕ್ಕು ನಕ್ಕು ಸುಸ್ತಾದಾಗಲೂ ಆನಂದಭಾಷ್ಪ ಬರುತ್ತದೆ. ನಮ್ಮ ಭಾವನೆಗಳನ್ನು ಕಣ್ಣೀರಿನ ರೂಪದಲ್ಲಿ ಹೊರ ಹಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ. ಕೆಲವು ಕುತೂಹಲ ಮೂಡಿಸುವ ಇಂತಹ ವಿಷಯಗಳನ್ನು ನೀವು ತಿಳಿಯಲೇಬೇಕು. ಆರೋಗ್ಯಕ್ಕೆ ನಗುವು ಎಷ್ಟು ಮುಖ್ಯವೋ ಅದೇ ರೀತಿ ಅಳುವು ಸಹ ಮುಖ್ಯವಾದುದ್ದಾಗಿದೆ.
ಕಣ್ಣಿರಿನಿಂದ ಮನಸ್ಸು ಶಾಂತಗೊಳ್ಳುತ್ತದೆ. ಕೆಟ್ಟ ಯೋಚನೆಗಳಿಂದ ಬುಹುಬೇಗ ಹೊರ ಬರಬಹುದು. ಮನಸ್ಸು ಶಾಂತಿಯಿಂದಿರಲು ಸಹಾಯ ಮಾಡುತ್ತದೆ. ನೋವಾದಾಗ ಮನಸ್ಸನ್ನು ಹಿಡಿತದಲ್ಲಿಟ್ಟು ಕೊಳ್ಳುವುದಕ್ಕಿಂತ ಸಮಾಧಾನವಾಗುವಷ್ಟು ಕಣ್ಣೀರನ್ನು ಹೊರ ಹಾಕುವುದು ಒಳ್ಳೆಯದು.
ಮಾನಸಿಕ ಒತ್ತಡದಿಂದ ಮುಕ್ತರಾಗಬಹುದು ಕೆಲವು ಭಾವನೆಗಳು ಕಣ್ಣಿನಲ್ಲಿ ನೀರು ತರಿಸುತ್ತದೆ. ಅಳುವುದರಿಂದ ಒತ್ತಡವನ್ನು ದೂರ ಮಾಡಿಕೊಳ್ಳಬಹುದಾಗಿದೆ. ದೇಹದಲ್ಲಿನ ಕೆಲವು ವಿಷಕಾರಿ ಅಂಶಗಳು ಕಣ್ಣೀರಿನ ಮೂಲಕ ಹೊರಬರುತ್ತದೆ ಎಂಬುದು ಸಂಶೋಧನೆಯ ಮೂಲಕ ತಿಳಿದು ಬಂದಿದೆ. ಕಣ್ಣೀರು ಲೈಸೋಜೈಮ್ ಎಂಬ ಕಿಣ್ವವನ್ನು ಹೊಂದಿರುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಅಳುವಿನಿಂದ ಕಣ್ಣುಗಳು ತೇವಗೊಳ್ಳುತ್ತವೆ, ಕಣ್ಣು ಕೆಂಪಾಗುವುದು ಮತ್ತು ತುರಿಕೆಯ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತದೆ.
ಧೈರ್ಯ ಅಳುವುದು ಮನಸ್ಸಿಗೆ ಧೈರ್ಯ ತುಂಬುತ್ತದೆ. ಮನಸ್ಸಿನ ನೋವುಗಲನ್ನು ಕಣ್ಣೀರ ರೂಪದಲ್ಲಿ ಹೊರ ಹಾಕಿದರೆ ಮನಸ್ಸು ಶಾಂತಗೊಳ್ಳುತ್ತದೆ. ಭಾರವಾದ ದೇಹ ಸಡಿಲವಾಗುತ್ತದೆ. ಮನಸ್ಸು ನಿರಾಳವೆನಿಸಿದರೆ ದೇಹದ ಆರೋಗ್ಯ ತಾನಗಿಯೇ ಸುಧಾರಿಸುತ್ತದೆ. ಮನಸ್ಸಿಗೆ ಸದೃಢತೆಯ ಜತೆಗೆ ಧೈರ್ಯ ಹೆಚ್ಚಾಗುತ್ತದೆ.
ಹಾರ್ಮೋನುಗಳ ಉತ್ಪತ್ತಿ ಅಳುವಾಗ ದೇಹದಲ್ಲಿ ಅನೆಕ ರೀತಿಯ ಹಾರ್ಮೋನುಗಳು ಉತ್ಪತ್ತಿಯಾಗುತ್ತದೆ. ಇದು ನಿಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಜತೆಗೆ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡುತ್ತದೆ. ಖಿನ್ನತೆಯನ್ನು ದೂರವಾಗಿಸಲು ನೋವಾದಾಗ ಅಳುವುದು ಉತ್ತಮ.
ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ ಕಣ್ಣಿನಲ್ಲಿನ ನೀರು ಐಸೋಜೈಮ್ ಎಂಬ ದ್ರವವನ್ನು ಹೊಂದಿರುತ್ತದೆ. ಇದರಿಂದಾಗಿ ಕಣ್ಣೀರು ಹಾನಿಕಾರಕ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಕಣ್ಣುಗಳು ಸ್ಪಷ್ಟವಾಗುತ್ತದೆ. ಜತೆಗೆ ಕಣ್ಣಿನ ಸುಸ್ತನ್ನು ಕಡಿಮೆ ಮಾಡಿ, ಕಣ್ಣುಗಳು ತೇವವಾಗಿರುವಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:
ಕಸದ ಚೀಲವನ್ನೇ ಕಾಸ್ಟ್ಯೂಮ್ ಮಾಡಿಕೊಂಡಿದ್ದ ನಟಿ ಊರ್ಫಿ ಬಿಗ್ ಬಾಸ್ನಿಂದ ಔಟ್; ನಿಲ್ಲದ ಕಣ್ಣೀರು
(Know About Crying Health Benefits Check In kannada)