ಪ್ರತಿನಿತ್ಯ ಸ್ನಾನ ಮಾಡುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ದೇಹ ಸ್ವಚ್ಛವಾಗಿದ್ದರೆ ಮನಸ್ಸು ಕೂಡಾ ಸ್ವಚ್ಛವಾಗಿರುತ್ತದೆ ಎಂಬ ಮಾತಿದೆ. ಶರೀರದ ಜತೆಗೆ ಮಾನಸಿಕ ನೆಮ್ಮದಿಗೆ ಪ್ರತಿನಿತ್ಯ ಸ್ನಾನ ಮಾಡುವ ಅಭ್ಯಾಸ ಒಳ್ಳೆಯದು. ಬೆಳಗ್ಗೆ ಎದ್ದ ತಕ್ಷಣ ಮನಸ್ಸಿನ ಏಕಾಗ್ರತೆ ಮತ್ತು ನಿಯಂತ್ರಣಕ್ಕೆ ಶರೀರ ಶುದ್ಧವಾಗಬೇಕು. ಹಾಗಾಗಿ ಬೆಳಿಗ್ಗೆ ಸ್ನಾನ ಮಾಡುವುದು ಒಳ್ಳೆಯದು. ಜತೆಗೆ ಸಂಜೆ ಹೊತ್ತಿನಲ್ಲಿ ಸ್ನಾನ ಮಾಡುವುದರಿಂದ ದೇಹದಲ್ಲಿನ ಧೂಳು, ವೈರಸ್ಗಳು ನಾಶವಾಗುತ್ತದೆ. ಇದರಿಂದ ಆರೋಗ್ಯವೂ ಸಹ ಸುಧಾರಿಸುತ್ತದೆ.
ಸಂಜೆಯ ಹೊತ್ತಿನಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಗಳಿವೆ ಎಂಬ ಅಭಿಪ್ರಾಯಗಳಿವೆ. ರಾತ್ರಿ ಸ್ನಾನ ಮಾಡುವುದರಿಂದ ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲಿಯೂ ಬೇಸಿಗೆಯಲ್ಲಿ ಮತ್ತು ಮಳೆಗಾಲದಲ್ಲಿ ರಾತ್ರಿಯ ಹೊತ್ತಿನಲ್ಲೂ ಸ್ನಾನ ಮಾಡಿ ನಂತರ ಮಲಗುವುದು ಒಳ್ಳೆಯದು.
ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡುವುದರಿಂದ ಮನಸ್ಸು ನಿರಾಳವೆನಿಸುತ್ತದೆ. ಶರೀರ ಚಟುವಟಿಕೆಯಿಂದ ಕೂಡಿರಲು ಸಹಾಯಕವಾಗಿದೆ. ಜತೆಗೆ ಸಂಜೆ ಹೊತ್ತಿನಲ್ಲಿ ಸ್ನಾನ ಮಾಡುವುದರಿಂದ ಬೆಳಗ್ಗಿನಿಂದ ದೇಹಕ್ಕೆ ಅಂಟಿಕೊಂಡ ಬೆವರು, ಧೂಳು, ವೈರಸ್ಗಳು ನಾಶವಾಗುತ್ತವೆ. ಇದರಿಂದ ರಾತ್ರಿ ಹೊತ್ತು ಒಳ್ಳೆಯ ನಿದ್ರೆ ಬರುತ್ತದೆ. ಹಾಗಾಗಿ ಬೆಳ್ಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತಿನಲ್ಲಿ ಸ್ನಾನ ಮಾಡುವುದು ತಪ್ಪಲ್ಲ. ಆರೋಗ್ಯದ ದೃಷ್ಟಿಯಿಂದ ಇದು ಹೆಚ್ಚು ಪರಿಣಾಮಕಾರಿ.
ಪ್ರತಿನಿತ್ಯ ಸ್ನಾನ ಮಾಡುವುದರಿಂದ ರಕ್ತದೊತ್ತಡದಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಜತೆಗೆ ದೇಹದ ಉಷ್ಣತೆ, ಅತಿಯಾದ ಶಾಖದಿಂದ ದೇಹ ಸಮತೋಲನ ಸ್ಥಿತಿಯಲ್ಲಿರಲು ಸಹಾಯಕವಾಗಿದೆ. ಉತ್ತಮ ನಿದ್ರೆಗೆ ಸಹಾಯಕವಾಗಿದೆ. ಹೀಗಿರುವಾಗ ನಿಮ್ಮ ಆರೋಗ್ಯದ ದೃಷ್ಟಿಯಿಂದ ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದು ಉತ್ತಮ. ಜತೆಗೆ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.
ಇದನ್ನೂ ಓದಿ: